ಕೇಂದ್ರ ತನಿಖಾ ದಳದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕಡಬದ ಆರೋಪಿ ► ಸುಳಿವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಎನ್‍ಐಎ

(ನ್ಯೂಸ್ ಕಡಬ) newskadaba.com ಕಡಬ, ಅ.21. ಕಡಬ, ಅ.21. ಗೋವಿಂದ್ ಪನ್ಸಾರೆ ಹತ್ಯೆ, ಮಾಲೆಂಗಾವ್ ಸ್ಪೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ಕಡಬದ ವ್ಯಕ್ತಿ ಸೇರಿದಂತೆ ಹಲವರ ಹೆಸರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಶನಿವಾರದಂದು (ಎನ್‍ಐಎ) ಪ್ರಕಟಿಸಿದೆ. ದೇಶಾದ್ಯಾಂತ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡು ತಲೆಮರಿಸಿಕೊಂಡಿರುವ ಆರೋಪಿಗಳಲ್ಲೊಬ್ಬನಾದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ನಿವಾಸಿ ಸೋಮರಾಜನ್ ಎಂಬವರ ಪುತ್ರ ಜಯಪ್ರಕಾಶ್ ಅಲಿಯಾಸ್ ಅಣ್ಣಾ (47) ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‍ಐಎ) ಮೋಸ್ಟ್ […]

ಕೇಂದ್ರ ತನಿಖಾ ದಳದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕಡಬದ ಆರೋಪಿ ► ಸುಳಿವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಎನ್‍ಐಎ Read More »

ರಾಷ್ಟ್ರೀಯ ನ್ಯೂಸ್

ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ ► ಇಂದು ಕಡಬದಲ್ಲಿ ಬೃಹತ್ ಜನಜಾಗೃತಿ ಸಭೆ – ಮೆರವಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಅ.21. ಶಬರಿಮಲೆ ಕ್ಷೇತ್ರಕ್ಕೆ 10 ರಿಂದ 50 ವರ್ಷದ ಒಳಗಿನ ಮಹಿಳೆಯರೂ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಆಗ್ರಹಿಸಿ “ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ” ಎಂದು ಮೆರವಣಿಗೆಯೊಂದಿಗೆ ಬೃಹತ್ ಜನಜಾಗೃತಿ ಸಭೆಯು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಇಂದು ಪೂರ್ವಾಹ್ನ ನಡೆಯಲಿದೆ. ಬೆಳಿಗ್ಗೆ ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಬೃಹತ್ ಮೆರವಣಿಗೆ ನಡೆಯಲಿದ್ದು ಬಳಿಕ ಅಲ್ಲಿ

ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ ► ಇಂದು ಕಡಬದಲ್ಲಿ ಬೃಹತ್ ಜನಜಾಗೃತಿ ಸಭೆ – ಮೆರವಣಿಗೆ Read More »

ಕರಾವಳಿ

ಕೋಡಿಂಬಾಳ ಪರಿಸರದಲ್ಲಿ ನಿಗೂಢ ಜ್ವರ ಬಾಧೆ ಹಿನ್ನೆಲೆ ► ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಸ್ಥಳಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಅ.20. ನಿಗೂಢ ಜ್ವರದ ಬಾಧೆಯಿಂದಾಗಿ ಆತಂಕದಲ್ಲಿರುವ ಕೋಡಿಂಬಾಳ ಗ್ರಾಮದ ಮಜ್ಜಾರು ಪ್ರದೇಶಕ್ಕೆ ಶುಕ್ರವಾರದಂದು ಭೇಟಿ ನೀಡಿದ ಜಿಲ್ಲಾ ಅರೋಗ್ಯಾಧಿಕಾರಿ ಡಾ|ರಾಮಕೃಷ್ಣ ರಾವ್ ಅವರು ಆತಂಕದಲ್ಲಿರುವ ಸ್ಥಳೀಯರಿಗೆ ಧೈರ್ಯ ತುಂಬಿದರು. 22 ದಿನಗಳ ಹಿಂದೆ ಜ್ವರ ಪೀಡಿತರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಜ್ಜಾರು ನಿವಾಸಿ ಹರೀಶ್ ಅವರ ಮನೆಗೆ ಜನಪ್ರತಿನಿಧಿಗಳು ಹಾಗೂ ವೈದ್ಯಾಧಿಕಾರಿಗಳ ಜೊತೆ ಭೇಟಿ ನೀಡಿದ ಡಾ| ರಾಮಕೃಷ್ಣ ರಾವ್ ಅವರು ಪರಿಸರದಲ್ಲಿ ಜ್ವರ ಪೀಡಿತರಾಗಿರುವವರ ವೈದ್ಯಕೀಯ ದಾಖಲೆಗಳು ಹಾಗೂ

