ಮಂಜೇಶ್ವರದ ಕುಂಜತ್ತೂರು ಶಾಲಾ ಮೇಲ್ಛಾವಣಿ ಕುಸಿತ – ತಪ್ಪಿದ ಭಾರೀ ಅನಾಹುತ

(ನ್ಯೂಸ್‌ ಕಡಬ) newskadaba.com,  ಸೆ.26  ಮಂಜೇಶ್ವರ :  ಶಾಲಾ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಸೆ.೨೫ರಂದು ಉದ್ಯಾವರ ದಲ್ಲಿರುವ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ತರಗತಿಯಲ್ಲಿ ಮಕ್ಕಳು ಇಲ್ಲದೆ ಇದ್ದುದರಿಂದ ಭಾರೀ ಅಪಾಯ ಸ್ವಲ್ಪದರಲ್ಲೇ ತಪ್ಪಿದೆ . ಬೆಳಿಗ್ಗೆ 8.30 ರ ಸುಮಾರಿಗೆ ಘಟನೆ ನಡೆದಿದೆ 2ನೇ ತರಗತಿಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಈ ಸಮಯದಲ್ಲಿ ಮಕ್ಕಳು ತರಗತಿಗೆ ತಲುಪಿರಲಿಲ್ಲ. ಹಂಚು ಹಾಸಿದ ಶಾಲೆಯ ಕೆಳಗೆ ಅಳವಡಿಸಲಾದ ಸ್ಲಾಬ್ ಕುಸಿದು ಬಿದ್ದಿದೆ . ಸಮೀಪದಲ್ಲಿದ್ದ […]

ಮಂಜೇಶ್ವರದ ಕುಂಜತ್ತೂರು ಶಾಲಾ ಮೇಲ್ಛಾವಣಿ ಕುಸಿತ – ತಪ್ಪಿದ ಭಾರೀ ಅನಾಹುತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೈಕ್‌ಗೆ ಟ್ಯಾಂಕರ್‌ ಡಿಕ್ಕಿ-ಅಪ್ಪ ಸಾವು, ಮಗ ಪಾರು

(ನ್ಯೂಸ್‌ ಕಡಬ) newskadaba.com,  ಸೆ.25 ಬೆಂಗಳೂರು : ಬೈಕ್‌ನಲ್ಲಿ ಮಗನನ್ನು ಕರೆದುಕೊಂಡು ಹೋಗುತ್ತಿದ್ದಾಗ ವಾಟರ್‌ಟ್ಯಾಂಕರ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ ಮೃತಪಟ್ಟಿರುವ ಘಟನೆ ವೈಟ್‌ಫೀಲ್‌್ಡ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೂಲತಃ ಕೋಲಾರದ ಮುನಿರಾಜು (52) ಮೃತಪಟ್ಟವರು. ಇವರ ಮಗ ಧನಂಜಯಗೌಡ (16) ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಿನ್ನೆ ಬೆಳಗ್ಗೆ 7.45 ರ ಸುಮಾರಿನಲ್ಲಿ ಮುನಿರಾಜು ಅವರು ಬೈಕ್‌ನಲ್ಲಿ ಮಗನನ್ನು ಕರೆದುಕೊಂಡು ನಾಗಗೊಂಡನಹಳ್ಳಿ ಕಡೆಯಿಂದ ಇಮಡಿಹಳ್ಳಿ ಕಡೆಗೆ ಹೋಗುತ್ತಿದ್ದರು. ಇಮಡಿಹಳ್ಳಿ ಮುಖ್ಯ ರಸ್ತೆಯ ಸಾಯಿ

ಬೈಕ್‌ಗೆ ಟ್ಯಾಂಕರ್‌ ಡಿಕ್ಕಿ-ಅಪ್ಪ ಸಾವು, ಮಗ ಪಾರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಬೈರಪ್ಪನವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಕ್ರಮ’- ಮುಖ್ಯಮಂತ್ರಿ ಸಿದ್ದರಾಮಯ್ಯ

