ದೀಪಕ್, ಬಶೀರ್ ನಿವಾಸಗಳಿಗೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 21. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕರಾವಳಿಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಮತ್ತು ಬಶೀರ್ ಮನೆಗಳಿಗೆ ರವಿವಾರ ಭೇಟಿ ನೀಡಿದರು. ದೀಪಕ್ ಹಾಗೂ ಬಶೀರ್ ಕುಟುಂಬದ ಸದ್ಯದ ಪರಿಸ್ಥಿತಿಯ ಬಗ್ಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಅವರಿಂದ ಮಾಹಿತಿ ಪಡೆದುಕೊಂಡ ದೇವೇಗೌಡರು ದೀಪಕ್ ಹಾಗೂ ಬಶೀರ್ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದೀಪಕ್, ಬಶೀರ್ ನಿವಾಸಗಳಿಗೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ Read More »

ಕರಾವಳಿ

ಮಡಂತ್ಯಾರು: ಅಪಘಾತದ ಗಾಯಾಳು ‌ತಾಯಿ-ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.20. ಲಾರಿ ಹಾಗೂ ಕಾರು ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ನಾಲ್ವರ ಪೈಕಿ ಮಗು ಸಹಿತ ಇಬ್ಬರು ಮೃತಪಟ್ಟ ಘಟನೆ‌ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಮಂಗಳೂರಿನ ನೆಲ್ಲಿಗುಡ್ಡೆ ನಿವಾಸಿಗಳಾದ ಅರ್ಚನಾ ಹಾಗೂ ಐದು ತಿಂಗಳ ಮಗು ಮೃತಪಟ್ಟಿದ್ದಾರೆ. ಕಾರು ಚಲಾಯಿಸುತ್ತಿದ್ದ ಅರ್ಚನಾ ಪತಿ ಜಗದೀಶ್ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಆಶೀರ್ವಾದ್ ಸಭಾಂಗಣದ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಲಾರಿ ಮತ್ತು ಕಾರು ಮುಖಾಮುಖಿ ಢಿಕ್ಕಿಯಲ್ಲಿ

ಮಡಂತ್ಯಾರು: ಅಪಘಾತದ ಗಾಯಾಳು ‌ತಾಯಿ-ಮಗು ಮೃತ್ಯು Read More »

ಕರಾವಳಿ

ಮಡಂತ್ಯಾರು: ಲಾರಿ – ಕಾರು ಢಿಕ್ಕಿ ► ಮಗು ಸಹಿತ ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.20. ಲಾರಿ ಹಾಗೂ ಕಾರು ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಮಗು ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ಇಲ್ಲಿನ ಆಶೀರ್ವಾದ್ ಸಭಾಂಗಣದ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಲಾರಿ ಮತ್ತು ಕಾರು ಮುಖಾಮುಖಿ ಢಿಕ್ಕಿಯಲ್ಲಿ ಕಾರಿನಲ್ಲಿದ್ದ ಮಂಗಳೂರು ಮೂಲದ ಸಣ್ಣ ಮಗು ಸಹಿತ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ

ಮಡಂತ್ಯಾರು: ಲಾರಿ – ಕಾರು ಢಿಕ್ಕಿ ► ಮಗು ಸಹಿತ ನಾಲ್ವರು ಗಂಭೀರ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆ ► ನೂತನ ಎಸ್ಪಿಯಾಗಿ ಎನ್ ಕೌಂಟರ್ ಸ್ಪೆಷಲಿಸ್ಟ್ ರವಿಕಾಂತೇಗೌಡ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.20. ದಕ್ಷಿಣ ಕನ್ನಡ ಜಿಲ್ಲಾ ನೂತನ ಎಸ್ಪಿಯಾಗಿ 2005 ನೇ ಬ್ಯಾಚಿನ ಐಪಿಎಸ್ ಅಧಿಕಾರಿ, ಎನ್ ಕೌಂಟರ್ ಸ್ಪೆಷಲಿಸ್ಟ್, ಬೆಳಗಾವಿ ಜಿಲ್ಲಾ ಎಸ್ಪಿಯಾಗಿದ್ದ ಡಾ| ಬಿ‌.ಆರ್‌. ರವಿಕಾಂತೇಗೌಡರವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ನಿರ್ಗಮನ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಧೀರ್ ಕುಮಾರ್ ರೆಡ್ಡಿಯವರನ್ನು ಬೆಳಗಾವಿ ಜಿಲ್ಲಾ ಎಸ್ಪಿಯಾಗಿ ತಕ್ಷಣದಿಂದಲೇ ವರ್ಗಾಯಿಸಿ ರಾಜ್ಯ ಸರಕಾರ ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆ ► ನೂತನ ಎಸ್ಪಿಯಾಗಿ ಎನ್ ಕೌಂಟರ್ ಸ್ಪೆಷಲಿಸ್ಟ್ ರವಿಕಾಂತೇಗೌಡ ನೇಮಕ Read More »

ಕರಾವಳಿ

ಕೊಕ್ಕಡ: ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.20. ಯುವತಿಯೋರ್ವಳು ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಮ್ಮಾಯಿಯ ಬೀರಿಗ ನಿವಾಸಿ ಲೀಲಾವತಿ ಯಾನೆ ಲಿಖಿತಾ (19) ನಾಪತ್ತೆಯಾದ ಯುವತಿ. ಈಕೆ ಕೌಕ್ರಾಡಿ ಗ್ರಾಮದ ಕೊಕ್ಕಡದ ತುಕ್ರಪ್ಪ ಶೆಟ್ಟಿ ಎಂಬವರ ಮನೆಯಲ್ಲಿ ಕೂಲಿ ಕೆಲಸಕ್ಕಿದ್ದು, ಅಲ್ಲಿಂದ ಜನವರಿ 15 ರಂದು ಮಧ್ಯಾಹ್ನ ನಾಪತ್ತೆಯಾಗಿದ್ದಾಳೆ. ಈಕೆಗಾಗಿ ಈಕೆಯ ಮನೆಯವರು ತಮ್ಮ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು, ಆದರೂ ಈಕೆಯ ಪತ್ತೆಯಾಗಿಲ್ಲ. ಈ ಬಗ್ಗೆಯೂ ತುಕ್ರಪ್ಪ

ಕೊಕ್ಕಡ: ಯುವತಿ ನಾಪತ್ತೆ Read More »

ಕರಾವಳಿ

ಶಿರಾಡಿಘಾಟ್ ರಸ್ತೆ ಅಭಿವೃದ್ದಿ ಕಾಮಗಾರಿ ಹಿನ್ನೆಲೆ ► ಇಂದಿನಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.20. ರಾಷ್ಟ್ರೀಯ ಹೆದ್ದಾರಿ-48 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟಿ ಭಾಗದ ಸರಪಳಿ ಕಿ.ಮೀ.250.620 (ಕೆಂಪುಹೊಳೆ ಗೆಸ್ಟ್ ಹೌಸ್) ನಿಂದ 263.00 (ಅಡ್ಡಹೊಳೆ) ರವರೆಗಿನ ರಸ್ತೆ ಅಭಿವೃದ್ದಿಪಡಿಸುವ ಹಿನ್ನೆಲೆಯಲ್ಲಿ ಈಗ ಉದ್ದೇಶಿಸಲಾಗಿರುವ ರಸ್ತೆ ಕಾಮಗಾರಿಯನ್ನು ನಿರ್ವಹಿಸಲು ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ ಕಿ.ಮೀ. 238.950 (ಮಾರನಹಳ್ಳಿ ಪೋಲೀಸ್ ಔಟ್ ಪೋಸ್ಟ್ ಕಾಡುಮನೆ ಎಸ್ಟೇಟ್ ರೋಡ್ ಜಂಕ್ಷನ್) ರಿಂದ ಪುತ್ತೂರು ತಾಲೂಕಿನ ಗುಂಡ್ಯ ಹೆದ್ದಾರಿ  ಕಿ.ಮೀ.  261.500ವರೆಗೆ ಶಿರಾಡಿಘಾಟ್‍ನ ರಸ್ತೆಯಲ್ಲಿ ಇಂದು ಜನವರಿ 20

