ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿಗೆ ಚಾಲನೆ ► ಬಿ.ಎ., ಬಿ.ಕಾಂ., ಬಿ.ಬಿ.ಎ. ತರಗತಿಗಳಿಗೆ ದಾಖಲಾತಿ ಆರಂಭ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.26. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಘಟಕವು ನೆಲ್ಯಾಡಿಯಲ್ಲಿ ಆರಂಭಗೊಳ್ಳಲಿದ್ದು, ಆ ಪ್ರಯುಕ್ತ ಶುಕ್ರವಾರದಂದು ಸಂತಜಾರ್ಜ್ ವಿದ್ಯಾಸಂಸ್ಥೆ ಆವರಣದಲ್ಲಿ ಕಾಲೇಜಿನ ಕಚೇರಿ ಉದ್ಘಾಟಿಸಿ ದಾಖಲಾತಿಗೆ ಚಾಲನೆ ನೀಡಲಾಯಿತು. ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ವಿ.ವಿ.ಉಪಕುಲಪತಿ ಪ್ರೊ.ಭೈರಪ್ಪ, ಮಂಗಳೂರು ವಿಶ್ವವಿದ್ಯಾನಿಲಯವು ದೇಶದಲ್ಲಿಯೇ 31ನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯ ಸರಕಾರದ ನೆರವಿನೊಂದಿಗೆ ಉಡುಪಿಯಲ್ಲಿ 141 ಕೋಟಿ ರೂ.ವೆಚ್ಚದಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರವು ಆರಂಭಗೊಳ್ಳಲಿದ್ದು ಇದು ರಾಷ್ಟ್ರದಲ್ಲೇ ಪ್ರಪ್ರಥಮ ಪ್ರಯತ್ನವಾಗಿದೆ. ನೆಲ್ಯಾಡಿಯಲ್ಲಿ ಕಾಲೇಜು ಆರಂಭಿಸಲು […]

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿಗೆ ಚಾಲನೆ ► ಬಿ.ಎ., ಬಿ.ಕಾಂ., ಬಿ.ಬಿ.ಎ. ತರಗತಿಗಳಿಗೆ ದಾಖಲಾತಿ ಆರಂಭ Read More »

ಕರಾವಳಿ

ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ಹಿನ್ನೆಲೆ ► ಇಂದು(ಮೇ.26) ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.26. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಟಿ.ಎಲ್. ಮತ್ತು ಎಸ್.ಎಸ್. ವಿಭಾಗ ಮಂಗಳೂರು ವತಿಯಿಂದ ಹಾಲಿ 110 ಕೆವಿ ನೆಟ್ಲಮುಡ್ನೂರು – ಪುತ್ತೂರು ಏಕಮಾರ್ಗವನ್ನು ದ್ವಿಮಾರ್ಗ ರಚಿಸಿ 110 ಕೆವಿ ನೆಟ್ಲಮುಡ್ನೂರು – ಪುತ್ತೂರು ಮಾರ್ಗದಿಂದ 110/11 ಕೆವಿ ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಮೇ 26 ಶನಿವಾರ ಬೆಳಿಗ್ಗೆ 08 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಆದುದರಿಂದ 110/11 ಕೆವಿ ಪುತ್ತೂರು

ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ಹಿನ್ನೆಲೆ ► ಇಂದು(ಮೇ.26) ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ Read More »

ಕರಾವಳಿ

ಶತಾಯುಷಿ ಸಾಲುಮರದ ತಿಮ್ಮಕ್ಕನನ್ನು ವಾಟ್ಸ್ಅಪ್ ನಲ್ಲಿ ಕೊಂದ ಕಿಡಿಗೇಡಿಗಳು ► ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸಂದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.26. ಶತಾಯುಷಿ ಸಾಲುಮರದ ತಿಮ್ಮಕ್ಕನನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸಂದೇಶವನ್ನು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸ್ಅಪ್ ಹಾಗೂ ಫೇಸ್‌ಬುಕ್‌ ಗಳಲ್ಲಿ ಹರಿಯಬಿಟ್ಟು ವಿಕೃತ ಸಂತೋಷವನ್ನು ಅನುಭವಿಸಿದ್ದಾರೆ. ಶುಕ್ರವಾರ ರಾತ್ರಿಯಿಂದ ಹರಿದಾಡತೊಡಗಿದ ಈ ಸಂದೇಶವನ್ನು ನಿಜ ಎಂದು ತಿಳಿದು ಹಲವರು ನಾಮುಂದು ತಾಮುಂದು ಎನ್ನುವಂತೆ ಶೇರ್ ಮಾಡಿದ್ದಾರೆ. ಕೊನೆಗೆ ಇದು ಒಂದು ಸುಳ್ಳು ಸುದ್ದಿಯಾಗಿದ್ದು, ಯಾರೋ ವಿಕೃತ ಸಂತೋಷಿಗಳ ಕುತಂತ್ರದಿಂದಾಗಿ