(ನ್ಯೂಸ್‌ ಕಡಬ) newskadaba.com,  ಸೆ.25 ಬೆಂಗಳೂರು : ಪದ್ಮಭೂಷಣ ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಬೈರಪ್ಪನವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪದ್ಮಭೂಷಣ ಹಿರಿಯ ಸಾಹಿತಿ ದಿವಂಗತ ಎಸ್.ಎಲ್.ಬೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮೈಸೂರಿನಲ್ಲಿ ಸ್ಮಾರಕ ಎಸ್.ಎಲ್.ಬೈರಪ್ಪನವರ ಸ್ಮಾರಕ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹೇಳಿದರೆಂದು ಸ್ಮಾರಕ ನಿರ್ಮಿಸುವುದಿಲ್ಲ. ಮೈಸೂರಿನಲ್ಲಿಯೇ ಸ್ಮಾರಕ

‘ಬೈರಪ್ಪನವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಕ್ರಮ’- ಮುಖ್ಯಮಂತ್ರಿ ಸಿದ್ದರಾಮಯ್ಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಸ್. ನಾರಾಯಣ್ ನಿರ್ದೇಶನದ ʼಮಾರುತʼ ಚಿತ್ರದ ಹಾಡು ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ಸೆ.25 ಬೆಂಗಳೂರು : ಖ್ಯಾತ ನಿರ್ದೇಶಕ ಡಾ.ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು – ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರ ʼಮಾರುತʼ ಚಿತ್ರಕ್ಕಾಗಿ ಎಸ್. ನಾರಾಯಣ್ ಅವರೇ ಬರೆದು ಸಂಗೀತ ಸಂಯೋಜಿಸಿರುವ ʼನಮ್ಮಮ್ಮ ಸವದತ್ತಿ ಎಲ್ಲಮ್ಮʼ ಎಂಬ ಹಾಡು ನವರಾತ್ರಿಯ ಸಂದರ್ಭದಲ್ಲಿ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಯಿತು. ಅನನ್ಯ ಭಟ್ ಅವರ ಗಾಯನದಲ್ಲಿ ಮೂಡಿಬಂದಿರುವ

ಎಸ್. ನಾರಾಯಣ್ ನಿರ್ದೇಶನದ ʼಮಾರುತʼ ಚಿತ್ರದ ಹಾಡು ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಂತಾರ: ಚಾಪ್ಟರ್‌ 1’ಗೆ ಕರ್ನಾಟಕದಲ್ಲಿ ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ ದಿನಾಂಕ ಘೋಷಣೆ

(ನ್ಯೂಸ್‌ ಕಡಬ) newskadaba.com,  ಸೆ.25 ಬೆಂಗಳೂರು :  ಘೋಷಣೆಯಾದಾಗಿನಿಂದಲೇ ಕುತೂಹಲ ಕೆರಳಿಸಿ, ಟ್ರೈಲರ್‌ ಮೂಲಕ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ ʼಕಾಂತಾರ: ಚಾಪ್ಟರ್‌ 1ʼ ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್‌ ನೀಡಿದೆ. ಅಕ್ಟೋಬರ್‌ 2ರಂದು ವಿವಿಧ ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಗೆ ಬರಲಿರುವ ಈ ಚಿತ್ರ ಈಗಾಗಲೇ ಹವಾ ಸೃಷ್ಟಿಸಿದ್ದು, ರಿಲೀಸ್‌ಗೆ 1 ವಾರ ಬಾಕಿ ಉಳಿದಿರುವಾಗ ಸಿನಿಮಾತಂಡ ಕರ್ನಾಟಕದಲ್ಲಿ ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ ದಿನಾಂಕ ಘೋಷಿಸಿದೆ. ಸೆಪ್ಟೆಂಬರ್‌ 26ರ ಮಧ್ಯಾಹ್ನ 12:29ಕ್ಕೆ ನೀವು ಟಿಕೆಟ್‌ ಬುಕ್‌ ಮಾಡಬಹುದು.

