ಬೀಟಿಗೆ: ಟ್ರಾನ್ಸ್‌ಫಾರ್ಮರ್ ನಿಂದಾಗಿ ಗುಡ್ಡೆಗೆ ಬೆಂಕಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.23. ವಿದ್ಯುತ್ ಟ್ರಾನ್ಸ್‌ಫಾರ್ಮರ್ ನಿಂದ ಬೆಂಕಿಯ ಕಿಡಿಯೊಂದು ಗುಡ್ಡೆಗೆ ಬಿದ್ದ ಪರಿಣಾಮ ಸುಮಾರು 2 ಎಕರೆ ಗುಡ್ಡೆ ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ಬೀಟಿಗೆ ಎಂಬಲ್ಲಿ ನಡೆದಿದೆ. ಪೇರಮೊಗರು ಸಮೀಪದ ಬೀಟಿಗೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ಶೇಖರ್ ಭಟ್ ಎಂಬವರ ಗುಡ್ಡೆಗೆ ಬಿದ್ದ ಬೆಂಕಿಯ ಕಿಡಿಯೊಂದು ಕ್ಷಣಮಾತ್ರದಲ್ಲಿ ಪರಿಸರವನ್ನು ಆವರಿಸಿತು‌. ವಿಷಯ ತಿಳಿದ ಸ್ಥಳೀಯ ಕೆಲವು ಯುವಕರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು‌. ಶುಕ್ರವಾರ ಮಸೀದಿಗೆಂದು ತೆರಳಿದ್ದ ಯುವಕರೂ ಬೆಂಕಿ ನಂದಿಸುವಲ್ಲಿ […]

ಬೀಟಿಗೆ: ಟ್ರಾನ್ಸ್‌ಫಾರ್ಮರ್ ನಿಂದಾಗಿ ಗುಡ್ಡೆಗೆ ಬೆಂಕಿ Read More »

ಕರಾವಳಿ

ವೇಣೂರು: ಪೊಲೀಸ್ ಬಸ್ ಗೆ ಢಿಕ್ಕಿ ಹೊಡೆದು ಬೈಕ್‌ ಮೇಲೆ ಮಗುಚಿ ಬಿದ್ದ ಕೋಳಿ ಸಾಗಾಟದ ಲಾರಿ ► ಬೈಕ್ ಸವಾರ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ವೇಣೂರು, ಫೆ.23. ಹೆದ್ದಾರಿಯ ಬದಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಕ್ಕೆ ಕೋಳಿ ಸಾಗಾಟದ ಲಾರಿಯೊಂದು ಢಿಕ್ಕಿ ಹೊಡೆದು ಚಲಿಸುತ್ತಿದ್ದ ಬೈಕ್ ಮೇಲೆ ಮಗುಚಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶುಕ್ರವಾರದಂದು ವೇಣೂರಿನಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು ವೇಣೂರು ಕರಿಮಣೇಲು ನಿವಾಸಿ ಉದಯ ಕುಮಾರ್ ಸೇಮಿತ ಎಂದು ಗುರುತಿಸಲಾಗಿದೆ. ಅವರು ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಕರಿಮಣೇಲುವಿನಿಂದ ವೇಣೂರು ಮುಖ್ಯಪೇಟೆಗೆ ತಲುಪುತ್ತಿದ್ದಂತೆ ವೇಗವಾಗಿ ಆಗಮಿಸಿದ ಕೋಳಿ ಸಾಗಾಟದ ವಾಹನ ವೇಣೂರು ಶ್ರೀರಾಮ

ವೇಣೂರು: ಪೊಲೀಸ್ ಬಸ್ ಗೆ ಢಿಕ್ಕಿ ಹೊಡೆದು ಬೈಕ್‌ ಮೇಲೆ ಮಗುಚಿ ಬಿದ್ದ ಕೋಳಿ ಸಾಗಾಟದ ಲಾರಿ ► ಬೈಕ್ ಸವಾರ ಮೃತ್ಯು, ಇಬ್ಬರಿಗೆ ಗಾಯ Read More »