ಶತಾಯುಷಿ ಸಾಲುಮರದ ತಿಮ್ಮಕ್ಕನನ್ನು ವಾಟ್ಸ್ಅಪ್ ನಲ್ಲಿ ಕೊಂದ ಕಿಡಿಗೇಡಿಗಳು ► ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸಂದೇಶ Read More »

ಕರ್ನಾಟಕ

ಜನರನ್ನು ಉದ್ರೇಕಗೊಳಿಸಿ ಕರಾವಳಿ ಪ್ರದೇಶವನ್ನು ಹಾಳು ಮಾಡುವಂತಹಾ ಘಟನೆ ಇನ್ಮುಂದೆ ನಡೀಲಿಕ್ಕೆ ಸಾಧ್ಯವಿಲ್ಲ..!! ► ಮತೀಯವಾದಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ ಸಿಎಂ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.26. ಬಹುಮತ ಸಾಬೀತುಪಡಿಸಿದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ‌ ಮಾಡದಿದ್ದಲ್ಲಿ ಸೋಮವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಿದ ವಿಪಕ್ಷ ನಾಯಕ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬಿಎಸ್ವೈ ಭಾಷಣ‌ ಮುಗಿಸಿ ಸಭಾ ತ್ಯಾಗ ಮಾಡಿದ ನಂತರ ಮಾತನಾಡಿದ ಕುಮಾರಸ್ವಾಮಿ, ಸೋಮವಾರದೊಳಗೆ ಸಾಲಮನ್ನಾ ಮಾಡದಿದ್ದಲ್ಲಿ ಕರ್ನಾಟಕ ಬಂದ್ ಮಾಡುತ್ತಾರಂತೆ. ಇಂತಹಾ ಹಲವು ಬಂದ್ ಗಳನ್ನು ನನ್ನ ರಾಜಕೀಯ ಜೀವನದಲ್ಲಿ ನಾನು ನೋಡಿದ್ದೇನೆ. ಈ ರೀತಿ ಜನಗಳನ್ನು ಇವರೇನಾದರೂ ಉದ್ರೇಕಗೊಳಿಸಿ,

ಜನರನ್ನು ಉದ್ರೇಕಗೊಳಿಸಿ ಕರಾವಳಿ ಪ್ರದೇಶವನ್ನು ಹಾಳು ಮಾಡುವಂತಹಾ ಘಟನೆ ಇನ್ಮುಂದೆ ನಡೀಲಿಕ್ಕೆ ಸಾಧ್ಯವಿಲ್ಲ..!! ► ಮತೀಯವಾದಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ ಸಿಎಂ ಕುಮಾರಸ್ವಾಮಿ Read More »

ಕರ್ನಾಟಕ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಅಪಹರಣ ಸುದ್ದಿ ಶುದ್ಧ ಸುಳ್ಳು ► ಯಾರೂ ಆತಂಕಪಡುವ ಅಗತ್ಯವಿಲ್ಲ: ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಈರಯ್ಯ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.25. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸ್ಅಪ್ ಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಅಪಹರಣದ ಬಗೆಗಿನ ವೀಡಿಯೋ ಕ್ಲಿಪ್ ಗಳು ಹಾಗೂ ಸಂದೇಶಗಳು ಸುಳ್ಳಾಗಿದ್ದು ಅನಪೇಕ್ಷಣೀಯವಾಗಿರುತ್ತದೆ. ಆದುದರಿಂದ ಇಂತಹ ಪ್ರಚೋದನಕಾರಿ ಉಹಾಪೋಹಗಳಿಗೆ ಹಾಗೂ ಸಂದೇಶಗಳಿಗೆ ಕಿವಿಗೊಡದೆ ಮತ್ತು ತಮ್ಮ ಗ್ರಾಮಗಳಲ್ಲಿ ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಅವರ ಮೇಲೆ ಹಲ್ಲೆ ಮಾಡುವುದಾಗಲಿ, ಮತ್ಯಾವುದೇ ಕೃತ್ಯಕ್ಕೆ ಮುಂದಾಗದೇ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 08257-271995 ಅಥವಾ 9843053901ಕ್ಕೆ ಕರೆ ಮಾಡುವ ಮೂಲಕ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಅಪಹರಣ ಸುದ್ದಿ ಶುದ್ಧ ಸುಳ್ಳು ► ಯಾರೂ ಆತಂಕಪಡುವ ಅಗತ್ಯವಿಲ್ಲ: ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಈರಯ್ಯ Read More »

