ನಾಳೆ(ಡಿ.30) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.29. ಬಿಡದಿಯಲ್ಲಿರುವ ಬಿವಿವಿ ಸಂಘದ ಅಮೃತಾ ಎಂಜಿನಿಯರಿಂಗ್ ಕಾಲೇಜಿನ ನೂತನ ಕ್ಯಾಂಪಸ್ ಅನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿಸೆಂಬರ್ 30 ಶನಿವಾರದಂದು ಲೋಕಾರ್ಪಣೆ ಮಾಡಲಿದ್ದಾರೆ. ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ವತಿಯಿಂದ ಬೆಂಗಳೂರಿನಲ್ಲಿ ನೂತನ ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಅನಂತ್‌ಕುಮಾರ್, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ನಾಳೆ(ಡಿ.30) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕಕ್ಕೆ Read More »

ರಾಷ್ಟ್ರೀಯ ನ್ಯೂಸ್

ಚಳಿಗಾಲದಲ್ಲಿ ಆರೋಗ್ಯ ರಕ್ಷಣಾ ವಿಧಾನ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ: ಚಳಿಗಾಲ ಬಂದರೆ ಸಾಕು ಮುಖ, ಕೈ-ಕಾಲಿನ ತೇವಾಂಶ ಕಡಿಮೆಯಾಗುವುದರ ಜೊತೆ ಬಿರುಕಿನ ಸಮಸ್ಯೆ, ಚರ್ಮದ ಕಾಂತಿ ಕಡಿಮೆಯಾದಂತೆ ಕಾಣುತ್ತಿರುತ್ತದೆ. ಪ್ರತಿನಿತ್ಯ ಲಿಪ್ ಬಾಮ್ ಹಚ್ಚಿದರೂ ಕೂಡ ಚಳಿಗಾಲದಲ್ಲಿ ಹೆಚ್ಚಿನ ಕೇರ್ ಮಾಡಬೇಕಾಗುತ್ತದೆ. ಪ್ರತಿದಿನ ಮಲಗುವ ವೇಳೆ ತುಟಿಗೆ ಲಿಪ್ ಬಾಮ್ ಅಥವಾ ವ್ಯಾಸಲೀನ್ ಹಚ್ಚಿ ಮಲಗಿ. ತುಟಿ ತುಂಬಾ ಒಡೆದಿದೆ ಎಂದಾದರೆ ಗ್ಲಿಸರಿನ್ ಅಥವಾ ಬಾದಾಮಿ ಎಣ್ಣೆ/ ಆಲೀವ್ ಎಣ್ಣೆ ಹಚ್ಚಿ ಮಲಗಿ. ವಾರಕ್ಕೆ ಎರಡು ಬಾರಿ ತುಟಿಯ ಮೇಲೆ

ಚಳಿಗಾಲದಲ್ಲಿ ಆರೋಗ್ಯ ರಕ್ಷಣಾ ವಿಧಾನ Read More »

ಆರೋಗ್ಯ ಮಾಹಿತಿ

ಬಿಳಿನೆಲೆ: ಬೈಕ್-ಕಾರು ಢಿಕ್ಕಿ ► ಬೈಕ್ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಡಿ.29. ಬೈಕ್ ಹಾಗೂ ಝೈಲೋ ಕಾರು ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ CPCRI ಬಳಿ ಶುಕ್ರವಾರದಂದು ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸುಬ್ರಹ್ಮಣ್ಯ ಕಾಲೇಜು ವಿದ್ಯಾರ್ಥಿ ಮರ್ಧಾಳ ನಿವಾಸಿ ನವೀನ್ ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಳಿನೆಲೆ: ಬೈಕ್-ಕಾರು ಢಿಕ್ಕಿ ► ಬೈಕ್ ಸವಾರ ಗಂಭೀರ Read More »

ಕರಾವಳಿ

ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.29. ಅಪ್ರಾಪ್ತೆ ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಿದ ಆರೋಪದಲ್ಲಿ  ಯುವಕನೋರ್ವನನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಮಚ್ಚಿನ ಕುದ್ರಡ್ಕ ನಿವಾಸಿ ನಾರಾಯಣ (30) ಎಂದು ಗುರುತಿಸಲಾಗಿದೆ. ಈತ ಇಳಂತಿಲದ ಅಪ್ರಾಪ್ತೆ ಬಾಲಕಿಯೋರ್ವಳ ಮೇಲೆ ಕಳೆದ ಆರು ತಿಂಗಳಿನಿಂದ ಅತ್ಯಾಚಾರ ನಡೆಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ► ಆರೋಪಿಯ ಬಂಧನ Read More »

