ಗ್ಯಾಸ್ ಸಿಲಿಂಡರ್ ಸ್ಫೋಟ ► ಇಬ್ಬರಿಗೆ ಗಾಯ, ನಾಲ್ಕು ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಮೇ.22. ಎಲ್‍ಪಿಜಿ ಸಿಲಿಂಡರೊಂದು ಸ್ಫೋಟಗೊಂಡ ಪರಿಣಾಮ ನಾಲ್ಕು ಮನೆಗಳಿಗೆ ಹಾನಿಯಾಗಿ ಕಾರೊಂದು ಜಖಂಗೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ಮಂಗಳವಾರದಂದು ನಡೆದಿದೆ. ಇಲ್ಲಿನ ಎಳ್ಳುಪುರ ಗ್ರಾಮದ ಮಂಜುನಾಥ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಹೊರಗಡೆ ನಿಲ್ಲಿಸಲಾಗಿದ್ದ ಸ್ವಿಫ್ಟ್ ಡಿಸೈರ್ ಕಾರು ಜಖಂಗೊಂಡಿದೆ. ಸ್ಫೋಟದ ಸಂದರ್ಭದಲ್ಲಿ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದು ಸ್ಥಳೀಯ ಆಸ್ವತ್ರೆಗೆ ದಾಖಲಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, […]

ಗ್ಯಾಸ್ ಸಿಲಿಂಡರ್ ಸ್ಫೋಟ ► ಇಬ್ಬರಿಗೆ ಗಾಯ, ನಾಲ್ಕು ಮನೆಗಳಿಗೆ ಹಾನಿ Read More »

ಕರ್ನಾಟಕ

ನೂತನ ಮಖ್ಯಮಂತ್ರಿ ಅವರಿಂದ 53 ಸಾವಿರ ಕೋಟಿ ಸಾಲ ಮನ್ನಾ?

ನಾಳೆ ಕನಾ೯ಟಕ ರಾಜ್ಯ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿರುವ ಎಚ್ ಡಿ ಕೆ ಅವರು ತಾವು ಕೊಟ್ಟ ಆಶ್ವಾಸನೆ ಅಂತೆ ಸಾಲ ಮನ್ನಾ ಮಾಡುತ್ತಾರೊ ಇಲ್ಲವೊ ಎಂದು ಕಾದು ನೊಡಬೇಕಾಗಿದೆ. ಮತಯಾಚನೆ ವೇಳೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಎಚ್ ಡಿ ಕೆ ಅವರು ಯಾವ ನಿಧಾ೯ರ ತೆಗೆದುಕೊಳ್ಳುತ್ತಾರೆ ಎಂದು ಜನರು ಆತುರದಿಂದ ಕಾಯುತ್ತಿದ್ದಾರೆ. ಇದೀಗ ಸಕಾ೯ರವು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 42 ಸಾವಿರ ಕೋಟಿ, ಗ್ರಾಮೀಣ ಬ್ಯಾಂಕ್ ನಲ್ಲಿ 8ಸಾವಿರ ಕೋಟಿ, ಸಹಕಾರ

ನೂತನ ಮಖ್ಯಮಂತ್ರಿ ಅವರಿಂದ 53 ಸಾವಿರ ಕೋಟಿ ಸಾಲ ಮನ್ನಾ? Read More »

ಕರ್ನಾಟಕ

ಧರ್ಮಸ್ಥಳದಲ್ಲಿ ಬಂದಿಳಿದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಮೇ.22. ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಇಂದು ಬೆಳಗ್ಗೆ ಧರ್ಮಸ್ಥಳಕ್ಕೆ ಆಗಮಿಸಿದ್ದು, ಜಿಲ್ಲಾ ಎಸ್ಪಿ ಡಾ.ಬಿ.ಆರ್.ರವೀಕಾಂತೇ ಗೌಡ ಸ್ವಾಗತಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಳಕ್ಕೆ ಆಗಮಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳದ ವಸಂತ ಮಹಲ್ ಹೆಲಿಪ್ಯಾಡಿಗೆ ಬಂದಿಳಿದ ಕುಮಾರಸ್ವಾಮಿ ಅವರನ್ನು ದೇವಸ್ಥಾನದ ವತಿಯಿಂದ ರಸ್ತೆ ಮಾರ್ಗವಾಗಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಈ

ಧರ್ಮಸ್ಥಳದಲ್ಲಿ ಬಂದಿಳಿದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ Read More »

ಕರಾವಳಿ

►► ಮರೆಯಲಾಗದ ನೆನಪು ► ಮಂಗಳೂರು ಭೀಕರ ವಿಮಾನ ದುರಂತಕ್ಕೆ ಇಂದಿಗೆ ಎಂಟು ವರ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಇಲ್ಲಿನ ಬಜ್ಪೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ನಡೆದು ಇಂದಿಗೆ ಎಂಟು ವರ್ಷ ಸಂದಿದೆ. ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಗೀಡಾಗಿ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು. 2010 ರ ಮೇ 22 ರಂದು ಮುಂಜಾನೆ ಬಜ್ಪೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಇಳಿದ ಏರ್ ಇಂಡಿಯಾ ವಿಮಾನ 6:14 ರ ಸಮಯದಲ್ಲಿ ಪೈಲಟ್ ನ ಸಣ್ಣ ತಪ್ಪಿನಿಂದಾಗಿ ಕೆಂಜಾರು ಗುಡ್ಡೆಯಲ್ಲಿ

►► ಮರೆಯಲಾಗದ ನೆನಪು ► ಮಂಗಳೂರು ಭೀಕರ ವಿಮಾನ ದುರಂತಕ್ಕೆ ಇಂದಿಗೆ ಎಂಟು ವರ್ಷ Read More »

ಕರಾವಳಿ

ನಿಪಾಹ್’ ಮಾರಕ‌ ಸೋಂಕಿಗೆ ಬೆಚ್ಚಿಬಿದ್ದ ಕೇರಳ ► 16 ರ ಗಡಿ ದಾಟಿದೆ ಮೃತರ ಸಂಖ್ಯೆ

(ನ್ಯೂಸ್ ಕಡಬ) newskadaba.com ಕೇರಳ, ಮೇ.21. ಅಪರಿಚಿತ ವೈರಸ್ ಸೋಂಕಿನಿಂದ ಬೆಚ್ಚಿಬಿದ್ದಿದ್ದ ಕೇರಳ ವೈದ್ಯಕೀಯ ಕ್ಷೇತ್ರವು ಕೊನೆಗೂ ಮಾರಕ ಸೋಂಕನ್ನು ಪತ್ತೆಹಚ್ಚಿದೆ. ಕೇರಳದಲ್ಲಿ ಈಗಾಗಲೇ 16 ಕ್ಕಿಂತಲೂ ಅಧಿಕ ಜನರನ್ನು ಬಲಿ ಪಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿರುವ ವೈರಾಣುವನ್ನು ‘ನಿಪಾಹ್’ ಎಂದು ಗುರುತಿಸಲಾಗಿದ್ದು, ಈ ಮಾರಕ ಸೋಂಕಿನ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸೇರಿದಂತೆ ಇಡೀ ವೈದ್ಯಕೀಯ ಲೋಕವೇ ಆತಂಕಕ್ಕೆ ಒಳಗಾಗಿದೆ. ನಿಪಾಹ್ ವೈರಾಣು1998 ರಲ್ಲೇ ಮಲೇಷಿಯಾದಲ್ಲಿ ಪತ್ತೆಯಾಗಿದ್ದರೂ, ಈ ಸೋಂಕಿಗೆ ಇದುವರೆಗೆ ಲಸಿಕೆ‌ ಕಂಡು

ನಿಪಾಹ್’ ಮಾರಕ‌ ಸೋಂಕಿಗೆ ಬೆಚ್ಚಿಬಿದ್ದ ಕೇರಳ ► 16 ರ ಗಡಿ ದಾಟಿದೆ ಮೃತರ ಸಂಖ್ಯೆ Read More »

