ಕಡಬ: ಬೋರ್‍ವೆಲ್ ಲಾರಿ ಪಲ್ಟಿ ► ಅಪಾಯದಿಂದ ಪಾರಾದ ಕಾರ್ಮಿಕರು

(ನ್ಯೂಸ್ ಕಡಬ) newskadaba.com ಕಡಬ, ಜ.19. ಚಾಲಕನ ನಿಯಂತ್ರಣ ತಪ್ಪಿದ ಬೋರ್‍ವೆಲ್ ಲಾರಿಯೊಂದು ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ಕಡಬದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕಳಾರ ಕಡೆಯಿಂದ ಕಡಬಕ್ಕೆ ಆಗಮಿಸುತ್ತಿದ್ದ ಲಾರಿ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಅಡ್ಡವಾಗಿ ಬಿದ್ದ ಪರಿಣಾಮ ಲಾರಿಯಲ್ಲಿದ್ದ ಮೂವರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳು ಕಾರ್ಮಿಕರಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಡಬ: ಬೋರ್‍ವೆಲ್ ಲಾರಿ ಪಲ್ಟಿ ► ಅಪಾಯದಿಂದ ಪಾರಾದ ಕಾರ್ಮಿಕರು Read More »

ಕರಾವಳಿ

ಮಿತ್ತಬೈಲು: ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ

(ನ್ಯೂಸ್ ಕಡಬ) newskadaba.com ಕಡಬ, ಜ.19. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಕೊಂಬಾರು ಗ್ರಾಮದ ಮಿತ್ತಬೈಲು‌ ಎಂಬಲ್ಲಿ ಶುಕ್ರವಾರದಂದು ನಡೆದಿದೆ. ದಲಿತ ಮುಖಂಡ ದಯಾನಂದ ಮಿತ್ತಬೈಲು ಎಂಬವರ ಮನೆ ಗುರುವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿಗಾಹುತಿಯಾಗಿದ್ದು, ಮನೆಯೊಳಗಿದ್ದ ಸೊತ್ತುಗಳು ಸುಟ್ಟು ಕರಕಲಾಗಿವೆ. ಕೊಂಬಾರು ಪರಿಸರದಲ್ಲಿ ಕಾಡಾನೆ ಹಾವಳಿ ಇರುವುದರಿಂದ ದಯಾನಂದ ಹಾಗೂ ಪತ್ನಿ ರಾತ್ರಿ ಮಲಗಲು ಬೇರೆಡೆಗೆ ಹೋಗಿದ್ದು, ಶುಕ್ರವಾರದಂದು ಮನೆಗೆ ಬಂದಾಗ ವಿಷಯ ತಿಳಿದಿದೆ. ಸ್ಥಳಕ್ಕೆ ಕಡಬ ಠಾಣಾಧಿಕಾರಿ‌ ಪ್ರಕಾಶ್

ಮಿತ್ತಬೈಲು: ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ Read More »

ಕರಾವಳಿ

ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಅರ್ಜಿ ಆಹ್ವಾನ ಕಾಲಾವಧಿ ವಿಸ್ತರಣೆ ►ಪ್ರಸ್ತುತ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.19. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಲ್ಲಬೆಟ್ಟು, ನೀರುಮಾರ್ಗ, ಕಮ್ಮಾಜೆ, ಗುರುಪುರ ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ ಬಂಟ್ವಾಳ ತಾಲೂಕಿನ ವಗ್ಗ, ಪುತ್ತೂರು ತಾಲೂಕಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯ ತಾಲೂಕಿನ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ದಿನವನ್ನು ಜನವರಿ 25 ರ ವರಗೆ ವಿಸ್ತರಿಸಲಾಗಿದೆ. ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, 6 ನೇ

ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಅರ್ಜಿ ಆಹ್ವಾನ ಕಾಲಾವಧಿ ವಿಸ್ತರಣೆ ►ಪ್ರಸ್ತುತ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ Read More »

ಕರಾವಳಿ

ನಾಳೆ(ಜ.20) ಪುತ್ತೂರು ಕೋಟಿ-ಚೆನ್ನಯ್ಯ ಹೊನಲು ಬೆಳಕಿನ ಜೋಡುಕರೆ ಕಂಬಳ ► ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಚಿತ್ರನಟ, ನಟಿಯರು

