ಫ್ರೆಮಾಂಟ್ : ಅಮೆರಿಕದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನು ಕೊಂದ ಭಾರತೀಯರು



(ನ್ಯೂಸ್‌ ಕಡಬ) newskadaba.com,  ಸೆ.25 ಫ್ರೆಮಾಂಟ್: ಕ್ಯಾಲಿಫೋರ್ನಿಯಾದ ಫ್ರೆಮಾಂಟ್‌ನಲ್ಲಿ ಭಾರತೀಯ ಮೂಲದ 29 ವರ್ಷದ ವರುಣ್ ಸುರೇಶ್‌ನ ವಿರುದ್ಧ 71 ವರ್ಷದ ಡೇವಿಡ್ ಬ್ರಿಮರ್‌ನನ್ನು ಚಾಕುವಿನಿಂದ ಇರಿದು ಕೊಂದ ಆರೋಪದಡಿ ಕೇಸ್ ದಾಖಲಾಗಿದೆ. ಪೊಲೀಸರು ಈ ದಾಳಿಯನ್ನು “ಉದ್ದೇಶಪೂರಿತ” ಎಂದು ಕರೆದಿದ್ದಾರೆ. ಬ್ರಿಮರ್, ಮಕ್ಕಳ ಮೇಲಿನ ಲೈಂಗಿಕ ಕೃತ್ಯ ನಡೆಸಿದ ಅಪರಾಧಕ್ಕೆ 1995ರಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ.







ಘಟನೆಯ ವಿವರ






ಸೆಪ್ಟೆಂಬರ್ 18 ರಂದು ಫ್ರೆಮಾಂಟ್‌ನಲ್ಲಿ ಇಬ್ಬರು ಹೊಡೆದಾಡುತ್ತಿರುವ ದೂರು ಬಂದಾಗ ಪೊಲೀಸರು ಸ್ಥಳಕ್ಕೆ ತೆರಳಿದರು. ಬ್ರಿಮರ್ ಚಾಕುವಿನ ಇರಿದ ಗಾಯದಿಂದ ಸತ್ತಿದ್ದನು. ಸುರೇಶ್‌ನ ಬಳಿ ಚಾಕು ಕಂಡುಬಂದಿತು. ಸುರೇಶ್ ಕ್ಯಾಲಿಫೋರ್ನಿಯಾದ ಮೆಗನ್ ಲಾ ಡೇಟಾಬೇಸ್ ಬಳಸಿ ಬ್ರಿಮರ್‌ನನ್ನು ಗುರುತಿಸಿದ್ದ. ದಾಳಿಗೆ 45 ನಿಮಿಷ ಮೊದಲು ಸುರೇಶ್ ಬ್ರಿಮರ್‌ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ತೆಗೆದಿದ್ದರು. ಸುರೇಶ್ ತನ್ನನ್ನು ಸಿಪಿಎ ಎಂದು ಪರಿಚಯಿಸಿಕೊಂಡು , ಬ್ಯಾಗ್, ನೋಟ್‌ಬುಕ್, ಕಾಫಿಯೊಂದಿಗೆ ಬ್ರಿಮರ್‌ರ ಮನೆಗೆ ಹೋಗಿ ದಾಳಿ ಮಾಡಿದ್ದಾರೆ.

error: Content is protected !!
Scroll to Top