ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾದ ಬಂಟ್ಸ್ ಹಾಸ್ಟೆಲ್ ರಸ್ತೆ ► ಅಪಾಯಕಾರಿ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿದ ‘ಪಬ್ಲಿಕ್ ಹೀರೋ’ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.25. ನಗರದ ಬಂಟ್ಸ್‌ ಹಾಸ್ಟೆಲ್‌ ವೃತ್ತದ ಬಳಿ ಕಾಂಕ್ರೀಟ್‌ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿದ ಟ್ರಾಫಿಕ್‌ ಪೊಲೀಸ್‌ ರೇವಣ ಸಿದ್ದಪ್ಪರವರಿಗೆ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರದಂದು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಅವರು ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಅತೀ ಹೆಚ್ಚು ವಾಹನದ ಓಡಾಟದಿಂದಾಗಿ ಬಂಟ್ಸ್‌ ಹಾಸ್ಟೆಲ್‌ ಸರ್ಕಲ್‌ನಿಂದ ಮಲ್ಲಿಕಟ್ಟೆ ಕಡೆಗೆ ತೆರಳುವ ಕಾಂಕ್ರೀಟ್‌ ರಸ್ತೆಯಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಪಟ್ಟಿ ಸವೆದ ಪರಿಣಾಮ ಕಳೆದ ಕೆಲವು ದಿನಗಳ ಹಿಂದೆ ಮೇಲೆ ಬಂದಿತ್ತು. ಇದನ್ನು ಸಾರ್ವಜನಿಕರು […]

ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾದ ಬಂಟ್ಸ್ ಹಾಸ್ಟೆಲ್ ರಸ್ತೆ ► ಅಪಾಯಕಾರಿ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿದ ‘ಪಬ್ಲಿಕ್ ಹೀರೋ’ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ Read More »

ಕರಾವಳಿ

ಕಾಲ್ ಬಂದ್ರೆ ಹೇಳುತ್ತೆ, ರೈಡಿಂಗಲ್ಲಿದ್ದರೆ ಮೆಸೇಜ್ ಕಳುಹಿಸುತ್ತೆ ► ಬಂದಿದೆ ಸ್ಮಾರ್ಟ್ ಸ್ಕೂಟರ್ ‘ಟಿವಿಎಸ್ ಎನ್‌ಟಾರ್ಕ್ 125’

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಫೆ.25. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸುಧಾರಿತ ತಂತ್ರಜ್ಞಾನ, ಪವರ್ ಫುಲ್ 125 ಸಿಸಿ ಎಂಜಿನ್ ಹೊಂದಿರುವ ಸ್ಪೋರ್ಟಿ ಲುಕ್ ನಲ್ಲಿರುವ ಹೊಸ ಸ್ಕೂಟರೊಂದನ್ನು ಟಿವಿಎಸ್ ಕಂಪೆನಿಯು ಬಿಡುಗಡೆಗೊಳಿಸಿದೆ.   ಆಕ್ರಮಣಕಾರಿ ಕ್ರೀಡಾ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿರುವ ಹೊಸ ‘ಟಿವಿಎಸ್ ಎನ್‌ಟಾರ್ಕ್ 125’ ಸ್ಕೂಟರ್‌ ಅಭಿವೃದ್ಧಿಯಲ್ಲಿ ರೇಸ್ ಟ್ರ್ಯಾಕ್‌ ಕೌಶಲ್ಯಗಳನ್ನು ಬಳಕೆ ಮಾಡಿರುವುದರಿಂದ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಮತ್ತಷ್ಟು ಪೈಪೋಟಿಗೆ ವೇದಿಕೆ ಸೃಷ್ಟಿಸಿದೆ. ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್