(ನ್ಯೂಸ್ ಕಡಬ) newskadaba.com ಪುತ್ತೂರು, ಜ.19. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಪುತ್ತೂರು ಕೋಟಿ- ಚೆನ್ನಯ್ಯ ಹೊನಲು ಬೆಳಕಿನ ಜೋಡುಕರೆ ಕಂಬಳವು ನಾಳೆ (ಜ.20) ಶನಿವಾರದಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್‌. ಚಂದ್ರಹಾಸ ಶೆಟ್ಟಿ ಹೇಳಿದರು. ಕಂಬಳದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 25ನೇ ವರ್ಷದ ಹಿನ್ನೆಲೆಯಲ್ಲಿ ಕಂಬಳದಲ್ಲಿ ಭಾಗವಹಿಸುವ ಎಲ್ಲಾ ಜೋಡಿ ಕೋಣಗಳಿಗೂ ಒಂದು ಮುಡಿ ಅಕ್ಕಿ ಹಾಗೂ ರಜತ ಫಲಕ ನೀಡಲಾಗುವುದು. ನಾಳೆ ಬೆಳಗ್ಗೆ 10.32ಕ್ಕೆ

ನಾಳೆ(ಜ.20) ಪುತ್ತೂರು ಕೋಟಿ-ಚೆನ್ನಯ್ಯ ಹೊನಲು ಬೆಳಕಿನ ಜೋಡುಕರೆ ಕಂಬಳ ► ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಚಿತ್ರನಟ, ನಟಿಯರು Read More »

ಕರಾವಳಿ

ಯುವತಿಯ ಅಪಹರಣ ಪ್ರಕರಣ ► ಮುಂಬೈ ಪೊಲೀಸರಿಂದ ಬಜರಂಗ ದಳ ಮುಖಂಡ ಸುನಿಲ್ ಪಂಪ್ ವೆಲ್ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.19. ಲವ್ ಜಿಹಾದ್ ವದಂತಿ ಸೃಷ್ಟಿಸಿದ್ದ ಕಾಸರಗೋಡಿನ ಕಾನೂನು ವಿದ್ಯಾರ್ಥಿನಿ ರೇಷ್ಮಾ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ರೇಷ್ಮಾ ಅವರನ್ನು ಅಪಹರಣ ಮಾಡಿರುವ ಆರೋಪದಲ್ಲಿ ಮಂಗಳೂರಿನ ಭಜರಂಗದಳದ ನಾಯಕ ಸುನೀಲ್ ಪಂಪ್ ವೆಲ್ ನನ್ನು ಮುಂಬೈ ಪೊಲೀಸರು ಗುರುವಾರದಂದು ಬಂಧಿಸಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ಕಾಸರಗೋಡಿನ ಶ್ರೀಮಂತ ಕುಟುಂಬದ ರೇಷ್ಮಾ ಹಾಗೂ ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಇಕ್ಬಾಲ್ ನಡುವೆ ಪ್ರೇಮಾಂಕುರವಾಗಿತ್ತು. ಇದ್ದಕ್ಕಿದ್ದಂತೆ ನಾಪತ್ತೆಯಾದ ರೇಷ್ಮಾ ಮುಂಬೈನಲ್ಲಿ

ಯುವತಿಯ ಅಪಹರಣ ಪ್ರಕರಣ ► ಮುಂಬೈ ಪೊಲೀಸರಿಂದ ಬಜರಂಗ ದಳ ಮುಖಂಡ ಸುನಿಲ್ ಪಂಪ್ ವೆಲ್ ಬಂಧನ Read More »

ರಾಷ್ಟ್ರೀಯ ನ್ಯೂಸ್

ಮುಂದುವರಿದ ಮಹದಾಯಿ ಬಿಕ್ಕಟ್ಟು ► ಜನವರಿ 27 ರಂದು ಸರ್ವ ಪಕ್ಷಗಳ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.18. ಮಹದಾಯಿ ನೀರಿನ ವಿಚಾರದಲ್ಲಿ ಎರಡು ರಾಜ್ಯಗಳ ನಾಯಕರ ನಡುವೆ ಆರೋಪ – ಪ್ರತ್ಯಾರೋಪ ನಡೆಯುತ್ತಿರುವುದರ ಮಧ್ಯೆಯೇ ಮಹದಾಯಿ ವಿಚಾರವಾಗಿ ಚರ್ಚಿಸಲು ಸರ್ವ ಪಕ್ಷಗಳ ಸಭೆಯನ್ನು ರಾಜ್ಯ ಸರಕಾರ ಕರೆದಿದೆ. ಜನವರಿ 27 ರಂದು ವಿಧಾನಸೌಧದಲ್ಲಿ ನಡೆಯಲಿರುವ ಸರ್ವ ಪಕ್ಷಗಳ ಸಭೆಗೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಸರ್ವ ಪಕ್ಷಗಳ ಜೊತೆ ಸಭೆ ಸೇರಿ ಮಹದಾಯಿ ವಿಚಾರವಾಗಿ ಮಹತ್ವದ