ಕರಾವಳಿ

ಮಂಗಳೂರು: ಶೂಟೌಟ್ ಪ್ರಕರಣ ಭೇದಿಸಿದ ಸಿಸಿಬಿ ಪೊಲೀಸರು ► ಪಿಸ್ತೂಲ್, ಮದ್ದುಗುಂಡುಗಳ‌ ಸಹಿತ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.29. ನಗರದಲ್ಲಿ ನಡೆದ ಸರಣಿ ಶೂಟೌಟ್ ಪ್ರಕರಣವನ್ನು ಭೇದಿಸಿರುಬ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಬಂಧಿತ ಆರೋಪಿಗಳನ್ನು ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾದ ಮುಲ್ಕಿ ನಿವಾಸಿ ಮನೋಜ್ ಕುಂದರ್(35) ಹಾಗೂ ಕಾಪಿಕಾಡ್ ನಿವಾಸಿ ಚಂದ್ರಶೇಖರ(32) ಎಂದು ಗುರುತಿಸಲಾಗಿದೆ. ಡಿಸೆಂಬರ್ 07 ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಶ್ರೀ ರಾಜಶ್ರೀ ಜ್ಯುವೆಲರ್ಸ್ ಶೂಟೌಟ್, ಡಿಸೆಂಬರ್ 08 ರಂದು ಕಾರ್ ಸ್ಟ್ರೀಟ್ ಎಂಬಲ್ಲಿರುವ ಎಂ.

ಮಂಗಳೂರು: ಶೂಟೌಟ್ ಪ್ರಕರಣ ಭೇದಿಸಿದ ಸಿಸಿಬಿ ಪೊಲೀಸರು ► ಪಿಸ್ತೂಲ್, ಮದ್ದುಗುಂಡುಗಳ‌ ಸಹಿತ ಇಬ್ಬರ ಬಂಧನ Read More »

ಕರಾವಳಿ

ನಾಟಿವೈದ್ಯ ಮಿತ್ತೋಡಿ ಬಾಬು ಪೂಜಾರಿ ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಡಿ.28. ಇಲ್ಲಿನ ಮರ್ಧಾಳ ನಿವಾಸಿ ಖ್ಯಾತ ನಾಟಿ ವೈದ್ಯ ಮಿತ್ತೋಡಿ ಬಾಬು ಪೂಜಾರಿ (ಕೊರಗಪ್ಪ ಪೂಜಾರಿ) ಅಲ್ಪಕಾಲದ ಅಸೌಖ್ಯದಿಂದ ಗುರುವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು10 ದಿನಗಳ ಹಿಂದೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾದರು. ಹಳ್ಳಿ ಮದ್ದು ನೀಡುತ್ತಿದ್ದ ಅವರಿಗೆ 85 ವರ್ಷ ವಯಸ್ಸಾಗಿತ್ತು.

ನಾಟಿವೈದ್ಯ ಮಿತ್ತೋಡಿ ಬಾಬು ಪೂಜಾರಿ ವಿಧಿವಶ Read More »

ಕರಾವಳಿ

ವೀರಕಂಬ: ದುಷ್ಕರ್ಮಿಗಳಿಂದ ಮಸೀದಿಗೆ ಕಲ್ಲೆಸೆತ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ.28. ಕಲ್ಲಡ್ಕ ಸಮೀಪದ ವೀರಕಂಬ ಎಂಬಲ್ಲಿನ ಮಸೀದಿಯೊಂದಕ್ಕೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಬುಧವಾರದಂದು ತಡರಾತ್ರಿ ನಡೆದಿದೆ. ಘಟನೆಯಿಂದ ವೀರಕಂಬ ಬಳಿಯ ಮಸೀದಿಯ ನಾಲ್ಕು ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ. ಗುರುವಾರ ಬೆಳಿಗ್ಗೆ ನಮಾಝ್ ಮಾಡಲು ಬಂದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ವೀರಕಂಬ: ದುಷ್ಕರ್ಮಿಗಳಿಂದ ಮಸೀದಿಗೆ ಕಲ್ಲೆಸೆತ Read More »

ಕರಾವಳಿ

ಅಂತರ್ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಕರಾಟೆ ಚಾಂಪಿಯನ್‌ಶಿಪ್ ► ಕಡಬದ ಕು| ಯಾನ್ವಿತಾ ಯಂ.ಕೆ. ಪ್ರಥಮ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.28. ಕಮಲ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಮಂಗಳೂರಿನ ಕೆಪಿಟಿಯಲ್ಲಿ ನಡೆದ ಜೂನಿಯರ್ ವಿಭಾಗದ ಕರ್ನಾಟಕ ಮತ್ತು ಕೇರಳ ಅಂತರ್ರಾಜ್ಯ ಒಪನ್ ಕರಾಟೆ ಚಾಂಪಿಯನ್‌ ಶಿಪ್ ಸ್ಪರ್ಧೆಯಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ 3 ನೇ ತರಗತಿಯ ವಿದ್ಯಾರ್ಥಿನಿ ಕು| ಯಾನ್ವಿತಾ ಯಂ.ಕೆ. ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಮರ್ದಾಳ ತನು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರೂ, ಜೇಸಿಐ ಕಡಬ ಕದಂಬದ ಪೂರ್ವಾಧ್ಯಕ್ಷರೂ ಆದ ಮಂಜುನಾಥ ಕೋಲಂತಾಡಿ ಮತ್ತು ಪದ್ಮಾ ದಂಪತಿಯ ಪುತ್ರಿಯಾಗಿರುವ ಈಕೆಗೆ

