ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಕ್ಷಣ ಗಣನೆ ► ಬಹುಮತ ಸಾಬೀತುಪಡಿಸುತ್ತಾ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರಕಾರ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.25. ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ನೂತನ ಮುಖ್ಯಮಂತ್ರಿ ಮಂಡಿಸಿದ್ದು, ವಿಶ್ವಾಸಮತ ಪ್ರಕ್ರಿಯೆ ಆರಂಭಗೊಂಡಿದೆ‌. ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಜನರ ಕಷ್ಟಗಳನ್ನು ತುಂಬಾ ಹತ್ತಿರದಿಂದ ನಾನು ನೋಡಿದ್ದು, ಯಾವುದೇ ಸಮಾಜವೂ ಪ್ರತಿಭಟನೆ ಮಾಡಲು‌ಅವಕಾಶ ನೀಡುವುದಿಲ್ಲ. ನಾನಿನ್ನೂ ಅಧಿಕೃತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲ್ಲ. ಬಹುಮತ ಸಾಬೀತುಪಡಿಸಿದ ನಂತರ ನಾನು ಎಲ್ಲಾ ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದರು. ಈ ನಡುವೆ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಕೆ.ಆರ್.ರಮೇಶ್ ಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾದರು. ಮುಖ್ಯಮಂತ್ರಿ […]

ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಕ್ಷಣ ಗಣನೆ ► ಬಹುಮತ ಸಾಬೀತುಪಡಿಸುತ್ತಾ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರಕಾರ..? Read More »

ಕರಾವಳಿ

ಇಚಿಲಂಪಾಡಿ: ಪರಿಸರದಲ್ಲಿ ಕಾಡಾನೆ ಹಾವಳಿ ► ಕೆಲವೆಡೆ ಕೃಷಿ ನಾಶ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಕಡಬ, ಮೇ.25. ಇಲ್ಲಿನ ಇಚಿಲಂಪಾಡಿ ಪರಿಸರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸ್ತಳೀಯರನ್ನು ಭಯಭೀತರನ್ನಾಗಿಸಿದೆ. ಪರಿಸರದಲ್ಲಿ ಕಾಡಾನೆಗಳು ಹಲವರ ಕೃಷಿ ತೋಟಗಳಿಗೆ ದಾಳಿ ಮಾಡಿ ಕೃಷಿ ಹಾನಿಗೊಳಿಸಿದೆಯೆನ್ನಲಾಗಿದೆ. ಇಚ್ಲಂಪಾಡಿ ನಿವಾಸಿ ಆನಂದ ಪೂಜಾರಿ ಎಂಬವರ ತೋಟಕ್ಕೆ ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಬಾಳೆ, ಅಡಿಕೆ ಕೃಷಿಗಳನ್ನು ಹಾನಿಗೊಳಿಸಿದೆ. ರಾತ್ರಿ ವೇಳೆ ಆನೆ ತೋಟದಲ್ಲಿಯೇ ಇರುವುದರಿಂದ ಅಸುಪಾಸಿನ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ

ಇಚಿಲಂಪಾಡಿ: ಪರಿಸರದಲ್ಲಿ ಕಾಡಾನೆ ಹಾವಳಿ ► ಕೆಲವೆಡೆ ಕೃಷಿ ನಾಶ Read More »