ಕಾಲ್ ಬಂದ್ರೆ ಹೇಳುತ್ತೆ, ರೈಡಿಂಗಲ್ಲಿದ್ದರೆ ಮೆಸೇಜ್ ಕಳುಹಿಸುತ್ತೆ ► ಬಂದಿದೆ ಸ್ಮಾರ್ಟ್ ಸ್ಕೂಟರ್ ‘ಟಿವಿಎಸ್ ಎನ್‌ಟಾರ್ಕ್ 125’ Read More »

ತಂತ್ರಜ್ಞಾನ

‘ರೀಚಾರ್ಜ್ ಮಾಡಿ – ವಿದ್ಯುತ್ ಬಳಸಿ’ ► ಬುದ್ಧಿವಂತರ ಜಿಲ್ಲೆ ಮಂಗಳೂರಿಗೆ ಬರುತ್ತಿದೆ ಹೊಸ ‘ಪ್ರಿ-ಪೇಯ್ಡ್’ ಕರೆಂಟ್ ಯೋಜನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.25. ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಬುದ್ಧಿವಂತರ ಜಿಲ್ಲೆ ಮಂಗಳೂರಿನಲ್ಲಿ ಹೊಸದೊಂದು ಸ್ಮಾರ್ಟ್ ಯೋಜನೆಯನ್ನು ಜಾರಿಗೆ ತರಲು ಮೆಸ್ಕಾಂ ಇಲಾಖೆ ಸಿದ್ಧವಾಗಿದೆ. ಮೊಬೈಲ್, ಡಿಟಿಎಚ್ ಸೇವೆಗಳಿಗೆ ರಿಚಾರ್ಜ್ ಮಾಡಿದಂತೆ ಇನ್ಮುಂದೆ ವಿದ್ಯುತ್ ಪಡೆಯಬೇಕಾದಲ್ಲಿ ಮೊದಲೇ ಪ್ರಿಪೈಡ್ ಮಾಡಿ ನಂತರ ವಿದ್ಯುತ್ ಬಳಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಹಕರು ಬಿಲ್ ಕಟ್ಟದೇ ಇರುವಂತಹ ಕಿರಿಕಿರಿಯನ್ನು ತಪ್ಪಿಸಲು ಮೆಸ್ಕಾಂ ಇಲಾಖೆಯು ಹೊಸದೊಂದು ಯೋಜನೆಯನ್ನು ಪರಿಚಯಿಸುತ್ತಿದ್ದು, ಪ್ರಾಯೋಗಿಕವಾಗಿ ಮಂಗಳೂರಿನಲ್ಲಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ನಾವು ರೀಚಾರ್ಜ್ ಮಾಡಿಕೊಂಡ

‘ರೀಚಾರ್ಜ್ ಮಾಡಿ – ವಿದ್ಯುತ್ ಬಳಸಿ’ ► ಬುದ್ಧಿವಂತರ ಜಿಲ್ಲೆ ಮಂಗಳೂರಿಗೆ ಬರುತ್ತಿದೆ ಹೊಸ ‘ಪ್ರಿ-ಪೇಯ್ಡ್’ ಕರೆಂಟ್ ಯೋಜನೆ Read More »

ಕರಾವಳಿ

ಅಪ್ರತಿಮ ಸುಂದರಿ, ಬಹುಭಾಷಾ ಹಿರಿಯ ನಟಿ ಶ್ರೀದೇವಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.25. ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಬಹುಭಾಷಾ ತಾರೆ, ಭಾರತೀಯ ಚಿತ್ರರಂಗದ ಹಿರಿಯ ನಟಿ ಶ್ರೀದೇವಿ (54) ಶನಿವಾರ ತಡರಾತ್ರಿ ಹೃದಯಾಘಾತದಿಂದಾಗಿ ವಿಧಿವಶರಾದರು. ತನ್ನ ಕುಟಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಅವರೊಂದಿಗೆ ಶನಿವಾರದಂದು ದುಬೈಗೆ ತೆರಳಿದ್ದ ಶ್ರೀದೇವಿ ತಡರಾತ್ರಿ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟರು. 1963ರಲ್ಲಿ ಜನಿಸಿದ್ದ ಇವರು ಬಾಲ್ಯದಲ್ಲಿಯೇ ಚಿತ್ರರಂಗಕ್ಕೆ ಧುಮುಕಿ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಕನ್ನಡದ