ಕೋಡಿಂಬಾಳ ಪರಿಸರದಲ್ಲಿ ನಿಗೂಢ ಜ್ವರ ಬಾಧೆ ಹಿನ್ನೆಲೆ ► ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಸ್ಥಳಕ್ಕೆ ಭೇಟಿ Read More »

ಕರ್ನಾಟಕ

ದಿವಂಗತ ರೆ|ಫಾ| ಅಬ್ರಹಾಂ ಕಲಪ್ಪಾಟ್ ಸ್ಮರಣಾರ್ಥ ಎವರ್ರೋಲಿಂಗ್ ಟ್ರೋಫಿ ► ಕೋಡಿಂಬಾಳ ಸೈಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಅ.20. ಮಲಂಕರ ಕ್ಯಾಥೋಲಿಕ್ ಧರ್ಮಸಭೆ ಪುತ್ತೂರು ಧರ್ಮಪ್ರಾಂತ್ಯದ ಯೂತ್ ಮೂವ್ ಮೆಂಟ್ ನ ಮಾಜಿ ಡ್ಯೆರೆಕ್ಟರ್ ದಿವಂಗತ ರೆವರೆಂಡ್ ಫಾದರ್ ಅಬ್ರಹಾಂ ಕಲಪ್ಪಾಟ್ ಅವರ ಹೆಸರಿನಲ್ಲಿ ಆರಂಭಿಸಿದ ಅಬ್ರಹಾಂ ಕಲಪ್ಪಾಟ್ ಎವರ್ರೋಲಿಂಗ್ ಟ್ರೋಫಿ ಹಗ್ಗ ಜಗ್ಗಾಟದಲ್ಲಿ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಕೋಡಿಂಬಾಳ ಯುವಕರ ಘಟಕ ಪ್ರಥಮ ಸ್ಥಾನ ಪಡೆದಿದೆ. ಮಹಿಳೆಯರಿಗಾಗಿ ನಡೆಸಿದ ಹಗ್ಗಜಗ್ಗಾಟದಲ್ಲಿ ಇದೇ ಚರ್ಚ್ ನ ಯುವತಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ. ಸಂತ ಮೇರೀಸ್ ಪ್ರೋ- ಕಥೇಟ್ರಲ್

ದಿವಂಗತ ರೆ|ಫಾ| ಅಬ್ರಹಾಂ ಕಲಪ್ಪಾಟ್ ಸ್ಮರಣಾರ್ಥ ಎವರ್ರೋಲಿಂಗ್ ಟ್ರೋಫಿ ► ಕೋಡಿಂಬಾಳ ಸೈಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಪ್ರಥಮ Read More »