ಕರಾವಳಿ

ಉದ್ಯಮಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಮೃತದೇಹವನ್ನು ಶಿರಾಡಿ ಘಾಟ್ ನಲ್ಲಿ ಎಸೆದ ಹಂತಕರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.23. ಸೋಮವಾರಪೇಟೆಯ ಉದ್ಯಮಿಯೋರ್ವರನ್ನು ತನ್ನ ನೌಕರರಿಬ್ಬರು ಉಪ್ಪಿನಂಗಡಿ ಸಮೀಪದ ಬುಡೋಳಿ ಎಂಬಲ್ಲಿ ಉಸಿರುಗಟ್ಟಿಸಿ ಕೊಲೆಗೈದು ಮೃತದೇಹವನ್ನು ಶಿರಾಡಿ ಘಾಟ್ ನಲ್ಲಿ ಎಸೆದ ಅಮಾನವೀಯ ಘಟನೆ ಬುಧವಾರದಂದು ನಡೆದಿದ್ದು, ಗುರುವಾರದಂದು ಬೆಳಕಿಗೆ ಬಂದಿದೆ. ಮೃತರನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಉದ್ಯಮಿ ಮಹೇಶ್ ಎಂದು ಗುರುತಿಸಲಾಗಿದೆ. ಇವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ರಘ ಎಂಬವರು ಉಪ್ಪಿನಂಗಡಿಗೆ ಕರೆತಂದು ಬುಡೋಳಿ ಸಮೀಪದಲ್ಲಿ ಕೊಲೆಗೈದ ನಂತರ ಶಿರಾಡಿಯ ಕೆಂಪುಹೊಳೆ ಸಮೀಪ ಮೃತದೇಹವನ್ನು ಎಸೆದು ನೇರವಾಗಿ

ಉದ್ಯಮಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಮೃತದೇಹವನ್ನು ಶಿರಾಡಿ ಘಾಟ್ ನಲ್ಲಿ ಎಸೆದ ಹಂತಕರು Read More »

ಕರಾವಳಿ

ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.23. ಮುಂದಿನ ತಿಂಗಳು ಮಾರ್ಚ್ ನಲ್ಲಿ ನಡೆಯಲಿರುವ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದನ್ನು ಸರಕಾರ ನೀಡಿದೆ. ಪರೀಕ್ಷೆ ಬರೆಯಲಿರುವ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ನಗರ, ಹೊರವಲಯ, ವೇಗದೂತ, ಸಾಮಾನ್ಯ ಬಸ್ ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ, ಪರೀಕ್ಷಾ ಕೇಂದ್ರದಿಂದ ಮನೆಗೆ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ Read More »

ಕರ್ನಾಟಕ

ಕರ್ನಾಟಕ ರಾಜ್ಯ ಸರಕಾರಿ ಹುದ್ದೆ ► ಇಂಟೀರಿಯರ್ ಡಿಸೈನರ್ (Interior Designer) ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.23. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಇಂಟೀರಿಯರ್ ಡಿಸೈನರ್ (Interior Designer) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿಗೊಳಿಸಲು ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 07 ಮೂಲ ವೃಂದದ ಹುದ್ದೆಗಳು ಹಾಗೂ 03 ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದದ ಹುದ್ದೆಗಳು ಸೇರಿದಂತೆ ಒಟ್ಟು 10 ಇಂಟೀರಿಯರ್ ಡಿಸೈನರ್ (Interior Designer) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು

ಕರ್ನಾಟಕ ರಾಜ್ಯ ಸರಕಾರಿ ಹುದ್ದೆ ► ಇಂಟೀರಿಯರ್ ಡಿಸೈನರ್ (Interior Designer) ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಉದ್ಯೋಗ

ಕರಾವಳಿ ಪೊಲೀಸ್ ಪಡೆಯಲ್ಲಿ ಖಾಲಿ ಹುದ್ದೆಗಳು ► ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಮಂಗಳೂರು, ಫೆ.23. ಕರಾವಳಿ ಪೊಲೀಸ್ ಪಡೆಯಲ್ಲಿ ಖಾಲಿ ಇರುವ ವಿವಿಧ ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಅವಧಿಯು 5 ವರ್ಷಗಳಾಗಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳ ವಿವರ ಕೆಳಗಿನಂತಿವೆ. ಮೋಟಾರ್ ಲಾಂಚ್ ಇಂಜಿನಿಯರ್ (ಪೊಲೀಸ್ ಇನ್ಸ್‌ಪೆಕ್ಟರ್ ಗ್ರೇಡ್), ಬೋಟ್ ಕ್ಯಾಪ್ಟನ್(ಸಬ್ ಇನ್ಸ್‌ಪೆಕ್ಟರ್ ಗ್ರೇಡ್), ಅಸಿಸ್ಟೆಂಟ್ ಕ್ಯಾಪ್ಟನ್ (ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಗ್ರೇಡ್),  ಮೋಟಾರ್ ಲಾಂಚ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಗ್ರೇಡ್),

