ಸಾಲು ಮರದ ತಿಮ್ಮಕ್ಕನ ಬಗ್ಗೆ ವದಂತಿ‌ ಹಬ್ಬಿಸಿದ ಆರೋಪ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.30. ಸಾಲು ಮರದ ತಿಮ್ಮಕ್ಕನ ಬಗ್ಗೆ ಸುಳ್ಳು ವದಂತಿ ಹಬ್ಬಿಸಿದವನ ಬೆಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಹರದನಹಳ್ಳಿ ಗ್ರಾಮದ ಪ್ರದೀಪ್ ಗೌಡ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹ ಲೋಕ ಎಂಬ ಫೇಸ್‍ಬುಕ್ ಗ್ರೂಪ್ ನಲ್ಲಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫೋಟೊವನ್ನು ಎಡಿಟ್ ಮಾಡಿ ಸುಳ್ಳು […]

ಸಾಲು ಮರದ ತಿಮ್ಮಕ್ಕನ ಬಗ್ಗೆ ವದಂತಿ‌ ಹಬ್ಬಿಸಿದ ಆರೋಪ ► ಆರೋಪಿಯ ಬಂಧನ Read More »

ಕರ್ನಾಟಕ

ತಾಂತ್ರಿಕ ದೋಷದಿಂದ ನದಿಗೆ ಉರುಳಿದ‌ ಕೆಎಸ್ಸಾರ್ಟಿಸಿ ಬಸ್ ► ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡೂರು, ಮೇ.30. ಬೆಂಗಳೂರಿನಿಂದ ಕುಂದಾಪುರಕ್ಕೆ‌ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ತಾಂತ್ರಿಕ ದೋಷವುಂಟಾದ ಪರಿಣಾಮ ಬಸ್ ನದಿಗೆ ಬಿದ್ದು 19 ಮಂದಿ ಗಾಯಗೊಂಡ ಘಟನೆ ಕಡೂರಿನಲ್ಲಿ ನಡೆದಿದೆ. ಕಡೂರು ವೇದಾವತಿ ನದಿಯ ಸೇತುವೆ ಬಳಿ ತಲುಪಿದಾಗ ಬಸ್ಸಿನ ಸ್ಟೇರಿಂಗ್‌ ರಾಡ್‌ ಮುರಿದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್ 30 ಅಡಿ ಆಳಕ್ಕೆ ಬಿದ್ದು ಈ ಅವಘಡ ಸಂಭವಿಸಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಬಸ್‌ ಪಲ್ಟಿಯಾದ ರಭಸಕ್ಕೆ

ತಾಂತ್ರಿಕ ದೋಷದಿಂದ ನದಿಗೆ ಉರುಳಿದ‌ ಕೆಎಸ್ಸಾರ್ಟಿಸಿ ಬಸ್ ► ಹಲವರಿಗೆ ಗಾಯ Read More »

ಕರ್ನಾಟಕ

ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಆಯ್ಕೆಯಾದ ಕಡಬದ ಮಿಥಿನ್ ಕುಮಾರ್ ► ಪ್ರೋ ಕಬಡ್ಡಿ ಟೂರ್ನಿಗೆ ಕಡಬ ತಾಲೂಕಿನ ಏಕೈಕ ಆಟಗಾರ ಮಿಥಿನ್

(ನ್ಯೂಸ್ ಕಡಬ) newskadaba.com ಕಡಬ, ಮೇ.30. ಮುಂಬರುವ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಪರ ಆಡಲು ಕಡಬ ತಾಲೂಕಿನ ಯುವಕನೋರ್ವ ಆಯ್ಕೆಯಾಗಿದ್ದಾರೆ.   ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಅನ್ನಯ್ಯ – ಪ್ರೇಮ ದಂಪತಿಯ ಪುತ್ರನಾಗಿ 1998 ಡಿಸೆಂಬರ್ 13 ರಂದು ಜನಿಸಿರುವ ಮಿಥಿನ್ ಕುಮಾರ್ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ವ್ಯಾಸಂಗವನ್ನು ಪೂರೈಸಿರುತ್ತಾರೆ. ಪ್ರೋ ಕಬಡ್ಡಿ 2018 ರಲ್ಲಿ ಜೂನಿಯರ್ ರಾಷ್ಟ್ರೀಯ ಆಟಗಾರರಾಗಿ ಬೆಂಗಾಲ್ ವಾರಿಯರ್ಸ್ ಪರ ಆಡಲಿದ್ದಾರೆ. ಕಳೆದ ತಿಂಗಳು‌ ಮುಂಬೈನಲ್ಲಿ

ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಆಯ್ಕೆಯಾದ ಕಡಬದ ಮಿಥಿನ್ ಕುಮಾರ್ ► ಪ್ರೋ ಕಬಡ್ಡಿ ಟೂರ್ನಿಗೆ ಕಡಬ ತಾಲೂಕಿನ ಏಕೈಕ ಆಟಗಾರ ಮಿಥಿನ್ Read More »

ಕ್ರೀಡಾ ನ್ಯೂಸ್

ಪಡುಬಿದ್ರಿ: ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಮೃತದೇಹ ಪತ್ತೆ ► ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಮೇ.30. ಮಂಗಳವಾರ ಸುರಿದ ಭಾರೀ ಮಳೆಗೆ ಕೃತಕ ನೆರೆ ನೀರಿನಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಬುಧವಾರದಂದು 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಮೃತ ಬಾಲಕಿಯನ್ನು ಪಾದೆಬೆಟ್ಟುವಿನ ಉಮೇಶ್ ಆಚಾರ್ಯ ಮತ್ತು ಆಶಾ ದಂಪತಿಯ ಪುತ್ರಿ, ಪಡುಬಿದ್ರೆಯ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ನಿಧಿ ಆಚಾರ್ಯ (9) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಶಾಲೆ ಬಿಟ್ಟಿದ್ದು, ನಿಧಿ ತನ್ನ ಸಹೋದರಿ

ಪಡುಬಿದ್ರಿ: ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಮೃತದೇಹ ಪತ್ತೆ ► ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ Read More »

ಕರಾವಳಿ

ಬೆಳ್ತಂಗಡಿ:‌ ಎರ್ಮಾಯ್‌ ಫಾಲ್ಸ್‌ನಿಂದ ಕೆಳಗೆ ಬಿದ್ದು ಚಿತ್ರ ನಿರ್ದೇಶಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.30. ಇಲ್ಲಿನ ಎರ್ಮಾಯ್ ಫಾಲ್ಸ್ ನಿಂದ‌ ಕಾಲು ಜಾರಿ ಕೆಳಗಡೆ‌ ಬಿದ್ದು ಕನ್ನಡ ಚಿತ್ರ ನಿರ್ದೇಶಕರೋರ್ವರು ಜಲ ಸಮಾಧಿಯಾದ ಘಟನೆ ಬುಧವಾರದಂದು ನಡೆದಿದೆ. ‘ಕನಸು ಕಣ್ಣು ತೆರೆದಾಗ’ ಕನ್ನಡ ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಕಟೀಲ್ ಎರ್ಮಾಯ್ ಫಾಲ್ಸ್‌ನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರ್ದೈವಿ. ಇವರು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕಾಡಿನ ಮಧ್ಯದಲ್ಲಿರುವ ಎರ್ಮಾಯ್ ಫಾಲ್ಸ್‌ನಲ್ಲಿ ಫೋಟೊ ಶೂಟ್ ನಡೆಸಲು ತನ್ನ ತಂಡದೊಂದಿಗೆ ತೆರಳಿದ್ದು, ಸಂತೋಷ್ ಕಾಲಿಗೆ

ಬೆಳ್ತಂಗಡಿ:‌ ಎರ್ಮಾಯ್‌ ಫಾಲ್ಸ್‌ನಿಂದ ಕೆಳಗೆ ಬಿದ್ದು ಚಿತ್ರ ನಿರ್ದೇಶಕ ಮೃತ್ಯು Read More »

