ಉಪ್ಪಿನಂಗಡಿ: ದಂಪತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.17. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಮೃತ ದಂಪತಿಯನ್ನು ಬಾರ್ಯ ಗ್ರಾಮದ ಪಿಳಿಗೂಡು ನಿವಾಸಿ ಸಂಜೀವ ಪೂಜಾರಿ (60) ಹಾಗೂ ಸೀತಾ (59) ಎಂದು ಗುರುತಿಸಲಾಗಿದೆ. ಸಂಜೀವ ಪೂಜಾರಿಯವರು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿ ಕೆಲಸಕ್ಕೆ ಹೋಗಲು ಅಸಮರ್ಥರಾಗಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದ ದಂಪತಿ ಸೋಮವಾರದಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಪ್ಪಿನಂಗಡಿ: ದಂಪತಿ ಆತ್ಮಹತ್ಯೆ Read More »

ಕರಾವಳಿ

ನೆಲ್ಯಾಡಿ: ವಿವಾಹಿತ ಮಹಿಳೆ ಹಾಗೂ ಮಕ್ಕಳಿಬ್ಬರ ಅಪಹರಣ ► ಆರೋಪಿ ಕಡಬ ನಿವಾಸಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.16. ವಿವಾಹಿತ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದ ಪ್ರಕರಣವನ್ನು ಭೇದಿಸಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೂಜಿಬಾಳ್ತಿಲ ಗ್ರಾಮದ ಕೈಪನಡ್ಕ ನಿವಾಸಿ ತೊಮಸ್. ಪಿ.ಕೆ. ಎಂಬವರ ಪುತ್ರ ಅನಿಲ್ ಎಂದು ಗುರುತಿಸಲಾಗಿದೆ. ನೆಲ್ಯಾಡಿ ಮೂಲದ ಮಹಿಳೆಯು ಜುಲೈ 11 ರಂದು ತನ್ನ ಇಬ್ಬರು ಮಕ್ಕಳನ್ನು ವಿಟ್ಲ ಸಮೀಪದ ಶಾಲೆಯೊಂದಕ್ಕೆ ಸೇರಿಸಲೆಂದು ತೆರಳಿದ್ದ ವೇಳೆ ಆರೋಪಿಯು ಮಕ್ಕಳ ಸಹಿತ ಮಹಿಳೆಯನ್ನು ಅಪಹರಿಸಿದ್ದಾನೆಂದು ಮಹಿಳೆಯ ಪತಿ ರಾಜೇಶ್ ಕಡಬ

ನೆಲ್ಯಾಡಿ: ವಿವಾಹಿತ ಮಹಿಳೆ ಹಾಗೂ ಮಕ್ಕಳಿಬ್ಬರ ಅಪಹರಣ ► ಆರೋಪಿ ಕಡಬ ನಿವಾಸಿಯ ಬಂಧನ Read More »

ಕರಾವಳಿ

ಹೊಸ್ಮಠ: ತಗ್ಗಿದ ನೀರಿನ ಪ್ರಮಾಣ ► ವಾರದ ನಂತರ ಸಂಚಾರ ಮುಕ್ತವಾದ ‘ಮುಳುಗು ಸೇತುವೆ’

(ನ್ಯೂಸ್ ಕಡಬ) newskadaba.com ಕಡಬ, ಜು.15. ಮುಳುಗು ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯ ಮೇಲೆ ಭಾನುವಾರ ಸಂಜೆ ನೀರಿನ ಹರಿವು ಇಳಿದ ಕಾರಣ ವಾರದ ನಂತರ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ ಒಂದು ವಾರದಿಂದ ಸೇತುವೆಯ ಮೇಲೆ ನೀರಿನ ಹರಿವು ಒಂದೇ ರೀತಿಯಲ್ಲಿ ಇದ್ದುದರಿಂದ ಸಂಚಾರಕ್ಕೆ ತಡೆಯುಂಟಾಗಿತ್ತು. ಇದರಿಂದಾಗಿ ಉಪ್ಪಿನಂಗಡಿ ಹಾಗೂ ಕಡಬ ಕಡೆಗೆ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಹಳೆಯ ಮುಳುಗು ಸೇತುವೆಯ ಪಕ್ಕದಲ್ಲೇ

ಹೊಸ್ಮಠ: ತಗ್ಗಿದ ನೀರಿನ ಪ್ರಮಾಣ ► ವಾರದ ನಂತರ ಸಂಚಾರ ಮುಕ್ತವಾದ ‘ಮುಳುಗು ಸೇತುವೆ’ Read More »

