ಕೊಣಾಜೆಯ ವ್ಯಕ್ತಿಯ ಮೃತದೇಹ ಕುಮಾರಧಾರಾ ನದಿಯಲ್ಲಿ ಪತ್ತೆ



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.26. ಕಡಬ ತಾಲೂಕಿನ ಕೊಣಾಜೆ ನಿವಾಸಿಯ ಮೃತದೇಹವೊಂದು ಕುಮಾರಧಾರಾ ನದಿಯಲ್ಲಿ ಬುಧವಾರದಂದು ಪತ್ತೆಯಾಗಿದೆ.







ಮೃತ ವ್ಯಕ್ತಿಯನ್ನು ಕಡಬ ತಾಲೂಕಿನ ಕೊಣಾಜೆ‌ ಗ್ರಾಮದ ಪಟ್ಟೆ ನಿವಾಸಿ ಡೀಕಯ್ಯ ಎಂದು ಗುರುತಿಸಲಾಗಿದೆ. ಒಬ್ಬಂಟಿಯಾಗಿ ವಾಸಿಸುತ್ತಿದ್ದ ಡೀಕಯ್ಯ ಎರಡು ವಾರಗಳಿಗೊಮ್ಮೆ ತನ್ನ ಪತ್ನಿಯ ಊರಾದ ಬಂಟ್ವಾಳ ತಾಲೂಕಿನ ಬಿಳಿಯೂರಿಗೆ ಹೋಗಿ ಬರುತ್ತಿದ್ದರೆನ್ನಲಾಗಿದೆ. ಸೋಮವಾರದಂದು ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತರ ಪತ್ನಿ ಯಶೋಧ ನೀಡಿದ ದೂರಿನಂತೆ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top