ಕರಾವಳಿ

ನರಿಮೊಗರು: ರೈಲ್ವೇ ಮೇಲ್ಸೇತುವೆಗೆ ಆ್ಯಕ್ಟಿವಾ ಢಿಕ್ಕಿ ► ಅಂಚೆ ಪಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.25. ರೈಲ್ವೇ ಮೇಲ್ಸೇತುವೆಗೆ ದ್ವಿಚಕ್ರ ವಾಹನವೊಂದು ಢಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ಕಾಣಿಯೂರು – ಪುತ್ತೂರು ರಸ್ತೆಯ ನರಿಮೊಗರು ಗಡಿಪಿಲ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ಸವಾರನನ್ನು ಪುತ್ತೂರಿನ ಅಂಚೆಪಾಲಕ ಕಾಣಿಯೂರು ಮಠತ್ತಾರು ಚೋಮ ಎಂಬವರ ಪುತ್ರ ತನಿಯ ಮಾಯಿಲ(55) ಎಂದು ಗುರುತಿಸಲಾಗಿದೆ. ಎಂದಿನಂತೆ ಕರ್ತವ್ಯ ಮುಗಿಸಿ ತನ್ನ ಮನೆಗೆ ತೆರಳುತ್ತಿದ್ದಾಗ ಗಡಿಪಿಲ ಸಮೀಪದ ರೈಲ್ವೇ ಮೇಲ್ಸೇತುವೆಗೆ ಇವರು ಚಲಾಯಿಸುತ್ತಿದ್ದ ಆ್ಯಕ್ಟಿವಾ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಇವರನ್ನು

ನರಿಮೊಗರು: ರೈಲ್ವೇ ಮೇಲ್ಸೇತುವೆಗೆ ಆ್ಯಕ್ಟಿವಾ ಢಿಕ್ಕಿ ► ಅಂಚೆ ಪಾಲಕ ಮೃತ್ಯು Read More »

ಕರಾವಳಿ

ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಿತ್ರ ಇಂದು ತೆರೆಗೆ ► ಬಹು ನಿರೀಕ್ಷಿತ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ವಿಶೇಷತೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.25. ಕಲರ್ಸ್‌ ಆಫ್ ಆನೇಕಲ್‌ ಹೆಸರಿನಲ್ಲಿ ಸುದರ್ಶನ್‌, ರಾಮಮೂರ್ತಿ ಹಾಗೂ ದುಬೈಯ ಖ್ಯಾತ ಉದ್ಯಮಿ, ಹೆಸರಾಂತ ಗಾಯಕರು ಆಗಿರುವ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್  ಇಂಟರ್‌ನ್ಯಾಶನಲ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ ಖ್ಯಾತ ನಿರ್ದೇಶಕ ನರೇಂದ್ರಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷಿತ  ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಲನ ಚಿತ್ರ ಮೇ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ

ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಿತ್ರ ಇಂದು ತೆರೆಗೆ ► ಬಹು ನಿರೀಕ್ಷಿತ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ವಿಶೇಷತೆ ಗೊತ್ತೇ..? Read More »

ಕರ್ನಾಟಕ

ಜೂ.01 ರಿಂದ 61 ದಿನಗಳ ಕಾಲ ಮೀನುಗಾರಿಕೆಗೆ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.24. ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ, 1986 ಕರ್ನಾಟಕ ಸರ್ಕಾರದ ಅಧಿಸೂಚನೆಯ ಅನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‍ಬೋರ್ಡ್ ಅಥವಾ ಔಟ್‍ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರವರೆಗೆ (ಉಭಯ ದಿನಗಳು ಸೇರಿ) ಒಟ್ಟು

ಜೂ.01 ರಿಂದ 61 ದಿನಗಳ ಕಾಲ ಮೀನುಗಾರಿಕೆಗೆ ನಿಷೇಧ Read More »

ಕರಾವಳಿ

ಉಡುಪಿ: ಬಾವಲಿ ಜ್ವರದ ಬಗ್ಗೆ ಆತಂಕದ ಮಾತು ಕೇಳಿಬರುತ್ತಿರುವ ಹಿನ್ನೆಲೆ ► ಸಾವಿರಾರು ಬಾವಲಿಗಳ ನಡುವೆ ವಾಸಿಸುತ್ತಿರುವ ಕುಟುಂಬ ನಿಫಾಃ ಭೀತಿಯಲ್ಲಿ

