ನೆಲ್ಯಾಡಿ: ಹೆದ್ದಾರಿ ಅಂಚಿನ ಗುಡ್ಡ ಕುಸಿತ ► ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.21. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಡ್ಡವೊಂದು ಕುಸಿದ ಪರಿಣಾಮ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ತಡೆಯುಂಟಾದ ಘಟನೆ ಶನಿವಾರ ಸಂಜೆ‌ ನೆಲ್ಯಾಡಿಯಲ್ಲಿ ನಡೆದಿದೆ. ಬಿಸಿರೋಡಿನಿಂದ ಅಡ್ಡಹೊಳೆಯವರೆಗೆ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಶನಿವಾರ ಸಂಜೆ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಹೆದ್ದಾರಿ ಅಂಚಿನ ಗುಡ್ಡವು ಕುಸಿತವುಂಟಾಗಿ ಹೆದ್ದಾರಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದಾಗಿ ಹೆದ್ದಾರಿಯ ಎರಡೂ ಕಡೆಗಳಲ್ಲಿ ಮೈಲುಗಟ್ಟಳೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದೆ. ಹೆದ್ದಾರಿಗೆ […]

ನೆಲ್ಯಾಡಿ: ಹೆದ್ದಾರಿ ಅಂಚಿನ ಗುಡ್ಡ ಕುಸಿತ ► ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ Read More »

ರಾಷ್ಟ್ರೀಯ ನ್ಯೂಸ್

►►ಕವರ್ ಸ್ಟೋರಿ ► ಪೇರಡ್ಕ – ಕಾಯರಡ್ಕ ರಸ್ತೆಯಲ್ಲಿ ಸಂಚಾರ ದುಸ್ತರ ► ಅಪತ್ಭಾಂದವ ರಸ್ತೆಯಲ್ಲಿ ಎರಡು ಕಿ.ಮೀ. ಸಂಚರಿಸಲು 20 ನಿಮಿಷ..!!

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಒಂದು ಕಡೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪತಗೊಂಡು ಸಂಚಾರದಲ್ಲಿ ಸುಗಮವಾಗುವ ಈ ಕಾಲದಲ್ಲಿ, ಅದೆಷ್ಟೋ ಗ್ರಾಮೀಣ ಭಾಗದ ರಸ್ತೆಗಳಿಗೆ ಇಂದಿಗೂ ದುರಸ್ಥಿ ಭಾಗ್ಯ ದೊರೆಯದೆ, ನಿತ್ಯ ನರಕಯಾತನೆಯಲ್ಲಿ ಸಂಚರಿಸುವ ಸ್ಥಿತಿ ಉಂಟಾಗಿರುವುದು, ಆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅದರ ಕಷ್ಟದ ಅನುಭವ.! ಈ ಸಾಲಿಗೆ ಕಡಬ ತಾಲೂಕು ಕೇಂದ್ರವನ್ನು ಮತ್ತು ಸುಬ್ರಹ್ಮಣ್ಯ -ಧರ್ಮಸ್ಥಳ ರಾ.ಹೆ. ಹಾಗೂ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪ್ರಮುಖ ರಸ್ತೆಯಾದ  ಪೇರಡ್ಕ -ಕಾಯರಡ್ಕ ಜಿ.ಪಂ.ರಸ್ತೆಯು ಒಂದಾಗಿದೆ.

►►ಕವರ್ ಸ್ಟೋರಿ ► ಪೇರಡ್ಕ – ಕಾಯರಡ್ಕ ರಸ್ತೆಯಲ್ಲಿ ಸಂಚಾರ ದುಸ್ತರ ► ಅಪತ್ಭಾಂದವ ರಸ್ತೆಯಲ್ಲಿ ಎರಡು ಕಿ.ಮೀ. ಸಂಚರಿಸಲು 20 ನಿಮಿಷ..!! Read More »