ಅಪ್ರತಿಮ ಸುಂದರಿ, ಬಹುಭಾಷಾ ಹಿರಿಯ ನಟಿ ಶ್ರೀದೇವಿ ಇನ್ನಿಲ್ಲ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಫ್ಲಾಟ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ► ಮಹಿಳಾ ಪಿಂಪ್ ಸೇರಿ ಇಬ್ಬರ ಬಂಧನ, ಯುವತಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.24. ನಗರದ ಫ್ಲ್ಯಾಟೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಗಳನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಯುವತಿಯೋರ್ವಳನ್ನು ರಕ್ಷಿಸಿದ ಘಟನೆ ಶನಿವಾರದಂದು ನಡೆದಿದೆ. ಬಂಧಿತರನ್ನು ಅಡ್ಯಾರ್ ಪದವು ನಿವಾಸಿ ರಿಯಾಸ್ ಅಹಮ್ಮದ್ (35) ಮತ್ತು ಯುವತಿಯರನ್ನು ಫ್ಲಾಟ್ ನಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸುತ್ತಿದ್ದ ಮಹಿಳಾ ಪಿಂಪ್ ಎಂದು ಗುರುತಿಸಲಾಗಿದೆ. ಇವರು ನಗರದ ಕೊಡಿಯಾಲ್ ಬೈಲ್ ನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ

ಮಂಗಳೂರು: ಫ್ಲಾಟ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ► ಮಹಿಳಾ ಪಿಂಪ್ ಸೇರಿ ಇಬ್ಬರ ಬಂಧನ, ಯುವತಿಯ ರಕ್ಷಣೆ Read More »

ಕರಾವಳಿ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾರನ್ನು ‘ಬಂಡಲ್ ಷಾ’ ಎಂದ ಪುತ್ತೂರಿನ ಕಾಲೇಜು ವಿದ್ಯಾರ್ಥಿ ಸಸ್ಪೆಂಡ್ ► ಚರ್ಚೆಗೆ ಗ್ರಾಸವಾದ ಆಡಳಿತ ಮಂಡಳಿಯ ನಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.24. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಬಂಡಲ್ ಷಾ’ ಎಂದು ಟೀಕಿಸಿದ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಒಂದು ವಾರಗಳ ಕಾಲ ಸಸ್ಪೆಂಡ್ ಮಾಡಿದ ಘಟನೆ ಇದೀಗ ವರದಿಯಾಗಿದೆ. ಕಳೆದ ಮಂಗಳವಾರದಂದು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮ ನಡೆದಿತ್ತು. ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯೊಬ್ಬ ಅಮಿತ್ ಷಾ ಅವರನ್ನು ‘ಬಂಡಲ್ ಷಾ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾರನ್ನು ‘ಬಂಡಲ್ ಷಾ’ ಎಂದ ಪುತ್ತೂರಿನ ಕಾಲೇಜು ವಿದ್ಯಾರ್ಥಿ ಸಸ್ಪೆಂಡ್ ► ಚರ್ಚೆಗೆ ಗ್ರಾಸವಾದ ಆಡಳಿತ ಮಂಡಳಿಯ ನಡೆ Read More »

