ಜುಲೈನಲ್ಲಿ ನಿಯಮಿತ ಮೀಟರ್ ರೀಡಿಂಗ್ ಇರಲ್ಲ: ‘ಆಪರೇಷನ್ ಗೃಹಜ್ಯೋತಿ’ಗೆ ಬೆಸ್ಕಾಂ ಚಾಲನೆ!

(ನ್ಯೂಸ್‌ ಕಡಬ) newskadaba.com, ಜು.02 ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯಕ್ಕೆ (‘ಆಪರೇಷನ್ ಗೃಹಜ್ಯೋತಿ’) ಮೀಟರ್ ರೀಡರ್‌ಗಳನ್ನು ನಿಯೋಜಿಸಿರುವುದರಿಂದ, ಜುಲೈ ತಿಂಗಳಿನಲ್ಲಿ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ತಿಳಿಸಿದೆ. ಮೀಟರ್ ರೀಡಿಂಗ್ ಬದಲಾಗಿ, ಗ್ರಾಹಕರ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ ತಿಂಗಳ ಬಿಲ್ ಸಿದ್ಧಪಡಿಸಲಾಗುತ್ತದೆ.ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಅನರ್ಹರನ್ನು ಫಿಲ್ಟರ್ ಮಾಡಲು ಮತ್ತು […]

ಜುಲೈನಲ್ಲಿ ನಿಯಮಿತ ಮೀಟರ್ ರೀಡಿಂಗ್ ಇರಲ್ಲ: ‘ಆಪರೇಷನ್ ಗೃಹಜ್ಯೋತಿ’ಗೆ ಬೆಸ್ಕಾಂ ಚಾಲನೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

KSRTC, BMTC ಸೇರಿ ನಾಲ್ಕು ನಿಗಮಗಳ ನೌಕರರ ವೇತನ ಪರಿಷ್ಕರಣೆ; ಏಪ್ರಿಲ್ 2025 ರಿಂದಲೇ ಪೂರ್ವಾನ್ವಯ

(ನ್ಯೂಸ್‌ ಕಡಬ) newskadaba.com, ಜು.02: ಕರ್ನಾಟಕ ಸರ್ಕಾರವು ನಾಲ್ಕು ರಾಜ್ಯ ಸಾರಿಗೆ ನಿಗಮಗಳ (KSRTC, BMTC, NWKRTC ಮತ್ತು KKRTC) ಸುಮಾರು 1.05 ಲಕ್ಷ ನೌಕರರ ಮೂಲ ವೇತನವನ್ನು 12.5% ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ವೇತನವು ಜುಲೈ ತಿಂಗಳಿನಿಂದ ಜಾರಿಗೆ ಬರಲಿದ್ದು, 2025ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದೆ.ನೌಕರರಿಗೆ ಪಾವತಿಸಬೇಕಿರುವ ಹಳೆಯ ವೇತನ ಹಿಂಬಾಕಿಯ (Arrears) ಮೊದಲ ಕಂತಿನ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಈ ವೇತನ ಪರಿಷ್ಕರಣೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಪ್ರತಿ

KSRTC, BMTC ಸೇರಿ ನಾಲ್ಕು ನಿಗಮಗಳ ನೌಕರರ ವೇತನ ಪರಿಷ್ಕರಣೆ; ಏಪ್ರಿಲ್ 2025 ರಿಂದಲೇ ಪೂರ್ವಾನ್ವಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಕ್ಷಿಣ ಕನ್ನಡದಲ್ಲಿ ಭೂಕುಸಿತದ ಆತಂಕ: 88 ಪ್ರದೇಶಗಳು ‘ಅತಿ ಹೆಚ್ಚು ಅಪಾಯದ ವಲಯ’ ಎಂದು ಘೋಷಣೆ!