ಕರಾವಳಿ ಪೊಲೀಸ್ ಪಡೆಯಲ್ಲಿ ಖಾಲಿ ಹುದ್ದೆಗಳು ► ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ Read More »

ಉದ್ಯೋಗ

ಸೌಹಾರ್ದತೆ ಆತ್ಮದ ಒಳಗಿನಿಂದಲೇ ಬರಬೇಕಲ್ಲದೆ ತೋರ್ಪಡಿಕೆಗೆ ಮಾತ್ರ ಸೀಮಿತವಾಗಿರಬಾರದು: ಯಶವಂತ್ ರೈ ► ನೆಕ್ಕಿತ್ತಡ್ಕ ಮಖಾಂ ಉರೂಸ್ ಪ್ರಯುಕ್ತ ಸೌಹಾರ್ದ ಸಮ್ಮೇಳನ

(ನ್ಯೂಸ್ ಕಡಬ) newskadaba.com ಕಡಬ, ಫೆ.22. ಸೌಹಾರ್ದತೆ ಆತ್ಮದ ಒಳಗಿನಿಂದಲೇ ಬರಬೇಕಲ್ಲದೆ, ಕೇವಲ ತೋರ್ಪಡಿಕೆಗೆ ಮಾತ್ರ ಸೀಮಿತವಾಗಿರಬಾರದು. ಎಲ್ಲಿ ಶಾಂತಿ ಇದೆಯೋ ಅಲ್ಲಿ ಕ್ರಾಂತಿರಹಿತವಾಗಿ ಸುವ್ಯವಸ್ಥೆಯಿಂದ ಬಾಳಲು ಸಾಧ್ಯ ಎಂದು ಸುಬ್ರಹ್ಮಣ್ಯ ಪ್ರೌಢಶಾಲಾ ಮುಖ್ಯಗುರುಗಳಾದ ಯಶವಂತ್ ರೈ ಹೇಳಿದರು. ಅವರು ಮರ್ಧಾಳ ತಖ್ವಿಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿರುವ ನೆಕ್ಕಿತ್ತಡ್ಕ ಮಖಾಂ ವಠಾರದಲ್ಲಿ ನೆಕ್ಕಿತ್ತಡ್ಕ ವಲಿಯುಲ್ಲಾಹಿರವರ ಉರೂಸ್ ಸಮಾರಂಭದ ಅಂಗವಾಗಿ ಮಗ್ರಿಬ್ ನಮಾಜಿನ ನಂತರ ನಡೆದ ಸೌಹಾರ್ದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ

ಸೌಹಾರ್ದತೆ ಆತ್ಮದ ಒಳಗಿನಿಂದಲೇ ಬರಬೇಕಲ್ಲದೆ ತೋರ್ಪಡಿಕೆಗೆ ಮಾತ್ರ ಸೀಮಿತವಾಗಿರಬಾರದು: ಯಶವಂತ್ ರೈ ► ನೆಕ್ಕಿತ್ತಡ್ಕ ಮಖಾಂ ಉರೂಸ್ ಪ್ರಯುಕ್ತ ಸೌಹಾರ್ದ ಸಮ್ಮೇಳನ Read More »

