ನ್ಯೂಸ್ ಕಡಬ

ಬೆಂಕಿ ಅವಘಡ… ➤ ಐವರು ಮಕ್ಕಳು ಮತ್ತು ಪೋಷಕರು ಮೃತ್ಯು

(ನ್ಯೂಸ್ ಕಡಬ) newskadaba.com ಇಸ್ತಾನ್‌ಬುಲ್, ಫೆ.18.   ಕಳೆದ ವಾರ ಸಂಭವಿಸಿದ ಭೂಕಂಪದಿಂದ ಬದುಕುಳಿದ ನಂತರ ಟರ್ಕಿಯ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಿರಿಯಾದ ಮಕ್ಕಳು ಮತ್ತು ಅವರ ಪೋಷಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಿರಿಯನ್ ಕುಟುಂಬವು ಫೆಬ್ರುವರಿ 6ರ ಕಂಪನದಿಂದ ತೀವ್ರವಾಗಿ ಹಾನಿಗೊಳಗಾದ ಆಗ್ನೇಯ ಟರ್ಕಿಶ್ ನಗರವಾದ ನೂರ್ಡಗಿಯಿಂದ ಕೊನ್ಯಾದ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು.  

ಬೆಂಕಿ ಅವಘಡ… ➤ ಐವರು ಮಕ್ಕಳು ಮತ್ತು ಪೋಷಕರು ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್

➤ ದೆಹಲಿಯಲ್ಲಿ ವಾಸಿಸುವರಿಗೆ ಇನ್ನೂ ಮುಂದೆ ಕೇವಲ 5 ದಿನಗಳಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ಪೂರ್ಣ

(ನ್ಯೂಸ್ ಕಡಬ) newskadaba.com. ಮುಂಬೈ. ಫೆ.18.  ಪಾಸ್‌ಪೋರ್ಟ್ ಮಾಡಿಸಿಕೊಳ್ಳಲು ಬಯಸುವವರಿಗೆ ಹೊಸ ಸೇವೆಯನ್ನು ಆರಂಭಿಸಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಪಾಸ್‌ಪೋರ್ಟ್ ಸೇವಾ ಎಂಬ ಹೊಸ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ. ಇದರ ಅಡಿಯಲ್ಲಿ ಈಗ ಪಾಸ್‌ಪೋರ್ಟ್ ಪರಿಶೀಲನೆ ಕೇವಲ 5 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಹಿಂದಿನ ಜನರು ಪರಿಶೀಲನೆಗಾಗಿ ಬಹಳ ಸಮಯ ಕಾಯಬೇಕಾಗಿತ್ತು. ಆದರೆ ಈಗ ಈ ಸೌಲಭ್ಯವು ನಿಮ್ಮ ಪಾಸ್‌ಪೋರ್ಟ್ ಪರಿಶೀಲನೆಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುತ್ತದೆ. ಈ ಸೌಲಭ್ಯವನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದು. ಈ ಸೌಲಭ್ಯ ದೆಹಲಿಯಲ್ಲಿ ವಾಸಿಸುವ

➤ ದೆಹಲಿಯಲ್ಲಿ ವಾಸಿಸುವರಿಗೆ ಇನ್ನೂ ಮುಂದೆ ಕೇವಲ 5 ದಿನಗಳಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ಪೂರ್ಣ Read More »

ರಾಷ್ಟ್ರೀಯ ನ್ಯೂಸ್

ರೋಹಿತ್ ಶರ್ಮಾ ಅತ್ಯಂತ ಶ್ರೇಷ್ಠ ನಾಯಕ… ➤ ವೀರೇಂದ್ರ ಸೆಹ್ವಾಗ್!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.18.   ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಶ್ರೇಷ್ಠ ನಾಯಕ ಯಾರು ಎಂಬ ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ ಡೆಲ್ಲಿ ಡೇರ್ ಡೆವಿಲ್ಸ್ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಕೂಡ ಈ ವಿಷಯ ಪ್ರಸ್ತಾಪಿಸಿದ್ದಾರೆ. 4 ಬಾರಿ ಐಪಿಎಲ್ ಚಾಂಪಿಯನ್ಸ್‌ ನಾಯಕ ಮಹೇಂದ್ರ ಸಿಂಗ್ ಧೋನಿಗಿಂತ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಅತ್ಯಂತ ಶ್ರೇಷ್ಠ ನಾಯಕ ಎಂದು ಗುಣಗಾನ ಮಾಡಿದ್ದಾರೆ. “ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗುವುದಕ್ಕೂ

ರೋಹಿತ್ ಶರ್ಮಾ ಅತ್ಯಂತ ಶ್ರೇಷ್ಠ ನಾಯಕ… ➤ ವೀರೇಂದ್ರ ಸೆಹ್ವಾಗ್! Read More »

ರಾಷ್ಟ್ರೀಯ ನ್ಯೂಸ್

ಹೃದಯಾಘಾತದಿಂದ ನಟ ಶಾನವಾಜ್ ಪ್ರಧಾನ್ ನಿಧನ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.18 :  ಹೃದಯಾಘಾತದಿಂದ ನಟ ಶಾನವಾಜ್ ಪ್ರಧಾನ್ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ತೀವ್ರ ಎದೆನೋವಿನಿಂದ ಬಳಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಕಳುಹಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.  

