ಅತ್ತಾವರ: ಮಗುವೊಂದು ನೆರೆನೀರಿನಲ್ಲಿ ಕೊಚ್ಚಿ ಹೋದ ಶಂಕೆ ► ಅಗ್ನಿಶಾಮಕ ದಳದಿಂದ ಮುಂದುವರಿದ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ಮಂಗಳೂರಿನಲ್ಲಿ ಮಗುವೊಂದು ಮಳೆ ನೀರಿಗೆ ಕೊಚ್ಚಿಹೋದ ಬಗ್ಗೆ ಶಂಕೆಯುಂಟಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶೋಧ ಕಾರ್ಯ ಆರಂಭವಾಗಿದೆ. ನಗರದ ವಿವಿಧೆಡೆ ಮಂಗಳವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಅತ್ತಾವರದಲ್ಲಿ ಮಗುವೊಂದು ಕಾಣೆಯಾಗಿದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಲ್ಲದೆ ಜಲಾವೃತವಾಗಿರುವ ಕಡೆಗಳಲ್ಲಿನ ಮನೆಗಳಿಂದ ಸಾರ್ವಜನಿಕರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಅತ್ತಾವರ: ಮಗುವೊಂದು ನೆರೆನೀರಿನಲ್ಲಿ ಕೊಚ್ಚಿ ಹೋದ ಶಂಕೆ ► ಅಗ್ನಿಶಾಮಕ ದಳದಿಂದ ಮುಂದುವರಿದ ಶೋಧ ಕಾರ್ಯ Read More »

ಕರಾವಳಿ

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ ಇಬ್ಬರು ಕಣ್ಮರೆ ► ನಾಲ್ವರ ರಕ್ಷಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಕಾರವಾರ, ಮೇ.29. ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಮಗುಚಿದ ಪರಿಣಾಮ ಇಬ್ಬರು ನೀರುಪಾಲಾದ ಘಟನೆ ಹೊನ್ನಾವರದಲ್ಲಿ ಮಂಗಳವಾರದಂದು ನಡೆದಿದೆ. ತಮಿಳುನಾಡು ಮೂಲದ ಬೋಟ್ ನಲ್ಲಿ ಆರು ಜನರಿದ್ದು, ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮಗುಚಿ ಬಿದ್ದಿದೆ. ಬೋಟ್ ನಲ್ಲಿದ್ದ ನಾಲ್ವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಇಬ್ಬರು ಕಣ್ಮರೆಯಾಗಿದ್ದು, ಕಾರವಾರ ಹಾಗೂ ಮಂಗಳೂರು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಕಣ್ಮರೆಯಾದವರ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ ಇಬ್ಬರು ಕಣ್ಮರೆ ► ನಾಲ್ವರ ರಕ್ಷಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು Read More »

ಕರಾವಳಿ

ಭಾರೀ ಗಾಳಿ‌-ಮಳೆಗೆ ತತ್ತರಿಸಿದ ಕರಾವಳಿ ► ಮಂಗಳೂರು ನಗರ ಪ್ರದೇಶ ಜಲಾವೃತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ರಾಜ್ಯಕ್ಕೆ ಮುಂಗಾರು ಕಾಲಿಟ್ಟಿದ್ದು, ವಾಯುಭಾರ ಕುಸಿತಗೊಂಡು ಕರಾವಳಿಯಾದ್ಯಂತ ಮಂಗಳವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗಿದೆ. ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಮಂಗಳೂರು ನಗರ ಪ್ರದೇಶಗಳಲ್ಲಿ ಕೃತಕ‌ ನೆರೆಯಾಗಿದ್ದು, ಪಾದಚಾರಿಗಳು, ವಾಹನ ಸವಾರರು ತೀವ್ರ ತೊಂದರೆಗೊಳಗಾಗಿದ್ದಾರೆ‌. ನಗರದ ವಿವಿಧ ಪ್ರದೇಶಗಳಲ್ಲಿ ಹಲವು ಮನೆಗಳಿಗೆ, ಅಂಗಡಿಗಳ ಒಳಗೆ ನೀರು ನುಗ್ಗಿದ್ದು, ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಮುಖ್ಯ ರಸ್ತೆಯಲ್ಲಿ ಸಂಚರಿಸಲಾಗದಂತಹ ಪರಿಸ್ಥಿತಿ ತಲೆದೋರಿದ್ದು, ನಗರ ಪ್ರದೇಶಗಳಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯವುಂಟಾಗಿದೆ.

