ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶೀನಾಥ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.18. ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕಾಶಿನಾಥ್‌ ಅವರು ಶ್ರೀಶಂಕರ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶೀನಾಥ್ ಅವರನ್ನು 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ರಿಯಲ್‌ ಸ್ಟಾರ್‌ ಉಪೇಂದ್ರ, ಸಂಗೀತ ನಿರ್ದೇಶಕ ವಿ.ಮನೋಹರ್‌, ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ಸೇರಿದಂತೆ ಅನೇಕರನ್ನು ಕಾಶೀನಾಥ್ ಚಿತ್ರರಂಗಕ್ಕೆ ಕರೆತಂದಿದ್ದಾರೆ. ಕಾಶಿನಾಥ್‌ ಅವರ ನಿಧನದ ವಾರ್ತೆ ತಿಳಿದು ಚಿತ್ರರಂಗದ […]

ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶೀನಾಥ್ ವಿಧಿವಶ Read More »

ಕರ್ನಾಟಕ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ► ಉಪ್ಪಿನಂಗಡಿ ಪೊಲೀಸರಿಂದ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.18. ಸುಮಾರು ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಹಾಸನದ ಉಮೇಶ್(30) ಎಂದು ಗುರುತಿಸಲಾಗಿದೆ. ಶಿರಾಡಿ ಗ್ರಾಮದ ಗುಂಡ್ಯದ ಐದರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಉಪ್ಪಿನಂಗಡಿ ಪೊಲೀಸರು ಹುಬ್ಬಳ್ಳಿಯಲ್ಲಿ ಪತ್ತೆಹಚ್ಚಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪುತ್ತೂರು ಗ್ರಾಮಾಂತರ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ► ಉಪ್ಪಿನಂಗಡಿ ಪೊಲೀಸರಿಂದ ಬಂಧನ Read More »

ಕರಾವಳಿ

ತೆಂಗಿನ ಎಣ್ಣೆ ಬಳಸಿ ಹಲ್ಲುಜ್ಜಿದರೆ ಉಂಟಾಗುವ ಲಾಭವೇನು ಗೊತ್ತೇ..? ► ಗೊತ್ತಿಲ್ಲದಿದ್ದರೆ ಈ ವಿಷಯವನ್ನು ಈಗಲೇ ಓದಿ ತಿಳಿಯಿರಿ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.18. ತೆಂಗಿನ ಎಣ್ಣೆಯಿಂದ ಹಲ್ಲನ್ನು ಉಜ್ಜಿದರೆ ಹಲ್ಲುಗಳು ಇನ್ನಷ್ಟು ಬೆಳ್ಳಗಾಗುತ್ತಂತೆ. ತೆಂಗಿನ ಎಣ್ಣೆ ಕೂದಲಿಗೆ ಒಳ್ಳೆಯದಲ್ಲವೇ ಅದು ಎಲ್ಲರಿಗೂ ತಿಳಿದಿರುವ ವಿಷಯವೇ. ಕರಾವಳಿಯಲ್ಲಿ ತೆಂಗಿನ ಎಣ್ಣೆಯನ್ನು ಅಡುಗೆಗೆ ಸಹ ಬಳಸುತ್ತಾರೆ. ತೆಂಗಿನ ಎಣ್ಣೆಯನ್ನು ಹಲ್ಲುಜ್ಜಲು ಸಹ ಬಳಸಬಹುದು. ಅದೇನೇ ಇರಲಿ ಸರಿಯಾದ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲ ಎಂದಾದಲ್ಲಿ ನಮ್ಮ ಹಲ್ಲುಗಳ ಅರೋಗ್ಯ ಹಾಳಾಗುತ್ತದೆ. ದಂತಕುಳಿ, ದಂತ ಸವಕಳಿ ಮತ್ತು ಹಲ್ಲು ನೋವು ಇತ್ಯಾದಿ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹಲ್ಲುನೋವು ತಾನೇ ಎಂದು

ತೆಂಗಿನ ಎಣ್ಣೆ ಬಳಸಿ ಹಲ್ಲುಜ್ಜಿದರೆ ಉಂಟಾಗುವ ಲಾಭವೇನು ಗೊತ್ತೇ..? ► ಗೊತ್ತಿಲ್ಲದಿದ್ದರೆ ಈ ವಿಷಯವನ್ನು ಈಗಲೇ ಓದಿ ತಿಳಿಯಿರಿ Read More »