ಹೃದಯಾಘಾತದಿಂದ ನಟ ಶಾನವಾಜ್ ಪ್ರಧಾನ್ ನಿಧನ Read More »

ರಾಷ್ಟ್ರೀಯ ನ್ಯೂಸ್

ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ➤ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಮುಂಬೈ, ಫೆ.18 : ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮುಂಬೈ ಪೊಲೀಸರು 24 ವರ್ಷದ ಯುವಕನನ್ನು ಪತ್ತೆಹಚ್ಚಿದ್ದಾರೆ ಮತ್ತು ಆತನನ್ನು ಕೌನ್ಸೆಲಿಂಗ್‌ಗಾಗಿ ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸಾಲದ ಸುಳಿಗೆ ಸಿಲುಕಿರುವ ವ್ಯಕ್ತಿ, ನಗರದ ಚೆಂಬೂರು ಸಮೀಪದ ಚುನಾಭಟ್ಟಿ ನಿವಾಸಿಯಾಗಿದ್ದು, ರಾಯಗಡ ಜಿಲ್ಲೆಯ ಕರ್ಜತ್‌ನಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.    

ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ➤ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು Read More »

ರಾಷ್ಟ್ರೀಯ ನ್ಯೂಸ್

➤ ಆನ್‌ಲೈನ್ ವಂಚನೆ 18.43 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ವ್ಯಕ್ತಿ

(ನ್ಯೂಸ್ ಕಡಬ) newskadaba.com. ಮಂಗಳೂರು.  ಫೆ.18. ಆನ್‌ಲೈನ್ ವಂಚನೆಗೆ ಬಲಿಯಾದ ಮಂಗಳೂರಿನ ವ್ಯಕ್ತಿಯೊಬ್ಬರು ಡಿಜಿಟಲ್ ವಹಿವಾಟಿನ ಮೂಲಕ 18.43 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಸೈಬರ್, ಅರ್ಥಶಾಸ್ತ್ರ ಮತ್ತು ಮಾದಕ ದ್ರವ್ಯ ಅಪರಾಧ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಪ್ರಕಾರ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ತ್ವರಿತ ಹಣ ಗಳಿಸುವ ವಿವರಗಳನ್ನು ನೀಡುವ ಅಪರಿಚಿತ ಸಂಖ್ಯೆಯೊಂದರಿಂದ ವ್ಯಕ್ತಿಗೆ ವಾಟ್ಸಾಪ್ ಸಂದೇಶ ಬಂದಿದೆ. ಆ ನಂಬರ್‌ನಿಂದ ಕಳುಹಿಸಿದ ಟೆಲಿಗ್ರಾಂ ಚಾನೆಲ್‌ಗೆ ಸೇರಿಕೊಂಡರು ಎಂದು

➤ ಆನ್‌ಲೈನ್ ವಂಚನೆ 18.43 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ವ್ಯಕ್ತಿ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾರು-ಲಾರಿ ಮುಖಾಮುಖಿ ಢಿಕ್ಕಿ ➤ಸ್ಥಳದಲ್ಲೇ ಇಬ್ಬರ ಮೃತ್ಯು

(ನ್ಯೂಸ್ ಕಡಬ) newskadaba.com ಸೈದಾಪುರ, ಫೆ.18 :ಪಟ್ಟಣದ ಹೊರವಲಯದ ಕರಿಬೆಟ್ಟ ಕ್ರಾಸ್ ಹತ್ತಿರದ ಬೀದರ-ಗುತ್ತಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಲಾರಿ ಮತ್ತು ಕಾರಿನ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ನೆರೆಯ ಆಂಧ್ರಪ್ರದೇಶದ ಆಧೋನಿಯಿಂದ ಕಲಬುರಗಿ ಕಡೆ ಬರುತ್ತಿದ್ದ ಕಾರು, ಯಾದಗಿರಿ ಕಡೆಯಿಂದ ರಾಯಚುರು ಮಾರ್ಗವಾಗಿ ಹೊಗುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ನಡೆದಿದೆ. ಇದರಲ್ಲಿ ಆಧೋನಿ ಮೂಲದ ಜ್ಞಾನೇಶ್ವರ ಸಿಂಗಾಡೆ(36) ಕಾರು ಚಾಲಕ ಸೈಫುಲ್ಲಾ ಲಾಲಮಟ್ಟಿ(27)ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ

ಕಾರು-ಲಾರಿ ಮುಖಾಮುಖಿ ಢಿಕ್ಕಿ ➤ಸ್ಥಳದಲ್ಲೇ ಇಬ್ಬರ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ನೀರಿನ ಗುಂಡಿಗೆ ಬಿದ್ದು ಮರಿಯಾನೆ ಮೃತ್ಯು!

