ಹಜ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ ► ಆಹಾರ ಸಚಿವ ಯು.ಟಿ.ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.17. ಹಜ್ ಯಾತ್ರಿಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿರುವ ಕ್ರಮವನ್ನು ಸ್ವಾಗತಿಸುವುದಾಗಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಜ್ ಯಾತ್ರಿಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯಿಂದ ಏರ್ ಇಂಡಿಯಾಕ್ಕೆ ಲಾಭವಾಗುತ್ತಿತ್ತೇ ಹೊರತು ವೈಯಕ್ತಿಕವಾಗಿ ಯಾತ್ರಿಕರಿಗೆ ಯಾವುದೇ ಲಾಭ ಇರಲಿಲ್ಲ. ಸಬ್ಸಿಡಿಯ ಕಾರಣದಿಂದಾಗಿ ಏರ್ ಇಂಡಿಯಾದಲ್ಲೇ ಯಾತ್ರಿಕರು ಪ್ರಯಾಣಿಸುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಕಡಿಮೆ ವೆಚ್ಚದಲ್ಲಿ ಇತರ ವಿಮಾನಗಳಲ್ಲೂ […]

ಹಜ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ ► ಆಹಾರ ಸಚಿವ ಯು.ಟಿ.ಖಾದರ್ Read More »

ಕರಾವಳಿ

ಪಾವಗಡದ ಸೋಲಾರ್ ಪಾರ್ಕನ್ನು ಕಂಡು ಮೋದಿಗೆ ಗಾಬರಿಯಾಗಿದೆ ► ಪ್ರಧಾನಿಯ ಕಾಳೆಲೆದ ಇಂಧನ ಸಚಿವ ಡಿ.ಕೆ.ಶಿವಕುಮಾರ್

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಜ.17. ತುಮಕೂರಿನ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಕಂಡು ಪ್ರಧಾನಿ ಮೋದಿ ಗಾಬರಿಯಾಗಿದ್ದಾರೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪಂಚ್ ನೀಡಿದ್ದಾರೆ. ಅವರು ಚಿತ್ರದುರ್ಗದ ಹೊಸದುರ್ಗದಲ್ಲಿ ವಿದ್ಯುತ್ ಉಪಕೇಂದ್ರಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಜಮೀನು ಖರೀದಿ ಮಾಡದೇ ಯಾವುದೇ ಭೂ ಸ್ವಾಧೀನವೂ ಇಲ್ಲದೆ ಸುಮಾರು 12 ಸಾವಿರ ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕನ್ನು ನೋಡಿ ಪ್ರಧಾನಿ ಮೋದಿ ಅವರೇ ಗಾಬರಿಯಾಗಿದ್ದಾರೆ ಎಂದರು. ರಾಜ್ಯ ಸರ್ಕಾರ ರೈತರ ಸಾಲ

ಪಾವಗಡದ ಸೋಲಾರ್ ಪಾರ್ಕನ್ನು ಕಂಡು ಮೋದಿಗೆ ಗಾಬರಿಯಾಗಿದೆ ► ಪ್ರಧಾನಿಯ ಕಾಳೆಲೆದ ಇಂಧನ ಸಚಿವ ಡಿ.ಕೆ.ಶಿವಕುಮಾರ್ Read More »

ಕರ್ನಾಟಕ

ಅಕ್ರಮ ಮರಳುಗಾರಿಕೆಯ ವಿರುದ್ಧ ಮುಂದುವರಿದ ಕಾರ್ಯಾಚರಣೆ ► ಬೃಹತ್ ಅಕ್ರಮ ಮರಳು ದಾಸ್ತಾನು ಪತ್ತೆ, 5 ಘಟಕಗಳಿಗೆ ಬೀಗ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.17. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಅಕ್ರಮ ಮರಳು ಸಾಗಣೆ ದಂಧೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಜಿಲ್ಲಾಡಳಿತ 800ಕ್ಕೂ ಹೆಚ್ಚು ಲೋಡ್ ಮರಳು, ಯಂತ್ರ ಮತ್ತು ಹಲವಾರು ಲಾರಿಗಳನ್ನು ವಶಪಡಿಸಿಕೊಂಡಿದೆ. ಮಂಗಳೂರು ತಾಲ್ಲೂಕಿನ ಮರವೂರು ಡ್ಯಾಂ ಬಳಿ ಇದ್ದ ಐದು ಮರಳು ತೆಗೆಯುವ ಘಟಕಗಳನ್ನು ಪತ್ತೆ ಮಾಡಲಾಗಿದ್ದು, ಅವುಗಳಿಗೆ ಬೀಗ ಜಡಿಯಲಾಗಿದೆ. ಅಲ್ಲದೇ ಮರಳು ಕಳ್ಳಸಾಗಣೆಗೆ ಬಳಸುತ್ತಿದ್ದ 40 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಕ್ಷಿಣ ಕನ್ನಡ