ಕರಾವಳಿ

ಕುಂತೂರು: ಶಾಲೆಗೆಂದು ತೆರಳಿ ನಾಪತ್ತೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮೇ.24. ಶಾಲೆಗೆಂದು ತೆರಳಿ ಮನೆಯಿಂದ ತೆರಳಿ ಶಾಲೆಗೂ ತೆರಳದೆ ಮನೆಗೂ ಬಾರದೆ ನಾಪತ್ತೆಯಾಗಿದ್ದ ಬಾಲಕ ಶುಕ್ರವಾರದಂದು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಕುಂತೂರು ಗ್ರಾಮದ ಕಂಡತ್ತಡ್ಕ ನಿವಾಸಿ ಜಯಂತಿ ಎಂಬವರ ಪುತ್ರ, ಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶರತ್ ಕುಮಾರ್ ಬುಧವಾರದಂದು ಶಾಲೆಗೆಂದು ತೆರಳಿ ಆ ಬಳಿಕ ನಾಪತ್ತೆಯಾಗಿದ್ದನೆನ್ನಲಾಗಿದೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಪತ್ತೆಯಾಗದ ಕಾರಣ ಆತನ ತಾಯಿ ಕಡಬ ಠಾಣೆಗೆ ದೂರು ನೀಡಿದ್ದರು. ಶುಕ್ರವಾರದಂದು ಈತನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ

ಕುಂತೂರು: ಶಾಲೆಗೆಂದು ತೆರಳಿ ನಾಪತ್ತೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆ Read More »

ಕರಾವಳಿ

ಘಟ್ಟ ಪ್ರದೇಶದಲ್ಲಿ ಮಳೆ‌ ಸುರಿದ ಹಿನ್ನೆಲೆ ► ಕಡಬ – ಎಡಮಂಗಲ ಸಂಪರ್ಕ ರಸ್ತೆಯ ಪಾಲೋಳಿ ತಾತ್ಕಾಲಿಕ ಸೇತುವೆ ಮುಳುಗಡೆ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಇದರಿಂದಾಗಿ ಕಡಬ – ಎಡಮಂಗಲವನ್ನು ಸಂಪರ್ಕಿಸುವ ಪಿಜಕ್ಕಳ ಪಾಲೋಳಿ ತಾತ್ಕಾಲಿಕ ಸೇತುವೆಯು ಮುಳುಗಡೆಗೊಂಡಿದ್ದು, ಸಂಚಾರಕ್ಕೆ ಅಡಚಣೆಯುಂಟಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಸಾರ್ವಜನಿಕರಿಂದಲೇ ನಿರ್ಮಾಣಗೊಂಡು ಬೇಸಿಗೆಯಲ್ಲಿ ಮಾತ್ರ ಸಂಚಾರಕ್ಕೆ ಮುಕ್ತವಾಗಿದ್ದ ಪಾಲೋಳಿ ಸೇತುವೆಯನ್ನು ಸಿಮೆಂಟ್ ಪೈಪ್ ಗಳನ್ನು ಬಳಸಿ ಊರವರೇ ಎಂಟು ಲಕ್ಷ ರೂ. ವೆಚ್ಚದಲ್ಲಿ ಶ್ರಮದಾನದ ಮೂಲಕ ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಮಳೆಗಾಲದಲ್ಲಿ ಮುಳುಗಡೆಗೊಂಡು

ಘಟ್ಟ ಪ್ರದೇಶದಲ್ಲಿ ಮಳೆ‌ ಸುರಿದ ಹಿನ್ನೆಲೆ ► ಕಡಬ – ಎಡಮಂಗಲ ಸಂಪರ್ಕ ರಸ್ತೆಯ ಪಾಲೋಳಿ ತಾತ್ಕಾಲಿಕ ಸೇತುವೆ ಮುಳುಗಡೆ Read More »