ಮುಂದುವರಿದ ಮಹದಾಯಿ ಬಿಕ್ಕಟ್ಟು ► ಜನವರಿ 27 ರಂದು ಸರ್ವ ಪಕ್ಷಗಳ ಸಭೆ Read More »

ರಾಷ್ಟ್ರೀಯ ನ್ಯೂಸ್

ವಿಟ್ಲ: ವ್ಯಕ್ತಿಗೆ ಆ್ಯಸಿಡ್ ಎರಚಿದ ದಂಪತಿ

(ನ್ಯೂಸ್ ಕಡಬ) newskadaba.com ವಿಟ್ಲ, ಜ.18. ಜಾಗದ ತಕರಾರು ತಾರಕಕ್ಕೇರಿ ವ್ಯಕ್ತಿಯೊಬ್ಬರ ಮೇಲೆ ಆ್ಯಸಿಡ್ ಎರಚಿದ ಘಟನೆ ವಿಟ್ಲದ ಪುಣಚ ಸಮೀಪದ ಮಲ್ಲಿಕಟ್ಟೆ ಎಂಬಲ್ಲಿ ಗುರುವಾರದಂದು ನಡೆದಿದೆ. ಪುಣಚ ಗ್ರಾಮದ ಮಲ್ಲಿಕಟ್ಟೆ ನಿವಾಸಿ ಗಂಗಾಧರ್ ಹಾಗೂ ನೆರೆಮನೆಯ ರಾಮಚಂದ್ರ ಮಣಿ ಎಂಬವರಿಗೆ ಜಾಗದ ತಕರಾರಿತ್ತೆನ್ನಲಾಗಿದೆ. ಜಾಗದ ವಿಷಯದಲ್ಲಿ ಮಾತನಾಡುತ್ತಾ ರಾಮಚಂದ್ರರ ಮನೆಗೆ ಹೋದ ಗಂಗಾಧರ್ ರವರಿಗೆ ರಾಮಚಂದ್ರ ಮಣಿ ಹಾಗೂ ಅವರ ಪತ್ನಿ ಅನ್ನಪೂರ್ಣ ಎಂಬವರು ಆ್ಯಸಿಡ್ ಎರಚಿದ್ದು, ತಕ್ಷಣವೇ ಗಂಗಾಧರ್ ರವರನ್ನು ವಿಟ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಟ್ಲ: ವ್ಯಕ್ತಿಗೆ ಆ್ಯಸಿಡ್ ಎರಚಿದ ದಂಪತಿ Read More »

ಕರಾವಳಿ

ದೀಪಕ್ ರಾವ್ ಮನೆಗೆ ಭೇಟಿ ನೀಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ► ದೀಪಕ್ ಮನೆಯವರಿಗೆ ಧನ ಸಹಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.18. ಇತ್ತೀಚೆಗೆ ಹಾಡುಹಗಲೇ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಮನೆಗೆ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಭೇಟಿ ನೀಡಿ ದೀಪಕ್ ಕುಟುಂಬದವರಿಗೆ ಸಾಂತ್ವನ ಹೇಳಿದರು. ಗುರುವಾರದಂದು ದೀಪಕ್ ಮನೆಗೆ ಭೇಟಿ ನೀಡಿದ ಸಚಿವರು ವೈಯಕ್ತಿಕವಾಗಿ ಧನಸಹಾಯ ನೀಡಿ ದೀಪಕ್ ರಾವ್ ತಮ್ಮ ಸತೀಶ್ ಗೆ ಕುದುರೆಮುಖದ ಕಂಪೆನಿಯಲ್ಲಿ ಕೆಲಸ ಒದಗಿಸುವ ಭರವಸೆಯಿತ್ತರು. ಗುರುವಾರ ಬೆಳಿಗ್ಗೆ ಗುರುಪುರ ವಜ್ರದೇವಿ ಮಠಕ್ಕೆ ತೆರಳಿ ರಾಜಶೇಖರಾನಂದ ಸ್ವಾಮೀಜಿಯನ್ನು ಭೇಟಿ ಮಾಡಿದ