ಕರಾವಳಿ

ಪಂಜ: ಕೆಎಸ್ಸಾರ್ಟಿಸಿ ಬಸ್ – ಸ್ವಿಫ್ಟ್ ಡಿಸೈರ್ ಕಾರು ಢಿಕ್ಕಿ ► ಓರ್ವ ಗಂಭೀರ, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪಂಜ, ಜು.15. ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರು‌ನಡುವೆ ಪರಸ್ಪರ ಢಿಕ್ಕಿಯುಂಟಾದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಪಂಜದಲ್ಲಿ ನಡೆದಿದೆ. ಗಾಯಾಳು ಚಾಲಕನನ್ನು ಕಲ್ಮಕಾರಿನ ಅಂಜನಕಜೆ ನಿವಾಸಿ ರಾಮಣ್ಣ ಗೌಡರ ಪುತ್ರ ಗಿರೀಶ್ ಎಂದು ಗುರುತಿಸಲಾಗಿದೆ. ಇವರು ಸುಬ್ರಹ್ಮಣ್ಯದ ಮೋಹನ್‌ದಾಸ್ ರೈಯವರಿಗೆ ಸೇರಿದ ಟೂರಿಸ್ಟ್ ಡಿಸೈರ್ ಕಾರಿನಲ್ಲಿ ಬಾಡಿಗೆಗೆಂದು ತೆರಳುತ್ತಿದ್ದ ವೇಳೆ ಪಂಜದ ಕೃಷ್ಣನಗರ ಎಂಬಲ್ಲಿ ಕಡಬದಿಂದ ಸುಳ್ಯಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ.

ಪಂಜ: ಕೆಎಸ್ಸಾರ್ಟಿಸಿ ಬಸ್ – ಸ್ವಿಫ್ಟ್ ಡಿಸೈರ್ ಕಾರು ಢಿಕ್ಕಿ ► ಓರ್ವ ಗಂಭೀರ, ಹಲವರಿಗೆ ಗಾಯ Read More »

ಕರಾವಳಿ

ಆತೂರು ಪರಿಸರದಲ್ಲಿ ಭಾರೀ ಸುಂಟರಗಾಳಿ ► ರಸ್ತೆಗಡ್ಡವಾಗಿ ಬಿದ್ದ ಮರಗಳು – ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಜು.14. ಅತೂರು ಪರಿಸರದಲ್ಲಿ ಬೀಸಿದ ಭಾರೀ ಸುಂಟರಗಾಳಿಗೆ ಹಲವು ಮರಗಳು ಧರಾಶಾಹಿಯಾಗಿ ರಸ್ತೆ ಸಂಚಾರಕ್ಕೆ ತಡೆಯಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಪರಿಸರದ ಗೋಳಿತ್ತಡಿ, ನೇಲ್ಯೊಟ್ಟು, ಅಂಬಾ, ಆಯಿಷಾ ಸ್ಕೂಲ್ ಹಾಗೂ ಕುಂಡಾಜೆ ಪರಿಸರದಲ್ಲಿ ಬೀಸಿದ ಭಾರೀ ಗಾಳಿಗೆ ಹಲವು ಮರಗಳು ನೆಲಕ್ಕುರುಳಿವೆ. ಪರಿಣಾಮ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆಯುಂಟಾಗಿ ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಯಿತು. ತಕ್ಷಣವೇ ಸ್ಥಳೀಯ ಯುವಕರು ಸೇರಿ ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ಆತೂರು ಪರಿಸರದಲ್ಲಿ ಭಾರೀ ಸುಂಟರಗಾಳಿ ► ರಸ್ತೆಗಡ್ಡವಾಗಿ ಬಿದ್ದ ಮರಗಳು – ಸಂಚಾರದಲ್ಲಿ ವ್ಯತ್ಯಯ Read More »

ಕರಾವಳಿ

ಮುಖ ಪುಸ್ತಕ ವ್ಯಾಧಿ ಏನಿದು ಫೇಸ್ ಬುಕ್?

(ನ್ಯೂಸ್ ಕಡಬ) newskadaba.com ಕಡಬ,ಜು.14. ಫೇಸ್ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ. ಅಮೇರಿಕಾದ ಮೆಸ್ಸಾಚುಸೆಟ್ಸ್ನ ಕೇಂಬ್ರಿಡ್ಜ್ ಎಂಬಲ್ಲಿ 2004ರ ಫೆಬ್ರವರಿ 4ರಂದು ಅಧಿಕೃತವಾಗಿ ಉಗಮಗೊಂಡಿತ್ತು, ಮಾರ್ಕ್ ಜ್ಯುಕರ್ಬಗರ್ ಹಾವರ್ಡ್ ವಿಶ್ವವಿದ್ಯಾಲಯದ ವಿಧ್ಯಾರ್ಥಿ ಯಾಗಿದ್ದಾಗ ತಮ್ಮ ಕಾಲೇಜಿನ ಜತೆ ವಾಸಿಗರು ಮತ್ತು ಕಂಪ್ಯೂಟರ್ ಸೈನ್ಸ್ನ ವಿಧ್ಯಾರ್ಥಿ ಮಿತ್ರರಾದ ಎಡ್ವಾರ್ಡೊ ಸೆವರಿನ್, ಡಸ್ಕಿನ್ ಮಾಸ್ಕೊ ವಿಟ್ಸ್ ಮತ್ತು ಕ್ರಿಸ್ ಹ್ಯುಸ್ರೊಂದಿಗೆ ಸೇರಿ ಫೇಸ್ಬುಕ್ ಶೋಧಿಸಿದರು. ಆರಂಭದಲ್ಲಿ ಈ ಜಾಲತಾಣದ ಸದಸ್ಯತ್ವ ಕೇವಲ ಹಾವರ್ಡ್ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು.

