ವಿಟ್ಲ ಪೊಲೀಸರ ಮೇಲೆ ದಾಂಧಲೆ ನಡೆಸಿದ್ದ ನಾಲ್ವರ ಬಂಧನ ► ಆರೋಪಿಗಳಿಗೆ ಉರುಳಾದ ತಾವೇ ತೆಗೆದ ಗೂಂಡಾ ಕೃತ್ಯದ ವೀಡಿಯೋ
(ನ್ಯೂಸ್ ಕಡಬ) newskadaba.com ವಿಟ್ಲ, ಎ.26. ಪೊಲೀಸ್ ಇಲಾಖೆಗೆ ಸೇರಿದ ಬೊಲೆರೋ ವಾಹನವನ್ನು ಅಡ್ಡಗಟ್ಟಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಾಲಾಪರಾಧಿ ಸಹಿತ ನಾಲ್ವರು ಆರೋಪಿಗಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪೈವಳಿಕೆ ಗ್ರಾಮದ ಸುಂಕದಕಟ್ಟೆ ನಿವಾಸಿಗಳಾದ ಕುಂಞ ಅಹಮ್ಮದ್ ಎಂಬವರ ಪುತ್ರ ರಾಝಿಕ್ ಎ.ಕೆ.(20), ಮೊಹಮ್ಮದ್ ಎಂಬವರ ಪುತ್ರ ನೌಫಲ್(19), ಅಬ್ದುಲ್ಲ ಎಂಬವರ ಪುತ್ರ ಹೈದರಾಲಿ(36) ಹಾಗೂ 17ರ ಹರೆಯದ ಓರ್ವ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ. ಆರೋಪಿಗಳು ಇತ್ತೀಚೆಗೆ ಜಮ್ಮು ಕಾಶ್ಮೀರದ ಕಥುವಾದ ಬಾಲಕಿ […]