ಕರಾವಳಿ

ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಪ್ರಕರಣ ► ವೇಣೂರು ಠಾಣಾ ಹೆಡ್ ಕಾನ್ಸ್‌ಟೇಬಲ್ ಅಮಾನತು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.20. ವಾಹನ ತಪಾಸಣೆಯ ನೆಪದಲ್ಲಿ ಡಿವೈಎಫ್‍ಐ ಮುಖಂಡ ರಿಯಾಝ್ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಠಾಣೆಯ ಹೆಡ್ ಕಾನ್ಟೇಬಲ್ ತಾರಾನಾಥ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ. ಡಿವೈಎಫ್‍ಐ ಸಂಘಟನೆಯ ಮುಖಂಡ ರಿಯಾಝ್ ಅಕ್ಟೋಬರ್ 02 ರಂದು ರಾತ್ರಿ ಮೂಡುಬಿದಿರೆಯಿಂದ ವೇಣೂರು ಮಾರ್ಗವಾಗಿ ತನ್ನ ಸಹೋದರನೊಂದಿಗೆ ಬೆಳ್ತಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ತಪಾಸಣೆಯ ನೆಪದಲ್ಲಿ ವೇಣೂರು ಪೊಲೀಸರು ರಿಯಾಝ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಠಾಣೆಗೆ ಕರೆದೊಯ್ದು

ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಪ್ರಕರಣ ► ವೇಣೂರು ಠಾಣಾ ಹೆಡ್ ಕಾನ್ಸ್‌ಟೇಬಲ್ ಅಮಾನತು Read More »

ಕರಾವಳಿ

ಮೈಸೂರು ರಾಜಮಾತೆ ಪ್ರಮೋದಾ ದೇವಿಗೆ ಮಾತೃ ವಿಯೋಗ ► ದಸರಾ ಸಂಭ್ರದಲ್ಲಿರುವ ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ

(ನ್ಯೂಸ್ ಕಡಬ) newskadaba.com ಮೈಸೂರು, ಅ.19. ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಒಡೆಯರ್‌ ಅವರ ತಾಯಿ ಚಿನ್ನಮಣಿ(98) ಶುಕ್ರವಾರದಂದು ವಿಧಿವಶರಾಗಿದ್ದು, ದಸರಾ ಸಂಭ್ರಮದಲ್ಲಿರುವ ಮೈಸೂರಿನಲ್ಲಿ ಸೂತಕದ ಛಾಯೆ ಆವರಿಸಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಿನ್ನಮಣಿಯವರು ಶುಕ್ರವಾರದಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಹಿರಿಯ ಜೀವದ ಅಗಲುವಿಕೆಯಿಂದಾಗಿ ದಸರಾ ಸಂಭ್ರಮದಲ್ಲಿರುವ ವಿಶ್ವ ವಿಖ್ಯಾತ ಮೈಸೂರಿನ ಅರಮನೆಯಲ್ಲಿ ಸೂತಕದ ಛಾಯೆ ಕಾಣಿಸಿಕೊಂಡಿದ್ದು, ರಾಜವಂಶಸ್ಥ ಕುಟುಂಬದ ಸಂಭ್ರಮಕ್ಕೆ ತೆರೆಬಿದ್ದಿದೆ.

ಮೈಸೂರು ರಾಜಮಾತೆ ಪ್ರಮೋದಾ ದೇವಿಗೆ ಮಾತೃ ವಿಯೋಗ ► ದಸರಾ ಸಂಭ್ರದಲ್ಲಿರುವ ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ Read More »

ಕರ್ನಾಟಕ

ಕೊನೆಗೂ ಬಗೆಹರಿದ ಕಡಬದ ಮೀನು ಮಾರುಕಟ್ಟೆ ಹರಾಜು ವಿವಾದ ► ಪಂಚಾಯತ್ ಗೆ 6 ಲಕ್ಷ ನಷ್ಟದೊಂದಿಗೆ ಮೀನು ಮಾರಾಟ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.17. ಹಸಿ ಮೀನು ಮಾರುಕಟ್ಟೆಯ ಹರಾಜು ಮೊತ್ತದ ವಿಚಾರದಲ್ಲಿ ಕಡಬ ಗ್ರಾಮ ಪಂಚಾಯತ್ ಮತ್ತು ಹಸಿಮೀನು ಮಾರಾಟಗಾರರ ನಡುವಿನ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಹರಾಜಿನ ಆರಂಭಿಕ ಮೊತ್ತವನ್ನು ಕಡಿಮೆಗೊಳಿಸಿ 3ನೇ  ಬಾರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಡಬ ಪೇಟೆಯ 2 ಕಡೆ ಹಸಿಮೀನು ಮಾರಾಟದ ಹಕ್ಕು ಖಾಯಂಗೊಂಡಿದ್ದು, ಅ. 17 ರಿಂದ ಕಡಬ ಪೇಟೆಯಲ್ಲಿ ಹಸಿಮೀನು ಮಾರುಕಟ್ಟೆ ಮತ್ತೆ ತೆರೆದುಕೊಂಡಿದೆ. ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟ ನಡೆಸುವುದಕ್ಕಾಗಿ