(ನ್ಯೂಸ್‌ ಕಡಬ) newskadaba.com, ಜು.02: ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಒಟ್ಟು 88 ಪ್ರದೇಶಗಳನ್ನು ‘ಅತಿ ಹೆಚ್ಚು ಅಪಾಯದ ವಲಯ’ ಎಂದು ಘೋಷಿಸಿದೆ.ಬೆಳ್ತಂಗಡಿಯ ಚಾರ್ಮಾಡಿ ಘಾಟ್, ನೆರಿಯ, ಶಿಶಿಲ, ಮಂಗಳೂರಿನ ಕೆತ್ತಿಕಲ್ ಸೇರಿದಂತೆ ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ ಮತ್ತು ಉಳ್ಳಾಲ ಭಾಗದ ಹಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಐಐಟಿ ಧಾರವಾಡ ನಡೆಸಿದ ಕೃತಕ ಬುದ್ಧಿಮತ್ತೆ ಆಧಾರಿತ ವೈಜ್ಞಾನಿಕ ಅಧ್ಯಯನದ ಪ್ರಕಾರ, ಜಿಲ್ಲೆಯ

ದಕ್ಷಿಣ ಕನ್ನಡದಲ್ಲಿ ಭೂಕುಸಿತದ ಆತಂಕ: 88 ಪ್ರದೇಶಗಳು ‘ಅತಿ ಹೆಚ್ಚು ಅಪಾಯದ ವಲಯ’ ಎಂದು ಘೋಷಣೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಐವಿಎಫ್, ಬಾಡಿಗೆ ತಾಯ್ತನ ಕೇಂದ್ರಗಳಿಗೆ ಕೇಂದ್ರದ ಹೊಸ ಗೈಡ್‌ಲೈನ್ಸ್: ಲೈಸೆನ್ಸ್ ನವೀಕರಣ ಕಡ್ಡಾಯ, ತಪ್ಪಿದರೆ ಭಾರಿ ದಂಡ!

(ನ್ಯೂಸ್‌ ಕಡಬ) newskadaba.com, ಜು.02: ದೇಶಾದ್ಯಂತ ಹೆಚ್ಚುತ್ತಿರುವ ಐವಿಎಫ್ ಮತ್ತು ನೆರವು ಸಂತಾನೋತ್ಪತ್ತಿ ತಂತ್ರಜ್ಞಾನ ಕೇಂದ್ರಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಎಲ್ಲಾ ಫರ್ಟಿಲಿಟಿ ಕ್ಲಿನಿಕ್‌ಗಳು ಮತ್ತು ವೀರ್ಯ ಬ್ಯಾಂಕುಗಳು ಪ್ರತಿ 5 ವರ್ಷಗಳಿಗೊಮ್ಮೆ ಹಾಗೂ ಸರೊಗಸಿ ಚಿಕಿತ್ಸಾಲಯಗಳು ಪ್ರತಿ 3 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಪರವಾನಗಿ ನವೀಕರಿಸಬೇಕು. ಲೈಸೆನ್ಸ್ ಅವಧಿ ಮುಗಿಯುವ ಕನಿಷ್ಠ 60 ದಿನಗಳ ಮುಂಚಿತವಾಗಿ ರಾಷ್ಟ್ರೀಯ ART ಮತ್ತು ಸರೊಗಸಿ ನೋಂದಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ.ಹಂತ-1 IVF

ಐವಿಎಫ್, ಬಾಡಿಗೆ ತಾಯ್ತನ ಕೇಂದ್ರಗಳಿಗೆ ಕೇಂದ್ರದ ಹೊಸ ಗೈಡ್‌ಲೈನ್ಸ್: ಲೈಸೆನ್ಸ್ ನವೀಕರಣ ಕಡ್ಡಾಯ, ತಪ್ಪಿದರೆ ಭಾರಿ ದಂಡ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

52 ಕ್ರಿಮಿನಲ್ ಕೇಸ್ ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್

(ನ್ಯೂಸ್‌ ಕಡಬ) newskadaba.com, ಜು.02: ಕರ್ನಾಟಕ ಸರ್ಕಾರ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಕುರಿತ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:ಯು.ಟಿ. ಖಾದರ್ ಅವರ ಶಿಫಾರಸಿನ ಮೇರೆಗೆ ಕಲಬುರಗಿಯ ಲಾಡ್ಲೆ ಮಶಾಕ್ ದರ್ಗಾ ಗಲಭೆ ಹಾಗೂ ಕೋಮುಗಲಭೆ ಪ್ರಕರಣಗಳು ಸೇರಿದಂತೆ ಒಟ್ಟು 52 ಕೇಸ್‌ಗಳನ್ನು ವಾಪಸ್ ಪಡೆಯಲು 2026ರ ಮೇ 27ರಂದು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಮುಖ್ಯ ನ್ಯಾಯಮೂರ್ತಿ ವಿಬು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ

52 ಕ್ರಿಮಿನಲ್ ಕೇಸ್ ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ನೇಜಿ ನಾಟಿ ಪ್ರಾತ್ಯಕ್ಷಿಕೆ

(ನ್ಯೂಸ್ ಕಡಬ) newskadaba.com ಕಡಬ, ಜು. 02. ಪಠ್ಯಪೂರಕ ಚಟುವಟಿಕೆಗಳ ಭಾಗವಾಗಿ ಇಕೋ ಕ್ಲಬ್ ವತಿಯಿಂದ ಸೈಂಟ್ ಜೋಕಿಮ್ಸ್ ಮತ್ತು ಸೈಂಟ್ ಆನ್ಸ್ ಪ್ರೌಢಶಾಲೆಯ ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಸುವರ್ಣ ನಿಲಯ ಕೋಡಿಬೈಲು ಶ್ರೀಮತಿ ದೇವಕಿ ಪೂಜಾರಿ ಇವರ ಮನೆಯ ಗದ್ದೆಯಲ್ಲಿ ಭತ್ತದ ಕೃಷಿ ಹಾಗೂ ನಾಟಿಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ನೇಜಿ ನಾಟಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಪ್ರಕಾಶ್ ಪೌಲ್ ಡಿ ಸೋಜಾ ರವರು ವಿದ್ಯಾರ್ಥಿಗಳು ಭತ್ತದ

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ನೇಜಿ ನಾಟಿ ಪ್ರಾತ್ಯಕ್ಷಿಕೆ Read More »

ಕರಾವಳಿ

ಮಂಗಳೂರು ಮನೆ ಕುಸಿದುಬಿದ್ದು ಮೂವರು ಮೃತ್ಯು ಪರಿಹಾರ ಮೊತ್ತದ ಚೆಕ್ ವಿತರಿಸಿದ ಯು.ಟಿ. ಖಾದರ್

(ನ್ಯೂಸ್ ಕಡಬ) newskadaba.com ಜು. 02. ತಡೆಗೋಡೆ ಕುಸಿದು ಬಿದ್ದು ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ ಐದು ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ಗಳನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ವಿತರಿಸಿದರು.   ಈ ಸಂದರ್ಭ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಪಂ ಸಿಇಒ ವಿನಾಯಕ ನರ್ವಾಡೆ ಕಾರ್ಬಾರಿ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಎಸ್ಪಿ ಡಾ. ಅರುಣ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು. ದುರಂತದಲ್ಲಿ ಗಾಯಗೊಂಡವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ

ಮಂಗಳೂರು ಮನೆ ಕುಸಿದುಬಿದ್ದು ಮೂವರು ಮೃತ್ಯು ಪರಿಹಾರ ಮೊತ್ತದ ಚೆಕ್ ವಿತರಿಸಿದ ಯು.ಟಿ. ಖಾದರ್ Read More »

ಕರಾವಳಿ

ಕಾಣೆಯಾದವರ ಪತ್ತೆಗೆ ಮನವಿ

(ನ್ಯೂಸ್ ಕಡಬ) newskadaba.com ಜು. 02. ಶಕ್ತಿನಗರದ ಕ್ಯಾಸ್ಟೊಲಿನೋ ಕಾಲೋನಿ ನಿವಾಸಿ ಭೂಷಣ್ ಸಿಂಗ್ (19 ವರ್ಷ) ಎಂಬವರು ಮನೆಯಲ್ಲಿ ಜಗಳವಾಡಿ ಸ್ಕೂಲ್ ಬ್ಯಾಗ್ ಹಿಡಿದುಕೊಂಡು ಜೂನ್ 29 ರಂದು ಮನೆ ಬಿಟ್ಟು ಹೋದವರು ಕಾಣೆಯಾಗಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ: ಎತ್ತರ 5.4 ಅಡಿ, ಎಣ್ಣೆಕಪ್ಪು ಮೈಬಣ್ಣ, ಕಪ್ಪು ಕೂದಲು, ಸಪೂರ ಶರೀರ ಹೊಂದಿರುತ್ತಾರೆ. ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಕಪ್ಪು ಬಣ್ಣದ

