ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಅವ್ಯವಸ್ಥೆಯನ್ನು ಸರಿಪಡಿಸಲು ಎಸ್ಡಿಪಿಐ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.19. ಜಿಲ್ಲೆಯ ಸುಮಾರು ಎಂಟು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಡರೋಗಿಗಳು ಅವಲಂಬಿಸಿ ಬರುವ ವೆನ್ಲಾಕ್ ಆಸ್ಪತ್ರೆಯಲ್ಲಿ ಆಹಾರ ಪದಾರ್ಥಗಳನ್ನು ಕಸಿಯಲಾಗಿದೆಯಲ್ಲದೆ ಹಲವು ಜ್ವಲಂತ ಸಮಸ್ಯೆಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಶೀಘ್ರವಾಗಿ ಪರಿಹರಿಸಬೇಕೆಂದು ಎಸ್ ಡಿ ಪಿ ಐ ನಿಯೋಗವು ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಭೇಟಿಯಾಗಿ ಆಗ್ರಹಿಸಿತು. ಸರಕಾರಿ ಆಸ್ಪತ್ರೆಯ ಊಟದ ಮೆನುವಿನಲ್ಲಿ ಮಂಗಳೂರು ಎಂದರೆ ಮತ್ಸ್ಯ ನಗರಿ‌. ಹೀಗಾಗಿ ರೋಗಿಗಳಿಗೆ ಸರಕಾರದಿಂದ ಉಚಿತವಾದ ಮೀನು ಊಟ ಮತ್ತು ಹಾಲು ಬ್ರೆಡ್ […]

ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಅವ್ಯವಸ್ಥೆಯನ್ನು ಸರಿಪಡಿಸಲು ಎಸ್ಡಿಪಿಐ ಆಗ್ರಹ Read More »

ಕರಾವಳಿ

ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶ

(ನ್ಯೂಸ್ ಕಡಬ) newskadaba.com ಉಡುಪಿ, ಜು.19. ಹೊಟ್ಟೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ರತ್ರೆಯಲ್ಲಿ ನಿಧನರಾಗಿದ್ದಾರೆ. ಸೋಮವಾರದಂದು ಶಿರೂರು ಮೂಲ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗೆ ಹೊಟ್ಟೆನೋವು ಕಾಣಿಸಿಕೊಂಡು ವಿಪರೀತ ವಾಂತಿ ಮಾಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರನ್ನು ಬುಧವಾರದಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗುರುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶ Read More »

ಕರಾವಳಿ

ದೀಪಕ್ ರಾವ್ ಕೊಲೆ‌ ಪ್ರಕರಣ ► ತಲೆಮರೆಸಿಕೊಂಡಿದ್ದ ಆರೋಪಿಯ‌ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.17. ಈ ವರ್ಷಾರಂಭದಲ್ಲಿ ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೃಷ್ಣಾಪುರ 4 ನೇ ಬ್ಲಾಕ್ ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ದಿ| ಇಸ್ಮಾಯಿಲ್ ಎಂಬವರ ಪುತ್ರ ಸಫ್ವಾನ್ ಯಾನೆ ಚಪ್ಪು ಎಂದ ಗುರುತಿಸಲಾಗಿದೆ. ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ 2 ನೇ ಬ್ಲಾಕ್ ನ ಅಬ್ದುಲ್ ಮಜೀದ್ ಎಂಬವರ ಮನೆಯ ಎದುರು

ದೀಪಕ್ ರಾವ್ ಕೊಲೆ‌ ಪ್ರಕರಣ ► ತಲೆಮರೆಸಿಕೊಂಡಿದ್ದ ಆರೋಪಿಯ‌ ಬಂಧನ Read More »

ಕರಾವಳಿ

ನಾಳೆಯಿಂದ (ಜು.18) ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ..!! ► ಕಾರಣವೇನೆಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಮಂಗಳೂರು, ಜು.17. ಶಿರಾಡಿಘಾಟ್ ರಸ್ತೆಯ ಕಾಮಗಾರಿಯು ಪೂರ್ಣಗೊಂಡು ಜುಲೈ 15 ರಂದು ಉದ್ಘಾಟನೆಗೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ, ಸದ್ರಿ ರಸ್ತೆ ಕಾಮಗಾರಿಯಲ್ಲಿ ಗಾರ್ಡ್ ವಾಲ್ ಹಾಗೂ ಶೋಲ್ಡರ್ ನಿರ್ಮಾಣದಂತಹ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇರುವುದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವ ಸಲುವಾಗಿ ಘಾಟ್ ರಸ್ತೆಯಲ್ಲಿ ನಾಳೆಯಿಂದ ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಅಪೂರ್ಣಗೊಂಡ ರಸ್ತೆಯ ಮೂಲಕ ಭಾರೀ ವಾಹನಗಳು ಸಂಚರಿಸಿದಲ್ಲಿ ಈಗಾಗಲೇ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬಾಕಿ ಉಳಿದ