ಕರಾವಳಿ

ಈ ಐದು ಅರ್ಹತೆಗಳಿದ್ದಲ್ಲಿ ನಿಮಗೂ ಸಿಗುತ್ತದೆ ಕಾರು ಭಾಗ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.24. ರಾಜ್ಯದಲ್ಲಿರುವ ನಿರುದ್ಯೋಗಿ ಯುವ ಜನತೆಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 3500 ಮಂದಿಗೆ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಈ ಸಂಬಂಧ ವಿಶೇಷ ಯೋಜನೆ ರೂಪಿಸಿ ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆಯನ್ನು ಆರಂಭಿಸಿದೆ. ಅಭ್ಯರ್ಥಿ ಬಳಿ ಹಳದಿ ಬ್ಯಾಡ್ಜ್ ಇರಬೇಕು. ನಿರುದ್ಯೋಗಿಯಾಗಿರಬೇಕು. ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರಿ ಹೊಂದಿರಬಾರದು. ಬಿಪಿಎಲ್ ಕಾರ್ಡ್

ಈ ಐದು ಅರ್ಹತೆಗಳಿದ್ದಲ್ಲಿ ನಿಮಗೂ ಸಿಗುತ್ತದೆ ಕಾರು ಭಾಗ್ಯ Read More »

ಕರ್ನಾಟಕ

ಆಲಂಕಾರು: ಪಾರ್ಸೆಲ್ ನಲ್ಲಿ ಸ್ಮಾರ್ಟ್ ಫೋನ್ ಬದಲಿಗೆ ಸಿಹಿತಿಂಡಿ ಮತ್ತು ದೇವರ ಮೂರ್ತಿ ಕಳುಹಿಸಿ ವಂಚನೆ ► ಯುವತಿಯ ಮಾತಿಗೆ ಮರುಳಾಗಿ ಮೋಸ ಹೋದ ಕಾಲೇಜು ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಕಂಪೆನಿಯ ಪ್ರಚಾರಾರ್ಥವಾಗಿ ನಡೆದ ಅದೃಷ್ಟ ಶಾಲಿಗಳ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ನಂಬರ್ ಬಹುಮಾನದ ರೂಪದಲ್ಲಿ ಸ್ಮಾರ್ಟ್ ಫೋನನ್ನು ಗೆದ್ದಿದೆ ಎಂದು ಗ್ರಾಹಕರನ್ನು ನಂಬಿಸಿ ಸಿಹಿತಿಂಡಿಯನ್ನು ಕಳುಹಿಸಿದ ಘಟನೆ ಆಲಂಕಾರಿನಲ್ಲಿ ಕಂಡುಬಂದಿದೆ. ಪೆರಾಬೆ ಗ್ರಾಮದ ಮಾಪಲ ನಿವಾಸಿ ಕಾಲೇಜು ಯುವಕನ ಮೊಬೈಲ್ ಗೆ ಒಂದು ವಾರದ ಹಿಂದೆ ಕರೆಯೊಂದು ಬಂದಿದ್ದು, ಬೆಂಗಳೂರಿನ HHM ಮಾರ್ಕೆಟಿಂಗ್ ಕಂಪೆನಿಯ ಪ್ರಚಾರಾರ್ಥವಾಗಿ ನಮ್ಮ ಕಂಪೆನಿಯು ನಡೆಸಿದ ಅದೃಷ್ಟಶಾಲಿಗಳ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಬಹುಮಾನವನ್ನು ಗೆದ್ದುಕೊಂಡಿದೆ.

ಆಲಂಕಾರು: ಪಾರ್ಸೆಲ್ ನಲ್ಲಿ ಸ್ಮಾರ್ಟ್ ಫೋನ್ ಬದಲಿಗೆ ಸಿಹಿತಿಂಡಿ ಮತ್ತು ದೇವರ ಮೂರ್ತಿ ಕಳುಹಿಸಿ ವಂಚನೆ ► ಯುವತಿಯ ಮಾತಿಗೆ ಮರುಳಾಗಿ ಮೋಸ ಹೋದ ಕಾಲೇಜು ವಿದ್ಯಾರ್ಥಿ Read More »