ಕಾಣೆಯಾದವರ ಪತ್ತೆಗೆ ಮನವಿ Read More »

ಕರಾವಳಿ, ಕ್ರೈಮ್ ನ್ಯೂಸ್

ಗುಟ್ಕಾ ಉಗುಳುವ ಧಾವಂತ ತಂದಿಟ್ಟ ಆಪತ್ತು: ಚಲಿಸುವ ಬಸ್ಸಿನಲ್ಲೇ ರುಂಡ ಕತ್ತರಿಸಿ ಬಿದ್ದ ಯುವಕ

(ನ್ಯೂಸ್‌ ಕಡಬ) newskadaba.com, ಜು.02: ಚಲಿಸುವ ಬಸ್ಸಿನ ಕಿಟಕಿಯಿಂದ ಹೊರಗೆ ತಲೆಹಾಕಿದ ಪರಿಣಾಮ, ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಹೊರವಲಯದಲ್ಲಿ ಸಂಭವಿಸಿದೆ.ಶಿರೂರು ಗ್ರಾಮದ ಐಟಿಐ ವಿದ್ಯಾರ್ಥಿ ಫಕೀರೇಶ (17). ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ಸಿನ ಹಿಂಬದಿ ಸೀಟಿನಲ್ಲಿ ಫಕೀರೇಶ ಕುಳಿತಿದ್ದ. ಬಸ್ ಚಲಿಸುತ್ತಿದ್ದಾಗ ಗುಟ್ಕಾ ಉಗುಳಲು ಆತ ಕಿಟಕಿಯಿಂದ ತಲೆಯನ್ನು ಹೊರಗೆ ಹಾಕಿದ್ದಾನೆ. ಈ

ಗುಟ್ಕಾ ಉಗುಳುವ ಧಾವಂತ ತಂದಿಟ್ಟ ಆಪತ್ತು: ಚಲಿಸುವ ಬಸ್ಸಿನಲ್ಲೇ ರುಂಡ ಕತ್ತರಿಸಿ ಬಿದ್ದ ಯುವಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ ತಾಲೂಕಿನಲ್ಲಿ ವರುಣನ ಆರ್ಭಟ: ಮರ ಬಿದ್ದು ಮನೆಗಳು ಜಖಂ, ನಿರಾಶ್ರಿತರಾದ ನಿವಾಸಿಗಳು

(ನ್ಯೂಸ್‌ ಕಡಬ) newskadaba.com, ಜು.02: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ಮನೆಗಳಿಗೆ ಭಾರಿ ಹಾನಿ ಸಂಭವಿಸಿದೆ. ಅಜೆಕಲ ನಿವಾಸಿ ಚಂದ್ರಶೇಖರ ಅವರ ಮನೆ ಮೇಲೂ ಮರ ಬಿದ್ದಿದ್ದು, ನಿವಾಸವು ವಾಸಕ್ಕೆ ಸಂಪೂರ್ಣ ಅಯೋಗ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ಸದ್ಯ ಬಾಡಿಗೆ ಮನೆಯನ್ನು ಆಶ್ರಯಿಸಿದ್ದಾರೆ. ಅಲಂಗಾರು ನಿವಾಸಿ ವನಜಾ ಅವರ ಮನೆಯೂ ಭಾರಿ ಮಳೆಯ ಪರಿಣಾಮ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.

ಬಂಟ್ವಾಳ ತಾಲೂಕಿನಲ್ಲಿ ವರುಣನ ಆರ್ಭಟ: ಮರ ಬಿದ್ದು ಮನೆಗಳು ಜಖಂ, ನಿರಾಶ್ರಿತರಾದ ನಿವಾಸಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top