ನಾಳೆಯಿಂದ (ಜು.18) ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ..!! ► ಕಾರಣವೇನೆಂದು ಗೊತ್ತೇ…? Read More »

ಕರಾವಳಿ

ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ► ಪ್ರವಾಹಕ್ಕೆ ಕೊಚ್ಚಿ ಹೋದ 200 ವರ್ಷಗಳಷ್ಟು ಹಳೆಯ ವೆಲ್ಲೆಸ್ಲಿ ಸೇತುವೆ

(ನ್ಯೂಸ್ ಕಡಬ) newskadaba.com ಮೈಸೂರು, ಜು.17. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾವೇರಿ ನದಿಯ ನೀರಿನ ಹರಿವು ಹೆಚ್ಚಾಗಿದ್ದು, ಸುಮಾರು 200 ವರ್ಷದಷ್ಟು ಹಳೆಯ ವೆಲ್ಲೆಸ್ಲಿ ಸೇತುವೆಯು ಕೊಚ್ಚಿ ಹೋಗಿದೆ. 1799ರ ಸುಮಾರಿಗೆ ಕರ್ನಲ್ ಆರ್ಥೂರ್ ವೆಲ್ಲೆಸ್ಲಿಯು ಕೊಳ್ಳೆಗಾಲ ತಾಲೂಕಿನ ಸತ್ಯಗಾಲ ಸಮೀಪ ನಿರ್ಮಿಸಿದ್ದರೆನ್ನಲಾದ ವೆಲ್ಲೆಸ್ಲಿ ಸೇತುವೆಯು ಕಬಿನಿ ಮತ್ತು ಕೆಆರ್ ಎಸ್ ಜಲಾಯಶಯಗಳಿಂದ ನೀರು ಹರಿಸಿದ ಪರಿಣಾಮ ಕೊಚ್ಚಿ ಹೋಗಿದೆ. ತುಂಬಾ ಹಳೆಯದಾದ ಕಾರಣ ಶಿಥಿಲಗೊಂಡಿದ್ದ ಸೇತುವೆಯನ್ನು ಪುನರ್ ಸ್ಥಾಪಿಸಬೇಕು ಎಂದು

ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ► ಪ್ರವಾಹಕ್ಕೆ ಕೊಚ್ಚಿ ಹೋದ 200 ವರ್ಷಗಳಷ್ಟು ಹಳೆಯ ವೆಲ್ಲೆಸ್ಲಿ ಸೇತುವೆ Read More »

ಕರಾವಳಿ

ಬೆಳ್ಳಾರೆ: ಪದವಿ ಪೂರ್ವ ಕಾಲೇಜಿನ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಕಳ್ಳತನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.17. ಇಲ್ಲಿನ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕೊಠಡಿಯ ಒಳನುಗ್ಗಿರುವ ಕಳ್ಳರು ಲ್ಯಾಪ್ ಟಾಪ್ ಹಾಗೂ ಪ್ರೊಜೆಕ್ಟರನ್ನು ಹೊತ್ತೊಯ್ದಿದ್ದಾರೆ. ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗಿನ ನಡುವೆ ಒಳ ನುಗ್ಗಿರುವ ಕಳ್ಳರು 13,000/- ರೂಪಾಯಿ ಮೌಲ್ಯದ ಪ್ಯಾನಾಸೋನಿಕ್ ಕಂಪೆನಿಯ ಪ್ರೊಜೆಕ್ಟರ್ ಮತ್ತು ಸುಮಾರು 10,000/- ರೂಪಾಯಿ ಮೌಲ್ಯದ ಆಸಸ್ ಕಂಪೆನಿಯ ಲ್ಯಾಪ್ ಟಾಪ್ ಸೇರಿ ಒಟ್ಟು ರೂಪಾಯಿ 23,000 ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ. ಸೋಮವಾರದಂದು ಉಪನ್ಯಾಸಕರು ಕಾಲೇಜಿಗೆ ಆಗಮಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಬೆಳ್ಳಾರೆ: ಪದವಿ ಪೂರ್ವ ಕಾಲೇಜಿನ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಕಳ್ಳತನ Read More »

