ನ್ಯೂಸ್ ಕಡಬ

ಶರತ್ ಮೇಲಿನ ಹಲ್ಲೆ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಬಿ.ಸಿ.ರೋಡ್ ಚಲೋ ► ನಿಷೇಧಾಜ್ಞೆಯ ನಡುವೆಯೂ ಜಿಲ್ಲೆಯಲ್ಲಿ ಆತಂಕದ ಪರಿಸ್ಥಿತಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು.7. ಆರೆಸ್ಸೆಸ್ ಕಾರ್ಯಕರ್ತ ಶರತ್ ಮೇಲಿನ ಹಲ್ಲೆಯನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯು ‘ಬಿ.ಸಿ.ರೋಡ್ ಚಲೋ’ ಘೋಷಿಸಿದ್ದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿ ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಹಿಂದೂ ಪರ ಸಂಘಟನೆಗಳ ಸದಸ್ಯರು ನಿಷೇಧಾಜ್ಞೆಯ ನಡುವೆಯೂ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿರುವುದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಬಿ.ಸಿ.ರೋಡಿನಲ್ಲಿನ ಅಂಗಡಿಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಲ್ಪಡುತ್ತಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಲು ಸಂಸದರಾದ ನಳಿನ್ ಕುಮಾರ್ ಕಟೀಲು ಹಾಗೂ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ […]

ಶರತ್ ಮೇಲಿನ ಹಲ್ಲೆ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಬಿ.ಸಿ.ರೋಡ್ ಚಲೋ ► ನಿಷೇಧಾಜ್ಞೆಯ ನಡುವೆಯೂ ಜಿಲ್ಲೆಯಲ್ಲಿ ಆತಂಕದ ಪರಿಸ್ಥಿತಿ Read More »

ಕರಾವಳಿ

ನಾವೂರು: ವಾಟ್ಸಾಪ್ ಬಳಗದಿಂದ ಸಸಿ ವಿತರಣೆ, ವನಮಹೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಜು.06. ಮೊಬೈಲ್ ಒತ್ತುತ್ತಾ ಸುಮ್ಮನೆ ಕಾಲಹರಣ ಮಾಡುವ ಬದಲು ತಮ್ಮ ಆಲೋಚನಾ ಶಕ್ತಿಯನ್ನು ಬದಲಿಸಿ ವಾಟ್ಸಾಪ್ ಗ್ರೂಪೊಂದರ ಸದಸ್ಯರು ಗೋಗ್ರೀನ್ ಅಭಿಯಾನದ ಅಂಗವಾಗಿ ಸಸಿ ವಿತರಣೆ, ವನಮಹೋತ್ಸವ ಆಚರಿಸಿದರು. ಪುಣ್ಚತ್ತಾರು ಉಷಾ ಡಿಜೆ ಮತ್ತು ಲೈಟಿಂಗ್ಸ್‌ ವಾಟ್ಸಪ್ ಗ್ರೂಪಿನ ಅಡ್ಮಿನ್ ದಿನೇಶ್ ಪೈಕ ನೇತೃತ್ವದಲ್ಲಿ ಕಾಣಿಯೂರು ಗ್ರಾಮದ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಸುಪಾಸಿನಲ್ಲಿ ಸಸ್ಯನಾಟಿ, ಸಸಿ ವಿತರಣೆ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಅನಂತ ಬೈಲಂಗಡಿ, ಮಾಧವ ಕಲ್ಪಡ,

ನಾವೂರು: ವಾಟ್ಸಾಪ್ ಬಳಗದಿಂದ ಸಸಿ ವಿತರಣೆ, ವನಮಹೋತ್ಸವ Read More »

ಕರಾವಳಿ

ಬಿದ್ದು ಸಿಕ್ಕಿದ 41 ಸಾವಿರ ರೂ.ಗಳು ಪೊಲೀಸರಿಗೆ ಹಸ್ತಾಂತರ ► ಪರರ ಸ್ವತ್ತು ತನಗೆ ಬೇಡವೆನ್ನುವ ಇವರ ಬಗ್ಗೆ ತಿಳಿಯಬೇಕೇ…?