ಅಕ್ರಮ ಮರಳುಗಾರಿಕೆಯ ವಿರುದ್ಧ ಮುಂದುವರಿದ ಕಾರ್ಯಾಚರಣೆ ► ಬೃಹತ್ ಅಕ್ರಮ ಮರಳು ದಾಸ್ತಾನು ಪತ್ತೆ, 5 ಘಟಕಗಳಿಗೆ ಬೀಗ Read More »

ಕರಾವಳಿ

ಸುಳ್ಯ: ಬಾಲಕನನ್ನು ಸಲಿಂಗ ಲೈಂಗಿಕ ಕ್ರಿಯೆಗೆ ಬಳಸಿದ ಯುವಕ ► ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಊರವರು

(ನ್ಯೂಸ್ ಕಡಬ) newskadaba.com ಸುಳ್ಯ, ಜ.16. ಒಂಬತ್ತನೇ ತರಗತಿಯ ಬಾಲಕನೋರ್ವನನ್ನು ಸಲಿಂಗಕಾಮಕ್ಕೆ ಬಳಸಿದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ಮಂಗಳವಾರದಂದು ನಡೆದಿದೆ. ಬಂಧಿತ ಆರೋಪಿಯನ್ನು ಸುಳ್ಯ ಜಯನಗರ ನಿವಾಸಿ ಆಬೀದ್ ಎಂದು ಗುರುತಿಸಲಾಗಿದೆ. ಜ.14 ಭಾನುವಾರದಂದು 9ನೇ ತರಗತಿಯ ಹುಡುಗನೊಬ್ಬನನ್ನು ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಲಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು, ಆಕ್ರೋಶಗೊಂಡ ಊರವರು ಆಬೀದ್‌ನನ್ನು ಪ್ರಶ್ನಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿರುವ ಪೊಲೀಸರು ಪೋಕ್ಸೋ ಕಾಯಿದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಳ್ಯ: ಬಾಲಕನನ್ನು ಸಲಿಂಗ ಲೈಂಗಿಕ ಕ್ರಿಯೆಗೆ ಬಳಸಿದ ಯುವಕ ► ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಊರವರು Read More »

ಕರಾವಳಿ

ಹಜ್ ಯಾತ್ರಾರ್ಥಿಗಳ ಸಬ್ಸಿಡಿ ಕಡಿತಗೊಳಿಸಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ.16. ಹಜ್ ಯಾತ್ರಾರ್ಥಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಪ್ರಸಕ್ತ ವರ್ಷದಿಂದ ಕೇಂದ್ರ ಸರಕಾರ ರದ್ದುಪಡಿಸಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಮಂಗಳವಾರ ಹೇಳಿದ್ದಾರೆ. ಸ್ವಾತಂತ್ರ್ಯಾ ನಂತರ ಪ್ರಪ್ರಥಮ ಬಾರಿಗೆ 1.75 ಲಕ್ಷ ಹಜ್ ಯಾತ್ರಾರ್ಥಿಗಳು ಸಬ್ಸಿಡಿಯಿಲ್ಲದೆ ಹಜ್ ಯಾತ್ರೆಗೆ ತೆರಳುತ್ತಿದ್ದಾರೆ. ಸಬ್ಸಿಡಿಯನ್ನು ರದ್ದು ಮಾಡುವ ಮೂಲಕ ಸರಕಾರವು 700 ಕೋಟಿ ರೂ.ಗಳನ್ನು ಉಳಿತಾಯ ಮಾಡಲಿದೆ. ಈ ಹಣವನ್ನು ಅಲ್ಪಸಂಖ್ಯಾತ ಸಮುದಾಯದ, ಮುಖ್ಯವಾಗಿ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುವುದು ಎಂದವರು ಹೇಳಿದ್ದಾರೆ.

ಹಜ್ ಯಾತ್ರಾರ್ಥಿಗಳ ಸಬ್ಸಿಡಿ ಕಡಿತಗೊಳಿಸಿದ ಕೇಂದ್ರ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು ಧರ್ಮಪ್ರಾಂತ್ಯದ ಸ್ಥಾಪಕ ಧರ್ಮಾಧ್ಯಕ್ಷರು ಇನ್ನಿಲ್ಲ ► ಕೇರಳದಲ್ಲಿ ವಿಧಿವಶರಾದ ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್

