ಬೆಂಗಳೂರು: ಮಾಜಿ ಕಾರ್ಪೊರೇಟರ್ ಪತ್ನಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 27. ಕೆ.ಆರ್. ಪುರಂನ ಬಸವನಪುರದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪತ್ನಿ ತಮ್ಮದೇ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವಿನೋದಾ(35 ವ.) ಎಂದು ಗುರುತಿಸಲಾಗಿದೆ.

 

 

ವಿನೋದಾ ಇತ್ತೀಚೆಗೆ ಅಪೆಂಡಿಕ್ಸ್ ಆಪರೇಷನ್ ಗೆ ಒಳಗಾಗಿದ್ದರು ಎನ್ನಲಾಗಿದೆ. ವಿನೋದಾ ಹಾಗೂ ಜಯಪ್ರಕಾಶ್ ಗೆ ಮೂರು ವರ್ಷದ ಮಗು ಕೂಡ ಇದೆ. ಆದರೆ ಇದೀಗ ಮನೆಯಲ್ಲಿಯೇ ಫ್ಯಾನ್ ಗೆ ನೇಣು ಬಿಗಿದುಕೊಂಡು ವಿನೋದಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಈ ನಡುವೆ ಪತ್ನಿ ಆತ್ಮಹತ್ಯೆ ಸುದ್ದಿ ತಿಳಿದ ಪತಿ ಜಯಪ್ರಕಾಶ್ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

 

 

Scroll to Top