ಕಲ್ಲಡ್ಕ: ಚೂರಿ ಇರಿತ ಪ್ರಕರಣದ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.27. ಮಂಗಳವಾರ ರಾತ್ರಿ ಕಲ್ಲಡ್ಕದಲ್ಲಿ ನಡೆದ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬುಧವಾರದಂದು ನಡೆದಿದೆ. ಬಂಧಿತ ಆರೋಪಿಯನ್ನು ಕಲ್ಲಡ್ಕ ನಿವಾಸಿ ಖಲೀಲ್ ಎಂದು ಗುರುತಿಸಲಾಗಿದೆ. ಈತ ಕರೋಪಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾಗಿದ್ದ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಅರೋಪಿ ಕೇಶವ ಎಂಬಾತನಿಗೆ ಮಂಗಳವಾರ ರಾತ್ರಿ ಚೂರಿಯಿಂದ ಇರಿದಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್ ಇಲಾಖೆ ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳ […]

ಕಲ್ಲಡ್ಕ: ಚೂರಿ ಇರಿತ ಪ್ರಕರಣದ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ

ಕಡಬ: ನಿದ್ದೆಯ ಮಂಪರಿನಲ್ಲಿ ವಾಣಿಜ್ಯ ಕಟ್ಟಡಕ್ಕೆ ಢಿಕ್ಕಿ ಹೊಡೆದ ಕಾರು ► ಮೂವರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಡಿ.27. ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಬ್ರೆಝಾ ಕಾರೊಂದು ವಾಣಿಜ್ಯ ಸಂಕೀರ್ಣವೊಂದಕ್ಕೆ ಢಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ಕಡಬದಲ್ಲಿ ನಡೆದಿದೆ. ಗಾಯಾಳುಗಳನ್ನು ಸುಳ್ಯ ತಾಲೂಕಿನ ಕರಿಕ್ಕಳ ಮೂಲೂರು ಫಾರ್ಮ್ ನಿವಾಸಿಗಳಾದ ಶ್ರೀಶ(23), ಪತ್ನಿ ಸಂಧ್ಯಾ(20) ಹಾಗೂ ಸತ್ಯಾವತಿ(50) ಎಂದು ಗುರುತಿಸಲಾಗಿದೆ. ಇವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬದ ಮುಖ್ಯಪೇಟೆಯ ಅನುಗ್ರಹ ಸಭಾಭವನದ ಸಮೀಪದಲ್ಲಿರುವ ವಾಣಿಜ್ಯ ಕಟ್ಟಡಕ್ಕೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ನವ

ಕಡಬ: ನಿದ್ದೆಯ ಮಂಪರಿನಲ್ಲಿ ವಾಣಿಜ್ಯ ಕಟ್ಟಡಕ್ಕೆ ಢಿಕ್ಕಿ ಹೊಡೆದ ಕಾರು ► ಮೂವರು ಅಪಾಯದಿಂದ ಪಾರು Read More »

ಕರಾವಳಿ

ಬಲ್ಯ: ಬೈಕಿಗೆ ಅಡ್ಡ ಬಂದ ಕಡವೆ ► ಮಹಿಳೆ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಡಿ.27. ಕಡವೆಯೊಂದು ಅಡ್ಡ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿ ಬೈಕ್ ಧರೆಗೆ ಢಿಕ್ಕಿ ಹೊಡೆದುದರಿಂದ ಮಹಿಳೆಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಎಂಬಲ್ಲಿ ಬುಧವಾರದಂದು ಮುಂಜಾನೆ ನಡೆದಿದೆ. ಮೃತರನ್ನು ಕೊಂಬಾರು ನಿವಾಸಿ ವಿಶ್ವನಾಥ ಪೂಜಾರಿ ಎಂಬವರ ಪತ್ನಿ ಸಾವಿತ್ರಿ ಎಂದು ಗುರುತಿಸಲಾಗಿದೆ. ಇವರು ತನ್ನ ಪತಿಯೊಂದಿಗೆ ಬೈಕಿನಲ್ಲಿ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದಾಗ ಹಠಾತ್ತನೆ ರಸ್ತೆಗೆ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿದ ಬೈಕ್ ಧರೆಗೆ