ಭಾರೀ ಗಾಳಿ‌-ಮಳೆಗೆ ತತ್ತರಿಸಿದ ಕರಾವಳಿ ► ಮಂಗಳೂರು ನಗರ ಪ್ರದೇಶ ಜಲಾವೃತ Read More »

ಕರಾವಳಿ

ನೆಲ್ಯಾಡಿ: ಸಿಡಿಲು ಬಡಿದು ಓರ್ವ ಮೃತ್ಯು ► ತಾಯಿ-ಮಗು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.29. ಸಿಡಿಲಿನ ಆರ್ಭಟಕ್ಕೆ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನೆಲ್ಯಾಡಿಯಲ್ಲಿ ಸೋಮವಾರದಂದು ನಡೆದಿದೆ. ಮೃತ ವ್ಯಕ್ತಿಯನ್ನು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಳೀಕರೆ ನಿವಾಸಿ ಪ್ರವೀಣ್ ಡಿಸೋಜಾ ಎಂದು‌ ಗುರುತಿಸಲಾಗಿದೆ. ಮೇಸ್ತ್ರಿ ವೃತ್ತಿಯನ್ನು ನಿರ್ವಹಿಸುತ್ತಿದ್ದ ಪ್ರವೀಣ್ ತನ್ನ ಮನೆಯ ಹಾಲ್ ನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದಾಗ ಸಿಡಿಲು ಬಡಿದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಅವರ ಪತ್ನಿ ಲಲಿತಾ ಡಿಸೋಜ ಹಾಗೂ ಪುತ್ರಿ ಪ್ರಣೀತಾ ಪ್ರಿಯಾ ಡಿಸೋಜ ಅಪಾಯದಿಂದ ಪಾರಾಗಿದ್ದಾರೆ.

ನೆಲ್ಯಾಡಿ: ಸಿಡಿಲು ಬಡಿದು ಓರ್ವ ಮೃತ್ಯು ► ತಾಯಿ-ಮಗು ಅಪಾಯದಿಂದ ಪಾರು Read More »

ಕರಾವಳಿ

ರೈತರು ಯಾರೂ ಆತುರದ ನಿರ್ಧಾರ ತೆಗೆದುಕೊಳ್ಳದೆ ಸಂಯಮದಿಂದಿರಿ ► ಸಾಲಮನ್ನಾದ ಸುಳಿವು ನೀಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ

(ನ್ಯೂಸ್ ಕಡಬ) newskadaba.com ಮೈಸೂರು, ಮೇ.29. ರೈತರು ಯಾರೂ ಆತುರದ‌ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸಂಯಮದಿಂದ ಇರುವಂತೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಜಾತ್ಯಾತೀತ ತತ್ವಗಳು ಉಳಿಯಬೇಕೆಂಬ ನಿಲುವಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದು, ಎರಡೂ ಪಕ್ಷಗಳ ಮುಖಂಡರು ಸಾಲ‌ಮನ್ನಾ ವಿಚಾರವಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಒಂದು ವಾರಗಳ ಕಾಲ ಕಾಯುವಂತೆ ರೈತರಲ್ಲಿ ಮನವಿ ಮಾಡಿದ್ದು, ಈ ಮೂಲಕ ಸಾಲಮನ್ನಾದ ಸುಳಿವನ್ನು ನೀಡಿದ್ದಾರೆ.

ರೈತರು ಯಾರೂ ಆತುರದ ನಿರ್ಧಾರ ತೆಗೆದುಕೊಳ್ಳದೆ ಸಂಯಮದಿಂದಿರಿ ► ಸಾಲಮನ್ನಾದ ಸುಳಿವು ನೀಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ Read More »