(ನ್ಯೂಸ್ ಕಡಬ) newskadaba.com ಪುತ್ತೂರು, ಜ.16. ಪುತ್ತೂರು ಧರ್ಮಪ್ರಾಂತ್ಯದ ಸ್ಥಾಪಕ ಧರ್ಮಾಧ್ಯಕ್ಷರಾಗಿದ್ದ ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ ರವರು ಮಂಗಳವಾರದಂದು ವಿಧಿವಶರಾದರು. ದೀರ್ಘ ಕಾಲದ ಅನಾರೋಗ್ಯದಿಂದಾಗಿ ಕೇರಳದ ಪುಷ್ಪಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಸುಮಾರು 7 ವರ್ಷಗಳ ಕಾಲ ಪುತ್ತೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು‌. ಮೂಲತಃ ಪುತ್ತೂರು ತಾಲೂಕಿನ ಇಚಿಲಂಪಾಡಿ ನಿವಾಸಿಯಾಗಿದ್ದ ಇವರು 2010 ರಲ್ಲಿ ಪುತ್ತೂರು ಧರ್ಮ ಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಸೈಂಟ್ ಜಾನ್ ಕೆಥೆಡ್ರಲ್ ತಿರುವಲ್ಲದಲ್ಲಿ ಜನವರಿ 18 ರಂದು

ಪುತ್ತೂರು ಧರ್ಮಪ್ರಾಂತ್ಯದ ಸ್ಥಾಪಕ ಧರ್ಮಾಧ್ಯಕ್ಷರು ಇನ್ನಿಲ್ಲ ► ಕೇರಳದಲ್ಲಿ ವಿಧಿವಶರಾದ ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ Read More »

ರಾಷ್ಟ್ರೀಯ ನ್ಯೂಸ್

ಶಿರಾಡಿ, ಅಡ್ಡಹೊಳೆಗೆ ನಕ್ಸಲರ ಆಗಮನದ ಹಿನ್ನೆಲೆ ►ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭ

ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.16. ಶಿರಾಡಿ ಗ್ರಾಮದ ಮಿತ್ತಮಜಲು ಪರಿಸರದಲ್ಲಿ ನಕ್ಸಲರಿದ್ದಾರೆ ಎಂಬ ಮಾಹಿತಿಯಾಧರಿಸಿ ಮಂಗಳವಾರದಿಂದ ಕೂಂಬಿಂಗ್ ಆರಂಭಿಸಲಾಗಿದೆ. ಕಾರ್ಕಳದಿಂದ ಆಗಮಿಸಿದ ನಕ್ಸಲ್ ನಿಗ್ರಹ ಪಡೆಯ 2 ತಂಡಗಳು ಶಿರಾಡಿ ಕಾಡಿನಲ್ಲಿ ಕೂಂಬಿಂಗ್ ಆರಂಭಿಸಿದ್ದು, ಇನ್ನೂ ಹೆಚ್ಚಿನ ತಂಡಗಳು ಸ್ಥಳಕ್ಕಾಗಮಿಸುವ ನಿರೀಕ್ಷೆ ಇದೆ. ಅಡ್ಡಹೊಳೆ ಪರಿಸರದ ಮಿತ್ತಮಜಲು ಎಂಬಲ್ಲಿ ಭಾನುವಾರ ಸಂಜೆ 7 ಗಂಟೆಯ ಸುಮಾರಿಗೆ ಮೂವರು ಅಪರಿಚಿತರು ಕಾಣಿಸಿಕೊಂಡಿದ್ದು, ನಕ್ಸಲರಾಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಮಿತ್ತಮಜಲಿನ ಮೋಹನ್, ಲೀಲಾ ಹಾಗೂ ಸುರೇಶ್ ಎಂಬವರ ಮನೆಗೆ ಭೇಟಿ

ಶಿರಾಡಿ, ಅಡ್ಡಹೊಳೆಗೆ ನಕ್ಸಲರ ಆಗಮನದ ಹಿನ್ನೆಲೆ ►ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭ Read More »

ಕರಾವಳಿ

ಕಸ ತುಂಬುವ ವಾಹನದಲ್ಲಿ ಪತ್ರಕರ್ತನ ಮೃತದೇಹ ರವಾನೆ ► ವರದಿ ಕೇಳಿದ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.16. ಅಪಘಾತದಲ್ಲಿ ಮೃತಪಟ್ಟ ಖಾಸಗಿ ವಾಹಿನಿಯ ವರದಿಗಾರನ ಮೃತದೇಹವನ್ನು ಕಸ ತುಂಬುವ ವಾಹನದಲ್ಲಿ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಕೇಳಿದ್ದಾರೆ. ಮೌನೇಶ ಪೋತರಾಜ್(28) ಎಂಬವರು ಶನಿವಾರ ರಾತ್ರಿ ಹಾನಗಲ್ ನ ಗಂಡೂರು ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಪೋತರಾಜ್ ಅವರ ಮೃತದೇಹವನ್ನು ಹಾನಗಲ್ ಪುರಸಭೆಯ ಕಸ ತುಂಬುವ ಟ್ರ್ಯಾಕ್ಟರ್ ನಲ್ಲಿ ರವಾನೆ ಮಾಡಲಾಗಿತ್ತು. ಈ ಸಂಬಂಧ ಉತ್ತರ ವಲಯದ ಐಜಿಪಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಕೇಳಿದ್ದಾರೆ. ಈ ಬಗ್ಗೆ

