ಮುಖ್ಯರಸ್ತೆ ಮೇಲೆಯೇ ರಾತ್ರೋರಾತ್ರಿ ಮನೆ ನಿರ್ಮಾಣ!!

(ನ್ಯೂಸ್ ಕಡಬ) newskadaba.com ಬೊಮ್ಮನಹಳ್ಳಿ ಫೆ.18.  ಬೇಗೂರು ರಸ್ತೆಯ ಮೈಕೋ ಬಡಾವಣೆಯ ಡಾಂಬರೀಕರಣಗೊಂಡ 15ನೇ ಮುಖ್ಯರಸ್ತೆಯಲ್ಲಿ ರಾತ್ರೋರಾತ್ರಿ ಮನೆ ನಿರ್ಮಿಸುವ ಯತ್ನ ನಡೆದಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ರಸ್ತೆಯ ಮೇಲೆ ಮನೆ ನಿರ್ಮಾಣಕ್ಕೆ ಯತ್ನಿಸಿರುವ ಟಿ.ಎನ್.ಶ್ರೀನಿವಾಸ್ ಎನ್ನುವವರ ವಿರುದ್ಧ ಬೇಗೂರು -ಹೊಂಗಸಂದ್ರ ಮೈಕೋ ಲೇಔಟ್ ನಿವಾಸಿಗಳ ಅಸೋಸಿಯೇಷನ್ ವತಿಯಿಂದ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Scroll to Top