ನಾಳೆ (ಫೆ.27) ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ದಶಮಾನೋತ್ಸವ ಸಂಭ್ರಮ

(ನ್ಯೂಸ್ ಕಡಬ) newskadaba.com ಕಡಬ, ಫೆ.26. ಮರ್ಧಾಳ ಜೀವನ್ ಜ್ಯೋತಿ ವಿಶೇಷ ಶಾಲೆಯ ವಾರ್ಷಿಕೋತ್ಸವ ಮತ್ತು ದಶಮಾನೋತ್ಸವ ಸಂಭ್ರಮವು ಫೆ.27 ಮಂಗಳವಾರದಂದು ನಡೆಯಲಿದೆ. ಕುಕ್ಕೇ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಬೆಥನಿ ಸಮೂಹ ಸಂಸ್ಥೆಗಳ ಪ್ರೊವಿನ್ಸಿಯನ್ ಸುಪೀರಿಯರ್ ರೆ|ಫಾ| ವಿಲಿಯಂ ನೆಡುಂಪುರತ್ ಒಐಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮೂಡಬಿದ್ರೆ ವಕೀಲರ ಸಂಘದ ಉಪಾಧ್ಯಕ್ಷ ನ್ಯಾಯವಾದಿ ನಾಗೇಶ್ ಶೆಟ್ಟಿ, […]

ನಾಳೆ (ಫೆ.27) ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ದಶಮಾನೋತ್ಸವ ಸಂಭ್ರಮ Read More »

ಕರಾವಳಿ

ಕಾಂಗ್ರೆಸ್, ಬಿಜೆಪಿ ಪಕ್ಷಗಳು ನಾಟಕವಾಡುತ್ತಿವೆ: ಮುತಾಲಿಕ್ ► ಮುಂಬರುವ ಚುನಾವಣೆಯಲ್ಲಿ ಶ್ರೀರಾಮಸೇನೆಯು ಶಿವಸೇನೆಯ ಜೊತೆಗೂಡಿ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.26. ಚುನಾವಣೆ ಬರುವಾಗ ಹಿಂದುತ್ವದ ಆಧಾರದಲ್ಲಿ ಮತಯಾಚಿಸುತ್ತಾರೆ. ಅಧಿಕಾರದಲ್ಲಿದ್ದಾಗ ಗೋ ಹತ್ಯೆ ನಿಷೇಧ ಮಾಡಿಲ್ಲ. ಇವರದ್ದು ಯಾವ ರೀತಿಯ ಹಿಂದುತ್ವ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ದರ್ಗಾ ಮಸೀದಿಗೆ ಹೋದರೆ ಸಾಕಾಗುವುದಿಲ್ಲ. ದೇವಾಲಯಗಳಿಗೂ ಹೋಗಬೇಕು ಎನ್ನುವುದು ಕಾಂಗ್ರೆಸ್‌ಗೆ ಈಗ ಗೊತ್ತಾಗಿದ್ದು, ಅವರ ಈ ನಾಟಕ ನಡೆಯಲ್ಲ ಎಂದು ಕಾಂಗ್ರೆಸ್ ಪಕ್ಷವನ್ನೂ ಜರೆದಿದ್ದಾರೆ. ಗೌರಿ ಹತ್ಯೆಯ ಆರೋಪಿಗಳೆಂದು ಅಮಾಯಕರನ್ನು ಬಂಧಿಸಿ

ಕಾಂಗ್ರೆಸ್, ಬಿಜೆಪಿ ಪಕ್ಷಗಳು ನಾಟಕವಾಡುತ್ತಿವೆ: ಮುತಾಲಿಕ್ ► ಮುಂಬರುವ ಚುನಾವಣೆಯಲ್ಲಿ ಶ್ರೀರಾಮಸೇನೆಯು ಶಿವಸೇನೆಯ ಜೊತೆಗೂಡಿ ಸ್ಪರ್ಧೆ Read More »