(ನ್ಯೂಸ್ ಕಡಬ) newskadaba.com ಉಡುಪಿ, ಮೇ.24. ಕೇರಳ ವೈದ್ಯಲೋಕವನ್ನೇ ಬೆಚ್ಚಿಬೀಳಿಸಿದ್ದ ‘ನಿಪಾಃ’ ವೈರಸ್ ಬಗ್ಗೆ ಎಲ್ಲೆಲ್ಲೂ ಆತಂಕದ ಮಾತು ಕೇಳಿ ಬರುತ್ತಿರುವುದರ ನಡುವೆ ಉಡುಪಿಯಲ್ಲಿ ಸಾವಿರಾರು ಬಾವಲಿಗಳ ಮಧ್ಯೆ ವಾಸವಿರುವ ಕುಟುಂಬಗಳ ಸದಸ್ಯರು ಇದೀಗ ಬಾವಲಿ ಜ್ವರದ ಬಗ್ಗೆ ಭಯ ಭೀತರಾಗಿದ್ದಾರೆ. ಉಡುಪಿಯ ಕಾಪು ಪೇಟೆಯಲ್ಲಿನ ವಿಶ್ವನಾಥ ಶೆಣೈ ಸಂಕೀರ್ಣದ ಹಿಂಬದಿಯಲ್ಲಿರುವ ಹಟ್ಟಿಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಸಾವಿರಾರು ಬಾವಲಿಗಳು ವಾಸವಾಗಿವೆ. ಇದರ ಪಕ್ಕದಲ್ಲೇ ಹಲವು‌ ಕುಟುಂಬಗಳು ಹಿಂದಿನಿಂದಲೂ ಯಾವುದೇ ತೊಂದರೆ ಇಲ್ಲದೆ ವಾಸಿಸುತ್ತಿವೆ. ಆದರೆ ಇದೀಗ

ಉಡುಪಿ: ಬಾವಲಿ ಜ್ವರದ ಬಗ್ಗೆ ಆತಂಕದ ಮಾತು ಕೇಳಿಬರುತ್ತಿರುವ ಹಿನ್ನೆಲೆ ► ಸಾವಿರಾರು ಬಾವಲಿಗಳ ನಡುವೆ ವಾಸಿಸುತ್ತಿರುವ ಕುಟುಂಬ ನಿಫಾಃ ಭೀತಿಯಲ್ಲಿ Read More »

ಕರಾವಳಿ

ದಕ್ಷಿಣ ಕನ್ನಡದಲ್ಲಿ ನಿಫಾಃ ಪತ್ತೆಯಾಗಿಲ್ಲ: ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ► ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.24. ಕೇರಳ ರಾಜ್ಯವನ್ನೇ ತಲ್ಲಣಗೊಳಿಸಿದ್ದ ನಿಪಾಹ್ ವೈರಸ್ ಕರ್ನಾಟಕಕ್ಕೆ ಕಾಲಿಟ್ಟಿಲ್ಲ. ಕೇವಲ ವದಂತಿ ಮಾತ್ರವಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಸ್ಪಷ್ಟಪಡಿಸಿದ್ದಾರೆ. ಶಂಕಿತ ನಿಪಾಃ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಬ್ಬರ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದ್ದು, ಎರಡೂ ಪ್ರಕರಣಗಳಲ್ಲಿ ಋಣಾತ್ಮಕ ಫಲಿತಾಂಶ ಕಂಡುಬಂದಿದೆ. ಆದುದರಿಂದ ಯಾರೂ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದೆಂದು ಸೆಂಥಿಲ್‌ ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ನಿಫಾಃ ಪತ್ತೆಯಾಗಿಲ್ಲ: ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ► ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ Read More »

ಕರಾವಳಿ

ಕುಂತೂರು: ಶಾಲೆಗೆಂದು ತೆರಳಿದ ಬಾಲಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮೇ.24. ಶಾಲೆಗೆಂದು ತೆರಳಿದ ಬಾಲಕನೋರ್ವ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕುಂತೂರಿನಲ್ಲಿ ಬುಧವಾರದಂದು ನಡೆದಿದೆ. ನಾಪತ್ತೆಯಾಗಿರುವ ಬಾಲಕನನ್ನು ಕುಂತೂರು ಗ್ರಾಮದ ಕಂಡತ್ತಡ್ಕ ನಿವಾಸಿ ಜಯಂತಿ ಎಂಬವರ ಪುತ್ರ, ಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶರತ್ ಕುಮಾರ್ ಎಂದು‌ ಗುರುತಿಸಲಾಗಿದೆ. ಈತ ಬುಧವಾರದಂದು ಶಾಲೆಗೆಂದು ಮನೆಯಿಂದ ತೆರಳಿದ್ದು, ಆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದ್ದು, ಪತ್ತೆಯಾಗದ ಕಾರಣ ಆತನ ತಾಯಿ