ಮುಖ ಪುಸ್ತಕ ವ್ಯಾಧಿ ಏನಿದು ಫೇಸ್ ಬುಕ್? Read More »

ವಿಶೇಷ ಲೇಖನಗಳು

ಅಣಬೆ ಪ್ರಾಕೃತಿಕ ಆಹಾರ ಇದರ ಬಗ್ಗೆ ಜನತೆಗೆ ಇರಲಿ ಎಚ್ಚರ…!!!

(ನ್ಯೂಸ್ ಕಡಬ) newskadaba.com ಆಲಂಕಾರು,ಜು.14. ಜುಲೈ ತಿಂಗಳು ಕಳೆದು ಆಗಸ್ಟ್ ತಿಂಗಳು ಆರಂಭವಾಗುತ್ತಿದ್ದಂತೆ ಅಬ್ಬರಿಸುವ ಗುಡುಗು. ನಡು ನಡುವೆ ಮಳೆ ಈ ಮಳೆ ಮತ್ತು ಗುಡುಗಿಗೆ ಗುಡ್ಡೆಗಳಲ್ಲಿ, ತೋಟದ ಬದುಗಳಲ್ಲಿ ರಾತ್ರಿ ಬೆಳಗಾಗುವುದೊರೋಳಗೆ ತಲೆ ಎತ್ತಿ ನಿಲ್ಲುವ ಅತಿಥಿಯೇ “ಅಣಬೆ”. ಇದು ಅತ್ಯುತ್ತಮ ಪೌಷ್ಕಿಕಾಂಶಗಳನ್ನು ಒಳಗೊಂಡ ನೈಸಗರ್ಿಕ ಆಹಾರವಾಗಿದೆ. ಪ್ರಾಕೃತಿಕವಾಗಿ ಸಿಗುವ ಈ ಆಹಾರ ಪದಾರ್ಥದ ಬಗ್ಗೆ ಜಾಗರೂಕತೆ ಅತ್ಯವಶ್ಯವಾಗಿದೆ. ವಿಷಕಾರಿ ಅಣಬೆಗಳ ಬಗ್ಗೆ ಎಚ್ಚರವಹಿಸಿ ಅಣಬೆಗಳಲ್ಲಿ ವಿಷಕಾರಿ ಅಣಬೆಗಳು ಕೂಡ ಬಹಳಷ್ಟಿದೆ. ಇವುಗಳನ್ನು ಪತ್ತೆ ಮಾಡುವುದು

ಅಣಬೆ ಪ್ರಾಕೃತಿಕ ಆಹಾರ ಇದರ ಬಗ್ಗೆ ಜನತೆಗೆ ಇರಲಿ ಎಚ್ಚರ…!!! Read More »

ವಿಶೇಷ ಲೇಖನಗಳು

ಕಡಬ: ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿರುವ ಕಾರು

(ನ್ಯೂಸ್ ಕಡಬ) newskadaba.com ಕಡಬ,ಜು.14. ಕಡಬ ಪ್ಭೆಟೆಯ ಹೃದಯ ಭಾಗದ ಕೂಗಳತೆ ದೂರದಲ್ಲಿ ಉಪ್ಪಿನಂಗಡಿ-ಕಡಬ-ಸಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಕಾರೊಂದನ್ನು ವಾರಸುದಾರರು ಬಿಟ್ಟು ಹೋಗಿ ಅನಾಥವಾಗಿ ನಿಂತಿದೆ. ಕಡಬ ಸೈಂಟ್ ಆ್ಯನ್ಸ್ ಶಾಲಾ ಬಳಿಯಲ್ಲಿರುವ ಮಾರುತಿ 800 ಕಾರು ಕಳೆದ ಹತ್ತು ದಿನಗಳಿಂದ ಇದ್ದ ಸ್ಥಳದಲ್ಲೇ ಇದೆ. ಯಾರೂ ಅಕ್ರಮ ವ್ಯವಹಾರಕ್ಕೆ ಬಳಸಿ ಅಲ್ಲೇ ಬಿಟ್ಟು ಹೋಗಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ಇದೇ ವೇಳೆ ಠಾಣಾ ದಕ್ಷಿಣ ಭಾಗದ ಕಳಾರ ಎಂಬಲ್ಲಿ ಕೂಡಾ ಕಾರೊಂದು ಕಳೆದ ಕೆಲವು