ರಾಷ್ಟ್ರೀಯ ನ್ಯೂಸ್

ಕಡಬ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿಯವರ ಸಹೋದರ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.21. ಇಲ್ಲಿನ ಕೆದಂಬಾಡಿ ಬೈಲಂಗಡಿ ದಿ.ಪದ್ಯಯ್ಯ ಪೂಜಾರಿಯವರ ಪುತ್ರ ,ಕಡಬ ಗ್ರಾ.ಪಂ.ಸದಸ್ಯ ಕ್ರಷ್ಣಪ್ಪ ಪೂಜಾರಿಯವರ ಸಹೋದರ ಸುರೇಶ್(34ವ) ಸೋಮವಾರದಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಸುರೇಶ್ ರವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗಷ್ಟೇ ಮನೆಗೆ ಬಂದಿದ್ದ ಅವರಿಗೆ ಶನಿವಾರ ರಾತ್ರಿ ಮೆದುಳಿನಲ್ಲಿ ತೊಂದರೆ ಉಂಟಾಗಿದ್ದು ಬಳಿಕ ಅವರನ್ನು ಮಂಗಳೂರಿನ ಕೆ.ಎಂ.ಸಿ ಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದಾರೆ. ಮೃತರು ತಾಯಿ ವೆಂಕಮ್ಮ ಸಹೋದರರಾದ ಶೇಖರ, ಕ್ರಷ್ಣಪ್ಪ, ಸಹೋದರಿಯರಾದ ಯಶೋದಾ,

ಕಡಬ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿಯವರ ಸಹೋದರ ಹೃದಯಾಘಾತದಿಂದ ನಿಧನ Read More »

ಕರಾವಳಿ

ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ಧರ್ಮಸ್ಥಳಕ್ಕೆ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಮೇ.21. ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೇ 22 ಮಂಗಳವಾರದಂದು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಮಂಗಳವಾರ ಬೆಳಿಗ್ಗೆ 8.30 ಕ್ಕೆ ಧರ್ಮಸ್ಥಳ ವಸಂತ ಮಹಲ್ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿರುವ ಕುಮಾರಸ್ವಾಮಿ ಶ್ರೀ ಕ್ಷೇತ್ರ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 11.45 ಕ್ಕೆ ವಸಂತ ಮಹಲ್ ಹೆಲಿಪ್ಯಾಡ್ ನಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೆಣಸೆ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ನಲ್ಲಿ ತೆರಳಿ ಶೃಂಗೇರಿ ಶಾರದಾಂಬಾ ದೇವಿಯ ದರ್ಶನ ಪಡೆದು ವಿಶೇಷ

ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ಧರ್ಮಸ್ಥಳಕ್ಕೆ Read More »

ಕರಾವಳಿ

ಡ್ರಾಯಿಂಗ್: ಆಲಂಕಾರು ಶ್ರೀ ದುರ್ಗಾಂಬ ಕಾಲೇಜಿಗೆ ಶೇ.100 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಮೇ.21. ಕನ್ನಡ ಪ್ರೌಢಶಿಕ್ಷಣ ಮಂಡಳಿ 2017-18 ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ಲಭಿಸಿದೆ.  ಪರೀಕ್ಷೆಗೆ ಹಾಜರಾದ 244 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 106 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 104 ವಿದ್ಯಾರ್ಥಿಗಳು ದ್ವ್ವಿತೀಯ ಶ್ರೇಣಿ, 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಲ್ಲಿ ಉತಿರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಡ್ರಾಯಿಂಗ್: ಆಲಂಕಾರು ಶ್ರೀ ದುರ್ಗಾಂಬ ಕಾಲೇಜಿಗೆ ಶೇ.100 ಫಲಿತಾಂಶ Read More »

ಕರಾವಳಿ

ಕಡಬ ಪೇಟೆಯ ರಸ್ತೆಯಲ್ಲಿ ಬೀಡಾಡಿ ಆಡುಗಳ ಓಡಾಟ ► ಮಾಲಕರ ವಿರುದ್ಧ ಕ್ರಮಕ್ಕೆ ಸ್ಥಳಿಯಾಡಳಿತದ ಚೆಲ್ಲಾಟ