ಕರಾವಳಿ

ಕಡಬ: ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ► ಲಕ್ಷಾಂತರ ರೂ. ಮೌಲ್ಯದ ನಗ, ನಗದು ದೋಚಿ ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯೊಳಗೆ ನುಗ್ಗಿರುವ ಕಳ್ಳರು ಲಕ್ಷಾಂತರ ಮೌಲ್ಯದ ನಗ, ನಗದನ್ನು‌ ದೋಚಿರುವ ಘಟನೆ ಠಾಣಾ ವ್ಯಾಪ್ತಿಯ ಕೇಪು ಎಂಬಲ್ಲಿ ಶುಕ್ರವಾರದಂದು ಬೆಳಕಿಗೆ ಬಂದಿದೆ. ಕುಟ್ರುಪ್ಪಾಡಿ ಗ್ರಾಮದ ಕೇಪು ನಿವಾಸಿ ಹಾರೂನ್ ಸಾಹೇಬ್ ಹಾಗೂ ಅವರ ಮನೆಯವರು ನೀರಿನ ಅಭಾವ ವಿದ್ದುದರಿಂದ ಸುಮಾರು ಹನ್ನೆರಡು ದಿನಗಳಿಂದ ಕೆರ್ಮಾಯಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಕೇಪು ಮನೆಯಲ್ಲಿ ಕಳೆದ ಕೆಲ ದಿನಗಳಿಂದ ಯಾರೂ ಇಲ್ಲದೆ ಇದ್ದುದನ್ನು ಅರಿತ ಕಳ್ಳರು

ಕಡಬ: ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ► ಲಕ್ಷಾಂತರ ರೂ. ಮೌಲ್ಯದ ನಗ, ನಗದು ದೋಚಿ ಪರಾರಿ Read More »

ಕರಾವಳಿ

ಕಡಬದಲ್ಲಿ ಪದೇ ಪದೇ ಕಾಡುತ್ತಿರುವ ವಿದ್ಯುತ್ ಸಮಸ್ಯೆ ► ಫೆಬ್ರವರಿ 28 ರಂದು ಕಡಬ ಬಿಜೆಪಿಯಿಂದ ಕ್ಯಾಂಡಲ್ ಉರಿಸಿ ಮೆಸ್ಕಾಂ ಸಬ್ ಸ್ಟೇಶನ್ ಗೆ ಮುತ್ತಿಗೆ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಪದೇ ಪದೇ ಕಾಡುತ್ತಿರುವ ವಿದ್ಯುತ್ ಸಮಸ್ಯೆಯ ವಿರುದ್ಧ ಫೆಬ್ರವರಿ 28 ರಂದು ಸಂಜೆ 6 ಗಂಟೆಗೆ ಕಡಬ ಮೆಸ್ಕಾಂ ಸಬ್ ಸ್ಟೇಶನ್ ಗೆ ಮುತ್ತಿಗೆ ಹಾಕಲಾಗುವುದು ಎಂದು ಕಡಬ ಬಿಜೆಪಿ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ. ವಿದ್ಯುತ್ ಕಡಿತ ಹಾಗೂ ಲೋ ವೋಲ್ಟೇಜ್ ಸಮಸ್ಯೆಯಿಂದ ಕೃಷಿಕರು, ವಿದ್ಯಾರ್ಥಿಗಳು, ಉದ್ದಿಮೆದಾರರು ಸೇರಿದಂತೆ ವಿದ್ಯುತ್ ಬಳಕೆದಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಆದರೆ ಮೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿರುವ

ಕಡಬದಲ್ಲಿ ಪದೇ ಪದೇ ಕಾಡುತ್ತಿರುವ ವಿದ್ಯುತ್ ಸಮಸ್ಯೆ ► ಫೆಬ್ರವರಿ 28 ರಂದು ಕಡಬ ಬಿಜೆಪಿಯಿಂದ ಕ್ಯಾಂಡಲ್ ಉರಿಸಿ ಮೆಸ್ಕಾಂ ಸಬ್ ಸ್ಟೇಶನ್ ಗೆ ಮುತ್ತಿಗೆ Read More »

ಕರಾವಳಿ
Scroll to Top