ಕಡಬ: ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿರುವ ಕಾರು Read More »

ಕರಾವಳಿ

ಬೆಳಂದೂರು: ದಿ| ಸಿ.ಪಿ. ಜಯರಾಮ ಗೌಡ ಸ್ಮಾರಕ ದತ್ತಿ ಉಪನ್ಯಾಸ

(ನ್ಯೂಸ್ ಕಡಬ) newskadaba.com ಬೆಳಂದೂರು,ಜು.14. ಕರಾವಳಿ ಭಾಗ ಅನೇಕ ಹೊಸತನಗಳ ತವರೂರಾಗಿದ್ದರೂ ಕರಾವಳಿಯ ಕೃಷಿ ಇಂದು ಪಲ್ಲಟಕ್ಕೆ ಒಳಗಾಗುತ್ತಿದೆ, ಜನತೆ ಕೃಷಿ ಪರಂಪರೆಗೆ ಬೆನ್ನು ಹಾಕಿ ದೂರ ಹೋಗುತ್ತಿದ್ದಾರೆ, ವಾಸ್ತವದಲ್ಲಿ ಹಳ್ಳಿಯ ಕೃಷಿ ಬದುಕಿಗಿಂತ ಸೊಗಸಾದ ಬದುಕು ಇನ್ನೊಂದು ಇರಲಾರದು ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ, ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ಹೇಳಿದರು. ಅವರು ಶುಕ್ರವಾರ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಗುಣಮಟ್ಟ ಭರವಸಾ ಕೊಶ ಮತ್ತು ಕಾಲೇಜು

ಬೆಳಂದೂರು: ದಿ| ಸಿ.ಪಿ. ಜಯರಾಮ ಗೌಡ ಸ್ಮಾರಕ ದತ್ತಿ ಉಪನ್ಯಾಸ Read More »

ಕರಾವಳಿ

ಆರನೇ ದಿನಕ್ಕೆ‌ಕಾಲಿಟ್ಟ ಹೊಸ್ಮಠ ಸೇತುವೆ ಮುಳುಗಡೆ ► ದ್ವಿಚಕ್ರ ವಾಹನ ಸವಾರರಿಗೆ ಸಹಾಯದ ನೆಪದಲ್ಲಿ ಬಲಾತ್ಕಾರದ ಹಣ ವಸೂಲಿ ► ಕಂಡೂ ಕಾಣದಂತಿರುವ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜು.15. ಮುಳುಗು ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯು ಮುಳುಗಡೆಗೊಂಡು ಆರನೇ ದಿನಕ್ಕೆ ಕಾಲಿಟ್ಟಿದೆ. ಸೇತುವೆಯ ಮೇಲೆ ನೀರಿನ ಹರಿವು ಒಂದೇ ರೀತಿಯಲ್ಲಿದ್ದು, ನೀರಿನ ಹರಿವು ಕಡಿಮೆಯಾಗಬಹುದೆಂಬ ಆಶಾಭಾವನೆಯಲ್ಲಿ ಸೇತುವೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಾಯುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಹಳೆಯ ಮುಳುಗು ಸೇತುವೆಯ ಪಕ್ಕದಲ್ಲೇ ಹೊ ಸೇತುವೆಯೊಂದು ನಿರ್ಮಾಣವಾಗುತ್ತಿದ್ದು, ಕಾಮಗಾರಿ ಕೊನೆಯ ಹಂತದಲ್ಲಿದೆ. ಇದರೆಡೆಯಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ನೂತನ ಸೇತುವೆಯ ಮೇಲೆ ಮರದ ಹಲಗೆಯೊಂದನ್ನಿಟ್ಟು ದ್ವಿಚಕ್ರ ವಾಹನಗಳನ್ನು ಸಾಗಿಸಿ ಪ್ರತಿಯೊಂದು

ಆರನೇ ದಿನಕ್ಕೆ‌ಕಾಲಿಟ್ಟ ಹೊಸ್ಮಠ ಸೇತುವೆ ಮುಳುಗಡೆ ► ದ್ವಿಚಕ್ರ ವಾಹನ ಸವಾರರಿಗೆ ಸಹಾಯದ ನೆಪದಲ್ಲಿ ಬಲಾತ್ಕಾರದ ಹಣ ವಸೂಲಿ ► ಕಂಡೂ ಕಾಣದಂತಿರುವ ಪೊಲೀಸರು Read More »

ಕರಾವಳಿ
Scroll to Top