ಕರಾವಳಿ

ವಿಶ್ವಾಸ ಗೆದ್ದ ‘ಕುಮಾರ’ ► ಬಹುಮತ ಸಾಬೀತು ಪಡಿಸಿದ ಸಿಎಂ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.25. ವಿಶ್ವಾಸ ಮತ ಯಾಚನೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಗೆದ್ದಿದ್ದು, ನೂತನ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹುಮತವಿದೆ ಎಂದು ಸ್ಪೀಕರ್ ಘೋಷಿಸಿದ್ದಾರೆ. ಇದರೊಂದಿಗೆ ಹಲವು ದಿನ ರಾಜಕೀಯ ಗೊಂದಲಗಳಿಗೆ ತಕ್ಕಮಟ್ಟಿಗೆ ವಿರಾಮ‌ ದೊರೆತಂತಾಗಿದೆ. ವಿಧಾನಸಭೆ ಕಲಾಪದಲ್ಲಿ ಸುದೀರ್ಘ ಭಾಷಣ ಮಾಡಿದ ಬಿಎಸ್ವೈ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ ಕಲಾಪದಿಂದ ಬಿಜೆಪಿ ಶಾಸಕರ ಜೊತೆ ಹೊರನಡೆದಿದ್ದರು. ವಿಪಕ್ಷದ ಅನುಪಸ್ಥಿತಿಯಲ್ಲಿ ಬಹುಮತ ಸಾಬೀತುಪಡಿಸಲಾಗಿದ್ದು, ಕುಮಾರಸ್ವಾಮಿ ವಿಶ್ವಾಸವನ್ನು ಗೆದ್ದಿದ್ದಾರೆ.

ವಿಶ್ವಾಸ ಗೆದ್ದ ‘ಕುಮಾರ’ ► ಬಹುಮತ ಸಾಬೀತು ಪಡಿಸಿದ ಸಿಎಂ ಕುಮಾರಸ್ವಾಮಿ Read More »

ಕರ್ನಾಟಕ

ಸರಕಾರ ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ಸೋಮವಾರ ಕರ್ನಾಟಕ ಬಂದ್ ► ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.25. ಭಾನುವಾರದೊಳಗೆ ಸಾಲಮನ್ನಾ ಮಾಡದಿದ್ದಲ್ಲಿ ಸೋಮವಾರದಂದು ಕರ್ನಾಟಕ ರಾಜ್ಯ ಸ್ವಯಂಘೋಷಿತ ಬಂದ್ ಆಗಲಿದೆ ಎಂದು ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ. ಸದನದಲ್ಲಿ ಸುದೀರ್ಘ ಭಾಷಣ ಮಾಡಿದ ಅವರು ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರಕಾರದ ನೂತನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಿದ 48 ಗಂಟೆಗಳ ಒಳಗೆ ರಾಜ್ಯದ ರೈತರ ಮೇಲಿರುವ ಸಹಕಾರಿ ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲವನ್ನು ಮನ್ನಾ ಮಾಡದಿದ್ದಲ್ಲಿ ಕರ್ನಾಟಕ ಬಂದ್ ಆಗಲಿದೆ ಎಂದು ಸದನದಿಂದ ಹೊರನಡೆದು ಸಭಾತ್ಯಾಗ

ಸರಕಾರ ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ಸೋಮವಾರ ಕರ್ನಾಟಕ ಬಂದ್ ► ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ Read More »

ಕರ್ನಾಟಕ

ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ, ಅಧಿಕಾರ ದಾಹದಿಂದ ಹೊರಟಿರೋ ಅಪ್ಪ – ಮಕ್ಕಳ ವಿರುದ್ಧ ► ಸದನದಲ್ಲಿ ಗುಡುಗಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.25. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ, ಹೋರಾಟ ಏನಿದ್ದರೂ ಅಧಿಕಾರ ದಾಹದಿಂದ ಹೊರಟಿರೋ ಅಪ್ಪ – ಮಕ್ಕಳ ವಿರುದ್ಧ ಎಂದು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಒಂದು ಕಾರಣಕ್ಕಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಮುಳುಗುವ ದೋಣಿಯಲ್ಲಿ ಕಾಲಿಟ್ಟರಲ್ಲಾ ಎಂದು ಒಂದು ಕ್ಷಣ ಭಾವುಕರಾದ ಬಿಎಸ್ವೈ, ಕೆಲವೇ ದಿನಗಳಲ್ಲಿ ಅಪ್ಪ – ಮಕ್ಕಳಿಂದ ಕಾಂಗ್ರೆಸ್ ಪಕ್ಷ ನಾಶವಾಗಲಿದೆ ಎಂದರು. ಈ ಹಿಂದೆ ಬಿಜೆಪಿ

ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ, ಅಧಿಕಾರ ದಾಹದಿಂದ ಹೊರಟಿರೋ ಅಪ್ಪ – ಮಕ್ಕಳ ವಿರುದ್ಧ ► ಸದನದಲ್ಲಿ ಗುಡುಗಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ Read More »

ಕರ್ನಾಟಕ
Scroll to Top