ಕಡಬ ಫೆಡರಲ್ ಬ್ಯಾಂಕ್ ಮ್ಯಾನೇಜರ್ ಗೆ ಪದೋನ್ನತಿ ಹೊಂದಿ ವರ್ಗಾವಣೆ ► ನೂತನ ಮ್ಯಾನೇಜರ್ ಆಗಿ ಪ್ರಮೋದ್ ಬಿ. ಪಾಟೀಲ್

(ನ್ಯೂಸ್ ಕಡಬ) newskadaba.com ಕಡಬ, ಎ.25. ಫೆಡರಲ್ ಬ್ಯಾಂಕ್ ಕಡಬ ಶಾಖೆಯಲ್ಲಿ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಜಾಯ್ಸನ್ ಡಿಸ್ನಿ ಡಿಸೋಜ ರವರು ಪದೋನ್ನತಿ ಹೊಂದಿ ಮಂಗಳೂರಿನ ಕಂಕನಾಡಿ ಶಾಖೆಗೆ ವರ್ಗಾವಣೆಗೊಂಡಿದ್ದಾರೆ‌. 2015 ರ ಜುಲೈ 18 ರಿಂದ ಕಡಬ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಎಪ್ರಿಲ್ 27 ರ ವರೆಗೆ ಕಡಬ ಶಾಖೆಯಲ್ಲಿಯೇ ಕರ್ತವ್ಯದಲ್ಲಿ ಮುಂದುವರಿಯಲಿದ್ದು, ನೂತನ ಮ್ಯಾನೇಜರ್ ಆಗಿ ಪ್ರಮೋದ್ ಬಿ. ಪಾಟೀಲ್ ಎಪ್ರಿಲ್ 30 ರಿಂದ ಕರ್ತವ್ಯಕ್ಕೆ […]

ಕಡಬ ಫೆಡರಲ್ ಬ್ಯಾಂಕ್ ಮ್ಯಾನೇಜರ್ ಗೆ ಪದೋನ್ನತಿ ಹೊಂದಿ ವರ್ಗಾವಣೆ ► ನೂತನ ಮ್ಯಾನೇಜರ್ ಆಗಿ ಪ್ರಮೋದ್ ಬಿ. ಪಾಟೀಲ್ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 98 ನಾಮಪತ್ರ ಸಲ್ಲಿಕೆ ► ಎಲ್ಲೆಲ್ಲಿ ಯಾರೆಲ್ಲ ಸ್ಪರ್ಧಿಸುತ್ತಾರೆ ಎಂದು ತಿಳಿಯಬೇಕೇ…?

(ನ್ಯೂಸ್ ಕಡಬ) newskadaba.com ಮಂಗಳೂರು, ಎ.25. ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದ್ದು, ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ 98 ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರಗಳ ಪರಿಶೀಲನೆಯು ಇಂದು ನಡೆಯಲಿದ್ದು, ನಾಮಪತ್ರ ಹಿಂದೆಗೆಯಲು ಎಪ್ರಿಲ್ 27 ಅಂತಿಮ ದಿನವಾಗಿದೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ. ಬೆಳ್ತಂಗಡಿ ಕ್ಷೇತ್ರ: ಕೆ. ವಸಂತ ಬಂಗೇರ(ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್), ಹರೀಶ್ ಪೂಂಜಾ (ಬಿ.ಜೆ.ಪಿ), ವೆಂಕಟೇಶ್ ಬೆಂಡೆ (ಪಕ್ಷೇತರ). ಮೂಡಬಿದ್ರೆ ಕ್ಷೇತ್ರ: ಕೆ. ಅಭಯಚಂದ್ರ(ಕಾಂಗ್ರೆಸ್),

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 98 ನಾಮಪತ್ರ ಸಲ್ಲಿಕೆ ► ಎಲ್ಲೆಲ್ಲಿ ಯಾರೆಲ್ಲ ಸ್ಪರ್ಧಿಸುತ್ತಾರೆ ಎಂದು ತಿಳಿಯಬೇಕೇ…? Read More »

