ಸುಳ್ಯ: ಹಾಲು ಸಾಗಾಟದ ಮಿನಿ ಲಾರಿ ಪಲ್ಟಿ ► ರಸ್ತೆಯಲ್ಲಿ ಹರಡಿದ್ದ ಹಾಲಿನ ಪ್ಯಾಕೆಟನ್ನು ಕೊಂಡೊಯ್ಯಲು ಮುಗಿಬಿದ್ದ ಸಾರ್ವಜನಿಕರು



(ನ್ಯೂಸ್ ಕಡಬ) newskadaba.com ಸುಳ್ಯ, ಮೇ.20. ಹಾಲು ಸಾಗಾಟದ ಮಿನಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಹಾಲು ಹಾಗೂ ಹಾಲಿನ ಉತ್ಪನ್ನಗಳು ಚೆಲ್ಲಾಪಿಲ್ಲಿಯಾದ ಘಟನೆ ಶನಿವಾರ ತಡರಾತ್ರಿ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ.







ಮಂಗಳೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ನಂದಿನಿ ಹಾಲು ಸಾಗಾಟದ ವಾಹನ ಜಾಲ್ಸೂರು ಸಮೀಪದ ಬೊಳುಬೈಲು ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಹಾಲು ಹಾಗೂ ಹಾಲಿನ ಉತ್ಪನ್ನಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದರಿಂದ ಸಾರ್ವಜನಿಕರು ಮನೆಗೆ ಕೊಂಡೊಯ್ಯಲು ನಾ ಮೊದಲು ತಾ ಮೊದಲು ಎಂಬಂತೆ ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂದಿತು.






error: Content is protected !!
Scroll to Top