(ನ್ಯೂಸ್ ಕಡಬ) newskadaba.com, ಸೆ.17 . ಮಂಗಳೂರಿನ ಜೈಲಿನಲ್ಲಿ ಬೀಡಿಗಾಗಿ ಕೈದಿಗಳು ಗಲಾಟೆ ನಡೆಸಿದ್ದು, ಗ್ಯಾಸ್ ಸಿಲಿಂಡರ್ನಿಂದ ಅಡುಗೆಮನೆ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ಜೈಲು ಅಧಿಕಾರಿಗಳು ಅಡುಗೆಮನೆಯ ಗೇಟಿಗೆ ಬೀಗ ಹಾಕಿದಾಗ, ಫೈಜಲ್ ಎಂಬ ಕೈದಿ ಗ್ಯಾಸ್ ಸಿಲಿಂಡರ್ನಿಂದ ಗೇಟ್ ಹಾಗೂ ಬೀಗಕ್ಕೆ ಹೊಡೆದು, ಗೇಟ್ ತೆರೆಯದಿದ್ದರೆ ಸಿಲಿಂಡರ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.ಬೀಡಿ ನೀಡುವವರೆಗೆ ಸೆಲ್ಗಳಿಗೆ ಹಿಂತಿರುಗದಂತೆ ಇತರ ಕೈದಿಗಳನ್ನು ಪ್ರಚೋದಿಸಿ ಒಟ್ಟುಗೂಡಿಸಲಾಯಿತು.
ಈ ಗದ್ದಲದಿಂದಾಗಿ ಜೈಲಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ, ಅಧಿಕಾರಿಗಳ ಕೆಲಸಕ್ಕೆ ಅಡಚಣೆಯುಂಟಾಗಿದೆ.ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




