ಬಣ್ಣಗಳ ಹಬ್ಬ ಹೋಳಿ ಆಚರಣೆ ► ಹೇಗೆ ಮುಂಜಾಗರೂಕತೆ ವಹಿಸಬೇಕು..?

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಫೆ.27. ಚಳಿಗಾಲ ಮುಗಿದು ವಸಂತ ಕಾಲ ಕಾಲಿಡುವ ಸಮಯದಲ್ಲಿ ಬರುವ ಬಣ್ಣಗಳ ಹಬ್ಬ ಹೋಳಿ. ಗಂಡು, ಹೆಣ್ಣು, ಮಕ್ಕಳು, ಮುದುಕರು, ಬಡವ ಬಲ್ಲಿದ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಬಾವವಿಲ್ಲದೆ ಪರಸ್ಪರ ಬಣ್ಣದ ಓಕುಳಿಯನ್ನು ಎರಚಿಕೊಂಡು ಮನರಂಜನೆಯ ಉತ್ತುಂಗಕ್ಕೇರಿ, ದ್ವೇಷ, ಕ್ರೋಧ, ಮದ ಮತ್ಸರಗಳಿಗೆ ಇತಿಶ್ರೀ ಹಾಡಿ ಪ್ರೀತಿ ಪ್ರೇಮ, ಮಮತೆ, ಗೌರವದಿಂದ ಎಲ್ಲವನ್ನು ಮರೆತು ಸ್ನೇಹ ಹಸ್ತ ಚಾಚುವ ಒಂದು ವಿಶಿಷ್ಠ ಹಬ್ಬವೇ ಹೋಳಿ. ಹೆಚ್ಚಾಗಿ ಉತ್ತರ ಭಾರತದಲ್ಲಿ […]

ಬಣ್ಣಗಳ ಹಬ್ಬ ಹೋಳಿ ಆಚರಣೆ ► ಹೇಗೆ ಮುಂಜಾಗರೂಕತೆ ವಹಿಸಬೇಕು..? Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಅನಾರೋಗ್ಯ ಪೀಡಿತ ಮಹಿಳೆಗೆ ಸರ್ವೆ ಯುವಕ ಮಂಡಲದಿಂದ ಧನಸಹಾಯ

(ನ್ಯೂಸ್ ಕಡಬ) newskadaba.com ಸವಣೂರು, ಫೆ.27. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಭಕ್ತಕೋಡಿ ಪಾಲೆತ್ತಗುರಿ ನಿವಾಸಿ ಪದ್ಮನಾಭ ಅವರ ಪತ್ನಿ ಸೀತಾ ಅವರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕಾಗಿ ಸರ್ವೆ ಷಣ್ಮುಖ ಯುವಕ ಮಂಡಲದ ವತಿಯಿಂದ 5000 ರೂ.ಗಳ ಆರ್ಥಿಕ ನೆರವು ನೀಡಲಾಯಿತು. ಷಣ್ಮುಖ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ, ತಾಲೂಕು ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು ಹಾಗೂ ರಾಜೇಶ್ ಎಸ್.ಡಿ. ಧನ ಸಹಾಯ ಹಸ್ತಾಂತರಿಸಿದರು. ಸರ್ವೆ ಎಸ್.ಜಿ.ಎಂ. ಪ್ರೌಢಶಾಲೆಯ ಮುಖ್ಯಗುರು ಶ್ರೀನಿವಾಸ್ ಎಚ್.ಬಿ. ಯುವಕ ಮಂಡಲದ ಪದಾಧಿಕಾರಿಗಳಾದ

ಅನಾರೋಗ್ಯ ಪೀಡಿತ ಮಹಿಳೆಗೆ ಸರ್ವೆ ಯುವಕ ಮಂಡಲದಿಂದ ಧನಸಹಾಯ Read More »

ಕರಾವಳಿ

ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಹಿರಿಯ ನಟಿ ಶ್ರೀದೇವಿ ಸಾವು ಪ್ರಕರಣ ► ದುಬೈ ಪೊಲೀಸರಿಂದ ತೀವ್ರಗೊಂಡ ತನಿಖೆ