ಆರೋಗ್ಯ ಮಾಹಿತಿ

ರಾಜ್ಯದ ಮರಳು ಹರಾಜು ನೀತಿ ಅವೈಜ್ಞಾನಿಕವೆಂದು ಚಾಟಿ ಬೀಸಿದ ಹೈಕೋರ್ಟ್ ►ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಮರಳನ್ನು ವಿತರಣೆ ಮಾಡಲು ಸಲಹೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.18. ರಾಜ್ಯದಲ್ಲಿ ಜಾರಿಯಲ್ಲಿರುವ ಮರಳು ಹರಾಜು ನೀತಿ ಅವೈಜ್ಞಾನಿಕ ಹಾಗೂ ಅವಾಸ್ತವಿಕವಾಗಿದೆ’ ಎಂದು ಕಿಡಿ ಕಾರಿರುವ ಹೈಕೋರ್ಟ್‌, ಇಂದಿರಾ ಕ್ಯಾಂಟೀನ್‌ ರೀತಿಯಲ್ಲಿ ಮರಳನ್ನು ವಿತರಿಸಲು ಸೂಚನೆ ನೀಡಿದೆ. ಸರ್ಕಾರದ ವತಿಯಿಂದ ನಡೆಸಿದ್ದ ಮರಳು ಹರಾಜು ಪ್ರಕ್ರಿಯೆಯಲ್ಲಿ ‘ಹೆಚ್ಚಿನ ಮೊತ್ತಕ್ಕೆ ಬಿಡ್‌ ಮಾಡಲಾಗಿದ್ದರೂ ನನ್ನ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಆರೋಪಿಸಿ ಹಾವೇರಿಯ ವನಜಾಕ್ಷಿ ಎಂಬವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್

ರಾಜ್ಯದ ಮರಳು ಹರಾಜು ನೀತಿ ಅವೈಜ್ಞಾನಿಕವೆಂದು ಚಾಟಿ ಬೀಸಿದ ಹೈಕೋರ್ಟ್ ►ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಮರಳನ್ನು ವಿತರಣೆ ಮಾಡಲು ಸಲಹೆ Read More »

ಕರ್ನಾಟಕ

ಸಮಸ್ಯೆಗಳ ಸುರಿಮಳೆಯಲ್ಲಿ ಮುಳುಗಿದ ಕಡಬದ ಮೆಸ್ಕಾಂ ಜನಸಂಪರ್ಕ ಸಭೆ ►ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿ ಮೆಸ್ಕಾಂ ಅಧಿಕಾರಿಗಳು ಕಂಗಾಲು

(ನ್ಯೂಸ್ ಕಡಬ) newskadaba.com ಕಡಬ, ಜ.18. ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಕಡಬ ಉಪವಿಭಾಗಮಟ್ಟದ ವಿದ್ಯುತ್ ಗ್ರಾಹಕರ ಜನಸಂಪರ್ಕ ಸಭೆ ಅಕ್ಷರಶಃ ಸಮಸ್ಯೆಗಳ ಆಗರವನ್ನೇ ಅನಾವರಣಗೊಳಿಸಿತು. ಮೆಸ್ಕಾಂ ಮಂಗಳೂರು ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ ಮಂಜಪ್ಪರವರ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಬರಪೂರ ಸಮಸ್ಯೆಗಳ ಪಟ್ಟಿಯನ್ನೇ ಮುಂದಿಟ್ಟರು. ಕಡಬ ಅನುಗ್ರಹ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಗ್ರಾಹಕರು ಭಾರಿ ಸಂಖ್ಯೆಯಲ್ಲಿ ತಮ್ಮ ತಮ್ಮ ಭಾಗದ ಹತ್ತು ಹಲವು ವಿದ್ಯುತ್ ಸಮಸ್ಯೆಗಳನ್ನು ಮೆಸ್ಕಾಂ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ರೈತ

ಸಮಸ್ಯೆಗಳ ಸುರಿಮಳೆಯಲ್ಲಿ ಮುಳುಗಿದ ಕಡಬದ ಮೆಸ್ಕಾಂ ಜನಸಂಪರ್ಕ ಸಭೆ ►ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿ ಮೆಸ್ಕಾಂ ಅಧಿಕಾರಿಗಳು ಕಂಗಾಲು Read More »

