ಪುತ್ತೂರು: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಮೃತಪಟ್ಟ ಪ್ರಕರಣ ► ಕಟ್ಟಡ ಮಾಲಕ, ಇಂಜಿನಿಯರ್, ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು
(ನ್ಯೂಸ್ ಕಡಬ) newskadaba.com ಪುತ್ತೂರು, ಎ.27. ಮೂರು ದಿನಗಳ ಹಿಂದೆ ಪುತ್ತೂರಿನ ಅನಿತಾ ಆಯಿಲ್ ಮಿಲ್ ಸಮೀಪ ನೂತನ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಧರೆಕುಸಿದು ಉಂಟಾದ ದುರಂತದಲ್ಲಿ ಕಟ್ಟಡ ಮಾಲಕ, ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲಾಗಿದೆ. ವರ್ಷದ ಹಿಂದೆ ಕಟ್ಟಡ ಕಾಮಗಾರಿಗಾಗಿ ಪರವಾನಿಗೆ ಪಡೆದುಕೊಳ್ಳಲಾಗಿತ್ತು. ಇದರ ಅವಧಿ 2018 ರ ಎಪ್ರಿಲ್ 14ಕ್ಕೆ ಕೊನೆಗೊಂಡಿದ್ದು, ಎಪ್ರಿಲ್ 17 ರಂದು ಪರವಾನಿಗೆ ನವೀಕರಣಕ್ಕೆ ಅರ್ಜಿ ನೀಡಿದ್ದು, ಇನ್ನೂ ಪರವಾನಿಗೆ ನೀಡಿರಲಿಲ್ಲ. ಅವಧಿ ಮೀರುವ ದಿನಾಂಕದ ಒಂದು […]