ಕರಾವಳಿ

ಭಾರೀ ಮಳೆಯಿಂದ ತತ್ತರಿಸಿದ ಕರಾವಳಿ ► ಜಿಲ್ಲಾಡಳಿತಕ್ಕೆ ಸಕಲ ನೆರವು ನೀಡಲಾಗುವುದು: ಮುಖ್ಯಮಂತ್ರಿ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.30. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಸುರಿಯುತ್ತಿರುವ ತೀವ್ರ ಮಳೆಯ ಪರಿಸ್ಥಿತಿಯನ್ನು ರಾಜ್ಯ ಸರಕಾರ ನಿಕಟವಾಗಿ ಗಮನಿಸುತ್ತಿದ್ದು, ಸಂತ್ರಸ್ತರ ರಕ್ಷಣೆಗೆ ಜಿಲ್ಲಾಡಳಿತಕ್ಕೆ ರಾಜ್ಯ ಸರಕಾರ ಸಕಲ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಅತಿವೃಷ್ಟಿ ಬಗ್ಗೆ ಇಂದು ಬೆಳಿಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳಿಂದ ತಾನು ಮಾಹಿತಿ ಪಡೆದಿದ್ದು, ಮಳೆ ಹಾನಿ ತೀವ್ರತೆ ಕಡಿಮೆಗೊಳಿಸಲು ಮತ್ತು ಸಂತ್ರಸ್ತರ ಪ್ರಾಣಹಾನಿ ತಪ್ಪಿಸಲು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು

ಭಾರೀ ಮಳೆಯಿಂದ ತತ್ತರಿಸಿದ ಕರಾವಳಿ ► ಜಿಲ್ಲಾಡಳಿತಕ್ಕೆ ಸಕಲ ನೆರವು ನೀಡಲಾಗುವುದು: ಮುಖ್ಯಮಂತ್ರಿ ಕುಮಾರಸ್ವಾಮಿ Read More »

ಕರಾವಳಿ

ಭಾರೀ ಮಳೆಯಿಂದಾಗಿ ಹವಾಮಾನದಲ್ಲಿ ಏರುಪೇರು ► ಮಂಗಳೂರಿನಲ್ಲಿ ಇಳಿಸಲು ಅಸಾಧ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಳಿದ ವಿಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30. ದುಬೈನಿಂದ ಹಾಗೂ ಮುಂಬಯಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಎರಡು ವಿಮಾನಗಳನ್ನು ವಿಪರೀತ ಮಳೆಯ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಕೇರಳದಲ್ಲಿ ಇಳಿಸಿದ ಘಟನೆ ಮಂಗಳವಾರದಂದು ನಡೆದಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳನ್ನು ಇಳಿಸಲು ಅಸಾಧ್ಯವಾದ ಕಾರಣ ದುಬೈನಿಂದ ಮಂಗಳೂರಿಗೆ ಬರಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಬೆಂಗಳೂರಿನಲ್ಲಿ ಇಳಿಸಬೇಕಾಯಿತು. ಅಲ್ಲದೆ, ಮುಂಬೈಯಿಂದ ಮಂಗಳೂರಿಗೆ ಬರಬೇಕಾಗಿದ್ದ ಏರ್ ಇಂಡಿಯಾ ವಿಮಾನವನ್ನು

ಭಾರೀ ಮಳೆಯಿಂದಾಗಿ ಹವಾಮಾನದಲ್ಲಿ ಏರುಪೇರು ► ಮಂಗಳೂರಿನಲ್ಲಿ ಇಳಿಸಲು ಅಸಾಧ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಳಿದ ವಿಮಾನ Read More »