ಕರ್ನಾಟಕ

ಪುರಾತನ ಕಾಲದ ಜೈನ ತೀರ್ಥಂಕರರ ವಿಗ್ರಹ ಮಾರಾಟಕ್ಮೆ ಯತ್ನ ► ಐವರ ಬಂಧನ, ಲಕ್ಷಾಂತರ ಮೌಲ್ಯದ ಸ್ವತ್ತು ವಶ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.26. ಪ್ರಾಚೀನ ಕಾಲದ ಜೈನ ತೀರ್ಥಂಕರರ ಕಂಚಿನ ವಿಗ್ರಹಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಐವರನ್ನು ಬಂಧಿಸಿರುವ ಕುಂದಾಪುರ ಪಿಎಸ್ಐ ಹರೀಶ್ ಮತ್ತು ಸಿಬ್ಬಂದಿಗಳು ಜೈನ ತೀರ್ಥಂಕರರ ಐದು ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮಂಗಳೂರಿನ‌ ಪಡೀಲ್‌ ನಿವಾಸಿ ನೆವೀಲ್ ವಿಲ್ಲಿ ಮಸ್ಕರೇನಸ್, ಶಿವಮೊಗ್ಗ ತಾಳಗುಪ್ಪದ ಅನಿಲ್ ಪುಟಾರ್ಡೋ, ಮಂಗಳೂರಿನ ಕುಲ ಶೇಖರದ ಅಸ್ಟೀನ್ ಸಿಕ್ವೇರಾ, ಕುಂದಾಪುರದ ಜಾನ್ ಮತ್ತು‌ ಅನಿಲಾ ಎಂದು ಗುರುತಿಸಲಾಗಿದೆ. ಕೋಟೇಶ್ವರ ದೇವಸ್ಥಾನ ಬಳಿ ತೀರ್ಥಂಕರರ ಕಂಚಿನ ವಿಗ್ರಹಗಳನ್ನು ಮಾರಾಟಕ್ಕೆ

ಪುರಾತನ ಕಾಲದ ಜೈನ ತೀರ್ಥಂಕರರ ವಿಗ್ರಹ ಮಾರಾಟಕ್ಮೆ ಯತ್ನ ► ಐವರ ಬಂಧನ, ಲಕ್ಷಾಂತರ ಮೌಲ್ಯದ ಸ್ವತ್ತು ವಶ Read More »

ಕರಾವಳಿ

►► ಸಂಪಾದಕೀಯ ► ಭಗವಂತನು ಮನುಷ್ಯನಿಗೆ ಹಸಿವು ನೀಡಿರುವುದು ತಪ್ಪೇ…? ► ಅಲ್ಲ ಆತ ಬಡವನಾಗಿ ಹುಟ್ಟಿದ್ದು ತಪ್ಪೇ…?

(ನ್ಯೂಸ್ ಕಡಬ) newskadaba.com ಸಂಪಾದಕೀಯ, ಫೆ.26. ಭಗವಂತನು ಮನುಷ್ಯನಿಗೆ ಹಸಿವು ನೀಡಿರುವುದು ತಪ್ಪೇ…? ಅಲ್ಲ ಆತ ಬಡವನಾಗಿ ಹುಟ್ಟಿದ್ದು ತಪ್ಪೇ…? ಅಲ್ಲ ಆತ ಆದಿವಾಸಿಯಾಗಿ ಹುಟ್ಟಿದ್ದು ತಪ್ಪೇ…? ಅಲ್ಲ ಆತ ಕರಿಯವನಾಗಿ ಹುಟ್ಟಿದ್ದು ತಪ್ಪೇ.‌‌..? ಹೀಗೆಂದು ನಾವು ಅವಲೋಕಿಸುವ ಕಾಲ ಸನ್ನಿಹಿತವಾಗಿದೆ. ವಿದ್ಯಾವಂತರ ರಾಜ್ಯವಾದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಎಂಬಲ್ಲಿ ಫೆಬ್ರವರಿ 22 ರಂದು 30 ರ ಹರೆಯದ ಅದಿವಾಸಿ ಯುವಕನೋರ್ವನನ್ನು ಹಸಿವು ಸಹಿಸಲು ಸಾಧ್ಯವಾಗದೇ ‘ತುತ್ತು ಅನ್ನ ಕದ್ದ’ ಕಾರಣಕ್ಕಾಗಿ ಅಲ್ಲಿನ ವಿಘ್ನ ಸಂತೋಷಿಗಳು

►► ಸಂಪಾದಕೀಯ ► ಭಗವಂತನು ಮನುಷ್ಯನಿಗೆ ಹಸಿವು ನೀಡಿರುವುದು ತಪ್ಪೇ…? ► ಅಲ್ಲ ಆತ ಬಡವನಾಗಿ ಹುಟ್ಟಿದ್ದು ತಪ್ಪೇ…? Read More »