(ನ್ಯೂಸ್ ಕಡಬ) newskadaba.com ಕೊಡಗು, ಫೆ.18.   ನೀರಿನ ಗುಂಡಿಗೆ ಮರಿಯಾನೆ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ‌ ಎಳನೀರುಗುಂಡಿಯಲ್ಲಿ ಸಂಭವಿಸಿದೆ. ಚಂದ್ರಶೇಖರ್ ಎಂಬುವರಿಗೆ ಸೇರಿದ ತೋಟದಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನ ಟ್ಯಾಂಕ್‌ ನಿರ್ಮಿಸಲು ಗುಂಡಿ ತೆಗೆಯಲಾಗಿತ್ತು. ಆನೆ ಕಳೇಬರ‌ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.

ನೀರಿನ ಗುಂಡಿಗೆ ಬಿದ್ದು ಮರಿಯಾನೆ ಮೃತ್ಯು! Read More »

ಕರ್ನಾಟಕ

ನಾಪತ್ತೆಯಾಗಿದ್ದ ಪರ್ವತಾರೋಹಿ ➤ 50 ವರ್ಷಗಳ ಬಳಿಕ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com. ಸ್ವಿಜರ್ಲ್ಯಾಂಡ್ , ಫೆ.18. ಆಲ್ಸ್ಪ್ ಪರ್ವತ ಏರಲು ತೆರಳಿ ನಾಪತ್ತೆಯಾಗಿದ್ದ ಬ್ರಿಟಿಷ್ ಪರ್ವತಾರೋಹಿ ಒಬ್ಬರ ಮೃತದೇಹ ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಪತ್ತೆಯಾಗಿದೆ. ಈತ 1974ರ ಡಿಸೆಂಬರ್ 31 ರಂದು ನಾಪತ್ತೆಯಾಗಿದ್ದ ಎಂದು ಮೂಲಗಳು ಹೇಳಿವೆ. ಪರ್ವತಾರೋಹಣ ವೇಳೆ 32 ವರ್ಷ ವಯಸ್ಸಿನವರಾಗಿದ್ದ ಈ ವ್ಯಕ್ತಿ ಬಳಿಕ ನಾಪತ್ತೆಯಾಗಿದ್ದರು. ಈತನ ಮೃತ ದೇಹ 2022ರ ಸೆಪ್ಟೆಂಬರ್ 5 ರಂದು ಪತ್ತೆಯಾಗಿದೆ ಎನ್ನಲಾಗಿದೆ. ಪರ್ವತಾರೋಹಿಯ ವಯಸ್ಸು (ಆಗಿನ ಸಂದರ್ಭದಲ್ಲಿ) ಹಾಗೂ ರಾಷ್ಟ್ರೀಯತೆಯನ್ನು ಮಾತ್ರ ಪೊಲೀಸರು ಬಹಿರಂಗಪಡಿಸಿದ್ದಾರೆ.

ನಾಪತ್ತೆಯಾಗಿದ್ದ ಪರ್ವತಾರೋಹಿ ➤ 50 ವರ್ಷಗಳ ಬಳಿಕ ಮೃತದೇಹ ಪತ್ತೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್

ಮುಖ್ಯರಸ್ತೆ ಮೇಲೆಯೇ ರಾತ್ರೋರಾತ್ರಿ ಮನೆ ನಿರ್ಮಾಣ!!

(ನ್ಯೂಸ್ ಕಡಬ) newskadaba.com ಬೊಮ್ಮನಹಳ್ಳಿ ಫೆ.18.  ಬೇಗೂರು ರಸ್ತೆಯ ಮೈಕೋ ಬಡಾವಣೆಯ ಡಾಂಬರೀಕರಣಗೊಂಡ 15ನೇ ಮುಖ್ಯರಸ್ತೆಯಲ್ಲಿ ರಾತ್ರೋರಾತ್ರಿ ಮನೆ ನಿರ್ಮಿಸುವ ಯತ್ನ ನಡೆದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ರಸ್ತೆಯ ಮೇಲೆ ಮನೆ ನಿರ್ಮಾಣಕ್ಕೆ ಯತ್ನಿಸಿರುವ ಟಿ.ಎನ್.ಶ್ರೀನಿವಾಸ್ ಎನ್ನುವವರ ವಿರುದ್ಧ ಬೇಗೂರು -ಹೊಂಗಸಂದ್ರ ಮೈಕೋ ಲೇಔಟ್ ನಿವಾಸಿಗಳ ಅಸೋಸಿಯೇಷನ್ ವತಿಯಿಂದ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮುಖ್ಯರಸ್ತೆ ಮೇಲೆಯೇ ರಾತ್ರೋರಾತ್ರಿ ಮನೆ ನಿರ್ಮಾಣ!! Read More »

ಕರ್ನಾಟಕ
Scroll to Top