ಕರ್ನಾಟಕ

ಕೊಣಾಜೆ: ಭಾರೀ ಗಾಳಿ ಮಳೆ ► ಧರೆಗುರುಳಿದ ವಿದ್ಯುತ್ ಪರಿವರ್ತಕ

(ನ್ಯೂಸ್ ಕಡಬ) newskadaba.com ಕಡಬ, ಮೇ.29. ಕಡಬ ಭಾಗದಲ್ಲಿ ಭಾನುವಾರ ರಾತ್ರಿ ಗಾಳಿ ಸಹಿತ ಮಳೆಗೆ ಕಡಬ – ಕೊಣಾಜೆ ರಸ್ತೆಯ ಕೊಣಾಜೆ ಎಂಬಲ್ಲಿ ವಿದ್ಯುತ್ ಪರಿವರ್ತಕ ಹೊತ್ತ ಎರಡು ವಿದ್ಯುತ್ ಕಂಬಗಳು ಪರಿವರ್ತಕ ಸಹಿತ ಧರೆಗುರುಳಿ ಮೆಸ್ಕಾಂಗೆ ಅಪಾರ ನಷ್ಟವುಂಟಾಗಿದೆ. ವಿದ್ಯುತ್ ಕಂಬ ಹಲವು ದಿನಗಳಿಂದ ವಾಲಿ ನಿಂತು ಅಪಾಯವನ್ನು ಸೂಚಿಸುತ್ತಿರುವ ಬಗ್ಗೆ ಸ್ಥಳೀಯರು ಮೆಸ್ಕಾಂನ ಗಮನ ಸೆಳೆದಿದ್ದರು. ಆದರೂ ಇಲಾಖೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ ಎನ್ನಲಾಗಿದೆ. ಭಾನುವಾರದಂದು ಪರಿವರ್ತಕ ಧರೆಗುರುಳಿದ್ದು, ಅಪಾರ ನಷ್ಟ ಸಂಭವಿಸಿದೆ

ಕೊಣಾಜೆ: ಭಾರೀ ಗಾಳಿ ಮಳೆ ► ಧರೆಗುರುಳಿದ ವಿದ್ಯುತ್ ಪರಿವರ್ತಕ Read More »

ಕರಾವಳಿ

ಹೊಸ್ಮಠ: ಹಳೆ ಸೇತುವೆಯ ಬದಿಯಲ್ಲಿನ ಮಣ್ಣು ಕುಸಿತ ► ಕೆಲಕಾಲ ಸಂಚಾರ ಅಸ್ತವ್ಯಸ್ತ

ಕಡಬ, ಮೇ.28. ಇಲ್ಲಿನ ಹೊಸ್ಮಠ ಹಳೆ ಸೇತುವೆಯ ಒಂದು ಭಾಗದ ಮಣ್ಣು ಕುಸಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರದಲ್ಲಿ ತಡೆಯುಂಟಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಮುಳುಗು ಸೇತುವೆಗೆ ಬದಲಿಯಾಗಿ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ನೂತನ ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲಿ ಹಳೆಯ ಸೇತುವೆಯ ಬದಿಯಿಂದ ನೀರನ್ನು ಬಿಟ್ಟಿದ್ದರಿಂದಾಗಿ ಸೇತುವೆಯ ಒಂದು ಭಾಗದ ಮಣ್ಣು ಕುಸಿದಿದೆ. ಸೋಮವಾರ ಮುಂಜಾನೆ ಕೊಲ್ಲೂರಿಗೆ ತೆರಳುತ್ತಿದ್ದ ಕಡಬದ ದೇವಿಪ್ರಸಾದ್ ಹೋಟೆಲ್

ಹೊಸ್ಮಠ: ಹಳೆ ಸೇತುವೆಯ ಬದಿಯಲ್ಲಿನ ಮಣ್ಣು ಕುಸಿತ ► ಕೆಲಕಾಲ ಸಂಚಾರ ಅಸ್ತವ್ಯಸ್ತ Read More »

ಕರಾವಳಿ

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಮೃತಪಟ್ಟ ಅಪರಿಚಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27. ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಶನಿವಾರದಂದು ಮಂಗಳೂರು ಬಸ್ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಸರಕಾರಿ ಬಸ್ ಹತ್ತಿದ್ದ ಈ ಅಪರಿಚಿತ ವ್ಯಕ್ತಿ ಸೀಟಿನಲ್ಲಿ ಮಲಗಿದ್ದು, ಈತ ನಿದ್ದೆ ಮಾಡಿರಬಹುದೆಂದು ಎಲ್ಲರೂ ಭಾವಿಸಿ ಸುಮ್ಮನಿದ್ದರು. ಆದರೆ ಬಸ್ ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಆಗಮಿಸಿ ಎಲ್ಲ ಪ್ರಯಾಣಿಕರು ಇಳಿದರೂ, ಈತ ಮಲಗಿದ ಸ್ಥಿತಿಯಲ್ಲಿದ್ದುದನ್ನು ಕಂಡು ಬಸ್ಸಿನ ಸಿಬ್ಬಂದಿ ಎಬ್ಬಿಸಲು ಪ್ರಯತ್ನಪಟ್ಟಾಗ ಮೃತಪಟ್ಟಿರುವುದು ಕಂಡು ಬಂದಿದೆ.

