ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ಹಿನ್ನೆಲೆ ► ಇಂದು(ಮೇ.26) ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ



(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.26. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಟಿ.ಎಲ್. ಮತ್ತು ಎಸ್.ಎಸ್. ವಿಭಾಗ ಮಂಗಳೂರು ವತಿಯಿಂದ ಹಾಲಿ 110 ಕೆವಿ ನೆಟ್ಲಮುಡ್ನೂರು – ಪುತ್ತೂರು ಏಕಮಾರ್ಗವನ್ನು ದ್ವಿಮಾರ್ಗ ರಚಿಸಿ 110 ಕೆವಿ ನೆಟ್ಲಮುಡ್ನೂರು – ಪುತ್ತೂರು ಮಾರ್ಗದಿಂದ 110/11 ಕೆವಿ ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಮೇ 26 ಶನಿವಾರ ಬೆಳಿಗ್ಗೆ 08 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು.







ಆದುದರಿಂದ 110/11 ಕೆವಿ ಪುತ್ತೂರು ಹಾಗೂ 33/11 ಕೆವಿ ಕ್ಯಾಂಪ್ಕೋ, ಕುಂಬ್ರ, ಬೆಳ್ಳಾರೆ, ಸುಳ್ಯ, ಸವಣೂರು, ನೆಲ್ಯಾಡಿ, ಕಡಬ ಮತ್ತು ಸುಬ್ರಹ್ಮಣ್ಯ ಉಪ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಸಹಕರಿಸಬೇಕೆಂದು ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರವರ ಪ್ರಕಟಣೆ ತಿಳಿಸಿದೆ.






error: Content is protected !!
Scroll to Top