(ನ್ಯೂಸ್ ಕಡಬ) newskadaba.com ಪುತ್ತೂರು, ಜು.06. ರಸ್ತೆಯಲ್ಲಿ ತನಗೆ ಬಿದ್ದು ಸಿಕ್ಕಿದ 40900 ರೂಪಾಯಿ ಹಣವನ್ನು ಪೊಲೀಸರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಘಟನೆ ಪುತ್ತೂರಿನಲ್ಲಿ ಗುರುವಾರದಂದು ನಡೆದಿದೆ. ಪುತ್ತೂರು ತಾಲೂಕಿನ ಕಾವು ನಿವಾಸಿಗಳಾದ ಆನಂದ ಮೂಲ್ಯ ಹಾಗೂ ಕೋಟಿ ಮೂಲ್ಯ ಎಂಬವರಿಗೆ ಬಿದ್ದು ಸಿಕ್ಕಿತೆನ್ನಲಾದ ಹಣವನ್ನು ಇನ್ನೊಬ್ಬರಿಗೆ ಸೇರಬೇಕಾದ ವಸ್ತು ತನಗೆ ಬೇಡವೆನ್ನುವ ಇರಾದೆಯೊಂದಿಗೆ ಪುತ್ತೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆನಂದ ಮೂಲ್ಯರು ಕಾವು ಮಾಡ್ನೂರು ಗ್ರಾಮದ ಮದ್ಲ ನಿವಾಸಿಯಾಗಿದ್ದು, ಮದ್ಲದಲ್ಲಿ ಗೂಡಂಗಡಿಯಲ್ಲಿ ಜಿನಸು ವ್ಯಾಪಾರ ಮಾಡುತ್ತಿದ್ದಾರೆ. ಸಮಾಜ ಸೇವೆಯಲ್ಲೂ ಸಕ್ರಿಯರಾಗಿರುವ ಆನಂದ

ಬಿದ್ದು ಸಿಕ್ಕಿದ 41 ಸಾವಿರ ರೂ.ಗಳು ಪೊಲೀಸರಿಗೆ ಹಸ್ತಾಂತರ ► ಪರರ ಸ್ವತ್ತು ತನಗೆ ಬೇಡವೆನ್ನುವ ಇವರ ಬಗ್ಗೆ ತಿಳಿಯಬೇಕೇ…? Read More »

ಕರಾವಳಿ

ಜು.8ರಂದು ಸವಣೂರು ವಿದ್ಯಾರಶ್ಮಿಯಲ್ಲಿ ಸಹಸ್ರ ವೃಕ್ಷ ಅಭಿಯಾನ

(ನ್ಯೂಸ್ ಕಡಬ) newskadaba.com ಸವಣೂರು, ಜು.06. ಇಲ್ಲಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸಂಸ್ಥೆಯಲ್ಲಿ ವನಮಹೋತ್ಸವ ಸಹಸ್ರವೃಕ್ಷ ಅಭಿಯಾನ ಕಾರ್ಯಕ್ರಮ ಜುಲೈ 8 ರಂದು ನಡೆಯಲಿದೆ. ಪುತ್ತೂರು ವಲಯ ಸಹಾಯಕ ಅರಣ್ಯ ಸಂರಕ್ಷಣಾ„ಕಾರಿ ಎನ್.ಸುಬ್ರಹ್ಮಣ್ಯ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ಎಂ. ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಸಭೆಯ ಅಧ್ಯಕ್ಷತೆ ವಹಿಸುವರು. ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಉಪಸ್ಥಿತರಿರುವರು

ಜು.8ರಂದು ಸವಣೂರು ವಿದ್ಯಾರಶ್ಮಿಯಲ್ಲಿ ಸಹಸ್ರ ವೃಕ್ಷ ಅಭಿಯಾನ Read More »

ಕರಾವಳಿ

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವಕೀಲ, ಇಬ್ಬರು ಪುತ್ರರು

(ನ್ಯೂಸ್ ಕಡಬ) newskadaba.com ಬಿಹಾರ, ಜು.06. ಊರಿನ ಮುಸ್ಲಿಮರು ಇಸ್ಲಾಂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಅರೋಪಿಸಿ ಮುಸ್ಲಿಂ ವಕೀಲರೋರ್ವರು ತನ್ನ ಇಬ್ಬರು ಪುತ್ರರೊಂದಿಗೆ ಹಿಂದು ಧರ್ಮಕ್ಕೆ ಮತಾಂತರಗೊಂಡ ಘಟನೆ ಬಿಹಾರದ ಬೆಗುಸರಾಯ್ ಜಿಲ್ಲೆಯ ಪೊಖಾರಿಯ ಎಂಬ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮುಹಮ್ಮದ್ ಅನ್ವರ್(46) ತನ್ನ ಪುತ್ರರಾದ ಮುಹಮ್ಮದ್ ಅಮೀರ್(11) ಹಾಗೂ ಮುಹಮ್ಮದ್ ಶಬೀರ್‌(9) ರೊಂದಿಗೆ ಮತಾಂತರಗೊಂಡಿದ್ದಾರೆ. ಇವರು ತಮ್ಮ ಹೆಸರನ್ನು ಆನಂದ್ ಭಾರ್ತಿ, ಅಮನ್ ಭಾರ್ತಿ ಹಾಗೂ ಸುಮನ್ ಭಾರ್ತಿ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವಕೀಲ, ಇಬ್ಬರು ಪುತ್ರರು Read More »

