ನ್ಯೂಸ್ ಕಡಬ

ಬಿಬಿಸಿ ಆದಾಯಕ್ಕೆ ತಕ್ಕ ತೆರಿಗೆ ಪಾವತಿಸಿಲ್ಲ ➤ ಆದಾಯ ತೆರಿಗೆ ಇಲಾಖೆ ಆರೋಪ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.18. ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ದಾಖಲೆಗಳ ‘ಪರಿಶೀಲನೆ’ ಸಂದರ್ಭದಲ್ಲಿ, ಸಂಸ್ಥೆಯು ತೆರಿಗೆ ಪಾವತಿಸದಿರುವುದು ಹಾಗೂ ಬಹಿರಂಗಪಡಿಸದ ಆದಾಯ ಹೊಂದಿರುವ ಕುರಿತು ಸಾಕ್ಷ್ಯಗಳು ಲಭ್ಯವಾಗಿವೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹೇಳಿದೆ. ದೆಹಲಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಸತತ 60 ಗಂಟೆಗಳಷ್ಟು ‘ಪರಿಶೀಲನೆ’ ನಡೆಸಿದ್ದರು. ಈ ‘ಪರಿಶೀಲನೆ’ ಬಳಿಕ ಮಂಡಳಿಯು ಮೊದಲ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಆದರೆ, ಈ ಹೇಳಿಕೆಯಲ್ಲಿ ಬಿಬಿಸಿ ಹೆಸರನ್ನು […]

ಬಿಬಿಸಿ ಆದಾಯಕ್ಕೆ ತಕ್ಕ ತೆರಿಗೆ ಪಾವತಿಸಿಲ್ಲ ➤ ಆದಾಯ ತೆರಿಗೆ ಇಲಾಖೆ ಆರೋಪ Read More »

ರಾಷ್ಟ್ರೀಯ ನ್ಯೂಸ್

ಆಟೊ ಚಾಲಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.18.  ಕನ್ಯಾನದಲ್ಲಿ ಆಟೊ ಚಾಲಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮೃತರನ್ನು ಆಟೊ ಚಾಲಕ ದಿನೇಶ್ ಬೈರಿಕಟ್ಟೆ (32) ಎಂದು ಗುರುತಿಸಲಾಗಿದೆ.ಅವಿವಾಹಿತರಾಗಿದ್ದ ದಿನೇಶ್, ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು,ಆತ್ಮಹತ್ಯೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.

ಆಟೊ ಚಾಲಕ ಆತ್ಮಹತ್ಯೆ Read More »

ಕರಾವಳಿ

ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸ್ ನಾಪತ್ತೆ ➤4 ಗಂಟೆ ಶಿಕ್ಷಕರನ್ನು ಕೂಡಿಹಾಕಿದ ಪೋಷಕರು

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಫೆ.18. ಶಾಲೆಯೊಂದರಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ತುಂಡುಗಳನ್ನು ವಿದ್ಯಾರ್ಥಿಗಳಿಗೆ ಹಾಕಿಲ್ಲ. ಕೋಳಿಯ ಎಲ್ಲಾ ಉತ್ತಮ ಭಾಗಗಳನ್ನು ತಮಗಾಗಿ ಶಿಕ್ಷಕರು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿರುವ ಘಟನೆ ಮಾಲ್ಡಾ ಜಿಲ್ಲೆಯ ಇಂಗ್ಲಿಷ್‌ ಬಜಾರ್ ಪ್ರದೇಶದ ಅಮೃತಿ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ. ಶಿಕ್ಷಕರ ವಿರುದ್ಧ ಕೋಪಗೊಂಡ ಪೋಷಕರು ಅವರನ್ನು ಕೊಠಡಿಯಲ್ಲಿ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪೋಷಕರ ಆರೋಪದ ಮೇರೆಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಶಿಕ್ಷಕರು ಕೋಳಿ ಮಾಂಸದಿಂದ ಎಲ್ಲಾ ಕಾಲಿನ ತುಂಡುಗಳು ಮತ್ತು

ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸ್ ನಾಪತ್ತೆ ➤4 ಗಂಟೆ ಶಿಕ್ಷಕರನ್ನು ಕೂಡಿಹಾಕಿದ ಪೋಷಕರು Read More »

ರಾಷ್ಟ್ರೀಯ ನ್ಯೂಸ್

ಆರ್​ಸಿಬಿ ಮಹಿಳಾ ತಂಡಕ್ಕೆ ನಾಯಕಿಯಾಗಿ ಸ್ಮೃತಿ ಮಂಧಾನ ಆಯ್ಕೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.18. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಆರ್ ಸಿಬಿ ಪುರುಷರ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ ಆರ್​ಸಿಬಿ ಮಹಿಳಾ ತಂಡದ ನಾಯಕಿ ಯಾರು ಎಂಬುದನ್ನು ರಿವಿಲ್ ಮಾಡಿದರು. ಕೆಲವು ದಿನಗಳ ಹಿಂದೆ ನಡೆದ ಮೊದಲ ಮಹಿಳಾ ಪ್ರೀಮಿಯರ್ ಲೀಗ್‌ ಆಟಗಾರ್ತಿಯರ ಹರಾಜಿನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಅವರನ್ನು ಆರ್​ಸಿಬಿ ಬರೋಬ್ಬರಿ 3.40

ಆರ್​ಸಿಬಿ ಮಹಿಳಾ ತಂಡಕ್ಕೆ ನಾಯಕಿಯಾಗಿ ಸ್ಮೃತಿ ಮಂಧಾನ ಆಯ್ಕೆ..! Read More »

ಕರ್ನಾಟಕ, ಕ್ರೀಡಾ ನ್ಯೂಸ್

ಅರಣ್ಯದಲ್ಲಿ ಆಕಸ್ಮಿಕ ಕಾಡ್ಗಿಚ್ಚು ಪ್ರಕರಣ ➤ಗಂಭೀರ ಗಾಯಗೊಂಡ ಸಿಬ್ಬಂದಿಯೋರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಹಾಸನ, ಫೆ.18.  ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಮೃತಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ಚಿಕಿತ್ಸೆ ಫಲಿಸದೆ ಫಾರೆಸ್ಟ್ ಗಾರ್ಡ್ ಸುಂದರೇಶ್ ಕೊನೆಯುಸಿರೆಳೆದಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದಲ್ಲಿ ಕಾಡುಮನೆ ಎಸ್ಟೇಟ್ ಬಳಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಲು ಡಿಆರ್​ಎಫ್​ಒ ಮಂಜುನಾಥ್ ನೇತೃತ್ವದಲ್ಲಿ 6 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಹೋಗಿದ್ದರು. ಘಟನೆಯಲ್ಲಿ ಅರಣ್ಯ ಅಧಿಕಾರಿ, ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು ಸುಂದರೇಶ್

ಅರಣ್ಯದಲ್ಲಿ ಆಕಸ್ಮಿಕ ಕಾಡ್ಗಿಚ್ಚು ಪ್ರಕರಣ ➤ಗಂಭೀರ ಗಾಯಗೊಂಡ ಸಿಬ್ಬಂದಿಯೋರ್ವ ಮೃತ್ಯು Read More »

ಕರ್ನಾಟಕ

ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರನಿಗೆ 11 ಕೆಜಿ ತೂಕದ ಚಿನ್ನದ ಮುಖವಾಡ

(ನ್ಯೂಸ್ ಕಡಬ) newskadaba.com ಮೈಸೂರು, ಫೆ.18.  ನಾಡಿನೆಲ್ಲೆಡೆ ಇಂದು ಮಹಾಶಿವರಾತ್ರಿ ಹಬ್ಬದ ಸಂಭ್ರಮ ಸಡಗರ ಜೋರಾಗಿದೆ. ಅದರಂತೆ ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಅಲಂಕಾರ ಮಾಡಿದ್ದಾರೆ. ಶಿವಲಿಂಗಕ್ಕೆ 11 ಕೆಜಿ ತೂಕದ ಚಿನ್ನದ ಮುಖವಾಡ ಧಾರಣೆ ಮಾಡಿ ಹೂವುಗಳಿಂದ ಅಲಂಕರಿಸಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಹಿನ್ನೆಲೆ ಚಿನ್ನದ ಮುಖವಾಡವನ್ನು ಜಯಚಾಮರಾಜೇಂದ್ರ ಒಡೆಯರ್ ಅವರು ಶಿವನಿಗೆ ಅರ್ಪಿಸಿದ್ದರು. ಪ್ರತಿ ವರ್ಷವೂ ಮಹಾಶಿವರಾತ್ರಿ ದಿನ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ. ನಾಳೆಯೂ ದರ್ಶನಕ್ಕೆ ಅವಕಾಶ

ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರನಿಗೆ 11 ಕೆಜಿ ತೂಕದ ಚಿನ್ನದ ಮುಖವಾಡ Read More »

ಕರ್ನಾಟಕ

ಕರಾಚಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಉಗ್ರ ದಾಳಿ ➤ಐವರು ಉಗ್ರರು ಸೇರಿ 9 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಕರಾಚಿ, ಫೆ.18.  ಮೊದಲೇ ಆರ್ಥಿಕ ಸಂಕಷ್ಟದಿಂದ ನಲುಗಿರುವ ಪಾಕಿಸ್ಥಾನದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದೆ. ಕರಾಚಿಯ ಪೊಲೀಸ್ ಠಾಣೆಗೆ ಶಸ್ತ್ರಸಜ್ಜಿತ ಪೊಲೀಸರ ಗುಂಪೊಂದು ನುಗ್ಗಿದ್ದು, ಭೀಕರ ಗುಂಡಿನ ಕಾಳಗ ಸಂಭವಿಸಿದೆ. ಈ ಗುಂಡಿನ ದಾಳಿಯಲ್ಲಿ ಐವರು ಉಗ್ರರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶಸ್ತ್ರಸಜ್ಜಿತ 12ಕ್ಕೂ ಅಧಿಕ ಮಂದಿ ಉಗ್ರರು ಕರಾಚಿ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ನುಗ್ಗಿದ್ದಾರೆ. ಪೊಲೀಸ್‌ ಸಮವಸ್ತ್ರ ಧರಿಸಿ ಅವರು ಕಚೇರಿಗೆ ನುಗ್ಗಿದ್ದಾರೆ.    

ಕರಾಚಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಉಗ್ರ ದಾಳಿ ➤ಐವರು ಉಗ್ರರು ಸೇರಿ 9 ಮಂದಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್

ಎದೆಹಾಲು ಕುಡಿಯುವಾಗ ಅಸ್ವಸ್ಥಗೊಂಡು ಮಗು ಮೃತ್ಯು!!

(ನ್ಯೂಸ್ ಕಡಬ) newskadaba.com ಬದಿಯಡ್ಕ, ಫೆ.18.  ಎದೆಹಾಲು ಕುಡಿಯುವಾಗ ಉಸಿರುಕಟ್ಟಿ 25 ದಿನದ ಮಗು ಮೃತಪಟ್ಟಿರುವ ಘಟನೆ ಉಕ್ಕಿನಡ್ಕದಲ್ಲಿ ಸಂಭವಿಸಿದೆ. ಅಬ್ದುಲ್‌ ರಹ್ಮಾನ್‌-ತಾಹಿರಾ ದಂಪತಿಯ 25 ದಿನದ ಮಗು ಮೃತಪಟ್ಟಿದೆ. ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾಗ ಮಗು ಅಸ್ವಸ್ಥಗೊಂಡಿದೆ‌.ಕೂಡಲೇ ಮಗುವನ್ನು ಬದಿಯಡ್ಕ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ.ಆದರೆ ಮಗು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ‌. ಈ ಕುರಿತು ಬದಿಯಡ್ಕ ಠಾಣೆಯಲ್ಲಿ ಕೆಸ್ ದಾಖಲಾಗಿದೆ.    

