ದಕ್ಷಿಣ ಕನ್ನಡದಲ್ಲಿ ನಾಮಪತ್ರ ಹಿಂತೆಗೆದ ಇಬ್ಬರು ಅಭ್ಯರ್ಥಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಎ.26. ರಾಜ್ಯ ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಲ್ಲಿಸಲಾಗಿದ್ದ ನಾಮಪತ್ರಗಳ ಪೈಕಿ ಇಬ್ಬರು ಅಭ್ಯರ್ಥಿಗಳು ಗುರುವಾರದಂದು ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪ್ಯಾಟ್ರಿಕ್ ಲೋಬೊ ಹಾಗೂ ಬಂಟ್ವಾಳ ಕ್ಷೇತ್ರದಿಂದ ಎಸ್ಡಿಪಿಐ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಬ್ದುಲ್ ಮಜೀದ್ ಖಾನ್ ಅವರು ನಾಮಪತ್ರವನ್ನು ಹಿಂಪಡೆದಿದ್ದಾರೆ. ನಾಮಪತ್ರವನ್ನು ಹಿಂದೆಗೆಯಲು ಶುಕ್ರವಾರದಂದು ಕೊನೆಯ ದಿನವಾಗಿದ್ದು, ಇನ್ನೂ ಹಲವರು ಹಿಂತೆಗೆಯುವ ಸಂಭವವಿದೆ.

Scroll to Top