ಬಲ್ಯ: ಬೈಕಿಗೆ ಅಡ್ಡ ಬಂದ ಕಡವೆ ► ಮಹಿಳೆ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಪೊಲೀಸ್ ಬಂದೋಬಸ್ತ್ ನಲ್ಲಿ ಸಹಜ ಸ್ಥಿತಿಯತ್ತ ಮರಳುತ್ತಿರುವ ಕಲ್ಲಡ್ಕ ► ಚೂರಿ ಇರಿತ ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳ ರಚನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.27. ಕಲ್ಲಡ್ಕದಲ್ಲಿ ಮಂಗಳವಾರ ರಾತ್ರಿ ನಡೆದ ಯುವಕನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ನಾಲ್ಕು ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಆರೋಪಿಗಳ ಪೈಕಿ ಒರ್ವನ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲೇ ಕೃತ್ಯಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಕಲ್ಲಡ್ಕದ ಅಂಗಡಿಯೊಂದರ ಬಳಿ ನಿಂತಿದ್ದ ವೀರಕಂಬದ ಕೇಶವ ಎಂಬಾತನಿಗೆ ಹೆಲ್ಮೆಟ್ ಧರಿಸಿದ್ದ ಇಬ್ಬರು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ

ಪೊಲೀಸ್ ಬಂದೋಬಸ್ತ್ ನಲ್ಲಿ ಸಹಜ ಸ್ಥಿತಿಯತ್ತ ಮರಳುತ್ತಿರುವ ಕಲ್ಲಡ್ಕ ► ಚೂರಿ ಇರಿತ ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳ ರಚನೆ Read More »

ಕರಾವಳಿ

ಅನಂತ್ ಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ 1 ಕೋಟಿ ಬಹುಮಾನ ► ಮಾಜಿ ಜಿ.ಪಂ. ಸದಸ್ಯನಿಂದ ವಿವಾದಾತ್ಮಕ ಘೋಷಣೆ

(ನ್ಯೂಸ್ ಕಡಬ) newskadaba.com ಕಲಬುರಗಿ, ಡಿ.26. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಮಾಜಿ ಜಿಪಂ ಸದಸ್ಯ ಗುರುಶಾಂತ್ ಪಟ್ಟೇದಾರ್ ವಿವಾದ್ಮಾತಕ ಹೇಳಿಕೆ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ (ಬಿ) ಮಾಜಿ ಜಿಪಂ ಸದಸ್ಯರಾಗಿರುವ ಗುರುಶಾಂತ್ ಜನವರಿ 26 ರೊಳಗೆ ಅನಂತಕುಮಾರ್ ಹೆಗ್ಡೆ ಅವರ ನಾಲಿಗೆಯನ್ನು ಕಡಿದು ತಂದು ಕೊಡಬೇಕು ಎಂದು ಷರತ್ತು ಹಾಕಿದ್ದಾರೆ. ಈ ದೇಶದಲ್ಲಿ ಎಲ್ಲಾ ಧರ್ಮದ ಜನರು

ಅನಂತ್ ಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ 1 ಕೋಟಿ ಬಹುಮಾನ ► ಮಾಜಿ ಜಿ.ಪಂ. ಸದಸ್ಯನಿಂದ ವಿವಾದಾತ್ಮಕ ಘೋಷಣೆ Read More »

ಕರ್ನಾಟಕ

ಇನ್ಮುಂದೆ ಕಾರುಗಳಲ್ಲಿ ಸೇಫ್ಟಿ ಗಾರ್ಡ್‌ ಹಾಕಿದ್ದರೆ 5 ಸಾವಿರ ದಂಡ ► ಸುತ್ತೋಲೆ ಹೊರಡಿಸಿದ ಕೇಂದ್ರ ಹೆದ್ದಾರಿ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.26. ಕಾರುಗಳಲ್ಲಿ ಅಳವಡಿಸಲಾಗುವ ಕ್ರಾಶ್ ಗಾರ್ಡ್ ಗಳನ್ನು ಅಕ್ರಮ ಎಂದಿರುವ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಅಪಾಯಕಾರಿಯಾಗಿರುವ ಗಾರ್ಡ್ ಗಳನ್ನು ತೆಗೆಯಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ. ರಸ್ತೆ ಅಪಘಾತ ಸಂದರ್ಭಗಳಲ್ಲಿ ವಾಹನಗಳಿಗೆ ಅಳವಡಿಸಿರುವ ಗಾರ್ಡ್ ಗಳಿಂದ ಪಾದಚಾರಿಗಳಿಗೆ ಹೆಚ್ಚು ಅಪಾಯವಾಗುತ್ತಿದೆ ಎಂದು ತಿಳಿಸಿರುವ ಸಚಿವಾಲಯವು ತಕ್ಷಣವೇ ವಾಹನಗಳಲ್ಲಿ ಅಳವಡಿಸಿರುವ ಕ್ರಾಶ್ ಗಾರ್ಡ್ ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೇ ಬುಲ್ ಬಾರ್ ಅಳವಡಿಸಿರುವ ವಾಹನಗಳಿಗೆ ಭಾರೀ