ಕರಾವಳಿ

ಕೆ.ಸಿ.ಎಫ್ ಬಹರೈನ್ ವತಿಯಿಂದ ‘ಜಸ್ಟೀಸ್ ಫೋರ್ ಆಸಿಫಾ’ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಹರೈನ್, ಎ.25. ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಅಲೆಮಾರಿ ಮುಸ್ಲಿಂ ಬಕರ್ ವಾಲ್ ಬುಡಕಟ್ಟು ಸಮುದಾಯದ ಎಂಟರ ಹರೆಯದ ಬಾಲಕಿ “ಆಸಿಫಾ”ಳ ಅತ್ಯಾಚಾರ ಮತ್ತು ಉತ್ತರ ಪ್ರದೇಶದ ಉನ್ನೊವೊ ಹಾಗು ಗುಜಾರಾತಿನ ಸೂರತಿನಲ್ಲಿ ನಡೆದ ಹತ್ಯೆಯನ್ನು ಖಂಡಿಸಿ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಗುದೈಬಿಯ ಅಂಡಲಸ್ ಗಾರ್ಡನ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಿತು. ಕೆಸಿಎಫ್ ಮಹ್ರರಕ್ ಸೆಕ್ಟರ್ ಆಯೋಜಿಸಿದ “ಜಸ್ಟಿಸ್ ಫೋರ್ ಆಶಿಫಾ” ಪ್ರತಿಭಟನೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ

ಕೆ.ಸಿ.ಎಫ್ ಬಹರೈನ್ ವತಿಯಿಂದ ‘ಜಸ್ಟೀಸ್ ಫೋರ್ ಆಸಿಫಾ’ ಪ್ರತಿಭಟನೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.25. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಳೆದ ಒಂದು ವರ್ಷದಿಂದ ಸಂದರ್ಭ ಸಿಕ್ಕಿದಾಗಲೆಲ್ಲ ಲೈಂಗಿಕ ಕಿರುಕುಳ ನೀಡುತ್ತಿದ್ದುದಲ್ಲದೆ ಯಾರಲಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತೂರು ಕಸಬಾ ಗ್ರಾಮದ ನೆಹರೂ ನಗರ ಮುರ ನಿವಾಸಿ ಶಂಷೇರ್ ಖಾನ್(50) ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು ವರ್ಷದಿಂದ ಸಂದರ್ಭ ಸಿಕ್ಕಾಗೆಲ್ಲ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದ್ದು, ಅಡ್ಡಿ ಪಡಿಸಿದಾಗ ಹಲ್ಲೆ ನಡೆಸುತ್ತಿದ್ದನೆನ್ನಲಾಗಿದೆ.

ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ► ಆರೋಪಿಯ ಬಂಧನ Read More »

ಕರಾವಳಿ

ಬಂಟ್ವಾಳದಲ್ಲೂ ಕಣದಿಂದ ಹಿಂದೆ ಸರಿದ ಎಸ್ಡಿಪಿಐ..?? ► ನಾಮಪತ್ರ ಹಿಂಪಡೆಯುತ್ತಾರಾ ರಿಯಾಝ್ ಫರಂಗಿಪೇಟೆ…!!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.24. ರಾಜ್ಯದ ಗಮನ ಸೆಳೆದಿದ್ದ ಕರಾವಳಿಯ ಪ್ರಮುಖ ವಿಧಾನಸಭಾ ಕ್ಷೇತ್ರವಾದ ಬಂಟ್ವಾಳದಲ್ಲಿ ಸಚಿವ ರಮಾನಾಥ ರೈಯವರಿಗೆ ಎದುರಾಳಿಯಾಗಿ ಸ್ಪರ್ಧಿಸಲು ಅಣಿಯಾಗಿದ್ದ ಎಸ್ಡಿಪಿಐ ಪಕ್ಷವು ಕೊನೆಯ ಹಂತದಲ್ಲಿ ಕಣದಿಂದ ಹಿಂದೆ ಸರಿದಿದೆಯೆನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ಪಣತೊಟ್ಟಿದ್ದ ಎಸ್ಡಿಪಿಐ ಪಕ್ಷವು ಬಂಟ್ವಾಳದಲ್ಲಿ ಕೆಲವು ತಿಂಗಳುಗಳ ಮೊದಲೇ ಅಭ್ಯರ್ಥಿಯನ್ನಾಗಿ ರಿಯಾಝ್ ಫರಂಗಿಪೇಟೆ ಯವರನ್ನು ಘೋಷಣೆ ಮಾಡಿತ್ತಲ್ಲದೆ ಪ್ರಚಾರ ಕಾರ್ಯವನ್ನೂ ಕೈಗೊಂಡಿತ್ತು. ಅಲ್ಲದೆ ಅದ್ದೂರಿ ರ್ಯಾಲಿಯ‌ ಮೂಲಕ ತೆರಳಿ