ಕಸ ತುಂಬುವ ವಾಹನದಲ್ಲಿ ಪತ್ರಕರ್ತನ ಮೃತದೇಹ ರವಾನೆ ► ವರದಿ ಕೇಳಿದ ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಕಡಬ: ಮದ್ಯದ ನಶೆಯಲ್ಲಿ ಯುವತಿಗೆ ಹೂವಿನೊಂದಿಗೆ ಮೊಬೈಲ್ ನಂಬರ್ ಕೊಟ್ಟ ► ಆರೋಪಿಗೆ ಸಾರ್ವಜನಿಕರಿಂದ ಧರ್ಮದೇಟು

(ನ್ಯೂಸ್ ಕಡಬ) newskadaba.com ಕಡಬ, ಜ.16. ಮದ್ಯಪಾನ ಮಾಡಿದ ವ್ಯಕ್ತಿಯೋರ್ವ ಹೂವು ಹಾಗೂ ತನ್ನ ಮೊಬೈಲ್ ಸಂಖ್ಯೆಯನ್ನು ಚೀಟಿಯಲ್ಲಿ ಬರೆದು ಕೊಟ್ಟು ಯುವತಿಯನ್ನು ಚುಡಾಯಿಸಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ಸೋಮವಾರದಂದು ಕಡಬದಲ್ಲಿ ನಡೆದಿದೆ. ಕಡಬ ಪರಿಸರದಲ್ಲಿ ಟ್ಯಾಪಿಂಗ್ ಕೆಲಸ ಮಾಡುವ ಕೇರಳದ ಕೊಲ್ಲಂ ನಿವಾಸಿ ಸುಲೈಮಾನ್ ಎಂಬವರ ಪುತ್ರ ನಹಾಝ್(34) ಕಡಬದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ಯುವತಿಗೆ ತನ್ನ ಮೊಬೈಲ್ ಸಂಖ್ಯೆ ಬರೆದು ಹೂವಿನೊಂದಿಗೆ ಕೊಟ್ಟಿದ್ದ. ಯುವತಿ ತಕ್ಷಣವೇ ವಿಷಯವನ್ನು ಸ್ಥಳೀಯರಿಗೆ ತಿಳಿಸಿದಾಗ ಸ್ಥಳೀಯರು ಆರೋಪಿಗೆ

ಕಡಬ: ಮದ್ಯದ ನಶೆಯಲ್ಲಿ ಯುವತಿಗೆ ಹೂವಿನೊಂದಿಗೆ ಮೊಬೈಲ್ ನಂಬರ್ ಕೊಟ್ಟ ► ಆರೋಪಿಗೆ ಸಾರ್ವಜನಿಕರಿಂದ ಧರ್ಮದೇಟು Read More »

ಕರಾವಳಿ

ನಕಲಿ ಸಮೀಕ್ಷೆಯ ಮೂಲಕ ಕಾಂಗ್ರೆಸ್ ಹೆಸರು ದುರುಪಯೋಗ ಆರೋಪ ► ಸಿಎಚ್ಎಸ್ ಸರ್ವೇಶ್ ಸಂಸ್ಥೆಯ ವಿರುದ್ಧ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.16. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಿಎಚ್‍ಎಸ್ ಸರ್ವೇಶ್ ಸಂಸ್ಥೆಯವರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ರಾಜ್ಯದ ಜನತೆ ವಿಧಾನಸಭೆ ಚುನಾವಣೆಗಳ ಕುರಿತು ಲೆಕ್ಕಾಚಾರ ಮಾಡುತ್ತಿರುವ ಈ ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಕಲಿ ಸಮೀಕ್ಷೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಜನರಲ್ಲಿ ತಪ್ಪು ಗ್ರಹಿಕೆ ಮೂಡಿಸುವ ಅನೈತಿಕ ಮಾರ್ಗ ಹಿಡಿದಿವೆ. ಜೆಪಿ ನಗರ, ಡಾಲರ್ಸ್ ಕಾಲೋನಿಯ ದೀಪಕ್ ಅವಸ್ಥಿ ಅವರ ನೇತೃತ್ವದ

ನಕಲಿ ಸಮೀಕ್ಷೆಯ ಮೂಲಕ ಕಾಂಗ್ರೆಸ್ ಹೆಸರು ದುರುಪಯೋಗ ಆರೋಪ ► ಸಿಎಚ್ಎಸ್ ಸರ್ವೇಶ್ ಸಂಸ್ಥೆಯ ವಿರುದ್ಧ ಪೊಲೀಸ್ ದೂರು Read More »

ಕರ್ನಾಟಕ
Scroll to Top