ಕರಾವಳಿ

ಮುಂಗಾರು ಮಳೆಗೆ ಮಹಿಳೆ ಮೃತ್ಯು ► ಮಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ಕರಾವಳಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಹಿಳೆಯೋರ್ವರು ಮೃತಪಟ್ಟಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಯ ಹಿಂಬದಿಯ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಮಣ್ಣಿನಡಿಗೆ ಸಿಲುಕಿ ಕೊಂಡು ಕೆಪಿಟಿ ಬಳಿಯ ಉದಯ ನಗರ ನಿವಾಸಿ ಮೋಹಿಣಿ (60) ಮೃತಪಟ್ಟಿದ್ದಾರೆ. ಸುಮಾರು ಎಂಟು ಗಂಟೆಗಳ ಕಾಲ‌ ಮಣ್ಣಿನಡಿ ಸಿಲುಕಿದ್ದ ಇವರನ್ನು ರಕ್ಷಿಸಲು ಮಂಗಳೂರು ಪೂರ್ವ ಠಾಣೆ ಪೊಲೀಸರು, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಮತ್ತು ಸ್ಥಳೀಯರು ಹರಸಾಹಸಪಟ್ಟರೂ ಬದುಕಿಸಲಾಗಲಿಲ್ಲ. ಇನ್ನೊಂದೆಡೆ ಅಡ್ಯಾರ್ ಕಣ್ಣೂರ್

ಮುಂಗಾರು ಮಳೆಗೆ ಮಹಿಳೆ ಮೃತ್ಯು ► ಮಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ Read More »

ಕರಾವಳಿ

ಕಡಬ: ವರದಕ್ಷಿಣೆ ತರುವಂತೆ ಕಿರುಕುಳ ► ಪತಿ, ಸಂಬಂಧಿಕರ ವಿರುದ್ಧ ದೂರು

(ನ್ಯೂಸ್ ಕಡಬ) newskadaba.com ಕಡಬ, ಮೇ.28. ವರದಕ್ಷಿಣೆ ನೀಡುವಂತೆ ಆಗ್ರಹಿಸಿ ತನ್ನ ಪತಿ ಮತ್ತು ಮನೆಯವರು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ‌ ಎಂದು ಆರೋಪಿಸಿ ಮಹಿಳೆಯೋರ್ವರು ಕಡಬ ಠಾಣೆಗೆ ದೂರು‌ ನೀಡಿದ್ದಾರೆ. ಇಲ್ಲಿನ ಕೋಡಿಂಬಾಳ ಗ್ರಾಮದ ಹಳೆಸ್ಟೇಷನ್ ನಿವಾಸಿ ಸಕೀನಾ ಎಂಬವರನ್ನು ಕಳೆದ ಫೆಬ್ರವರಿಯಲ್ಲಿ ಕಾಸರಗೋಡು ಜಿಲ್ಲೆಯ ಉದುಮ ನಿವಾಸಿ ಅಹ್ಮದ್ ಶಕೀಬ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಆ ನಂತರದ ದಿನಗಳಲ್ಲಿ ತನ್ನ ಗಂಡ, ಮಾವ ಅಹಮ್ಮದ್ ಸತ್ತಾರ್ ಹಾಗೂ ಅತ್ತೆ ಬೀಬಿಯವರು ಜೊತೆ ಸೇರಿ

ಕಡಬ: ವರದಕ್ಷಿಣೆ ತರುವಂತೆ ಕಿರುಕುಳ ► ಪತಿ, ಸಂಬಂಧಿಕರ ವಿರುದ್ಧ ದೂರು Read More »

ಕರಾವಳಿ

ಕರಾವಳಿಯಲ್ಲಿ ಭಾರೀ ಗಾಳಿ ಮಳೆಯ ಹಿನ್ನೆಲೆ ► ಇಂದು ನಾಳೆ ಶಾಲಾ ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ಕರಾವಳಿಯಲ್ಲಿ ಭಾರೀ ಗಾಳಿ – ಮಳೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಮಂಗಳವಾರ ಮತ್ತು ಬುಧವಾರದಂದು ರಜೆ ಘೋಷಿಸಲಾಗಿದೆ. ಕರಾವಳಿಯ ತಗ್ಗು ಪ್ರದೇಶಗಳು ಜಲಾವೃತವಾಗಿರುವುದರಿಂದ ಪರಿಸರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕರಾವಳಿಯಲ್ಲಿ ಭಾರೀ ಗಾಳಿ ಮಳೆಯ ಹಿನ್ನೆಲೆ ► ಇಂದು ನಾಳೆ ಶಾಲಾ ಕಾಲೇಜುಗಳಿಗೆ ರಜೆ Read More »

ಕರಾವಳಿ
Scroll to Top