ಬಂಟ್ವಾಳದಲ್ಲೂ ಕಣದಿಂದ ಹಿಂದೆ ಸರಿದ ಎಸ್ಡಿಪಿಐ..?? ► ನಾಮಪತ್ರ ಹಿಂಪಡೆಯುತ್ತಾರಾ ರಿಯಾಝ್ ಫರಂಗಿಪೇಟೆ…!! Read More »

ಕರಾವಳಿ

ಕುಡಿಯಲು ಹನಿ ಹನಿಯಾಗಿ ತೊಟ್ಟಿಕ್ಕುವ ಕಲುಷಿತ ನೀರು ► ‘ನೀರು – ಕಣ್ಣೀರು’ ಕಲ್ಲಾಜೆ ಕಾಲನಿಯ ದುಸ್ಥಿತಿ

(ನ್ಯೂಸ್ ಕಡಬ) newskadaba.com ಕಡಬ, ಎ.24. ಹನಿ ಹನಿಯಾಗಿ ತೊಟ್ಟಿಕ್ಕುವ ನೀರು… ಅದನ್ನು ಸಂಗ್ರಹಿಸಲು 24 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ… ಮೂಲಭೂತ ಸೌಕರ್ಯಗಳಲ್ಲೊಂದಾದ ಕುಡಿಯಲು ನೀರಿಲ್ಲದೆ ಕಲುಷಿತ ನೀರನ್ನೇ ಕುಡಿಯುವ ಪರಿಸ್ಥಿತಿ… ಇದು ಕಂಡುಬಂದಿರೋದು ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ಕಾಲನಿಯಲ್ಲಿ. ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿರುವ ಈ ಕಾಲನಿಯಲ್ಲಿ ಕರ್ನಾಟಕ ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮದ ವತಿಯಿಂದ ಹಾಗೂ ಐತ್ತೂರು ಗ್ರಾಮ ಪಂಚಾಯತ್ ವತಿಯಿಂದ ತಲಾ ಒಂದರಂತೆ ಒಟ್ಟು ಎರಡು ಬೋರ್ವೆಲ್ಗಳಿದ್ದರೂ ಕಳೆದ

ಕುಡಿಯಲು ಹನಿ ಹನಿಯಾಗಿ ತೊಟ್ಟಿಕ್ಕುವ ಕಲುಷಿತ ನೀರು ► ‘ನೀರು – ಕಣ್ಣೀರು’ ಕಲ್ಲಾಜೆ ಕಾಲನಿಯ ದುಸ್ಥಿತಿ Read More »

ಕರಾವಳಿ

ಈ ಬಾರಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಐವನ್ ಡಿಸೋಜ ► ಪ್ರಚಾರಕ್ಕಾಗಿ ಪ್ರಿಯಾಂಕಾ ಗಾಂಧಿ ಕಡಬಕ್ಕೆ…

(ನ್ಯೂಸ್ ಕಡಬ) newskadaba.com ಕಡಬ, ಎ.24. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯವರು ಗೆದ್ದೆ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಈ ಬಾರಿ ಕಾಂಗ್ರೆಸ್ ಬಿಜೆಪಿಗೆ ಈ ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ. ನೂರಕ್ಕೆ ನೂರು ಗೆಲುವು ನಮ್ಮದೇ ಎಂದು ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಸಚೇತಕ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅವರು ಮಂಗಳವಾರದಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ಅವರ ಪರ ಪ್ರಚಾರ ಕಾರ್ಯ ನಡೆಸಿ ಕಡಬದ

ಈ ಬಾರಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಐವನ್ ಡಿಸೋಜ ► ಪ್ರಚಾರಕ್ಕಾಗಿ ಪ್ರಿಯಾಂಕಾ ಗಾಂಧಿ ಕಡಬಕ್ಕೆ… Read More »