ಕರಾವಳಿ

ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ► ಮರ್ಧಾಳದ ಕ್ಯಾನ್ಸರ್ ಪೀಡಿತ ಬಾಲಕನಿಗೆ ಸಹಾಯ ಧನ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಜ.17. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮರ್ಧಾಳ ಸಮೀಪದ ಬಂಟ್ರ ಗ್ರಾಮದ ಕಂಪ ನಿವಾಸಿ ಸುರೇಶ್ ಗೌಡ ಮತ್ತು ಲಲಿತಾ ದಂಪತಿಯ ಪುತ್ರ, ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ 9ನೇ ತರಗತಿಯ ವಿದ್ಯಾರ್ಥಿ ರಾಜೇಶ್ ಅವರ ಚಿಕಿತ್ಸೆಗೆ ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬುಧವಾರ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಂದು ಹಂತದ ಚಿಕಿತ್ಸೆ ಪಡೆದು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು  ಆಸ್ಪತ್ರೆಯಿಂದ ಬಿಡುಗಡೆಗೊಂಡು

ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ► ಮರ್ಧಾಳದ ಕ್ಯಾನ್ಸರ್ ಪೀಡಿತ ಬಾಲಕನಿಗೆ ಸಹಾಯ ಧನ ಹಸ್ತಾಂತರ Read More »

ಕರಾವಳಿ

ಕಳವು ಪ್ರಕರಣದಲ್ಲಿ ಕೇರಳ ಪೊಲೀಸರಿಂದ ತಪ್ಪಿಸಿ ಕಡಬದಲ್ಲಿ ಅವಿತಿದ್ದ ಆರೋಪಿ ► ಆರೋಪಿಯನ್ನು ಬಂಧಿಸಿ ಕೇರಳ ಪೊಲೀಸರಿಗೆ ಹಸ್ತಾಂತರಿಸಿದ ಕಡಬ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜ.17. ಕಳವು ಪ್ರಕರಣವೊಂದರಲ್ಲಿ ಕೇರಳದ ಕಣ್ಣೂರು ಸಬ್ ಜೈಲಿನಲ್ಲಿ ಬಂಧಿಯಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸರನ್ನು ತಳ್ಳಿಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ ಘಟನೆ ಬುಧವಾರದಂದು ಕೊಯಿಲದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕೇರಳದಿಂದ ತಪ್ಪಿಸಿ ಬಂದು ಕೊಯಿಲ ಗ್ರಾಮದ ಎಲ್ಯಂಗಳ ನಿವಾಸಿ ಅಬ್ಬಾಸ್ ಎಂಬವರ ಮನೆಯಲ್ಲಿ ಅವಿತು ಕುಳಿತಿದ್ದ ಶಿಹಾಬುದ್ದೀನ್(22) ಎಂದು ಗುರುತಿಸಲಾಗಿದೆ. ಈತ 2017 ಡಿಸೆಂಬರ್ 25 ರಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಜೀಪಿನಲ್ಲಿದ್ದ ಪೊಲೀಸರನ್ನು ತಳ್ಳಿ ಪರಾರಿಯಾಗಿ ಕಡಬ ಪರಿಸರದಲ್ಲಿ

ಕಳವು ಪ್ರಕರಣದಲ್ಲಿ ಕೇರಳ ಪೊಲೀಸರಿಂದ ತಪ್ಪಿಸಿ ಕಡಬದಲ್ಲಿ ಅವಿತಿದ್ದ ಆರೋಪಿ ► ಆರೋಪಿಯನ್ನು ಬಂಧಿಸಿ ಕೇರಳ ಪೊಲೀಸರಿಗೆ ಹಸ್ತಾಂತರಿಸಿದ ಕಡಬ ಪೊಲೀಸರು Read More »

ರಾಷ್ಟ್ರೀಯ ನ್ಯೂಸ್

ಶಾಂತಿ ಕದಡುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಗಡೀಪಾರು ಮಾಡಿ ► ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.17. ಸಮಾಜದಲ್ಲಿ ಮತೀಯವಾದಗಳ ಮೂಲಕ ಶಾಂತಿ ಕದಡುವವರನ್ನು ಗೂಂಡಾ ಕಾಯ್ದೆ ಹಾಕಿ ಗಡೀಪಾರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಯ್ಯ ಸೂಚನೆ ನೀಡಿದ್ದಾರೆ. ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಆರಂಭವಾದ ಎರಡು ದಿನಗಳ ಪೊಲೀಸ್ ಹಿರಿಯ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿ, ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೆ ಮಂಗಳೂರು ದೀಪಕ್‍ರಾವ್ ಮತ್ತು ಬಶೀರ್ ಅವರ ಕೊಲೆ ಪ್ರಕರಣಗಳನ್ನು ತಡೆಯಬಹುದಿತ್ತು ಎಂದರು. ಸಮಾಜದ ಶಾಂತಿ ಕದಡುವವರು ಯಾರೇ ಆದರೂ ಮುಲಾಜಿಲ್ಲದೆ ಕ್ರಮ ಜರುಗಿಸಿ.

