ಕಡಬ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿಯವರ ಸಹೋದರ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.21. ಇಲ್ಲಿನ ಕೆದಂಬಾಡಿ ಬೈಲಂಗಡಿ ದಿ.ಪದ್ಯಯ್ಯ ಪೂಜಾರಿಯವರ ಪುತ್ರ ,ಕಡಬ ಗ್ರಾ.ಪಂ.ಸದಸ್ಯ ಕ್ರಷ್ಣಪ್ಪ ಪೂಜಾರಿಯವರ ಸಹೋದರ ಸುರೇಶ್(34ವ) ಸೋಮವಾರದಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಮೃತಪಟ್ಟರು.


ಸುರೇಶ್ ರವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗಷ್ಟೇ ಮನೆಗೆ ಬಂದಿದ್ದ ಅವರಿಗೆ ಶನಿವಾರ ರಾತ್ರಿ ಮೆದುಳಿನಲ್ಲಿ ತೊಂದರೆ ಉಂಟಾಗಿದ್ದು ಬಳಿಕ ಅವರನ್ನು ಮಂಗಳೂರಿನ ಕೆ.ಎಂ.ಸಿ ಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದಾರೆ. ಮೃತರು ತಾಯಿ ವೆಂಕಮ್ಮ ಸಹೋದರರಾದ ಶೇಖರ, ಕ್ರಷ್ಣಪ್ಪ, ಸಹೋದರಿಯರಾದ ಯಶೋದಾ, ಮೀನಾಕ್ಷಿ, ರೇವತಿ, ಶಾರದಾರವರನ್ನು ಅಗಲಿದ್ದಾರೆ. ಮೃತರು ಮನೆಗೆ ಹಲವಾರು ಗಣ್ಯರು ಭೇಟಿ ನೀಡಿದ್ದಾರೆ.

Scroll to Top