ರಾಷ್ಟ್ರೀಯ ನ್ಯೂಸ್

RSS ಕಾರ್ಯಕರ್ತನಿಗೆ ಚೂರಿ ಇರಿದಾಗ ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕ ►ಮಾನವೀಯತೆಯ ಮೂಲಕ ಹೀರೋ ಆದ ಬಂಟ್ವಾಳದ ಯುವಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.06. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ ಎಂಬುದನ್ನು ಬಿ.ಸಿ. ರೋಡಿನ ಯುವಕನೊಬ್ಬ ತನ್ನ ಮಹತ್ಕಾರ್ಯದ ಮೂಲಕ ಸಾದರಪಡಿಸಿದ್ದಾನೆ. ಕೋಮು ಸಂಘರ್ಷದಿಂದ ಕರಾವಳಿ ಜಿಲ್ಲೆ ಉರಿಯುತ್ತಿದ್ದರೆ ಜಾತಿ, ಧರ್ಮದ ಹಂಗು ತೊರೆದು ಗೆಳೆಯನ ರಕ್ಷಣೆಗೆ ಧಾವಿಸಿ ಬಂದಿದ್ದಾರೆ ಹಣ್ಣಿನ ವ್ಯಾಪಾರಿ ಅಬ್ದುಲ್ ರವೂಫ್. ಹೌದು, ಕಳೆದ ಮಂಗಳವಾರ ರಾತ್ರಿ ಸುಮಾರು ಹತ್ತು ಗಂಟೆಗೆ ಬಿ.ಸಿ.ರೋಡಿನ ಉದಯ ಲಾಂಡ್ರಿ ಮಾಲೀಕ, RSS ಕಾರ್ಯಕರ್ತ ಶರತ್‍ನಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಕ್ಷಣವೇ ಅಕ್ಕಪಕ್ಕದವರು

RSS ಕಾರ್ಯಕರ್ತನಿಗೆ ಚೂರಿ ಇರಿದಾಗ ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕ ►ಮಾನವೀಯತೆಯ ಮೂಲಕ ಹೀರೋ ಆದ ಬಂಟ್ವಾಳದ ಯುವಕ Read More »

ಕರಾವಳಿ

ಬಿಳಿನೆಲೆ ದೇವಸ್ಥಾನದ ಮೂರ್ತಿಗೆ ಪುಸ್ತಕ ತೂಗುಹಾಕಿದ ಕಿರಾತಕರು ► ಭಕ್ತ ವೃಂದದಿಂದ ತೀವ್ರ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಜು.06. ಇಲ್ಲಿನ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮಹಾದ್ವಾರದ ಬಳಿಯ ಮೂರ್ತಿಯ ಮೇಲೆ ಪೊಲೀಸ್ ಬೀಟ್ ಗೆ ಸಹಿ ಹಾಕುವ ಪುಸ್ತಕವನ್ನು ನೇತಾಡಿಸಲಾಗಿದ್ದು, ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರದಂದು ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ಪೊಲೀಸ್ ಬೀಟ್ ಪುಸ್ತಕವನ್ನು ಕಂಡು ಪೊಲೀಸರು ಈ ರೀತಿ ಬೇಜವಾಬ್ದಾರಿಯಿಂದ ಇಟ್ಟಿದ್ದಾರೋ ಅಥವಾ ಕಿಡಿಗೇಡಿಗಳು ಗಲಭೆ ಸೃಷ್ಟಿಸುವ ಉದ್ದೇಶದಿಂದ ಇಟ್ಟಿದ್ದಾರೋ ಎಂದು ಆಕ್ರೋಶಗೊಂಡಿದ್ದಾರೆ. ಭಕ್ತರಲ್ಲೊಬ್ಬರು ಫೊಟೊ ತೆಗೆದು ವಾಟ್ಸಾಪ್ ನಲ್ಲಿ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ

ಬಿಳಿನೆಲೆ ದೇವಸ್ಥಾನದ ಮೂರ್ತಿಗೆ ಪುಸ್ತಕ ತೂಗುಹಾಕಿದ ಕಿರಾತಕರು ► ಭಕ್ತ ವೃಂದದಿಂದ ತೀವ್ರ ಆಕ್ರೋಶ Read More »