ಕರಾವಳಿ

ಸವಣೂರು: ದಾಸ್ತಾನು ಕೊಠಡಿಗೆ ನುಗ್ಗಿದ ಕಳ್ಳರು ► ಅಡಿಕೆ, ಕರಿಮೆಣಸು, ತೆಂಗಿನಕಾಯಿ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.17. ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿದ್ದ 10 ಚೀಲ ಸುಲಿಯದ ಒಣ ಅಡಿಕೆ ಮತ್ತು 50 ಕಿಲೋ ತೂಕದ ಕರಿಮೆಣಸು 2 ಚೀಲ ಹಾಗೂ ಕೊಟ್ಟಿಗೆಯಲ್ಲಿ 4 ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಲಿದ 200 ತೆಂಗಿನಕಾಯಿಗಳನ್ನು ಕಳವುಗೈದ ಘಟನೆ ಸವಣೂರಿನಲ್ಲಿ ಸೋಮವಾರದಂದು ಬೆಳಕಿಗೆ ಬಂದಿದೆ. ಸವಣೂರು ಗ್ರಾಮದ ಮುಂಡತ್ತಡ್ಕ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ ಎಂಬವರಿಗೆ ಸೇರಿದ ದಾಸ್ತಾನು ಕೊಠಡಿಗೆ ಭಾನುವಾರ ರಾತ್ರಿ ಒಳ ನುಗ್ಗಿದ ಕಳ್ಳರು ಸುಮಾರು 58 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಅಬ್ದುಲ್ ರಹಿಮಾನ್

ಸವಣೂರು: ದಾಸ್ತಾನು ಕೊಠಡಿಗೆ ನುಗ್ಗಿದ ಕಳ್ಳರು ► ಅಡಿಕೆ, ಕರಿಮೆಣಸು, ತೆಂಗಿನಕಾಯಿ ಕಳ್ಳರ ಪಾಲು Read More »

ಕರಾವಳಿ

ರಬ್ಬರ್ ನಿಗಮದ ಗಿಡ ಸಾಗಾಟದಿಂದಾಗಿ ಕೆಸರುಗದ್ದೆಯಾದ ಬ್ರಾಂತಿಕಟ್ಟೆ – ಕೊಡೆಂಕಿರಿ ರಸ್ತೆ ► ವಾಹನ ತಡೆದು ಪ್ರತಿಭಟನೆ, ರಸ್ತೆ ದುರಸ್ಥಿಗೆ ಆಗ್ರಹ, ಸಂಜೆಯೊಳಗೆ ದುರಸ್ಥಿಗೆ ಒಪ್ಪಿಗೆ

(ನ್ಯೂಸ್ ಕಡಬ) newskadaba.com ಕಡಬ, ಜು.17. ಐತ್ತೂರು ಗ್ರಾ.ಪಂ.ವ್ಯಾಪ್ತಿಯ ಬ್ರಾಂತಿಕಟ್ಟೆ, ಕೊಡೆಂಕಿರಿ ರಸ್ತೆಯ ದುರಾವಸ್ಥೆ, ಕೆಎಫ್‍ಡಿಸಿ ನಿಗಮದಿಂದ ಸಾಗಿಸುತ್ತಿದ್ದ ರಬ್ಬರ್ ಗಿಡಗಳ ವಾಹನವನ್ನು ತಡೆಗಟ್ಟಿ ಗುತ್ತಿಗೆದಾರರನ್ನು ತಡೆದು ಸಾರ್ವಜನಿಕರಿಂದ ಸೋಮವಾರದಂದು ಬ್ರಾಂತಿಕಟ್ಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕಳೆದ ಹಲವಾರು ವರ್ಷಗಳಿಂದ ದುರಸ್ಥಿ ಕಾಣದೆ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿರುವ ಈ ರಸ್ತೆಯನ್ನು ಊರಿನ ಗ್ರಾಮಸ್ಥರೇ ಒಟ್ಟಾಗಿ ಹೋರಾಟ ಸಮಿತಿಯೊಂದನ್ನು ರಚಿಸಿಕೊಂಡು ಪ್ರತೀ ವರ್ಷ ತಾವೇ ಹಣ ಹೊಂದಿಸಿಕೊಂಡು ಸುಮಾರು 50, 60 ಲಾರಿ ಟಿಪ್ಪರ್‍ಗಳಲ್ಲಿ ಚರಲ್ (ದಪ್ಪ ಮರಳು) ಹಾಕಿ ಶ್ರಮದಾನದ