ದೀಪಕ್ ರಾವ್ ಮನೆಗೆ ಭೇಟಿ ನೀಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ► ದೀಪಕ್ ಮನೆಯವರಿಗೆ ಧನ ಸಹಾಯ Read More »

ಕರಾವಳಿ

ಕಂಠಪೂರ್ತಿ ಕುಡಿದು ಬಂದು ವಿಮಾನ ಚಲಾಯಿಸಲೆತ್ನಿಸಿದ ಮಹಿಳಾ ಪೈಲಟ್ ► ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಮತ್ತೊಂದು ದುರಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.18. ಕಳೆದ ಹಲವಾರು ಸಮಯಗಳಿಂದ ಪದೇ ಪದೇ ಒಂದಲ್ಲ ಒಂದು ರೀತಿಯ ಎಡವಟ್ಟುಗಳಿಂದಲೇ ಸುದ್ದಿಯಾಗುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಮತ್ತೊಂದು ಎಡವಟ್ಟು ಸಂಭವಿಸಿದ್ದು, ತಡವಾಗಿ ಸುದ್ದಿಯಾಗಿದೆ. ವಿಮಾನ ಚಲಾಯಿಸಲು ಬಂದ ಮಹಿಳಾ ಪೈಲಟ್‌ ಒಬ್ಬರು ಕಂಠ ಪೂರ್ತಿ ಕುಡಿದು ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಮಂಗಳೂರು – ದುಬೈ ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರು ಮಂಗಳವಾರ ಮಧ್ಯರಾತ್ರಿಯಿಂದ ಬೆಳಗಾಗುವ ತನಕ ನಿಲ್ದಾಣದಲ್ಲೇ ತೂಕ‌ಡಿಸುತ್ತ ಕುಳಿತುಕೊಳ್ಳ ಬೇಕಾದ ಅನಿವಾರ್ಯತೆ ಉಂಟಾಗಿದೆ. ಮಂಗಳೂರು

ಕಂಠಪೂರ್ತಿ ಕುಡಿದು ಬಂದು ವಿಮಾನ ಚಲಾಯಿಸಲೆತ್ನಿಸಿದ ಮಹಿಳಾ ಪೈಲಟ್ ► ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಮತ್ತೊಂದು ದುರಂತ Read More »

ರಾಷ್ಟ್ರೀಯ ನ್ಯೂಸ್

ಎಪ್ರಿಲ್ 01 ರಿಂದ ರಾಜ್ಯಾದ್ಯಂತ ಓಮ್ನಿ ಆಂಬ್ಯುಲೆನ್ಸ್ ನಿಷೇಧ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.17. ಆಂಬುಲೆನ್ಸ್ ನಲ್ಲಿ ಇರಬೇಕಾದ ಸೌಲಭ್ಯಗಳು ಇಲ್ಲದಿರುವುದರಿಂದ ಹಾಗೂ ಅಪಘಾತ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದಲ್ಲಿ ಎಪ್ರಿಲ್ 01 ರಿಂದ ಓಮ್ನಿ ಆಂಬುಲೆನ್ಸ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾರಿಗೆ ಇಲಾಖೆಯು ಸಿದ್ಧತೆ ನಡೆಸಿದೆ. ಓಮ್ನಿ ಆಂಬುಲೆನ್ಸ್ ಗಳನ್ನು ನಿರ್ಬಂಧಿಸುವಂತೆ ಆರೋಗ್ಯ ಇಲಾಖೆಯು ಕಳೆದ ವರ್ಷ ಸಾರಿಗೆ ಇಲಾಖೆಗೆ ಮನವಿ ಮಾಡಿತ್ತು. ಅದರಂತೆ ಸಾರಿಗೆ ಓಮ್ನಿ ಆಂಬುಲೆನ್ಸ್ ಗಳನ್ನು ನಿರ್ಬಂಧಿಸಿತ್ತು. ಏಕಾಏಕಿ ನಿಷೇಧಿಸಿದ್ದಕ್ಕೆ ತಡೆ ನೀಡಿದ್ದ ಹೈಕೋರ್ಟ್, 2018 ರ ಎಪ್ರಿಲ್

ಎಪ್ರಿಲ್ 01 ರಿಂದ ರಾಜ್ಯಾದ್ಯಂತ ಓಮ್ನಿ ಆಂಬ್ಯುಲೆನ್ಸ್ ನಿಷೇಧ Read More »

ಕರ್ನಾಟಕ
Scroll to Top