ಕಾಂತಾರ: ಚಾಪ್ಟರ್‌ 1’ಗೆ ಕರ್ನಾಟಕದಲ್ಲಿ ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ ದಿನಾಂಕ ಘೋಷಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಫ್ರೆಮಾಂಟ್ : ಅಮೆರಿಕದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನು ಕೊಂದ ಭಾರತೀಯರು

(ನ್ಯೂಸ್‌ ಕಡಬ) newskadaba.com,  ಸೆ.25 ಫ್ರೆಮಾಂಟ್: ಕ್ಯಾಲಿಫೋರ್ನಿಯಾದ ಫ್ರೆಮಾಂಟ್‌ನಲ್ಲಿ ಭಾರತೀಯ ಮೂಲದ 29 ವರ್ಷದ ವರುಣ್ ಸುರೇಶ್‌ನ ವಿರುದ್ಧ 71 ವರ್ಷದ ಡೇವಿಡ್ ಬ್ರಿಮರ್‌ನನ್ನು ಚಾಕುವಿನಿಂದ ಇರಿದು ಕೊಂದ ಆರೋಪದಡಿ ಕೇಸ್ ದಾಖಲಾಗಿದೆ. ಪೊಲೀಸರು ಈ ದಾಳಿಯನ್ನು “ಉದ್ದೇಶಪೂರಿತ” ಎಂದು ಕರೆದಿದ್ದಾರೆ. ಬ್ರಿಮರ್, ಮಕ್ಕಳ ಮೇಲಿನ ಲೈಂಗಿಕ ಕೃತ್ಯ ನಡೆಸಿದ ಅಪರಾಧಕ್ಕೆ 1995ರಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಘಟನೆಯ ವಿವರ ಸೆಪ್ಟೆಂಬರ್ 18 ರಂದು ಫ್ರೆಮಾಂಟ್‌ನಲ್ಲಿ ಇಬ್ಬರು ಹೊಡೆದಾಡುತ್ತಿರುವ ದೂರು ಬಂದಾಗ ಪೊಲೀಸರು ಸ್ಥಳಕ್ಕೆ ತೆರಳಿದರು.

ಫ್ರೆಮಾಂಟ್ : ಅಮೆರಿಕದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನು ಕೊಂದ ಭಾರತೀಯರು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು : ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶಾರದಾ ಮಹೋತ್ಸವ ಸಂಭ್ರಮಾಚರಣೆ

(ನ್ಯೂಸ್‌ ಕಡಬ) newskadaba.com,  ಸೆ.25 ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶಾರದಾ ಮಹೋತ್ಸವವನ್ನು ಅತ್ಯಂತ ಭಕ್ತಿ ಸಡಗರದಿಂದ ಆಚರಿಸಲಾಯಿತು.  ಈ ಕಾರ್ಯಕ್ರಮದಂಗವಾಗಿ ಪ್ರಾರಂಭದಲ್ಲಿ ವಿದ್ಯಾ ಸಂಸ್ಥೆಯ ಧ್ಯಾನಮಂದಿರದಲ್ಲಿ ವಿದ್ಯಾಧಿದೇವತೆ ಶ್ರೀ ಶಾರದಾ ಮಾತೆಯ ವಿಗ್ರಹದ ಮುಂದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಭಜನಾ ಸಂಕೀರ್ತನೆಗೈದರು. ಬಳಿಕ ಪೂಜೆ ಹಾಗೂ ಮಂಗಳಾರತಿ ನೆರವೇರಿತು. ಅದೇ ರೀತಿ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾಸರಗೋಡು ಜಿಲ್ಲೆಯ ಶ್ರೀ ಎಡನೀರು ಮಠದ

ಮಂಗಳೂರು : ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶಾರದಾ ಮಹೋತ್ಸವ ಸಂಭ್ರಮಾಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಮಾದಕ ದ್ರವ್ಯ ಮಾರಾಟ ಪ್ರಕರಣ- ಇಬ್ಬರನ್ನು ಬಂಧನ