ಶಾಂತಿ ಕದಡುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಗಡೀಪಾರು ಮಾಡಿ ► ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ Read More »

ಕರ್ನಾಟಕ

ವಿಟ್ಲ: ಪತ್ರಕರ್ತರೋರ್ವರ ಮೇಲೆ ದಾಳಿ ನಡೆಸಿದ ಒಂಟಿ ಮಂಗ ► ಗಾಯಾಳು ಪತ್ರಕರ್ತ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಜ.17. ಪತ್ರಕರ್ತರೋರ್ವರಿಗೆ ಗಂಡು ಮಂಗವೊಂದು ದಾಳಿ ನಡೆಸಿ ಅವರ ಕಾಲನ್ನು ತಿವಿದು ತೀವ್ರ ತರದಲ್ಲಿ ಗಾಯಗೊಳಿಸಿದ ಘಟನೆ ಬುಧವಾರದಂದು ವಿಟ್ಲದಲ್ಲಿ ನಡೆದಿದೆ. ಗಾಯಾಳು ಪತ್ರಕರ್ತನನ್ನು ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಮಾದಕಟ್ಟೆ ನಿವಾಸಿ ವಿ.ಟಿ ಪ್ರಸಾದ್ ಎಂದು ಗುರುತಿಸಲಾಗಿದೆ. ಪ್ರಸಾದ್ ಬುಧವಾರದಂದು ತನ್ನ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಗಂಡು ಮಂಗ ದಾಳಿ ಮಾಡಿ ಅವರ ಬಲಕಾಲನ್ನು ತಿವಿದು ಗಾಯಗೊಳಿಸಿದೆ. ತಕ್ಷಣವೇ ಪ್ರಸಾದ್ ಅವರನ್ನು ವಿಟ್ಲದ ಸರ್ಕಾರಿ

ವಿಟ್ಲ: ಪತ್ರಕರ್ತರೋರ್ವರ ಮೇಲೆ ದಾಳಿ ನಡೆಸಿದ ಒಂಟಿ ಮಂಗ ► ಗಾಯಾಳು ಪತ್ರಕರ್ತ ಆಸ್ಪತ್ರೆಗೆ ದಾಖಲು Read More »

ಕರಾವಳಿ

ಕರಾವಳಿಯಲ್ಲಿ ಕೆಎಸ್ಸಾರ್ಟಿಸಿ ಚಾಲಕ – ನಿರ್ವಾಹಕ‌ರ ಕೊರತೆ ► ಮಂಗಳೂರು, ಪುತ್ತೂರು ವಿಭಾಗಕ್ಕೆ ತಕ್ಷಣವೇ ಸಿಬ್ಬಂದಿಗಳ ನೇಮಕಾತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.17. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ಮತ್ತು ಮಂಗಳೂರು ವಿಭಾಗದಲ್ಲಿ ಚಾಲಕರು, ನಿರ್ವಾಹಕರ ಕೊರತೆ ಇರುವುದರಿಂದ ತಕ್ಷಣವೇ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದಾರೆ. ಪುತ್ತೂರು ಮತ್ತು ಮಂಗಳೂರು ಭಾಗದಲ್ಲಿ ಕರ್ತವ್ಯದಲ್ಲಿ ಇದ್ದವರು ವರ್ಗಾವಣೆ ಕೇಳಿದ್ದಾರೆ. ಕರಾವಳಿಯವರು ಪ್ರಪಂಚದಾದ್ಯಂತ ಕೆಲಸ ಮಾಡ್ತಾರೆ. ಆದರೆ ಅಲ್ಲಿ ಚಾಲಕ, ನಿರ್ವಾಹಕ ವೃತ್ತಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದೆ. ಅದಕ್ಕಾಗಿ ಮಂಗಳೂರು-ಪುತ್ತೂರು ವಿಭಾಗಕ್ಕೆ ತಕ್ಷಣವೇ

ಕರಾವಳಿಯಲ್ಲಿ ಕೆಎಸ್ಸಾರ್ಟಿಸಿ ಚಾಲಕ – ನಿರ್ವಾಹಕ‌ರ ಕೊರತೆ ► ಮಂಗಳೂರು, ಪುತ್ತೂರು ವಿಭಾಗಕ್ಕೆ ತಕ್ಷಣವೇ ಸಿಬ್ಬಂದಿಗಳ ನೇಮಕಾತಿ Read More »

ಕರ್ನಾಟಕ
Scroll to Top