ಸುಳ್ಯ: ಬಟ್ಟೆ ಒಗೆಯುತ್ತಿದ್ದಾಗ ಹೃದಯಾಘಾತ ► ಮಹಿಳೆ ಸ್ಥಳದಲ್ಲೇ ಮೃತ್ಯು



(ನ್ಯೂಸ್ ಕಡಬ) newskadaba.com ಸುಳ್ಯ, ಡಿ.28. ಮಹಿಳೆಯೊಬ್ಬರು ಬಟ್ಟೆ ಒಗೆಯುತ್ತಿದ್ದ ವೇಳೆ ಹೃದಯಾಘಾತಕೊಳ್ಳಗಾಗಿ ಮೃತಪಟ್ಟ ಘಟನೆ ಮಂಗಳವಾರದಂದು ತಾಲೂಕಿನ ಮಂಡೆಕೋಲು ಎಂಬಲ್ಲಿ ನಡೆದಿದೆ.







ಮೃತರನ್ನು ಮಂಡೆಕೋಲು ಗ್ರಾಮದ ಆಲಂಕಳ್ಯ ನಿವಾಸಿ ದಿವಂಗತ ಮೋಹನ ಗೌಡ ಎಂಬವು ಪತ್ನಿ ಮೀನಾಕ್ಷಿ ಎಂದು ಗುರುತಿಸಲಾಗಿದೆ. ಇವರು ಬಟ್ಟೆ ಒಗೆಯುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಬಿದ್ದಿದ್ದು, ಪಕ್ಕದ ಮನೆಯ ಇವರ ಅತ್ತಿಗೆ ಮೀನಾಕ್ಷಿಯವರನ್ನು ಕರೆದಾಗ ಪ್ರತಿಕ್ರಿಯೆ ಇಲ್ಲದಿದ್ದುದರಿಂದ ಮತ್ತು ಮೀನಾಕ್ಷಿಯವರ ಮನೆಯ ಪೋನ್ ರಿಂಗಣಿಸುತ್ತಿದ್ದರೂ ಕರೆ ಸ್ವೀಕರಿಸದೆ ಇರುವುದನ್ನು ಗಮನಿಸಿ, ಮೀನಾಕ್ಷಿಯವರನ್ನು ಕರೆಯುತ್ತಾ ಅಂಗಳಕ್ಕೆ ಬಂದಾಗ ಬಟ್ಟೆ ಒಗೆಯುವ ಕಲ್ಲಿನ ಬಳಿ ಮೀನಾಕ್ಷಿಯವರು ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಮೀನಾಕ್ಷಿಯವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಆ ವೇಳೆಗಾಗಲೇ ಕೊನೆಯುಸಿರೆಳೆದಾಗಿತ್ತು.






ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

error: Content is protected !!
Scroll to Top