ಕುಂತೂರು: ಶಾಲೆಗೆಂದು ತೆರಳಿದ ಬಾಲಕ ನಾಪತ್ತೆ Read More »

ಕರಾವಳಿ

85 ರ ಗಡಿ ದಾಟಿ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್‌ ಲೀಟರಿಗೆ 73 ರೂ. ► ಮೌನಕ್ಕೆ ಶರಣಾದ ಎನ್‌ಡಿಎ ಮಿತ್ರಪಕ್ಷ, ಸಾರ್ವಜನಿಕರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.24. ಪೆಟ್ರೋಲಿಯಂ ಉತ್ಪನ್ನಗಳು ಬೆಲೆಯು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಮುಂಬಯಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 85 ರ ಗಡಿಯನ್ನು ದಾಟಿದೆ. ಇದು ಭಾರತದಲ್ಲಿ ಇಲ್ಲಿಯವರೆಗೆ ದಾಖಲಾದ ಅತೀ ಗರಿಷ್ಟ ದರವಾಗಿದೆ. ಕಳೆದ ಹತ್ತು ದಿನಗಳಿಂದ ಸತತ ಏರಿಕೆ ಕಾಣುತ್ತಿದ್ದು, ಹಾಗಾಗಿ ಗರಿಷ್ಟ ದಾಖಲೆಯ ಬೆಲೆಯನ್ನು ಮುಟ್ಟಿದೆ‌. ಹಿಂದೆಂದೂ ಭಾರತದಲ್ಲಿ ಇಷ್ಟೊಂದು ಗರಿಷ್ಟ ದರ ದಾಖಲಾಗಿರಲಿಲ್ಲ. ಇಂದು ಮುಂಬಯಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 85.29 ರೂ. ಹಾಗೂ ಡೀಸೆಲ್‌ ಲೀಟರೊಂದಕ್ಕೆ 72.96 ರೂ. ಗಳಾಗಿದ್ದು, ಬೆಂಗಳೂರಿನಲ್ಲಿ

85 ರ ಗಡಿ ದಾಟಿ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್‌ ಲೀಟರಿಗೆ 73 ರೂ. ► ಮೌನಕ್ಕೆ ಶರಣಾದ ಎನ್‌ಡಿಎ ಮಿತ್ರಪಕ್ಷ, ಸಾರ್ವಜನಿಕರಿಂದ ಆಕ್ರೋಶ Read More »

ರಾಷ್ಟ್ರೀಯ ನ್ಯೂಸ್

ಚಂಡಮಾರುತದ ಭೀತಿಯಲ್ಲಿ ಕರಾವಳಿ..!! ► ಹವಾಮಾನ ಇಲಾಖೆ ಮುನ್ಸೂಚನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.24. ಯೆಮನ್ ನ ಏಡೆನ್ ನಗರದ ಈಶಾನ್ಯ ಮತ್ತು 560 ಕಿಮೀ ಸೊಕೊಟ್ರಾ ದ್ವೀಪಗಳ ಗಡಿ ಭಾಗದಲ್ಲಿ ನೆಲೆಯಾಗಿರುವ ಚಂಡಮಾರುತವು ಭಾರತದ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಡೆನ್ ಕೊಲ್ಲಿಯಲ್ಲಿ ಕೇಂದ್ರಿಕೃತವಾಗಿರುವ ಸಾಗರ್ ಚಂಡಮಾರುತವು ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ದ್ವೀಪ ಸಮೂಹಗಳಿಗೆ ಹಾಗೂ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

ಚಂಡಮಾರುತದ ಭೀತಿಯಲ್ಲಿ ಕರಾವಳಿ..!! ► ಹವಾಮಾನ ಇಲಾಖೆ ಮುನ್ಸೂಚನೆ Read More »

ಕರಾವಳಿ
Scroll to Top