(ನ್ಯೂಸ್ ಕಡಬ) newskadaba.com ದುಬೈ, ಫೆ.27. ಶನಿವಾರ ತಡರಾತ್ರಿ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಭಾರತದ ಹಿರಿಯ ಬಹುಭಾಷಾ ನಟಿ ಶ್ರೀದೇವಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಹೃದಯ ಸ್ಥಂಬನದಿಂದಾಗಿ ಮೃತಪಟ್ಟಿದ್ದಾರೆ‌ ಎಂದು ಮೊದಲು ಹೇಳಲಾಗಿತ್ತಾದರೂ, ಆ ನಂತರ ಬಾತ್ ಟಬ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಈ ನಡುವೆ ಮರಣೋತ್ತರ ಪರೀಕ್ಷೆಯ‌ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಿರುವ ದುಬೈ ಕಾನೂನು ತಜ್ಞರು ಮೃತದೇಹದ ಹಸ್ತಾಂತರಕ್ಕೆ‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪುನಃ

ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಹಿರಿಯ ನಟಿ ಶ್ರೀದೇವಿ ಸಾವು ಪ್ರಕರಣ ► ದುಬೈ ಪೊಲೀಸರಿಂದ ತೀವ್ರಗೊಂಡ ತನಿಖೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕೆಲವರು ಊರಿನಲ್ಲಿ ಡೋಂಗಿ ಮಾಡಿ ಗಲ್ಫ್ ಗೆ ತೆರಳುತ್ತಾರೆ: ಆಹಾರ ಸಚಿವ ಯು.ಟಿ.ಖಾದರ್ ► ಸಚಿವರ ಹೇಳಿಕೆಗೆ ತಿರುಗಿ ಬಿದ್ದಿರುವ ಗಲ್ಫ್ ನಿವಾಸಿಗಳಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.27. ಕೆಲವು ಪ್ರವಾಸಿಗಳು ಊರಿನಲ್ಲಿ ಡೋಂಗಿ ಮಾಡಿ ಗಲ್ಫ್ ರಾಷ್ಟ್ರಕ್ಕೆ ಹೋಗುತ್ತಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದನ್ನು ಖಂಡಿಸಿರುವ ಗಲ್ಫ್ ನಿವಾಸಿಗಳು ಸಚಿವರ ವಿರುದ್ಧ ಸಮರ ಸಾರಿದ್ದಾರೆ. ಪುತ್ತೂರು ಸಮೀಪದ ಮಾಡನ್ನೂರು ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ದ ಕರ್ನಾಟಕ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್, ಇಂದು ಕೆಲವು ಕಡೆಗಳಲ್ಲಿ ದೇಶಕ್ಕೆ ಮಾರಕವಾಗುವ ಕೆಲವು ವಿಚಾರಗಳು ನಡೆಯುತ್ತಿದ್ದು, ಅಂತಹವರಿಗೆ ಯಾರೂ ಬೆಂಬಲವನ್ನು ನೀಡಬಾರದು. ನಾನು ಹಿಂದೂ

ಕೆಲವರು ಊರಿನಲ್ಲಿ ಡೋಂಗಿ ಮಾಡಿ ಗಲ್ಫ್ ಗೆ ತೆರಳುತ್ತಾರೆ: ಆಹಾರ ಸಚಿವ ಯು.ಟಿ.ಖಾದರ್ ► ಸಚಿವರ ಹೇಳಿಕೆಗೆ ತಿರುಗಿ ಬಿದ್ದಿರುವ ಗಲ್ಫ್ ನಿವಾಸಿಗಳಿಂದ ಆಕ್ರೋಶ Read More »

ಕರಾವಳಿ

ಇಂದು ಪುತ್ತೂರಿಗೆ ಆಗಮಿಸಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.27. ಬಿಗ್ ಬಾಸ್ ಕನ್ನಡದ ಸೀಸನ್ 5 ವಿನ್ನರ್ ಹಾಸನ ಮೂಲದ ಚಂದನ್ ಶೆಟ್ಟಿ ಮಂಗಳವಾರದಂದು ಸಂಜೆ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ನಡೆಯುತ್ತಿರುವ ಕಾಲೇಜು ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಪುತ್ತೂರಿಗೆ ಆಗಮಿಸಲಿದ್ದಾರೆ. ಸೈಂಟ್ ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಚಂದನ್ ಶೆಟ್ಟಿ ಇಂದು ಅದೇ ಕಾಲೇಜಿನಲ್ಲಿ ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಸಂಜೆ ಆರು ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿಯವರು ಹಿರಿಯ ವಿದ್ಯಾರ್ಥಿಯಾಗಿ ಕಾರ್ಯಕ್ರಮ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಪುತ್ತೂರಿಗೆ ಆಗಮಿಸಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ Read More »