ಶಿರಾಡಿಘಾಟ್ ರಸ್ತೆ ಅಭಿವೃದ್ದಿ ಕಾಮಗಾರಿ ಹಿನ್ನೆಲೆ ► ಇಂದಿನಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತ Read More »

ಕರ್ನಾಟಕ

ಬಿಳಿನೆಲೆ: ವಿಷ ಸೇವಿಸಿದ್ದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜ.20. ಕೃಷಿಗೆಂದು ತಂದಿರಿಸಲಾಗಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಳಿನೆಲೆ ನಿವಾಸಿ ಶುಕ್ರವಾರದಂದು ಮೃತಪಟ್ಟಿದ್ದಾರೆ. ಮೃತರನ್ನು ಬಿಳಿನೆಲೆ ಬೈಲು ನಿವಾಸಿ ಪುಟ್ಟಣ್ಣ ಗೌಡ (65) ಎಂದು ಗುರುತಿಸಲಾಗಿದೆ. ಇವರು ಜನವರಿ 05 ರಂದು ತನ್ನ ಮನೆಯಲ್ಲಿ ಕೃಷಿಗೆಂದು ತಂದಿರಿಸಲಾಗಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ,‌ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರದಂದು ಮೃತಪಟ್ಟಿದ್ದಾರೆ.

ಬಿಳಿನೆಲೆ: ವಿಷ ಸೇವಿಸಿದ್ದ ವ್ಯಕ್ತಿ ಮೃತ್ಯು Read More »

ಕರಾವಳಿ

ಮಿತ್ತಮಜಲು: ನಕ್ಸಲರ ಆಗಮನದ ಹಿನ್ನೆಲೆ ► ನಕ್ಸಲ್ ನಿಗ್ರಹ ದಳದ ಕೂಂಬಿಂಗ್ ಸ್ಥಗಿತ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.20. ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಕೂಂಬಿಂಗನ್ನು ಶುಕ್ರವಾರದಂದು ಅಂತ್ಯಗೊಂಡಿತು. ಜ.14 ರಂದು ಮಿತ್ತಮಜಲಿನ ಮೋಹನ, ಲೀಲಾ ಹಾಗೂ ಸುರೇಶ ಎಂಬವರ ಮನೆಗೆ ನಕ್ಸಲರು ಬಂದು ಅಕ್ಕಿ, ಪಡಿತರ ಸಾಮಾಗ್ರಿ ಪಡೆದುಕೊಂಡು ಹೋಗಿದ್ದರು. ಈ ಬಗ್ಗೆ ಪೊಲೀಸರಿಗೆ ಸೋಮವಾರ ರಾತ್ರಿ ಮಾಹಿತಿ ದೊರೆತು, ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆಯನ್ನು ಕರೆಸಿ, ಜ.16 ಮಧ್ಯಾಹ್ನದಿಂದ ಶಿಶಿಲ, ಶಿರಾಡಿ ರಕ್ಷಿತಾರಣ್ಯದಲ್ಲಿ ಕೂಂಬಿಂಗ್ ಆರಂಭಿಸಲಾಗಿತ್ತು. ಹೆಬ್ರಿ ಎಎನ್ಎಫ್ 

ಮಿತ್ತಮಜಲು: ನಕ್ಸಲರ ಆಗಮನದ ಹಿನ್ನೆಲೆ ► ನಕ್ಸಲ್ ನಿಗ್ರಹ ದಳದ ಕೂಂಬಿಂಗ್ ಸ್ಥಗಿತ Read More »