ಎದೆಹಾಲು ಕುಡಿಯುವಾಗ ಅಸ್ವಸ್ಥಗೊಂಡು ಮಗು ಮೃತ್ಯು!! Read More »

ಕರ್ನಾಟಕ

ಅರಣ್ಯದಲ್ಲಿ ಆಕಸ್ಮಿಕ ಕಾಡ್ಗಿಚ್ಚು: ➤ಮೂವರು ಇಲಾಖೆ ಸಿಬ್ಬಂದಿಗಳಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಸಕಲೇಶಪುರ, ಫೆ.17. ಪಶ್ಚಿಮಘಟ್ಟ ಅರಣ್ಯಕ್ಕೆ ಬಿದ್ದಿದ್ದ ಬೆಂಕಿ ನಂದಿಸಲು ಹೋದ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಾಡುಮನೆ ಎಸ್ಟೇಟ್‌ ಬಳಿ ಸಂಭವಿಸಿದೆ. ತಾಲೂಕಿನ ಕಾಡುಮನೆ ಸಮೀಪ ಮಣಿಬೀಡು ದೇವಸ್ಥಾನದ ಸಮೀಪವಿರುವ ಪಶ್ಚಿಮಘಟ್ಟದ ಕಾಡಿನಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ನಂದಿಸಲು ಹೋದ ಅರಣ್ಯ ಇಲಾಖೆಯ ಫಾರೆಸ್ಟರ್‌ ಮಂಜುನಾಥ್‌, ಅರಣ್ಯ ವೀಕ್ಷಕ ಸುಂದರೇಶ್‌ ಗಂಭೀರವಾಗಿ ಸುಟ್ಟಗಾಯಗಳೊಂದಿಗೆ ನರಳುತ್ತಿದ್ದಾರೆ. ಮತ್ತೊಬ್ಬ ಅರಣ್ಯ ವೀಕ್ಷಕ ತುಂಗೇಶ್‌ ತುಸು ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.  ಸುಟ್ಟಗಾಯಗಳಿಂದ

ಅರಣ್ಯದಲ್ಲಿ ಆಕಸ್ಮಿಕ ಕಾಡ್ಗಿಚ್ಚು: ➤ಮೂವರು ಇಲಾಖೆ ಸಿಬ್ಬಂದಿಗಳಿಗೆ ಗಂಭೀರ ಗಾಯ Read More »

ಕರ್ನಾಟಕ

ಕೋಳಿ ಕುಕ್ಕಿ ಮೃತಪಟ್ಟ ಮಾಲೀಕ!!

(ನ್ಯೂಸ್ ಕಡಬ) newskadaba.com ಐರ್ಲೆಂಡ್, ಫೆ.17. ಕ್ರಾಸ್ ಎಂಬ ವ್ಯಕ್ತಿ ತನ್ನ ಮನೆಯಲ್ಲಿ ಕೋಳಿ ಸಾಕಿದ್ದ.ಆದರೆ ಸಾಕಿದ್ದ ಕೋಳಿಯೇ ಅವನನ್ನೇ ಕುಕ್ಕಿ ಕೊಂದಿದೆ. ಈ ಘಟನೆ ಐರ್ಲೆಂಡ್ ನಲ್ಲಿ ಸಂಭವಿಸಿದೆ. ಈ ಕೋಳಿ ಬ್ರಹ್ಮ ತಳಿಯಾಗಿದ್ದು, ಬಹಳ ಆಕ್ರಮಣಕಾರಿ ಪ್ರವೃತಿಯನ್ನು ಹೊಂದಿದ್ದು .ಮನೆಯ ಮಾಲೀಕ ಕ್ರಾಸ್ ನ ಬೆನ್ನತ್ತಿ ಈ ಕೋಳಿ ಕಾಲಲ್ಲಿ  ರಕ್ತಸ್ರಾವ ಆಗುವಂತೆ ಕುಕ್ಕಿದೆ. ಬಳಿಕ ದಾಳಿಯಲ್ಲಿ ಗಾಯಗೊಂಡ ಕ್ರಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಬಳಿಕ ಆತನನ್ನ ಆಸ್ಪತ್ರೆಗೆ ದಾಖಲಿಸಿದರೂ,ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಕೋಳಿ ಕುಕ್ಕಿ ಮೃತಪಟ್ಟ ಮಾಲೀಕ!! Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top