ಕರಾವಳಿ

ತುಳುನಾಡಿನಲ್ಲೊಂದು ವಿಚಿತ್ರ ಮದುವೆ ‘ರಾಪಟದ ರಾಕೇಶನ ಮದಿಮೆ’ ► ಬಂಟ್ವಾಳದ ಮದುವೆಯಲ್ಲಿ ಗೆಳೆಯರು ಮಾಡಿದ ಕೀಟಲೆಯ ವೀಡಿಯೋ ಇದೀಗ ವೈರಲ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.26. ತನ್ನ ಗೆಳೆಯರ ಮದುವೆಗೆ ಒಂದು ದಿನ ಮುಂಚಿತವಾಗಿಯೇ ಹಾಜರಾಗಿ, ಮದುಮಗನಿಗೆ ಕೀಟಲೆ ಕೊಟ್ಟು ಸತಾಯಿಸುತ್ತಿದ್ದ ಯುವಕನೋರ್ವನಿಗೆ ಆತನ ಮದುವೆಗೆ ಗೆಳೆಯರೆಲ್ಲ ಸೇರಿಕೊಂಡು ಮದರಂಗಿ ಶಾಸ್ತ್ರದಿಂದ ಹಿಡಿದು ಮೂರು ದಿನಗಳ ಕಾಲ ಕೀಟಲೆ ಕೊಟ್ಟು ಖುಷಿಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಮಂಗಳೂರಿನಲ್ಲಿ ಆಂಗ್ಲ ದಿನ ಪತ್ರಿಕೆಯ ಜಾಹೀರಾತು ವಿಭಾಗದಲ್ಲಿ ಉದ್ಯೋಗದಲ್ಲಿರುವ ಬಂಟ್ವಾಳ ತಾಲೂಕಿನ ರಾಯಿ ನಿವಾಸಿ ರಾಕೇಶ್‌ನಿಗೆ ಫೆಬ್ರವರಿ 19 ರಂದು ಮದುವೆ ಏರ್ಪಡಿಸಲಾಗಿತ್ತು. ಹಿರಿಯರೆಲ್ಲ ಹಾಲು

ತುಳುನಾಡಿನಲ್ಲೊಂದು ವಿಚಿತ್ರ ಮದುವೆ ‘ರಾಪಟದ ರಾಕೇಶನ ಮದಿಮೆ’ ► ಬಂಟ್ವಾಳದ ಮದುವೆಯಲ್ಲಿ ಗೆಳೆಯರು ಮಾಡಿದ ಕೀಟಲೆಯ ವೀಡಿಯೋ ಇದೀಗ ವೈರಲ್ Read More »

ಕರಾವಳಿ

ಅನಾರೋಗ್ಯಕ್ಕೆ ತುತ್ತಾಗಿದ್ದ ಸುಳ್ಯ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.26. ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಓರ್ವರು ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಸುಳ್ಯ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮಾಧವ ವೈ ಎಂದು ಗುರುತಿಸಲಾಗಿದ್ದು, ಅನಾರೋಗ್ಯದ‌ ನಿಮಿತ್ತ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ಸುಳ್ಯ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮೃತ್ಯು Read More »

ಕರಾವಳಿ

ಪದೇ ಪದೇ ವಿದ್ಯುತ್ ಕಡಿತದಿಂದ ಬೇಸತ್ತ ಗ್ರಾಹಕರು ► ಸವಣೂರು ಬಿಜೆಪಿ ವತಿಯಿಂದ ಸಬ್ ಸ್ಟೇಷನ್ ಎದುರು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸವಣೂರು, ಫೆ.26. ಪದೇ ಪದೇ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಸವಣೂರು ಬಿಜೆಪಿ ಗ್ರಾಮ ಸಮಿತಿಯ ನೇತೃತ್ವದಲ್ಲಿ ಸವಣೂರು ಮೆಸ್ಕಾಂ ಸಬ್ ಸ್ಟೇಶನ್ ಎದುರುಗಡೆ ಪ್ರತಿಭಟನೆ ಮಾಡಿದ ಘಟನೆ ಸೋಮವಾರದಂದು ನಡೆದಿದೆ. ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಧಿಕ್ಕಾರ ಕೂಗಿ ಸಿಎಂ ಸಿದ್ದರಾಮಯ್ಯನವರ ಪ್ರತಿಕೃತಿ ರಚಿಸಿ ಬಳಿಕ ಸಬ್ ಸ್ಟೇಷನ್ ಸಮೀಪ ಪ್ರತಿಕೃತಿಗೆ ಬೆಂಕಿ ಕೊಟ್ಟು ದಹಿಸಿದರು. ಅನೇಕ ಭಾಗ್ಯಗಳೊಂದಿಗೆ ಚಿಮಿಣಿ ಭಾಗ್ಯವೂ ದೊರೆತಿದೆ ಎಂದು ಇದೇ