ಕರಾವಳಿ

ಅಡ್ಡಹೊಳೆ: ನಿಲ್ಲಿಸಿದ್ದ ಜೀಪಿಗೆ ಲಾರಿ ಢಿಕ್ಕಿ ► ಪ್ರಯಾಣಿಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.20. ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಜೀಪಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಗಾಯಗೊಂಡ ಘಟನೆ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಶುಕ್ರವಾರದಂದು ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕನನ್ನು ಕುಕ್ಕೇ ಸುಬ್ರಹ್ಮಣ್ಯ ನಿವಾಸಿ ವೇಣುಗೋಪಾಲ್ ಎಂದು ಗುರುತಿಸಲಾಗಿದೆ. ಇವರು ಮೈಸೂರಿನ ನವೀನ್ ಎಂಬವರೊಂದಿಗೆ ಜೀಪಿನಲ್ಲಿ ಶಿರಾಡಿಯಿಂದ ಗುಂಡ್ಯಕ್ಕೆ ಹೋಗುತ್ತಿದ್ದ ಸಂದರ್ಭ ಅಡ್ಡಹೊಳೆಯಲ್ಲಿ ನವೀನ್ ಅವರು ಜೀಪು ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಆಗ ಹಿಂಬದಿಯಿಂದ ಬಂದ ಲಾರಿ ಇವರ ಜೀಪಿಗೆ ಡಿಕ್ಕಿ ಹೊಡೆದಿದೆ.

ಅಡ್ಡಹೊಳೆ: ನಿಲ್ಲಿಸಿದ್ದ ಜೀಪಿಗೆ ಲಾರಿ ಢಿಕ್ಕಿ ► ಪ್ರಯಾಣಿಕನಿಗೆ ಗಾಯ Read More »

ಕರಾವಳಿ

ಕಡಬ ತಾಲೂಕಾಗಿ ಅಂತಿಮ ಅಧಿಸೂಚನೆ ► ಕಡಬ ತಹಶೀಲ್ದಾರ್ ಕಛೇರಿಗೆ ಬಂತು ಆದೇಶ ಪತ್ರ

(ನ್ಯೂಸ್ ಕಡಬ) newskadaba.com ಕಡಬ, ಜ.19. ಜನರ ಬಹುಕಾಲದ ಬೇಡಿಕೆಯಾದ ಕಡಬ ತಾಲೂಕು ಅನುಷ್ಠಾನಕ್ಕೆ  ಕೊನೆಗೂ ಅಧಿಕೃತ ಆದೇಶ ಹೊರಬಿದ್ದಿದ್ದು, ಕಡಬ ತಹಶೀಲ್ದಾರರವರಿಗೆ ಕರ್ನಾಟಕ ರಾಜ್ಯ ಪತ್ರದಲ್ಲಿ ಜನವರಿ 12 ರಿಂದ ಅನ್ವಯವಾಗುವಂತೆ ಹೊರಡಿಸಲಾದ ಆದೇಶ ಪತ್ರದಲ್ಲಿ ಕಡಬವನ್ನು ಅಧಿಕೃತ ತಾಲೂಕೆಂದು  ಘೋಷಿಸಲಾಗಿದೆ. ಕಡಬ ತಾಲೂಕಿಗೆ 42 ಗ್ರಾಮಗಳ್ನು ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಡಬವು ಪೂರ್ಣಪ್ರಮಾಣದ ತಾಲೂಕಾಗಿ ಕಾರ್ಯಾರಂಭ ಮಾಡಲಿದೆ. ಈ ಹಿಂದೆ ಪ್ರಸ್ತಾವನೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಗ್ರಾಮಗಳನ್ನು ಕೈಬಿಟ್ಟು  ಪುತ್ತೂರು ತಾಲೂಕಿನ 35

ಕಡಬ ತಾಲೂಕಾಗಿ ಅಂತಿಮ ಅಧಿಸೂಚನೆ ► ಕಡಬ ತಹಶೀಲ್ದಾರ್ ಕಛೇರಿಗೆ ಬಂತು ಆದೇಶ ಪತ್ರ Read More »

ಕರಾವಳಿ
Scroll to Top