(ನ್ಯೂಸ್ ಕಡಬ) newskadaba.com ಕಡಬ, ಮೇ.21.  ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಜಾನುವಾರು , ಆಡು, ನಾಯಿ ಇತ್ಯಾದಿ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುವವರ ವಿರುದ್ದ ಕ್ರಮಕೈಗೊಳ್ಳಲು ಸ್ಥಳಿಯಾಡಳಿತ ಮುಂದಾಗಿದ್ದರೂ ಮಾಲಕರು ಈ ಬಗ್ಗೆ ಗಮನಹರಿಸುವಂತೆ ಕಂಡುಬರುತ್ತಿಲ್ಲ ಕಡಬ ಪೇಟೆಯ ಹಲವೆಡೆ ಸಾಕು ಪ್ರಾಣಿಗಳು ಎಲ್ಲೆಂದರಲ್ಲಿ ತಿರುಗಾಡುತ್ತಿವೆ. ಸ್ಥಳಿಯಾಡಳಿತದ ಕಾನೂನನ್ನು ಗಾಳಿಗೆ ತೂರಿದಂತೆ ಕಾಣುತ್ತಿದೆ. ವಾಹನ ಅಪಘಾತಕ್ಕೆ ರಸ್ತೆಯಲ್ಲಿ ಅಡ್ಡದಿಡ್ಡಿ ಓಡಾಡುವ ಪ್ರಾಣಿಗಳು ಕಾರಣವಾಗುತ್ತವೆ ಎಂದು ಕಡಬ ಗ್ರಾಮ ಪಂಚಾಯಿತಿ ಸಾಕು ಪ್ರಾಣಿಗಳನ್ನು ತಮ್ಮ ಮನೆಯಿಂದ ಹೊರಗೆ

ಕಡಬ ಪೇಟೆಯ ರಸ್ತೆಯಲ್ಲಿ ಬೀಡಾಡಿ ಆಡುಗಳ ಓಡಾಟ ► ಮಾಲಕರ ವಿರುದ್ಧ ಕ್ರಮಕ್ಕೆ ಸ್ಥಳಿಯಾಡಳಿತದ ಚೆಲ್ಲಾಟ Read More »

ಕರಾವಳಿ

ಅಪರಿಚಿತ ವೈರಸ್ ಸೋಂಕಿಗೆ ಮೂರು ಬಲಿ, ಹಲವರು ಗಂಭೀರಾವಸ್ಥೆಯಲ್ಲಿ ► ಬೆಚ್ಚಿಬಿದ್ದ ಕೇರಳ ವೈದ್ಯಕೀಯ ಲೋಕ

(ನ್ಯೂಸ್ ಕಡಬ) newskadaba.com ಕೇರಳ, ಮೇ.21. ವೈರಸ್ ಸೋಂಕಿಗೆ ತುತ್ತಾದ ಒಂದೇ ಕುಟುಂಬದ ಮೂವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೇರಳದ ಕಲ್ಲಿಕೋಟೆಯ ಪೆರಂಬಾರ ಎಂಬಲ್ಲಿ ನಡೆದಿದೆ. ಮೃತರ ದುರ್ದೈವಿಗಳನ್ನು ಪೆರಂಬಾರ ನಿವಾಸಿಗಳಾದ ಮುಹಮ್ಮದ್ ಸಾದಿಕ್, ಅವರ ಸಹೋದರ ಮುಹಮ್ಮದ್ ಸಾಲಿಹ್ ಹಾಗೂ ಮರಿಯಮ್ಮ ಎಂಮದು ಗುರುತಿಸಲಾಗಿದೆ. ಜ್ವರ ಉಲ್ಬಣಗೊಂಡು ಮೃತಪಟ್ಟಿದ್ದು, ಯಾವ ಕಾರಣದಿಂದಾಗಿ ಮೃತಪಟ್ಟರೆನ್ನುವುದು ಮಾತ್ರ ಇನ್ನೂ ದೃಢಪಟ್ಟಿಲ್ಲದ ಕಾರಣ ಕೇರಳದ ವೈದ್ಯ ಲೋಕವೇ ಬೆಚ್ಚಿಬಿದ್ದಿದೆ. ಅಲ್ಲದೆ ವೈದ್ಯಕೀಯ ತಜ್ಞರನ್ನು ಶೀಘ್ರದಲ್ಲೇ ರಾಜ್ಯಕ್ಕೆ ಕಳುಹಿಸಬೇಕು ಎಂದು

ಅಪರಿಚಿತ ವೈರಸ್ ಸೋಂಕಿಗೆ ಮೂರು ಬಲಿ, ಹಲವರು ಗಂಭೀರಾವಸ್ಥೆಯಲ್ಲಿ ► ಬೆಚ್ಚಿಬಿದ್ದ ಕೇರಳ ವೈದ್ಯಕೀಯ ಲೋಕ Read More »

ಕರಾವಳಿ
Scroll to Top