(ನ್ಯೂಸ್‌ ಕಡಬ) newskadaba.com,  ಸೆ.25 ಮಂಗಳೂರು: ಮಾದಕ ದ್ರವ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಂಗಳೂರು ಸೆಂಟ್ರಲ್ ಉಪ ವಿಭಾಗದ ಎಸಿಪಿ ನೇತೃತ್ವದ ತಂಡ ಹಾಗೂ ಬರ್ಕೆ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 186 ಗ್ರಾಂ ಓಪಿಯಂ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ರಾಜಸ್ತಾನ ಮೂಲದ ಸದ್ಯ ಮಂಗಳೂರಿನಲ್ಲಿ ನೆಲೆಸಿರುವ ವಾಸುದೇವ (48), ಮಂಗಲ್ ಚೌಧರಿ (45) ಎಂದು ಗುರುತಿಸಲಾಗಿದೆ. ಬಂಧಿತರಿಂದ 40 ಸಾವಿರ ರೂ. ಮೌಲ್ಯದ ಐಫೋನ್, 50 ಸಾವಿರ ರೂ.

ಮಂಗಳೂರು: ಮಾದಕ ದ್ರವ್ಯ ಮಾರಾಟ ಪ್ರಕರಣ- ಇಬ್ಬರನ್ನು ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ವಂಚನೆ: ದೈಹಿಕ ಶಿಕ್ಷಕನ ವಿರುದ್ಧ ದೂರು ದಾಖಲು

(ನ್ಯೂಸ್‌ ಕಡಬ) newskadaba.com,  ಸೆ.25 ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ಆರೋಪಿಸಿ ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನೊಬ್ಬನ ಮೇಲೆ ಕೋಣನಕುಂಟೆ ಪೊಲೀಸ್ ಠಾಣೆಗೆ ಆತನ ಸ್ನೇಹಿತೆ ದೂರು ನೀಡಿದ್ದಾರೆ.ಕೇರಳ ಮೂಲದ ಅಬೇ ವಿ ಮ್ಯಾಥ್ಯು ವಿರುದ್ಧ ಆರೋಪ ಕೇಳಿ ಬಂದಿದೆ. ಈತ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ಹಾಗೂ ಕ್ರಿಕೆಟ್ ತರಬೇತುದಾರನಾಗಿದ್ದಾನೆಂದು ತಿಳಿದುಬಂದಿದೆ. ಸಂತ್ರಸ್ತೆ ರಾಜ್ಯ ಮಹಿಳಾ ಆಯೋಗಕ್ಕೆ ಸೆ.22ರಂದು ದೂರು ನೀಡಿದ್ದಾರೆ, ಆ ದೂರಿನ ಪ್ರತಿಯನ್ನು

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ವಂಚನೆ: ದೈಹಿಕ ಶಿಕ್ಷಕನ ವಿರುದ್ಧ ದೂರು ದಾಖಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದು ಮತ್ತೆ ಇಳಿಕೆಯಾದ ಚಿನ್ನದ ದರ

(ನ್ಯೂಸ್‌ ಕಡಬ) newskadaba.com,  ಸೆ.25 ಬೆಂಗಳೂರು : ಚಿನ್ನದ ದರದಲ್ಲಿಇಂದು ಇಳಿಕೆ ಕಂಡು ಬಂದಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 85ರೂ ಇಳಿಕೆಯಾಗಿ , 10,490 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 93ರೂ. ಇಳಿಕೆಯಾಗಿ 11,444 ರೂ ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 83,920 ರೂ. ಬಾಳಿದರೆ, 10 ಗ್ರಾಂಗೆ ನೀವು 1,04,900 ರೂ. ಹಾಗೂ 100 ಗ್ರಾಂಗೆ 10,49,000 ರೂ. ನೀಡಬೇಕಾಗುತ್ತದೆ.

ಇಂದು ಮತ್ತೆ ಇಳಿಕೆಯಾದ ಚಿನ್ನದ ದರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top