ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿ ಮತೀಯ ಗಲಭೆಗೆ ಪ್ರಚೋದನೆ ► ಪಂಜದ ಯುವಕ ಸೇರಿದಂತೆ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21. ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಉಂಟಾದ ಮತೀಯ ಗಲಭೆಗೆ ಕಾರಣವಾದ ಇಬ್ಬರನ್ನು ಡಿಸಿಐಬಿ ಇನ್ಸ್‌ಪೆಕ್ಟರ್ ಸುನಿಲ್ ವೈ ನಾಯಕ್‌ ನೇತೃತ್ವದ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಪಂಜ ಸಮೀಪದ ಪಂಬೆತ್ತಾಡಿ ನಿವಾಸಿ ಸದಾಶಿವ ಗೌಡ ಎಂಬವರ ಪುತ್ರ ದಿನೇಶ ಯಾನೆ ದಯಾನಂದ(31) ಹಾಗೂ ಬಂಟ್ವಾಳ ತಾಲೂಕಿನ ಕೆರಲೆ ನಿವಾಸಿ ಲೋಕೇಶ್ ಎಂಬವರ ಪುತ್ರ ನಿತಿನ್ ಎಂದು ಗುರುತಿಸಲಾಗಿದೆ. […]

ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿ ಮತೀಯ ಗಲಭೆಗೆ ಪ್ರಚೋದನೆ ► ಪಂಜದ ಯುವಕ ಸೇರಿದಂತೆ ಇಬ್ಬರ ಬಂಧನ Read More »

ಕರಾವಳಿ

ವಿಟ್ಲ: ವಿಜಯೋತ್ಸವದ ನಂತರ‌ ಉಂಟಾದ ಗಲಭೆಯ ಹಿನ್ನೆಲೆ ► ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.20. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಉಂಟಾದ ಘರ್ಷಣೆಗೆ ಕಾರಣವಾದ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ತಮೀಮ್(28), ಇಬ್ರಾಹಿಂ ಎಂಬವರ ಪುತ್ರ ಅಬ್ದುಲ್ ರಹಿಮಾನ್(35), ಅಬ್ದುಲ್ ಅಝೀಝ್ ಎಂಬವರ ಪುತ್ರ ಮಹಮ್ಮದ್ ಝಕರಿಯಾ(25) ಹಾಗೂ ಇಬ್ರಾಹಿಂ ಒಕ್ಕೆತ್ತೂರು ಎಂಬವರ ಪುತ್ರ ಸುಲೈಮಾನ್(38) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ವಿಟ್ಲ: ವಿಜಯೋತ್ಸವದ ನಂತರ‌ ಉಂಟಾದ ಗಲಭೆಯ ಹಿನ್ನೆಲೆ ► ನಾಲ್ವರು ಆರೋಪಿಗಳ ಬಂಧನ Read More »

ಕರಾವಳಿ

ಕಡಬ: ರಬ್ಬರ್ ನಿಗಮದ ಜಮೀನು ಒತ್ತುವರಿ ► ತಡೆಯಲು ಹೋದ ಸಿಬ್ಬಂದಿಗಳಿಗೆ ಜೀವ ಬೆದರಿಕೆ

(ನ್ಯೂಸ್ ಕಡಬ) newskadaba.com ಕಡಬ, ಮೇ.20. ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮಕ್ಕೆ ಸೇರಿದ ಜಮೀನನ್ನು ಒತ್ತುವರಿ ಮಾಡಿದ್ದನ್ನು ತಡೆಯಲು ಹೋದ ನಿಗಮದ ಸಿಬ್ಬಂದಿಗಳಿಗೆ ಕುಟುಂಬವೊಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಬ್ರಹ್ಮಣ್ಯ ರಬ್ಬರ್ ವಿಭಾಗದ ಮೂಜೂರು ಘಟಕದ ಮಂಡೆಕರ ಎಂಬಲ್ಲಿ ಮೀಸಲು ಅರಣ್ಯ ಪ್ರದೇಶದ 28.10 ಹೆಕ್ಟೇರ್ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮದ ವತಿಯಿಂದ ರಬ್ಬರ್ ಗಿಡಗಳನ್ನು ಮರು ನಾಟಿ ಮಾಡಲು ಹಿಟಾಚಿ ಯಂತ್ರದಲ್ಲಿ ಗುಂಡಿ