ಕರಾವಳಿ

ರೇಷನ್ ಕಾರ್ಡ್ ಇಲ್ಲದವರಿಗೆ ಸಂತಸದ ಸುದ್ದಿ ► ಫೆಬ್ರವರಿ 26 ರಂದು ಕಡಬದಲ್ಲಿ ‘ಸ್ಥಳದಲ್ಲೇ ಅರ್ಜಿ ಸಲ್ಲಿಸಿ – ರೇಷನ್ ಕಾರ್ಡ್ ವಿತರಣೆ’

(ನ್ಯೂಸ್ ಕಡಬ) newskadaba.com ಕಡಬ, ಫೆ.25. ತಾಲೂಕಿನಲ್ಲಿ ರೇಷನ್ ಕಾರ್ಡ್ ಮಾಡಿಸದೆ ಬಾಕಿ ಇರುವವರು, ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ದೊರೆಯದೇ ಇರುವವರಿಗೆ ಸಂತಸದ ಸುದ್ದಿ. ಫೆಬ್ರವರಿ 26 ಸೋಮವಾರದಂದು ನೂತನ ಕಡಬ ತಾಲೂಕಿನ ಪ್ರಸ್ತಾವಿತ 43 ಗ್ರಾಮಗಳ ಸಾರ್ವಜನಿಕರಿಗೆ ‘ಸ್ಥಳದಲ್ಲೇ ರೇಷನ್ ಕಾರ್ಡ್ ವಿತರಣಾ’ ಕಾರ್ಯಕ್ರಮ ನಡೆಯಲಿದೆ.ಎಸ್ ಸೋಮವಾರ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 04 ಗಂಟೆಯವರೆಗೆ ಕಡಬ ಗ್ರಾಮ ಪಂಚಾಯತ್ ಬಳಿಯಲ್ಲಿ ರೇಷನ್ ಕಾರ್ಡ್ ವಿತರಣಾ ಕಾರ್ಯಕ್ರಮ‌ ನಡೆಯಲಿದ್ದು, ಸಾರ್ವಜನಿಕರು ಇದರ

ರೇಷನ್ ಕಾರ್ಡ್ ಇಲ್ಲದವರಿಗೆ ಸಂತಸದ ಸುದ್ದಿ ► ಫೆಬ್ರವರಿ 26 ರಂದು ಕಡಬದಲ್ಲಿ ‘ಸ್ಥಳದಲ್ಲೇ ಅರ್ಜಿ ಸಲ್ಲಿಸಿ – ರೇಷನ್ ಕಾರ್ಡ್ ವಿತರಣೆ’ Read More »

ಕರಾವಳಿ

ಬಲ್ಯ: ಬೈಕಿಗೆ ಲಾರಿ ಢಿಕ್ಕಿ ► ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಫೆ.25. ಬೈಕ್‌ ಹಾಗೂ ಲಾರಿ‌ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ ಸವಾರನ ಕಾಲಿಗೆ ಗಾಯವಾದ ಘಟನೆ ಶನಿವಾರದಂದು ಕಡಬ ಠಾಣಾ ವ್ಯಾಪ್ತಿಯ ಬಲ್ಯ ಸಮೀಪದ ಪನ್ಯಾಡಿ‌ ಕ್ರಾಸ್ ನಲ್ಲಿ ನಡೆದಿದ್ದು, ಭಾನುವಾರದಂದು ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಬೈಕ್ ಸವಾರ ನೆಲ್ಯಾಡಿ ಗ್ರಾಮದ ಬರೆಮೇಲು ಬೊನ್ಯಸಾಗು ನಿವಾಸಿ ಬಾಲಕೃಷ್ಣ (42) ಎಂಬವರ ಕಾಲಿಗೆ ಬಲವಾದ ಗಾಯಗಳಾಗಿದ್ದು, ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಾಲಕೃಷ್ಣರವರು ನೀಡಿದ ದೂರಿನಂತೆ ಲಾರಿ ಚಾಲಕನ ವಿರುದ್ಧ

ಬಲ್ಯ: ಬೈಕಿಗೆ ಲಾರಿ ಢಿಕ್ಕಿ ► ಬೈಕ್ ಸವಾರನಿಗೆ ಗಾಯ Read More »