ರಬ್ಬರ್ ನಿಗಮದ ಗಿಡ ಸಾಗಾಟದಿಂದಾಗಿ ಕೆಸರುಗದ್ದೆಯಾದ ಬ್ರಾಂತಿಕಟ್ಟೆ – ಕೊಡೆಂಕಿರಿ ರಸ್ತೆ ► ವಾಹನ ತಡೆದು ಪ್ರತಿಭಟನೆ, ರಸ್ತೆ ದುರಸ್ಥಿಗೆ ಆಗ್ರಹ, ಸಂಜೆಯೊಳಗೆ ದುರಸ್ಥಿಗೆ ಒಪ್ಪಿಗೆ Read More »

ಕರಾವಳಿ

ರಾಮಕುಂಜ: ಸರಕಾರಿ ಬಸ್ಸುಗಳಿಲ್ಲದ ಕಾರಣ ವಿದ್ಯಾರ್ಥಿಗಳಿಂದ ರಾಜ್ಯ ಹೆದ್ದಾರಿ ತಡೆ ► ಪ್ರತಿಭಟನೆಗೆ ಮಣಿದ ಕೆಎಸ್ಸಾರ್ಟಿಸಿಯಿಂದ 3 ಹೆಚ್ಚಿನ ಬಸ್ಸುಗಳ ಓಡಾಟ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಜು.17. ಸಮಯಕ್ಕೆ ಸರಿಯಾಗಿ ಬಸ್ಸು ಸೌಲಭ್ಯ ದೊರೆಯುತ್ತಿಲ್ಲ ಆರೋಪಿಸಿ ಎಬಿವಿಪಿ ರಾಮಕುಂಜ ಘಟಕದ ವತಿಯಿಂದ ಶ್ರೀ ರಾಮಕುಂಜೇಶ್ವರ  ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸೋಮವಾರ ಸಾಯಂಕಾಲ ರಾಮಕುಂಜ ಕ್ರಾಸ್ ಬಳಿ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.     ಶ್ರೀ ರಾಮಕುಂಜೇಶ್ವರ ವಿದ್ಯಾ ಸಂಸ್ಥೆಯ ಪದವಿ, ಪದವಿಪೂರ್ವ, ಪ್ರೌಢಶಾಲಾ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು ಹದಿನೈದು ನಿಮಿಷ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಈ ಸಂದರ್ಭ ಎಬಿವಿಪಿ ರಾಮಕುಂಜ ಕಾಲೇಜು ಘಟಕದ

ರಾಮಕುಂಜ: ಸರಕಾರಿ ಬಸ್ಸುಗಳಿಲ್ಲದ ಕಾರಣ ವಿದ್ಯಾರ್ಥಿಗಳಿಂದ ರಾಜ್ಯ ಹೆದ್ದಾರಿ ತಡೆ ► ಪ್ರತಿಭಟನೆಗೆ ಮಣಿದ ಕೆಎಸ್ಸಾರ್ಟಿಸಿಯಿಂದ 3 ಹೆಚ್ಚಿನ ಬಸ್ಸುಗಳ ಓಡಾಟ ಆರಂಭ Read More »

ಕರಾವಳಿ

ಕಲ್ಲಾಜೆ: ಕೆಎಸ್ಸಾರ್ಟಿಸಿ ಬಸ್ – ಟಾಟಾ ವೆಂಚರ್ ಪರಸ್ಪರ ಢಿಕ್ಕಿ ► ಓರ್ವ ಮಹಿಳೆ ಗಂಭೀರ, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜು.17. ಕೆಎಸ್ಸಾರ್ಟಿಸಿ ಎಕ್ಸ್‌ಪ್ರೆಸ್‌ ಬಸ್ ಹಾಗೂ ಟಾಟಾ ವೆಂಚರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಗಂಭೀರ ಗಾಯಗೊಂಡು, ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ಮಂಗಳವಾರದಂದು ಸಂಭವಿಸಿದೆ‌. ಭಟ್ಕಳ ಮೂಲದ ಕುಟುಂಬವೊಂದು ಟಾಟಾ ವೆಂಚರ್ ವಾಹನದಲ್ಲಿ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದಾಗ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಕಲ್ಲಾಜೆ ತಿರುವಿನಲ್ಲಿ ಪರಸ್ಪರ

ಕಲ್ಲಾಜೆ: ಕೆಎಸ್ಸಾರ್ಟಿಸಿ ಬಸ್ – ಟಾಟಾ ವೆಂಚರ್ ಪರಸ್ಪರ ಢಿಕ್ಕಿ ► ಓರ್ವ ಮಹಿಳೆ ಗಂಭೀರ, ಹಲವರಿಗೆ ಗಾಯ Read More »

ಕರಾವಳಿ
Scroll to Top