ಕರಾವಳಿ

ನಾಳೆ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ತರ ಪೂರ್ವ ತಯಾರಿ ಸಭೆ

(ನ್ಯೂಸ್ ಕಡಬ) newskadaba.com ಆಲಂಕಾರು, ಜು.21. 2019ರಲ್ಲಿ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಿಸಲಿದ್ದು ಇದರ ಬಗ್ಗೆ ಪೂರ್ವ ತಯಾರಿ ಸಬೆಯು ಜು.22 ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಸಭಾಭವನದಲ್ಲಿ ನಡೆಯಲಿದೆ. ಇದೇ ವೇಳೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಶಾಲಾಭಿವೃದ್ದಿ ಸಮಿತಿಯ ಸದಸ್ಯರು, ಪೊಷಕರು, ಊರ ವಿದ್ಯಾಭಿಮಾನಿಗಳ ಸಮ್ಮುಖದಲ್ಲಿ ಶತಮಾನೋತ್ಸವ ಸಮಿತಿಯ ರಚನೆಯನ್ನು ಮಾಡಲಿದ್ದು, ಈ ಪೂರ್ವಭಾವಿ ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಸಂಬಂಧಪಟ್ಟವರು ಭಾಗವಹಿಸುವಂತೆ ಶಾಲೆಯ ಪ್ರಕಟಣೆ ತಿಳಿಸಿದೆ.

ನಾಳೆ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ತರ ಪೂರ್ವ ತಯಾರಿ ಸಭೆ Read More »

ಕರಾವಳಿ

ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ(ರಿ) ► ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪುತ್ತೂರು ಘಟಕದ ಹತ್ತನೆ ಮಾಸಿಕ ಸಹಾಯ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಮಂಗಳೂರಿನ ಫ್ರೆಂಡ್ಸ್ ಬಲ್ಲಾಳ್ಭಾಗ್ ಬಿರುವೆರ್ ಕುಡ್ಲ ಪುತ್ತೂರು  ಘಟಕದ ಹತ್ತನೆ ಮಾಸಿಕ ಸಹಾಯ ಯೋಜನೆಯಡಿಯಲ್ಲಿ ಬಡ ಮತ್ತು  ಕ್ಕಾಗಿ ಸಹಾಯದ ಅಂಗವಾಗಿ  ಎರಡನೇ ದತ್ತು ಯೋಜನೆಯಾಗಿ ಪುತ್ತೂರು ತಾಲೂಕಿನ ಗೋಳಿತ್ತಡಿ ನಡುಕೂಟೇಲು ಸಂಜೀವ ಪೂಜಾರಿಯವರ ಪುತ್ರಿ ನವ್ಯಶ್ರೀ  ಮತ್ತು ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಜತ್ತಪ್ಪರವರ ಪುತ್ರಿ ಪೂಜಾ  ಅವರಿಗೆ ಆರ್ಥಿಕ ಸಹಾಯವನ್ನು  ನೀಡಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ವಿಧ್ಯೆಯಿಂದ ಸ್ವತಂತ್ರರಾಗಿ ತತ್ವದಡಿಯಲ್ಲಿ ಬಡ ಮತ್ತು ಪ್ರತಿಭಾವಂತ

ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ(ರಿ) ► ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪುತ್ತೂರು ಘಟಕದ ಹತ್ತನೆ ಮಾಸಿಕ ಸಹಾಯ Read More »

ಕರಾವಳಿ

ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ► ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಅರಣ್ಯ ರಕ್ಷಣೆ ಮತ್ತು ಅಂತರ್ಜಲ ವೃದ್ದಿಯ ಮೂಲಕ ಮುಂದಿನ ಜನಾಂಗಕ್ಕೆ ಆರೋಗ್ಯ ಪೂರ್ಣ ಸಮಾಜವನ್ನು ಬಳುವಳಿಯಾಗಿ ನೀಡಬೇಕಾಗಿದೆ ಎಂದು ಜಲಾನಯನಾ ಯೋಜನೆಯ ಐದನೇ ಘಟಕದ ನಾಯಕ ಚಿದಾನಂದ ಹೇಳಿದರು.    ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ಜಲಾನಯನ ಯೋಜನೆ ಐದನೇ ಘಟಕದ ಆಶ್ರಯದಲ್ಲಿ ಅರಣ್ಯ ಘಟಕಗಳ ಗಿಡ ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.  ಮನುಷ್ಯ ಇಂದು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಬಲಿಕೊಡುತ್ತಿದ್ದಾನೆ. ಇದರ

ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ► ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ Read More »