ಕರಾವಳಿ

ಬದುಕಿನೊಂದಿಗೆ ಬಡಿದಾಡಿದ ಹಳ್ಳಿಮನೆ ರೊಟ್ಟೀಸ್ ನ ಶಿಲ್ಪಾ ಇದೀಗ ಮಹೀಂದ್ರಾ ಸಂಸ್ಥೆಯ ‘ಮಹಿಳಾ ಸಾಧಕಿ’ ► ಹಳ್ಳಿಮನೆ ರೊಟ್ಟಿಯ ಆಹಾರ ಸವಿಯಲು ಮಂಗಳೂರಿಗೆ ಬರಲಿದ್ದಾರೆ ಕಂಪೆನಿಯ ಸಿಇಒ ಆನಂದ್ ಮಹೀಂದ್ರಾ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.25. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ಕೊಡಮಾಡುವ ಪ್ರಸಕ್ತ ಸಾಲಿನ ಮಹಿಳಾ ಸಾಧಕಿ ಪುರಸ್ಕಾರಕ್ಕೆ ಮಂಗಳೂರಿನ ಹಳ್ಳಿ ಮನೆ ರೊಟ್ಟೀಸ್ ಮಾಲಕಿ ಶಿಲ್ಪಾ ಅವರು ಆಯ್ಕೆಯಾಗಿದ್ದಾರೆ. ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 16 ಮಹಿಳೆಯರ ಪೈಕಿ ಕರಾವಳಿಯ ಹಳ್ಳಿ ಮನೆ ರೊಟ್ಟೀಸ್ ನ ಶಿಲ್ಪಾ ಓರ್ವರಾಗಿದ್ದಾರೆ. ಮಾರ್ಚ್ 7 ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ‌ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಶಿಲ್ಪಾ ಅವರಿಗೆ ದೆಹಲಿ ಪ್ರಯಾಣದ ವಿಮಾನ ಟಿಕೆಟ್ ಹಾಗೂ ವಸತಿ ವ್ಯವಸ್ಥೆಯನ್ನು

ಬದುಕಿನೊಂದಿಗೆ ಬಡಿದಾಡಿದ ಹಳ್ಳಿಮನೆ ರೊಟ್ಟೀಸ್ ನ ಶಿಲ್ಪಾ ಇದೀಗ ಮಹೀಂದ್ರಾ ಸಂಸ್ಥೆಯ ‘ಮಹಿಳಾ ಸಾಧಕಿ’ ► ಹಳ್ಳಿಮನೆ ರೊಟ್ಟಿಯ ಆಹಾರ ಸವಿಯಲು ಮಂಗಳೂರಿಗೆ ಬರಲಿದ್ದಾರೆ ಕಂಪೆನಿಯ ಸಿಇಒ ಆನಂದ್ ಮಹೀಂದ್ರಾ Read More »

ಕರಾವಳಿ

ಪಾಲಕ್ಕಾಡ್: ತುತ್ತು ಅನ್ನ ಕದ್ದ ಆರೋಪದಲ್ಲಿ ಆದಿವಾಸಿ ಯುವಕನ ಹೊಡೆದು ಸಾಯಿಸಿದ ಸ್ಥಳೀಯರು ► ಘಟನೆಯ ಸಮಗ್ರ ವರದಿ ಕೇಳಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com ಪಾಲಕ್ಕಾಡ್‌, ಫೆ.25. ಕೇವಲ ಒಂದು ಕೆಜಿ ಅಕ್ಕಿಯನ್ನು ಕದ್ದ ಆರೋಪದಲ್ಲಿ ಆದಿವಾಸಿ ಜನಾಂಗದ ಯುವಕ ಮಧು ಎಂಬಾತನನ್ನು ಸ್ಥಳೀಯರು ಹೊಡೆದು ಸಾಯಿಸಿದ ಘಟನೆಗೆ ಸಂಬಂಧಪಟ್ಟಂತೆ ಸಮಗ್ರ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರವು ಕೇರಳ ಸರಕಾರಕ್ಕೆ ಸೂಚನೆ ನೀಡಿದೆ. 30 ವರ್ಷ ಪ್ರಾಯದ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಆದಿವಾಸಿ ಯುವಕ ಮಧು ಎಂಬಾತನನ್ನು ಪಾಲಕ್ಕಡ್‌ ಸಮೀಪದ ಅಗಳಿ ಎಂಬಲ್ಲಿ ಫೆಬ್ರವರಿ 22 ರಂದು ಅಕ್ಕಿ ಕದ್ದ ಆರೋಪದಲ್ಲಿ ಸ್ಥಳೀಯರು ಹೊಡೆದು ಸಾಯಿಸಿದ್ದರು. ಅಲ್ಲದೆ ವಿಕೃತ ಮೆರೆದಿದ್ದ