ಇನ್ಮುಂದೆ ಕಾರುಗಳಲ್ಲಿ ಸೇಫ್ಟಿ ಗಾರ್ಡ್‌ ಹಾಕಿದ್ದರೆ 5 ಸಾವಿರ ದಂಡ ► ಸುತ್ತೋಲೆ ಹೊರಡಿಸಿದ ಕೇಂದ್ರ ಹೆದ್ದಾರಿ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ Read More »

ರಾಷ್ಟ್ರೀಯ ನ್ಯೂಸ್

► ಕಡಬ: 38 ನೇ ವರ್ಷದ ಸಂಭ್ರಮದ ಸಂಯುಕ್ತ ಕ್ರಿಸ್ಮಸ್ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಡಿ.26. ಪರಿಸರದ ಕ್ರೈಸ್ತ ಬಾಂಧವರು ಒಟ್ಟುಗೂಡಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸಂಯುಕ್ತ ಕ್ರಿಸ್ಮಸ್ ಆಚರಣೆಯನ್ನು ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಗೀವರ್ಗೀಸ್ ಮಾರ್ ಮಕಾರಿಯೋಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಜೆ ಕಡಬದ ಆರೋಗ್ಯ ಮಾತಾ ಶಿಲುಬೆ ಗೋಪುರದ ಬಳಿಯಿಂದ ವಿಜೃಂಭಣೆಯ ಕ್ರಿಸ್ಮಸ್ ಸಂದೇಶ ರ್ಯಾಲಿಯು ಆರಂಭಗೊಂಡು, ಕಡಬ ಪೇಟೆಯ ಮೂಲಕ ಸಂಚರಿಸಿ ಬಳಿಕ ಕಡಬ ಸೈಂಟ್ ಜೋಕಿಮ್ಸ್ ದೇವಾಲಯದ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿ ಕಡಬ ತಹಶೀಲ್ದಾರರಾದ ಜಾನ್

► ಕಡಬ: 38 ನೇ ವರ್ಷದ ಸಂಭ್ರಮದ ಸಂಯುಕ್ತ ಕ್ರಿಸ್ಮಸ್ ಆಚರಣೆ Read More »

ಕರಾವಳಿ

ಕಲ್ಲಡ್ಕ: ಜಲೀಲ್‌ ಕರೋಪಾಡಿ ಕೊಲೆ ಆರೋಪಿಗೆ ಚೂರಿ ಇರಿತ ► ಹತ್ಯೆಗೆ ವಿಫಲ ಯತ್ನ, ಕಲ್ಲಡ್ಕ ಬಂದ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.26. ವಿಟ್ಲ ಕರೋಪಾಡಿಯ ಜಲೀಲ್ ಕೊಲೆ ಆರೋಪಿ ಕೇಶವ ಎಂಬವರಿಗೆ ಚೂರಿ‌ಇರಿದ ಘಟನೆ ಮಂಗಳವಾರ ಸಂಜೆ ಕಲ್ಲಡ್ಕದಲ್ಲಿ ನಡೆದಿದೆ. ಮೇಲೆ ಹೆಲ್ಮೆಟ್ ಧರಿಸಿದ್ದ ಇಬ್ಬರು ಚೂರಿ‌ ಇರಿದು ಪರಾರಿಯಾಗಿದ್ದು, ಕೇಶವರವರ ಕೊಲೆಗೆ ವಿಫಲ ಯತ್ನ ನಡೆದಿದೆ. ಘಟನೆಯಿಂದಾಗಿ ಕಲ್ಲಡ್ಕ ಪೇಟೆ ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.  

ಕಲ್ಲಡ್ಕ: ಜಲೀಲ್‌ ಕರೋಪಾಡಿ ಕೊಲೆ ಆರೋಪಿಗೆ ಚೂರಿ ಇರಿತ ► ಹತ್ಯೆಗೆ ವಿಫಲ ಯತ್ನ, ಕಲ್ಲಡ್ಕ ಬಂದ್ Read More »