ಪದೇ ಪದೇ ವಿದ್ಯುತ್ ಕಡಿತದಿಂದ ಬೇಸತ್ತ ಗ್ರಾಹಕರು ► ಸವಣೂರು ಬಿಜೆಪಿ ವತಿಯಿಂದ ಸಬ್ ಸ್ಟೇಷನ್ ಎದುರು ಪ್ರತಿಭಟನೆ Read More »

ಕರಾವಳಿ

ಬಹುಭಾಷಾ ನಟಿ‌ ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟಿದ್ದಲ್ಲ ► ಬೆಚ್ಚಿಬೀಳಿಸಿದ ಮರಣೋತ್ತರ ಪರೀಕ್ಷೆ ವರದಿ

(ನ್ಯೂಸ್ ಕಡಬ) newskadaba.com ಮುಂಬೈ, ಫೆ.26. ಭಾನುವಾರದಂದು ನಿಧನರಾದ ಭಾರತದ ಬಹುಭಾಷಾ ಹಿರಿಯ ನಟಿ ಶ್ರೀದೇವಿ ಮರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಊಹಾಪೋಹಗಳು ಕೇಳಿ ಬಂದಿದ್ದವಾದರೂ ಇದೀಗ ಬೆಚ್ಚಿ ಬೀಳಿಸುವ ವರದಿಯೊಂದು ಹೊರಬಿದ್ದಿದೆ. ದುಬೈ ಪೊಲೀಸರು ನೀಡಿದ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಶ್ರೀದೇವಿಯವರು ಹೃದಯಾಘಾತದಿಂದ ಮರಣ ಹೊಂದಿದ್ದಲ್ಲ. ಬದಲಾಗಿ ಆಕಸ್ಮಿಕವಾಗಿ ಬಾತ್ ಟಬ್‍ನಲ್ಲಿ ಮುಳುಗಿದ್ದರಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಶ್ರೀದೇವಿಯ ರಕ್ತದಲ್ಲಿ ಆಲ್ಕೋಹಾಲ್ ಅಂಶವು ಕಂಡುಬಂದಿದ್ದು, ಆಲ್ಕೋಹಾಲ್ ಕುಡಿದು ಬಾತ್ ಟಬ್‍ನಲ್ಲಿರುವ ನೀರಿನಲ್ಲಿ ಮುಳುಗಿ

ಬಹುಭಾಷಾ ನಟಿ‌ ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟಿದ್ದಲ್ಲ ► ಬೆಚ್ಚಿಬೀಳಿಸಿದ ಮರಣೋತ್ತರ ಪರೀಕ್ಷೆ ವರದಿ Read More »

ರಾಷ್ಟ್ರೀಯ ನ್ಯೂಸ್

102 ನೆಕ್ಕಿಲಾಡಿಯ ಕೆರ್ಮಾಯಿಯಲ್ಲಿ ಸಾರ್ವಜನಿಕ ಕೊಳವೆ ಬಾವಿಗೆ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.26. 102 ನೇ ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿ ಎಂಬಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಉದ್ದೇಶಕ್ಕಾಗಿ, ಜಿಲ್ಲಾ ಪಂಚಾಯತ್ ಅನುದಾನದಲ್ಲಿ ತೆಗೆಯಲಾದ ಕೊಳವೆ ಬಾವಿಯನ್ನು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮರ್ದಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತ, ಸದಸ್ಯರುಗಳಾದ ಸುಲೈಮಾನ್, ಹರೀಶ್ ಕೊಡಂದೂರು, ಡಿ.ಪಿ. ದಾಮೋದರ ಗೌಡ, ಪಂಚಾಯತ್ ಲೆಕ್ಕಪರಿಶೋಧಕ ಭುವನೇಂದ್ರ, ಕಾರ್ಯದರ್ಶಿ ವೆಂಕಟ್ರಮಣ ಗೌಡ, ಪಂಚಾಯತ್ ಸಿಬಂದಿಗಳಾದ ವಾಮನ ನಾಯ್ಕ್, ಹಸನ್, ನೀರಿನ ಪಲಾನುಭವಿಗಳು

102 ನೆಕ್ಕಿಲಾಡಿಯ ಕೆರ್ಮಾಯಿಯಲ್ಲಿ ಸಾರ್ವಜನಿಕ ಕೊಳವೆ ಬಾವಿಗೆ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಚಾಲನೆ Read More »

ಕರಾವಳಿ
Scroll to Top