ಕರಾವಳಿ

ಶುಚಿತ್ವಕ್ಕೆ ಆದ್ಯತೆ ನೀಡಿದ್ದ ಆಲಂಕಾರು ಪಂಚಾಯತ್ ನಿಂದ ಇದೀಗ ಕಾನೂನು ಸಡಿಲಿಕೆ ► ನಾಯಿ, ಆಡುಗಳ ಆಶ್ರಯ ತಾಣವಾದ ಹಸಿ ಮೀನು ಮಾರುಕಟ್ಟೆ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಆಲಂಕಾರು ಗ್ರಾಮ ಪಂಚಾಯಿತಿ ಶುಚಿತ್ವಕ್ಕೆ ಆಧ್ಯತೆ ನೀಡಿ ನಿರ್ಮಾಣ ಮಾಡಿದ ಹಸಿ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳಿಲ್ಲದೆ ನಾಯಿ, ಆಡುಗಳ ಆಶ್ರಯ ತಾಣವಾಗಿದೆ. ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಿದರೆ  ವ್ಯಾಪಾರಿಗೆ  ನಷ್ಟವಾಗುತ್ತದೆ ಎಂದು ಪಂಚಾಯಿತಿ ಆಡಳಿತ ನಿರ್ದಾರದಿಂದ ಪೇಟೆಯ ವಿವಿದೆಡೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಟ್ಟಿರುವುದೆ ಮಾರುಕಟ್ಟೆ ಬಿಕೋ ಎನ್ನಲು ಕಾರಣವಾಗಿದೆ. ಮೂರು ವರ್ಷದ ಹಿಂದೆ ಆಲಂಕಾರು ಪೇಟೆಯಲ್ಲಿ ಖಾಸಗಿ ವ್ಯಕ್ತಿಯೋರ್ವರು ಹಸಿ ಮೀನು ಮಾರುಕಟ್ಟೆ ನಿರ್ಮಿಸಿ ಮೀನು

ಶುಚಿತ್ವಕ್ಕೆ ಆದ್ಯತೆ ನೀಡಿದ್ದ ಆಲಂಕಾರು ಪಂಚಾಯತ್ ನಿಂದ ಇದೀಗ ಕಾನೂನು ಸಡಿಲಿಕೆ ► ನಾಯಿ, ಆಡುಗಳ ಆಶ್ರಯ ತಾಣವಾದ ಹಸಿ ಮೀನು ಮಾರುಕಟ್ಟೆ Read More »

ಕರಾವಳಿ

ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆ ರಕ್ಷಕ  ಶಿಕ್ಷಕ ಸಂಘದ ರಚನೆ ► ಅಧ್ಯಕ್ಷರಾಗಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಮೈಮುನ್ನೀಸಾ ಪುನರಾಯ್ಕೆ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆಯ  ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಮರ್ದಾಳ ಗ್ರಾ.ಪಂ ಮಾಜಿ ಅಧ್ಯಕ್ಷೆ ಮೈಮುನ್ನೀಸಾ ಪುನರಾಯ್ಕೆಗೊಂಡರೆ ಉಪಾಧ್ಯಕ್ಷರಾಗಿ ತಮ್ಮಯ್ಯ ಗೌಡ ಬೆತ್ತೋಡಿ ಆಯ್ಕೆಯಾಗಿರುತ್ತಾರೆ. ಸಂಸ್ಥೆಯ ಸಂಚಾಲಕರಾದ ರೆ|ಫಾ ಜೋಸ್ ವಿ.ಸಿ ಅಧ್ಯಕ್ಷತೆಯಲ್ಲಿ ಜು.18 ರಂದು ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಳಿದಂತೆ ಸಮಿತಿ ಸದಸ್ಯರಾಗಿ, ವೀರಪ್ಪ ಗೌಡ ಮೇಪತಪಾಲು, ಶಾಂತಿ ಪಾಲೆತ್ತಡ್ಕ, ನಾಗೇಶ ಗೌಡ ಕೋಕಳ, ಕೇಶವ ಗೌಡ

ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆ ರಕ್ಷಕ  ಶಿಕ್ಷಕ ಸಂಘದ ರಚನೆ ► ಅಧ್ಯಕ್ಷರಾಗಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಮೈಮುನ್ನೀಸಾ ಪುನರಾಯ್ಕೆ Read More »