ಕರಾವಳಿ

ನೀವು ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಪದವೀಧರರೇ…? ► ಹಾಗಾದರೆ ನಿಮಗಾಗಿ ಭಾರತೀಯ ರೈಲ್ವೇ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.22. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೊಮ, ಇಂಜಿನಿಯರಿಂಗ್ ಪದವೀಧರರಿಗೆ ಭಾರತೀಯ ರೈಲ್ವೇ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ರೈಲ್ವೇ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಎ, ಬಿ, ಸಿ ಮತ್ತು ಡಿ ಯಲ್ಲಿ ವಿವಿಧ ತಾಂತ್ರಿಕ, ತಾಂತ್ರಿಕೇತರ ಮತ್ತು ಅರೆವೈದ್ಯಕೀಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಆಸಕ್ತರು ಆನ್‌ಲೈನ್ ಅಥವಾ ಪತ್ರದ ಮೂಲಕ ಅರ್ಜಿಗಳನ್ನು ಹಾಕಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ http://www.indianrailways.gov.in/ ವೆಬ್‌ಸೈಟನ್ನು ಸಂಪರ್ಕಿಸಬಹುದಾಗಿದೆ.

ನೀವು ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಪದವೀಧರರೇ…? ► ಹಾಗಾದರೆ ನಿಮಗಾಗಿ ಭಾರತೀಯ ರೈಲ್ವೇ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ Read More »

ಉದ್ಯೋಗ

ಕಡಬದಲ್ಲಿ ಮಿತಿ ಮೀರಿದ ವಿದ್ಯುತ್ ಸಮಸ್ಯೆ ► ಬಳಕೆದಾರರಿಂದ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ.22. ಪರಿಸರದಲ್ಲಿ ಕಳೆದ ಕೆಲ ಸಮಯದಿಂದ ವಿದ್ಯುತ್ ಸಮಸ್ಯೆ ಮಿತಿ ಮೀರಿದ್ದು, ಪದೇ ಪದೇ ಕೈಕೊಡುವ ವಿದ್ಯುತ್ ಹಾಗೂ ಲೋ ವೋಲ್ಟೇಜ್ ಸಮಸ್ಯೆಯಿಂದ ಬೇಸತ್ತಿರುವ ವಿದ್ಯುತ್ ಬಳಕೆದಾರರು ಕಡಬ ಮೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್ ಕಡಿತ ಹಾಗೂ ಲೋ ವೋಲ್ಟೇಜ್ ಸಮಸ್ಯೆಯಿಂದ ಕೃಷಿಕರು, ವಿದ್ಯಾರ್ಥಿಗಳು, ಉದ್ದಿಮೆದಾರರು ಸೇರಿದಂತೆ ವಿದ್ಯುತ್ ಬಳಕೆದಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಪ್ರತಿ ಬಾರಿ ವಿದ್ಯುತ್ ಸಮಸ್ಯೆಯ ಕುರಿತು ವಿಚಾರಿಸಿದರೂ ಮೆಸ್ಕಾಂ ಅಧಿಕಾರಿಗಳಿಂದ ಸೂಕ್ತ

ಕಡಬದಲ್ಲಿ ಮಿತಿ ಮೀರಿದ ವಿದ್ಯುತ್ ಸಮಸ್ಯೆ ► ಬಳಕೆದಾರರಿಂದ ಪ್ರತಿಭಟನೆಯ ಎಚ್ಚರಿಕೆ Read More »

ಕರಾವಳಿ

ಫರಂಗಿಪೇಟೆ: ಚಾಕುವಿನಿಂದ ಇರಿತ ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.22. ಯುವಕರಿಬ್ಬರಿಗೆ ತಂಡವೊಂದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಫರಂಗಿಪೇಟೆಯಲ್ಲಿ ಬುಧವಾರದಂದು ನಡೆದಿದೆ. ಗಾಯಾಳುಗಳಲ್ಲಿ ಓರ್ವನನ್ನು ಫರಂಗಿಪೇಟೆ ನಿವಾಸಿ ಇರ್ಫಾನ್ ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಪರಿಚಯ ತಿಳಿದಿಲ್ಲ. ಫರಂಗಿಪೇಟೆಯ ಒಳಮಾರ್ಗದ ನದಿತಟದಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಚಾಕು ಹಾಗೂ ರಕ್ತಸಿಕ್ತ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಘಟನೆ ನಡೆದಿರುವ ಸಾಧ್ಯತೆಯಿದ್ದು, ಘಟನೆಗೆ ಯಾವುದೇ

ಫರಂಗಿಪೇಟೆ: ಚಾಕುವಿನಿಂದ ಇರಿತ ► ಇಬ್ಬರಿಗೆ ಗಾಯ Read More »

ಕರಾವಳಿ
Scroll to Top