ತಾಂತ್ರಿಕ ದೋಷದಿಂದ ನದಿಗೆ ಉರುಳಿದ‌ ಕೆಎಸ್ಸಾರ್ಟಿಸಿ ಬಸ್ ► ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡೂರು, ಮೇ.30. ಬೆಂಗಳೂರಿನಿಂದ ಕುಂದಾಪುರಕ್ಕೆ‌ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ತಾಂತ್ರಿಕ ದೋಷವುಂಟಾದ ಪರಿಣಾಮ ಬಸ್ ನದಿಗೆ ಬಿದ್ದು 19 ಮಂದಿ ಗಾಯಗೊಂಡ ಘಟನೆ ಕಡೂರಿನಲ್ಲಿ ನಡೆದಿದೆ.

ಕಡೂರು ವೇದಾವತಿ ನದಿಯ ಸೇತುವೆ ಬಳಿ ತಲುಪಿದಾಗ ಬಸ್ಸಿನ ಸ್ಟೇರಿಂಗ್‌ ರಾಡ್‌ ಮುರಿದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್ 30 ಅಡಿ ಆಳಕ್ಕೆ ಬಿದ್ದು ಈ ಅವಘಡ ಸಂಭವಿಸಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಬಸ್‌ ಪಲ್ಟಿಯಾದ ರಭಸಕ್ಕೆ ಡೀಸೆಲ್‌ ಟ್ಯಾಂಕ್‌ ಒಡೆದು ಸೋರುತ್ತಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

Scroll to Top