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಮೃತಪಟ್ಟ ಅಪರಿಚಿತ Read More »

ಕರಾವಳಿ

ಕೊರಗಜ್ಜನ ಹುಂಡಿಗೆ ಕಾಂಡೋಮ್ ಹಾಕಿ ದರ್ಪ ಮೆರೆದ ಯುವಕರು ► ತಿಂಗಳೊಳಗೆ ಸೊಂಟದ ಬಲ ಕಳೆದುಕೊಂಡಾಗ ಬೆಳಕಿಗೆ ಬಂತು ಕೊರಗಜ್ಜನ ಪವಾಡ

(ನ್ಯೂಸ್ ಕಡಬ) newskadaba.com ಉಡುಪಿ, ಮೇ.27. ಕೊರಗಜ್ಜ ಸ್ವಾಮಿಯ ಕಾಣಿಕೆ‌ ಹುಂಡಿಯ ಮೇಲೆ ಮೂತ್ರ‌ ಮಾಡಿ ಡಬ್ಬಿಯೊಳಗಡೆ ಕಾಂಡೋಮ್ ಹಾಕಿ ಅಗೌರವ ತೋರಿದ ಯುವಕನೋರ್ವನ ಆರೋಗ್ಯದಲ್ಲಿ ಏರುಪೇರಾಗಿ ಕೊನೆಗೆ ಕ್ಷಮೆ ಕೇಳಿ ಘಟನೆ ಇಲ್ಲಿನ ಕಟಪಾಡಿಯಲ್ಲಿ ನಡೆದಿದೆ. ಕಟಪಾಡಿ ಎಸ್.ವಿ.ಎಸ್ ಕಾಲೇಜಿನ ಮುಂಭಾಗದಲ್ಲಿರುವ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಗೆ ಮುಸ್ಲಿಂ ಯುವಕರ ಗುಂಪೊಂದು ಮೂತ್ರಮಾಡಿ, ಡಬ್ಬಿಯ ಒಳಗೆ ಒಂದಿಷ್ಟು ಕಸ ಮತ್ತು ಕಾಂಡೋಮ್ ಹಾಕಿ ದರ್ಪ ಮೆರೆದಿದ್ದಾರೆ ಎನ್ನಲಾಗಿದೆ. ದೈವಸ್ಥಾನದ ವಾರ್ಷಿಕೋತ್ಸವ ಸಮೀಪಿಸಿದಾಗ ಹತ್ತು

ಕೊರಗಜ್ಜನ ಹುಂಡಿಗೆ ಕಾಂಡೋಮ್ ಹಾಕಿ ದರ್ಪ ಮೆರೆದ ಯುವಕರು ► ತಿಂಗಳೊಳಗೆ ಸೊಂಟದ ಬಲ ಕಳೆದುಕೊಂಡಾಗ ಬೆಳಕಿಗೆ ಬಂತು ಕೊರಗಜ್ಜನ ಪವಾಡ Read More »

ಕರಾವಳಿ

ಕುದ್ರೋಳಿ: ಮಹಿಳೆಗೆ ಚೂರಿ ಇರಿತ ಪ್ರಕರಣವೂ ► ಸುಳ್ಳು ಸುದ್ದಿ ಹರಡಿದ ವಿಕೃತರೂ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.26. ಮನೆಗೆ ನುಗ್ಗಿ ಮಹಿಳೆಯೋರ್ವರಿಗೆ ಚೂರಿಯಿಂದ ಇರಿದ ಪ್ರಕರಣವೊಂದು ಕುದ್ರೋಳಿಯಲ್ಲಿ ನಡೆದಿದ್ದು, ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡಿ ಸಮಾಜದಲ್ಲಿ ಕೋಮು ಪ್ರಚೋದನೆ ಉಂಟುಮಾಡಿದ ಘಟನೆ ಶುಕ್ರವಾರದಂದು ನಡೆದಿದೆ. ಗುರುವಾರ ರಾತ್ರಿ ನಗರದ ಕುದ್ರೋಳಿಯಲ್ಲಿನ ಫ್ಲಾಟೊಂದರ ಒಳ‌ನುಗ್ಗಿದ ಯುವಕನೋರ್ವ ಮನೆಯಲ್ಲಿರುವ ಮಹಿಳೆಗೆ ಆಕೆಯ ಮಗನ ಎದುರೇ ಚಾಕುವಿನಿಂದ ಇರಿದು ಪರಾರಿಯಾಗುತ್ತಾನೆ. ಮಹಿಳೆಯ ಬೊಬ್ಬೆ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುತ್ತಾರೆ. ಸ್ಥಳದಲ್ಲಿ ಆತಂಕದ

ಕುದ್ರೋಳಿ: ಮಹಿಳೆಗೆ ಚೂರಿ ಇರಿತ ಪ್ರಕರಣವೂ ► ಸುಳ್ಳು ಸುದ್ದಿ ಹರಡಿದ ವಿಕೃತರೂ Read More »

ಕರಾವಳಿ
Scroll to Top