ಬೆಳ್ಳಾರೆ: ವ್ಯಕ್ತಿಯೋರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ. 27. ಬೆಳ್ಳಾರೆ ಮುಖ್ಯ ರಸ್ತೆಯ ಕಾಮಧೇನು ಟವರ್‌ ಸಮೀಪ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಇಂದು ನಡೆದಿದೆ. ಮೃತ ವ್ಯಕ್ತಿಯನ್ನು ಜಾಲ್ಸೂರು ಗ್ರಾಮದ ಬೈದರ ಕೊಳಂಜಿ ಮನೆ ಅಣ್ಣು (58 ವ.) ಎಂದು ಗುರುತಿಸಲಾಗಿದೆ.

 

 

ಮೃತ ದೇಹವನ್ನು ನೋಡಿದ ಸಾರ್ವಜನಿಕರು ಪೊಲೀಸ್‌ ಠಾಣೆಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ಮೃತ ವ್ಯಕ್ತಿಯನ್ನು ಪತ್ತೆಹಚ್ಚಿದ ಬಳಿಕ ಮನೆಯವರಿಗೆ ವಿಷಯ ತಿಳಿಸಲಾಯಿತು. ಮನೆಯವರು ಬಂದ ಬಳಿಕ ಮಹಜರು ನಡೆಸಿ ಮನೆಯವರಿಗೆ ಮೃತದೇಹವನ್ನು ಬಿಟ್ಟುಕೊಡಲಾಯಿತೆಂದು ತಿಳಿದುಬಂದಿದೆ.

 

Scroll to Top