ಕರಾವಳಿ

ಹಳೆಯ ಮೊಬೈಲ್ ಗಳಲ್ಲಿ ವಾಟ್ಸಪ್ ಬಳಸುವವರಿಗೆ ಶಾಕಿಂಗ್ ನ್ಯೂಸ್ ► ಡಿ.31 ರಿಂದ ವಾಟ್ಸಪ್ ಸೇವೆ ಸ್ಥಗಿತ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.26. ವಾಟ್ಸ್‌ ಆ್ಯಪ್‌ ಕಂಪನಿಯು ಹಳೆಯ ವಿಂಡೋಸ್‌, ಬ್ಲ್ಯಾಕ್‌ಬೆರಿ ಫೋನ್‌ ಬಳಕೆದಾರರಿಗೆ ಹೊಸ ವರ್ಷಕ್ಕೆ ಹೊಸ ಆಘಾತ ನೀಡಿದ್ದು, ಇನ್ಮುಂದೆ ವಾಟ್ಸಪ್ ನ್ನು ಸ್ಥಗಿತಗೊಳಿಸಲಿದೆ. 2017ರ ಡಿ.31ರಿಂದ ‘ಬ್ಲ್ಯಾಕ್‌ಬೆರಿ 10’ ಮತ್ತು ‘ವಿಂಡೋಸ್‌ ಫೋನ್‌ 8.0’, ‘ಆಂಡ್ರಾಯ್ಡ್‌ 4.0’ ಮತ್ತು ಅದಕ್ಕಿಂತಲೂ ಹಳೆಯದಾದ ಪ್ಲಾಟ್‌ಫಾರಂಗಳಿಗೆ ಸೇವೆ ಸ್ಥಗಿತಗೊಳಿಸಲು ವಾಟ್ಸ್‌ಆ್ಯಪ್‌ ನಿರ್ಧರಿಸಿದೆ. ‘ವಾಟ್ಸ್‌ಆ್ಯಪ್‌’ ಮಾತೃ ಸಂಸ್ಥೆ ‘ಫೇಸ್‌ಬುಕ್‌’ ಈ ವಿಷಯ ಖಚಿತಪಡಿಸಿದ್ದು, ಈ ಪ್ಲಾಟ್‌ಫಾರಂಗಳಲ್ಲಿ ಆ್ಯಪ್‌ನ ವೈಶಿಷ್ಟ್ಯಗಳನ್ನು ಹೆಚ್ಚಿಸಲು ಅಗತ್ಯ ಅವಕಾಶಗಳು ಇಲ್ಲವಾದ್ದರಿಂದ

ಹಳೆಯ ಮೊಬೈಲ್ ಗಳಲ್ಲಿ ವಾಟ್ಸಪ್ ಬಳಸುವವರಿಗೆ ಶಾಕಿಂಗ್ ನ್ಯೂಸ್ ► ಡಿ.31 ರಿಂದ ವಾಟ್ಸಪ್ ಸೇವೆ ಸ್ಥಗಿತ Read More »

ರಾಷ್ಟ್ರೀಯ ನ್ಯೂಸ್

ನಿಷೇಧಿತ ಮಾದಕ ವಸ್ತುಗಳ ಮಾರಾಟ ► ಅಂತರ್ರಾಜ್ಯ ಜಾಲವನ್ನು ಭೇದಿಸಿದ ಮಂಗಳೂರು ಪೊಲೀಸರು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26. ನಿಷೇಧಿತ ಮಾದಕ ವಸ್ತುಗಳಾದ ಎಲ್ಎಸ್ಡಿ, ಎಂ.ಡಿ ಎಂ.ಎ ಮತ್ತು ಎಂಡಿಎಂ ಟ್ಯಾಬ್ಲೆಟ್ಗಳನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಜಾಲವನ್ನು ಭೇದಿಸಿರುವ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯಂತೆ ನಿಖಿಲ್ ಕೆ.ಬಿ., ಶ್ರವಣ ಪೂಜಾರಿ, ರೋಶನ್ ವೇಗಸ್, ಬಾಶೀಂ ಬಶೀರ್ ಎಂಬವರನ್ನು ಬಂಧಿಸಲಾಗಿತ್ತು. ಬಂಧಿತರು ನೀಡಿದ ಮಾಹಿತಿಯನ್ವಯ ಪ್ರಧಾನ ಆರೋಪಿಗಳಾದ ಹಂಪನಕಟ್ಟೆಯ

ನಿಷೇಧಿತ ಮಾದಕ ವಸ್ತುಗಳ ಮಾರಾಟ ► ಅಂತರ್ರಾಜ್ಯ ಜಾಲವನ್ನು ಭೇದಿಸಿದ ಮಂಗಳೂರು ಪೊಲೀಸರು Read More »

ಕರಾವಳಿ
Scroll to Top