ಕಡಬ: ರಬ್ಬರ್ ನಿಗಮದ ಜಮೀನು ಒತ್ತುವರಿ ► ತಡೆಯಲು ಹೋದ ಸಿಬ್ಬಂದಿಗಳಿಗೆ ಜೀವ ಬೆದರಿಕೆ Read More »

ಕರಾವಳಿ

ಕುಂತೂರು: ವಾಟ್ಸ್ಅಪ್ ನಲ್ಲಿ ಫೋಟೊ ಹಾಕಿ ಪ್ರಚೋದನಕಾರಿ ಸಂದೇಶ ರವಾನೆ ► ಯುವಕನಿಂದ‌ ಕಡಬ ಠಾಣೆಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಮೇ.20. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ‌ ಎಂದು ಆರೋಪಿಸಿ ಯುವಕನೋರ್ವ ಕಡಬ ಠಾಣೆಗೆ ದೂರು ನೀಡಿದ್ದಾನೆ. ಪುತ್ತೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ, ಕುಂತೂರು ಗ್ರಾಮದ ಮುಡಿಪಿನಡ್ಕ ನಿವಾಸಿ ಅಬ್ದುಲ್‌ ಕುಂಞಿ‌ ಎಂಬವರ ಪುತ್ರ ಮಹಮ್ಮದ್ ನಿಝಾರ್ ಎಂಬಾತನ ಫೋಟೊದೊಂದಿಗೆ ಪ್ರಚೋದನಕಾರಿ ಆಡಿಯೋ ಸಂದೇಶವೊಂದು ವಾಟ್ಸ್ಅಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವುದನ್ನು ಕಂಡು ಆತಂಕಗೊಂಡು ಕಡಬ ಪೊಲೀಸರಿಗೆ ದೂರು ನೀಡಿದ್ದಾನೆ. ತಾನು ನಿರಪರಾಧಿಯಾಗಿದ್ದು, ಈ ಪ್ರಚೋದನಕಾರಿ ಸಂದೇಶಕ್ಕೂ ತನಗೂ ಯಾವುದೇ ಸಂಬಂಧವಿರುವುದಿಲ್ಲವಾದುದರಿಂದ ಈ ಪ್ರಕರಣವನ್ನು ಬೆಳಕಿಗೆ

ಕುಂತೂರು: ವಾಟ್ಸ್ಅಪ್ ನಲ್ಲಿ ಫೋಟೊ ಹಾಕಿ ಪ್ರಚೋದನಕಾರಿ ಸಂದೇಶ ರವಾನೆ ► ಯುವಕನಿಂದ‌ ಕಡಬ ಠಾಣೆಗೆ ದೂರು Read More »

ಕರಾವಳಿ

ಜಿಲ್ಲೆಯ ಕೆಲವೆಡೆ ಘರ್ಷಣೆ ಹಿನ್ನೆಲೆ ► ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಮುಂದುವರಿಕೆ‌

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.20. ನಿಷೇಧಾಜ್ಞೆಯ‌ ನಡುವೆಯೂ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ‌ 22 ಮಂಗಳವಾರ ಬೆಳಗ್ಗೆ 10 ಗಂಟೆಯವರೆಗೆ 144 ಸೆಕ್ಷನ್ ನಿಷೇದಾಜ್ಞೆ ಮುಂದುವರಿಕೆಯಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ವಿಶ್ವಾಸಮತ ಯಾಚನೆ ಹಿನ್ನೆಲೆ ಶನಿವಾರದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತಾದರೂ ಬಂಟ್ವಾಳ ತಾಲೂಕಿನ ವಿಟ್ಲ ಪರಿಸರದಲ್ಲಿ ಘರ್ಷಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮೇ 22 ರವರೆಗೆ ನಿಷೇಧಾಜ್ಞೆಯನ್ನು ಮುಂದುವರಿಸಿ ಆದೇಶಿಸಿದ್ದಾರೆ.