ಕರಾವಳಿ

ಕಡಬ ಗಣೇಶೋತ್ಸವ ಸಮಿತಿಗೆ ಗಣಪತಿ ಪೀಠ ಸಮರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜು.06. ಗಣೇಶೋತ್ಸವ ಸಮಿತಿಗೆ ಕಡಬದಲ್ಲಿರುವ ಸ್ವಾತಿ ಇಲೆಕ್ಟ್ರಿಕಲ್ಸ್‌ ಮತ್ತು ಇಲೆಕ್ಟ್ರಾನಿಕ್ಸ್‌ನ ಮಾಲಕರಾದ ಮೈನಾ ಮತ್ತು ರಾಜೇಶ್ ಕಂಡೂರುರವರು ಸುಮಾರು 10ಸಾವಿರ ರೂ. ವೆಚ್ಚದಲ್ಲಿ ಗಣಪತಿ ಪೀಠ ನಿರ್ಮಿಸಿ ಕಡಬ ವಿದ್ಯಾನಗರದಲ್ಲಿರುವ ಸ್ವಾತಿ ನಿಲಯದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷರಾದ ಸುಂದರ ಗೌಡ ಮಂಡೆಕರ, 44ನೇ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಿ, ಜೊತೆಕಾರ್ಯದರ್ಶಿ ಯತೀಶ್ ಹೊಸಮನೆ, ಕೋಶಾಧಿಕಾರಿ ಜಯರಾಮ ಆರ್ತಿಲ, ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣ

ಕಡಬ ಗಣೇಶೋತ್ಸವ ಸಮಿತಿಗೆ ಗಣಪತಿ ಪೀಠ ಸಮರ್ಪಣೆ Read More »

ಕರಾವಳಿ

ಮತ್ತೆ ಸುದ್ದಿಯಾದ ಕಡಬದ MSIL ಮದ್ಯದಂಗಡಿ ► ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ

(ನ್ಯೂಸ್ ಕಡಬ) newskadaba.com ಕಡಬ, ಜು.06. ಸುಪ್ರೀಂ ಕೋರ್ಟ್ ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಮುಚ್ಚಿ ಆದೇಶ ಹೊರಡಿಸಿದ್ದೇ ಕಡಬದ MSIL ಮದ್ಯದಂಗಡಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಮದ್ಯದ ಭರ್ಜರಿ ವ್ಯಾಪಾರದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಅದೇ ಮದ್ಯದಂಗಡಿಯ ಬೀಗ ಮುರಿದು ಕಳ್ಳತನ ನಡೆಸಲು ವಿಫಲ ಯತ್ನ ನಡೆದಿದ್ದು, ಕಡಬದ ಮದ್ಯದಂಗಡಿ ಮತ್ತೆ ಸುದ್ದಿಯಲ್ಲಿದೆ. ಗುರುವಾರ ಬೆಳಿಗ್ಗೆ ನೌಕರರು ಅಂಗಡಿಗೆ ಆಗಮಿಸಿದಾಗ ಶಟರ್ ನ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಈ

ಮತ್ತೆ ಸುದ್ದಿಯಾದ ಕಡಬದ MSIL ಮದ್ಯದಂಗಡಿ ► ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ Read More »

ಕರಾವಳಿ

ಆಲಂಕಾರು: ಗುರುದೇವಾನಂದ ಸ್ವಾಮೀಜಿಯವರ 57ನೇ ಜನ್ಮದಿನೋತ್ಸವ

(ನ್ಯೂಸ್ ಕಡಬ) newskadaba.com ಆಲಂಕಾರು, ಜು.06. ಒಡಿಯೂರು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌, ಒಡಿಯೂರು ಗ್ರಾಮ ವಿಕಾಸ ಯೋಜನೆ ಘಟ ಸಮಿತಿ ಕುಂಡಾಜೆ ರಾಮಕುಂಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುದೇವಾನಂದ ಸ್ವಾಮೀಜಿಯವರ 57ನೇ ಜನ್ಮದಿನೋತ್ಸವದ(ಗ್ರಾಮೋತ್ಸವ) ಪ್ರಯುಕ್ತವಾಗಿ ಸಂಘದ ಸದಸ್ಯರಿಂದ ಸ್ವಚ್ಚತಾ ಕಾರ್ಯಕ್ರಮ ಮತ್ತು ಒಂದು ದಿನದ ಶ್ರಮದಾನವು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ಶಾಲಾ ಆವರಣವನ್ನು ಸ್ವಚ್ಚತೆ ಮಾಡುವ ಮೂಲಕ ಶ್ರಮದಾನವನ್ನು ಪ್ರಾರಂಭಿಸಲಾಯಿತು. ಬಳಿಕ ಶಾಲೆಗೆ ಕೈತೋಟ ರಚನೆ ಮತ್ತು ಶಾಲಾ ಆವರಣದಲ್ಲಿ ತರಕಾರಿ

ಆಲಂಕಾರು: ಗುರುದೇವಾನಂದ ಸ್ವಾಮೀಜಿಯವರ 57ನೇ ಜನ್ಮದಿನೋತ್ಸವ Read More »

ಕರಾವಳಿ
Scroll to Top