ಪಾಲಕ್ಕಾಡ್: ತುತ್ತು ಅನ್ನ ಕದ್ದ ಆರೋಪದಲ್ಲಿ ಆದಿವಾಸಿ ಯುವಕನ ಹೊಡೆದು ಸಾಯಿಸಿದ ಸ್ಥಳೀಯರು ► ಘಟನೆಯ ಸಮಗ್ರ ವರದಿ ಕೇಳಿದ ಕೇಂದ್ರ ಸರಕಾರ Read More »

ರಾಷ್ಟ್ರೀಯ ನ್ಯೂಸ್

ಕಳೆದ 30 ವರ್ಷಗಳಿಂದ ‘ಡಾಮರೀಕರಣ ಭಾಗ್ಯ’ ಕಾಣದ ಮರ್ಧಾಳ – ಕೆರ್ಮಾಯಿ ಸಂಪರ್ಕ ರಸ್ತೆ ► ಚುನಾವಣೆ ಬಹಿಷ್ಕಾರದತ್ತ ಊರವರ ಚಿತ್ತ

(ನ್ಯೂಸ್ ಕಡಬ) newskadaba.com ಕಡಬ, ಫೆ.25. ಇಲ್ಲಿನ ಮರ್ಧಾಳದಿಂದ ಬಜಕೆರೆಯ ಮೂಲಕ ಕೋಡಿಂಬಾಳವನ್ನು ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಂಟ್ರ, 102 ನೆಕ್ಕಿಲಾಡಿ ಮತ್ತು ಐತ್ತೂರು ಸೇರಿದಂತೆ 3 ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದಾರೆ. ಸುಮಾರು 1000 ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕವಿರುವ ಈ ರಸ್ತೆಯ ಮೂಲಕವೇ ಬಜಕೆರೆ ರೈಲ್ವೇ ಸ್ಟೇಷನ್, ಕೆರ್ಮಾಯಿ ಸರಕಾರಿ ಪ್ರಾಥಮಿಕ ಶಾಲೆ, ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ

ಕಳೆದ 30 ವರ್ಷಗಳಿಂದ ‘ಡಾಮರೀಕರಣ ಭಾಗ್ಯ’ ಕಾಣದ ಮರ್ಧಾಳ – ಕೆರ್ಮಾಯಿ ಸಂಪರ್ಕ ರಸ್ತೆ ► ಚುನಾವಣೆ ಬಹಿಷ್ಕಾರದತ್ತ ಊರವರ ಚಿತ್ತ Read More »

ಕರಾವಳಿ

ಗೋಳಿತ್ತಡಿ: ಸ್ಕೂಟರ್ ಗೆ ಕಾರು‌ ಢಿಕ್ಕಿ ► ಸ್ಕೂಟರ್ ಸವಾರೆ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಫೆ.25. ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರೆ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಡಿ ಎಂಬಲ್ಲಿ ಭಾನುವಾರದಂದು ನಡೆದಿದೆ. ಗಾಯಾಳುವನ್ನು ಸ್ಕೂಟರ್ ಸವಾರೆ ಮಂಗಳೂರಿನ ಚಾನೆಲೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಯಿಲ ಗ್ರಾಮದ ಕೊಲ್ಯ ನಿವಾಸಿ ಸೌಮ್ಯ ಎಂದು ಗುರುತಿಸಲಾಗಿದೆ. ಈಕೆ ತನ್ನ ಸ್ಕೂಟಿಯಲ್ಲಿ ಮುಖ್ಯ ರಸ್ತೆಗೆ ಬರುತ್ತಿದ್ದಾಗ ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರು ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ

ಗೋಳಿತ್ತಡಿ: ಸ್ಕೂಟರ್ ಗೆ ಕಾರು‌ ಢಿಕ್ಕಿ ► ಸ್ಕೂಟರ್ ಸವಾರೆ ಗಂಭೀರ Read More »

ಕರಾವಳಿ
Scroll to Top