ಜಿಲ್ಲೆಯ ಕೆಲವೆಡೆ ಘರ್ಷಣೆ ಹಿನ್ನೆಲೆ ► ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಮುಂದುವರಿಕೆ‌ Read More »

ಕರಾವಳಿ

ವಿಟ್ಲ: ಬೈಕ್‌ – ಜೀಪ್ ಢಿಕ್ಕಿ ► ಬಸ್ಸಿನಡಿಗೆ ಬಿದ್ದ ಸಹ ಸವಾರ ಸ್ಥಳದಲ್ಲೇ‌ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಮೇ.20. ಬೈಕ್ ಸವಾರನೊಬ್ಬ ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ – ಮಂಗಳೂರು ರಸ್ತೆಯ ಒಕ್ಕೆತ್ತೂರು ಎಂಬಲ್ಲಿ ಭಾನುವಾರದಂದು ನಡೆದಿದೆ. ಮೃತ ಸವಾರನನ್ನು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಕುಂಞಮೋನು ಎಂಬವರ ಪುತ್ರ ಮಹಮ್ಮದ್ ಅಫ್ರಿದ್(17) ಎಂದು ಗುರುತಿಸಲಾಗಿದೆ. ವಿಟ್ಲದ ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಭಾನುವಾರದಂದು ತನ್ನ ಸ್ನೇಹಿತನೊಂದಿಗೆ ಹಿಂಬದಿ ಸವಾರನಾಗಿ ಬೈಕಿನಲ್ಲಿ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಒಕ್ಕೆತ್ತೂರು ಸೇತುವೆ ಬಳಿಯ ಅಪಾಯಕಾರಿ ತಿರುವಿನಲ್ಲಿ

ವಿಟ್ಲ: ಬೈಕ್‌ – ಜೀಪ್ ಢಿಕ್ಕಿ ► ಬಸ್ಸಿನಡಿಗೆ ಬಿದ್ದ ಸಹ ಸವಾರ ಸ್ಥಳದಲ್ಲೇ‌ ಮೃತ್ಯು Read More »

ಕರಾವಳಿ

ಸುಳ್ಯ: ಹಾಲು ಸಾಗಾಟದ ಮಿನಿ ಲಾರಿ ಪಲ್ಟಿ ► ರಸ್ತೆಯಲ್ಲಿ ಹರಡಿದ್ದ ಹಾಲಿನ ಪ್ಯಾಕೆಟನ್ನು ಕೊಂಡೊಯ್ಯಲು ಮುಗಿಬಿದ್ದ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.20. ಹಾಲು ಸಾಗಾಟದ ಮಿನಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಹಾಲು ಹಾಗೂ ಹಾಲಿನ ಉತ್ಪನ್ನಗಳು ಚೆಲ್ಲಾಪಿಲ್ಲಿಯಾದ ಘಟನೆ ಶನಿವಾರ ತಡರಾತ್ರಿ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ. ಮಂಗಳೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ನಂದಿನಿ ಹಾಲು ಸಾಗಾಟದ ವಾಹನ ಜಾಲ್ಸೂರು ಸಮೀಪದ ಬೊಳುಬೈಲು ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಅವರನ್ನು ಸ್ಥಳೀಯ ಖಾಸಗಿ

ಸುಳ್ಯ: ಹಾಲು ಸಾಗಾಟದ ಮಿನಿ ಲಾರಿ ಪಲ್ಟಿ ► ರಸ್ತೆಯಲ್ಲಿ ಹರಡಿದ್ದ ಹಾಲಿನ ಪ್ಯಾಕೆಟನ್ನು ಕೊಂಡೊಯ್ಯಲು ಮುಗಿಬಿದ್ದ ಸಾರ್ವಜನಿಕರು Read More »