ಅಂತರ್ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಕರಾಟೆ ಚಾಂಪಿಯನ್‌ಶಿಪ್ ► ಕಡಬದ ಕು| ಯಾನ್ವಿತಾ ಯಂ.ಕೆ. ಪ್ರಥಮ Read More »

ಕರಾವಳಿ

ಸುಳ್ಯ: ಬಟ್ಟೆ ಒಗೆಯುತ್ತಿದ್ದಾಗ ಹೃದಯಾಘಾತ ► ಮಹಿಳೆ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.28. ಮಹಿಳೆಯೊಬ್ಬರು ಬಟ್ಟೆ ಒಗೆಯುತ್ತಿದ್ದ ವೇಳೆ ಹೃದಯಾಘಾತಕೊಳ್ಳಗಾಗಿ ಮೃತಪಟ್ಟ ಘಟನೆ ಮಂಗಳವಾರದಂದು ತಾಲೂಕಿನ ಮಂಡೆಕೋಲು ಎಂಬಲ್ಲಿ ನಡೆದಿದೆ. ಮೃತರನ್ನು ಮಂಡೆಕೋಲು ಗ್ರಾಮದ ಆಲಂಕಳ್ಯ ನಿವಾಸಿ ದಿವಂಗತ ಮೋಹನ ಗೌಡ ಎಂಬವು ಪತ್ನಿ ಮೀನಾಕ್ಷಿ ಎಂದು ಗುರುತಿಸಲಾಗಿದೆ. ಇವರು ಬಟ್ಟೆ ಒಗೆಯುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಬಿದ್ದಿದ್ದು, ಪಕ್ಕದ ಮನೆಯ ಇವರ ಅತ್ತಿಗೆ ಮೀನಾಕ್ಷಿಯವರನ್ನು ಕರೆದಾಗ ಪ್ರತಿಕ್ರಿಯೆ ಇಲ್ಲದಿದ್ದುದರಿಂದ ಮತ್ತು ಮೀನಾಕ್ಷಿಯವರ ಮನೆಯ ಪೋನ್ ರಿಂಗಣಿಸುತ್ತಿದ್ದರೂ ಕರೆ ಸ್ವೀಕರಿಸದೆ ಇರುವುದನ್ನು ಗಮನಿಸಿ, ಮೀನಾಕ್ಷಿಯವರನ್ನು ಕರೆಯುತ್ತಾ ಅಂಗಳಕ್ಕೆ

ಸುಳ್ಯ: ಬಟ್ಟೆ ಒಗೆಯುತ್ತಿದ್ದಾಗ ಹೃದಯಾಘಾತ ► ಮಹಿಳೆ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಕಲ್ಲಡ್ಕ: ಬಸ್ಸಿಗೆ ಕಲ್ಲೆಸೆತ ಪ್ರಕರಣ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.27. ಮಂಗಳವಾರ ರಾತ್ರಿ ಕಲ್ಲಡ್ಕದಲ್ಲಿ ನಡೆದ ಚೂರಿ ಇರಿತ ಸಂದರ್ಭದಲ್ಲಿ ಬಸ್ಸೊಂದಕ್ಕೆ ಕಲ್ಲೆಸೆದ ಪ್ರಕರಣದಲ್ಲಿ ಓರ್ವನನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ಬುಧವಾರದಂದು ನಡೆದಿದೆ. ಬಂಧಿತ ಆರೋಪಿಯನ್ನು ಕಲ್ಲಡ್ಕದ ಅಮ್ಟೂರು ನಿವಾಸಿ ಕೌಶಿಲ್(23) ಎಂದು ಗುರುತಿಸಲಾಗಿದೆ. ಕರೋಪಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾಗಿದ್ದ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಅರೋಪಿ ಕೇಶವ ಎಂಬಾತನಿಗೆ ಮಂಗಳವಾರ ರಾತ್ರಿ ಚೂರಿಯಿಂದ ಇರಿಯಲಾಗಿತ್ತು. ಈ ಸಂದರ್ಭದಲ್ಲಿ ಕೌಶಿಲ್ ಬಸ್ಸೊಂದಕ್ಕೆ ಕಲ್ಲೆಸೆದು ಹಾನಿಗೊಳಿಸಿದ್ದನೆನ್ನಲಾಗಿದ್ದು, ಈ ಬಗ್ಗೆ

ಕಲ್ಲಡ್ಕ: ಬಸ್ಸಿಗೆ ಕಲ್ಲೆಸೆತ ಪ್ರಕರಣ ► ಆರೋಪಿಯ ಬಂಧನ Read More »

ಕರಾವಳಿ
Scroll to Top