ಮೈಸೂರಲ್ಲಿ ಘೋರ ಕೃತ್ಯ: ಪತಿಯನ್ನು ಕೊಂದು, ಮಗನಿಗೆ ಇರಿದು ಶವದ ಪಕ್ಕದಲ್ಲೇ ಮೊಬೈಲ್ ನೋಡ್ತಾ ಕೂತ ನೇತ್ರ ತಜ್ಞೆ
(ನ್ಯೂಸ್ ಕಡಬ) newskadaba.com ಜು. 16:ಮೈಸೂರು ಇಲ್ಲಿನ ಬಾರಾಕೊಟ್ರಿ ಬಡಾವಣೆಯ ಹೈ-ಸೆಕ್ಯೂರಿಟಿ ಅಪಾರ್ಟ್‌ಮೆಂಟ್ ಒಂದರಲ್ಲಿ ಖ್ಯಾತ ಅರವಳಿಕೆ ತಜ್ಞ ವೈದ್ಯರೊಬ್ಬರ ಭೀಕರ ಕೊಲೆಯಾಗಿದ್ದು, ಇಡೀ ಸಾಂಸ್ಕೃತಿಕ ನಗರಿಯನ್ನು ಬೆಚ್ಚಿಬೀಳಿಸಿದೆ. ಖಾಸಗಿ ಆಸ್ಪತ್ರೆಯ ವೈದ್ಯರಾಗಿದ್ದ ಡಾ. ಕಿರಣ್ ಹೊನ್ನಣ್ಣವರ (45) ಕೊಲೆಯಾದ ದುರ್ದೈವಿ. ಕೃತ್ಯದ ಹಿನ್ನೆಲೆಯಲ್ಲಿ ಅವರ ಪತ್ನಿ, ವೃತ್ತಿಯಲ್ಲಿ ನೇತ್ರ ತಜ್ಞೆಯಾಗಿರುವ ಡಾ. ಪ್ರಿಯಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯೇ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಕೇವಲ […]