ಕರಾವಳಿ

ಬುಧವಾರದಂದು 24 ನೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರಕ್ಕೆ ► ಸೋಮವಾರದಿಂದ ಬುಧವಾರಕ್ಕೆ ಮುಂದೂಡಲು ಕಾರಣವೇನು ಗೊತ್ತೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.20. ರಾಜ್ಯದಲ್ಲಿ ಚುನಾವಣೆ ನಡೆದೂ ಆಯಿತು. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಅತ್ಯಲ್ಪ ಅವಧಿಯಲ್ಲೇ ರಾಜೀನಾಮೆ ನೀಡಿಯೂ ಆಯಿತು. ಇನ್ನೇನಿದ್ದರೂ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಬಾಕಿ ಇರುವುದು ಮಾತ್ರ. ಸೋಮವಾರದಂದು ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುತ್ತಾರೆಂದು ಹೇಳಲಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಸಮಾರಂಭವನ್ನು ಮುಂದೂಡಲಾಗಿದ್ದು, ಬುಧವಾರದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಸೋಮವಾರದಂದು ರಾಜೀವ್ ಗಾಂಧಿ ಪುಣ್ಯತಿಥಿಯಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸಹಿತ ಪ್ರಮುಖ

ಬುಧವಾರದಂದು 24 ನೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರಕ್ಕೆ ► ಸೋಮವಾರದಿಂದ ಬುಧವಾರಕ್ಕೆ ಮುಂದೂಡಲು ಕಾರಣವೇನು ಗೊತ್ತೇ..? Read More »

ಕರಾವಳಿ

ವಿಟ್ಲ: ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ► ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಮೇ.20. ಮುಖ್ಯಮಂತ್ರಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸದೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಯ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ವಿಟ್ಲದಲ್ಲಿ ಶನಿವಾರ ರಾತ್ರಿ ನಡೆದಿದೆ. ಶನಿವಾರ ರಾತ್ರಿ ವಿಟ್ಲ ಪರಿಸರದ ಕೆಲಿಂಜ ಎಂಬಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆಯ ವೇಳೆ ಬಿಜೆಪಿ ವಿರೋಧಿ ಘೋಷಣೆ ಕೂಗಿದ್ದು, ಈ ಸಂದರ್ಭದಲ್ಲಿ ಇಲ್ಲಿನ ಸ್ಥಳೀಯ ಬಿಜೆಪಿ ಕಾರ್ಯಕರ್ತರೂ ಪ್ರತಿಯಾಗಿ ಕಾಂಗ್ರೆಸ್ ವಿರೋಧಿ ಘೋಷಣೆ ಕೂಗಿದ್ದಾರೆ

ವಿಟ್ಲ: ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ► ಹಲವರಿಗೆ ಗಾಯ Read More »

ಕರಾವಳಿ

ಬಂಟ್ವಾಳ: ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಟಿಪ್ಪರ್ ► ಸವಾರ ಮೃತ್ಯು, ಸಹ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮೇ.19. ಟಿಪ್ಪರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ. ಮೃತ ಸವಾರನನ್ನು ಬಂಟ್ವಾಳ ತಾಲೂಕಿನ ಪರ್ಲಿಯಾ ನಿವಾಸಿ ಇಕ್ಬಾಲ್(38) ಎಂದು ಗುರುತಿಸಲಾಗಿದೆ. ಸಹ ಸವಾರ ಬಶೀರ್(30) ಗಾಯಗೊಂಡಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಯಮಹಾ ಎಫ್ ಝಡ್ ಬೈಕ್ ನಲ್ಲಿ ಮಂಗಳೂರು ಕಡೆ

ಬಂಟ್ವಾಳ: ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಟಿಪ್ಪರ್ ► ಸವಾರ ಮೃತ್ಯು, ಸಹ ಸವಾರನಿಗೆ ಗಾಯ Read More »

ಕರಾವಳಿ
Scroll to Top