ಕರಾವಳಿ

ನೆಲ್ಯಾಡಿ: ನೇಣುಬಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.24. ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನೆಲ್ಯಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ನೆಲ್ಯಾಡಿಯ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಶಿರಾಡಿ ನಿವಾಸಿ ಪ್ರಕಾಶ್ ಎಂಬವರ ಪುತ್ರಿ ಅನು(18) ಎಂದು ಗುರುತಿಸಲಾಗಿದೆ. ಈಕೆ ಸೋಮವಾರ ರಾತ್ರಿ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲ್ಯಾಡಿ: ನೇಣುಬಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Read More »

ಕರಾವಳಿ

ಕಡಬದ ಆಯನ: ದೈವಗಳಿಗೆ ನೇಮ ಸಮಾಪ್ತಿ

(ನ್ಯೂಸ್ ಕಡಬ) newskadaba.com ಕಡಬ, ಎ.24. ಕಡಬದ ಜಾತ್ರೆ(ಆಯನ)ಯ ಕೊನೆಯ ದಿನವಾದ ಏ.23ರಂದು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಶಿರಾಡಿ ದೈವ, ಕಲ್ಕುಡ ದೈವ ಮತ್ತು ಕಲ್ಲುಟ್ರಿ ದೈವದ ನೇಮೋತ್ಸವ ನಡೆದು, ಮಾರಿಪೂಜಾ ಕಾರ್ಯಕ್ರಮ ನಡೆದು, ಕಡಬದ ಗಡಿ ಭಾಗದಲ್ಲಿ ದೈವದ ನೇಮ ಸಮಾಪ್ತಿಯಾಗುವುದರೊಂದಿಗೆ ಕಡಬದ ಜಾತ್ರೆ(ಆಯನ) ಕೊನೆಗೊಂಡಿತು. ಎ.15 ರಂದು ಆರಂಭಗೊಂಡ ಕಡಬದ ಆಯನ 9ನೇ ದಿನವಾದ ಎ.23ರಂದು ಶ್ರೀ ಅಮ್ಮನವರ ಪೂಜೆ ಮತ್ತು ದೈವಗಳ ನೇಮೋತ್ಸವ ನಡೆಯಿತು. ಅಂದು ಬೆಳಿಗ್ಗೆ ಪಾಲೋಳಿ ಕೊಪ್ಪದಿಂದ ಶ್ರೀ ಕಲ್ಕುಡ ದೈವ ಮತ್ತು

ಕಡಬದ ಆಯನ: ದೈವಗಳಿಗೆ ನೇಮ ಸಮಾಪ್ತಿ Read More »

ಕರಾವಳಿ

ಕೊನೆಯ ಕ್ಷಣದಲ್ಲಿ ಸುಳ್ಯ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಎಸ್ಡಿಪಿಐ ► ಕಾರಣವೇನು ಗೊತ್ತೇ…?

(ನ್ಯೂಸ್ ಕಡಬ) newskadaba.com ಸುಳ್ಯ, ಎ.24. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಎಸ್ಡಿಪಿಐ ಪಕ್ಷವು ಕೊನೆಯ ಹಂತದಲ್ಲಿ ಸ್ಪರ್ಧೆಯಿಂದ ಹಿಂಜರಿದಿದ್ದು, ಖಾತೆ ತೆರೆಯಲು ಪರದಾಡುತ್ತಿರುವ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಡಿಪಿಐ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದ ಆನಂದ ಮಿತ್ತಬೈಲ್, 2103 ರ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲಕರವಾಗಿತ್ತು. ಈ ಚುನಾವಣೆಯಲ್ಲೂ ಜಾತ್ಯಾತೀತ ಮತಗಳು ವಿಭಜನೆಯಾಗಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಕೊನೆಯ ಕ್ಷಣದಲ್ಲಿ ಸುಳ್ಯ ಕ್ಷೇತ್ರದಲ್ಲಿ ಎಸ್ಡಿಪಿಐ

ಕೊನೆಯ ಕ್ಷಣದಲ್ಲಿ ಸುಳ್ಯ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಎಸ್ಡಿಪಿಐ ► ಕಾರಣವೇನು ಗೊತ್ತೇ…? Read More »

ಕರಾವಳಿ
Scroll to Top