ಬಲ್ಯ: ಬೈಕಿಗೆ ಲಾರಿ ಢಿಕ್ಕಿ ► ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಫೆ.25. ಬೈಕ್‌ ಹಾಗೂ ಲಾರಿ‌ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ ಸವಾರನ ಕಾಲಿಗೆ ಗಾಯವಾದ ಘಟನೆ ಶನಿವಾರದಂದು ಕಡಬ ಠಾಣಾ ವ್ಯಾಪ್ತಿಯ ಬಲ್ಯ ಸಮೀಪದ ಪನ್ಯಾಡಿ‌ ಕ್ರಾಸ್ ನಲ್ಲಿ ನಡೆದಿದ್ದು, ಭಾನುವಾರದಂದು ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಬೈಕ್ ಸವಾರ ನೆಲ್ಯಾಡಿ ಗ್ರಾಮದ ಬರೆಮೇಲು ಬೊನ್ಯಸಾಗು ನಿವಾಸಿ ಬಾಲಕೃಷ್ಣ (42) ಎಂಬವರ ಕಾಲಿಗೆ ಬಲವಾದ ಗಾಯಗಳಾಗಿದ್ದು, ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಾಲಕೃಷ್ಣರವರು ನೀಡಿದ ದೂರಿನಂತೆ ಲಾರಿ ಚಾಲಕನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top