ಕರಾವಳಿ

ಕಡಬ: ಒಂಟಿ ವೃದ್ದೆಯ ಮನೆಗೆ ನುಗ್ಗಿ ಚಿನ್ನ ಎಗರಿಸಿದ ಕಳ್ಳರು

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಪೇಟೆಯ ಹೊರವಲಯದ ಕೊರುಂದೂರು ಎಂಬಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ ಕಳ್ಳರು ವೃದ್ದೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕೋರಂದೂರು ಹರೀಶ್ ಎಂಬವರ ತಾಯಿ ವಯೋವೃದ್ಧೆ 90 ರ ಹರೆಯದ ಸತ್ಯಭಾಮ ಎಂಬವರ ಕತ್ತಿನಲ್ಲಿದ್ದ ಸುಮಾರು ನಾಲ್ಕು ಪವನ್‍ನ ಚಿನ್ನದ ಸರವನ್ನು ಇಬ್ಬರು ಕಳ್ಳರು ಎಗರಿಸಿದ್ದಾರೆ. ಮನೆಯಲ್ಲಿ ಹರೀಶ್ ಮತ್ತು ಅವರ ತಾಯಿ ಇಬ್ಬರೇ ವಾಸವಾಗಿದ್ದು, ಹರೀಶ್ ಅವರು ಸಂಜೆ ವೇಳೆಗೆ ಕಡಬ

ಕಡಬ: ಒಂಟಿ ವೃದ್ದೆಯ ಮನೆಗೆ ನುಗ್ಗಿ ಚಿನ್ನ ಎಗರಿಸಿದ ಕಳ್ಳರು Read More »

ಕರಾವಳಿ

ವೃತ್ತಿಯಲ್ಲಿ ಸವಣೂರು ಮೆಸ್ಕಾಂ ಶಾಖಾ ಕಚೇರಿಯ ಜೂನಿಯರ್ ಎಂಜಿನೀಯರ್ ► ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಇವರು ಸವಣೂರು ಮೆಸ್ಕಾಂ ಶಾಖಾ ಕಚೇರಿ ಕಿರಿಯ ಎಂಜಿನೀಯರ್. ವೃತ್ತಿಯಲ್ಲಿ ಜೆಇ ಆಗಿದ್ದರೂ ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ. ಹುಟ್ಟು ಕಲಾವಿದರಾದ ಇವರು ರಾಜ್ಯದಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಬಣ್ಣಹಚ್ಚಿ ಜನಮನ ಗೆದ್ದಿದ್ದಾರೆ. ರಜಾ ಸಮಯವನ್ನು ಕಲಾಸೇವೆಗಾಗಿಯೇ ವಿನಿಯೋಗಿಸುತ್ತಿರುವ ಇವರೇ ನಾಗರಾಜ್. ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾದ ಇವರು ಶಾಲಾ ಜೀವನದಲ್ಲಿಯೇ ಪೌರಾಣಿಕ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ, ಸೈ ಎನಿಸಿಕೊಂಡವರು. ಮಹಾಭಾರತ, ರಾಮಾಯಣ, ಶನಿಮಹಾತ್ಮೆ, ದಕ್ಷಯಜ್ಞ, ದೇವಿಮಹಾತ್ಮೆ ಮೊದಲಾದ ಪೌರಾಣಿಕ ಸತ್ಯಹರಿಶ್ಚಂದ್ರ, ಕವಿರತ್ನ ಕಾಳಿದಾಸ ಮುಂತಾದ ಸಾಮಾಜಿಕ ನಾಟಕಗಳಲ್ಲಿ

ವೃತ್ತಿಯಲ್ಲಿ ಸವಣೂರು ಮೆಸ್ಕಾಂ ಶಾಖಾ ಕಚೇರಿಯ ಜೂನಿಯರ್ ಎಂಜಿನೀಯರ್ ► ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ Read More »

ಕರಾವಳಿ

ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಸುಳ್ಯದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.20. ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಬಂಧಿಸಿದೆ. ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಸಂಪಾಜೆ ನಿವಾಸಿ ನಾಟಿ ವೈದ್ಯ ಮೋಹನ್ ನಾಯಕ್ ಎಂದು ಗುರುತಿಸಲಾಗಿದೆ. ಗೌರಿ ಹತ್ಯೆಯಲ್ಲಿ ಆರೋಪಿಗಳಿಗೆ ಪಿಸ್ತೂಲು ಸರಬರಾಜು ಮಾಡಿದ ಆರೋಪವು ಈತನ ಮೇಲಿದ್ದು, ಎಸ್‍ಐಟಿ ತಂಡವು ಬುಧವಾರ ತಡರಾತ್ರಿ ಈತನನ್ನು ವಶಕ್ಕೆ ಪಡೆದಿದೆ. ಗುರುವಾರ ದಿನಪೂರ್ತಿ ಈತನನ್ನು

ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಸುಳ್ಯದ ಆರೋಪಿಯ ಬಂಧನ Read More »

ಕರ್ನಾಟಕ
Scroll to Top