ಕೊನೆಗೂ ಬಗೆಹರಿದ ಕಡಬದ ಮೀನು ಮಾರುಕಟ್ಟೆ ಹರಾಜು ವಿವಾದ ► ಪಂಚಾಯತ್ ಗೆ 6 ಲಕ್ಷ ನಷ್ಟದೊಂದಿಗೆ ಮೀನು ಮಾರಾಟ ಆರಂಭ Read More »

ಕರಾವಳಿ

ಕಡಬ: ಚಾಲಕನಿಲ್ಲದೆ ಹಿಂದಕ್ಕೆ ಚಲಿಸಿದ ನಿಲ್ಲಿಸಿದ್ದ ಕಾರು ► ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಅ.17. ನಿಲ್ಲಿಸಿದ್ದ ಕಾರೊಂದು ಹಠಾತ್ತನೆ ಹಿಂದಕ್ಕೆ ಚಲಿಸಿದ್ದು, ಯುವಕನೋರ್ವನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದ ಘಟನೆ ಬುಧವಾರ ಸಂಜೆ ಕಡಬ ಪೇಟೆಯಲ್ಲಿ ನಡೆದಿದೆ. ಇಲ್ಲಿನ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ನಿಲ್ಲಿಸಿದ್ದ ಮಾರುತಿ ಆಲ್ಟೋ ಕಾರು ಹಠಾತ್ತನೆ ಹಿಂದಕ್ಕೆ ಚಲಿಸಲು‌ ಆರಂಭಿಸಿದೆ. ಚಾಲಕನಿಲ್ಲದೆ ಕಾರು ಹಿಂದಕ್ಕೆ ಬರುತ್ತಿರುವುದನ್ನು ಗಮನಿಸಿದ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಕಡಬದ ಪೊರಂತು ನಿವಾಸಿ ಇಲ್ಯಾಸ್ ಜೆ.ಕೆ. ಕಾರನ್ನು ನಿಲ್ಲಿಸಲೆಂದು ಡೋರ್ ತೆರೆಯಲು ಯತ್ನಿಸಿದರಾದರೂ ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಬೊಬ್ಬೆ

ಕಡಬ: ಚಾಲಕನಿಲ್ಲದೆ ಹಿಂದಕ್ಕೆ ಚಲಿಸಿದ ನಿಲ್ಲಿಸಿದ್ದ ಕಾರು ► ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ Read More »

ಕರಾವಳಿ

ಮುಂಬಯಿಯಲ್ಲಿ ರೈಲು ಅವಘಡ ► ಕಡಬದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.17. ಕಡಬದ ವ್ಯಕ್ತಿಯೋರ್ವರು ರೈಲು ಅವಘಡಕ್ಕೀಡಾಗಿ ಮೃತಪಟ್ಟ ದಾರುಣ ಘಟನೆ ಮಂಗಳವಾರ ರಾತ್ರಿ ಮುಂಬಯಿಯಲ್ಲಿ ನಡೆದಿದೆ. ಮೃತರನ್ನು ಕಡಬ ತಾಲೂಕಿನ ಬಂಟ್ರ ಗ್ರಾಮದ ಮುಂಡ್ರಾಡಿ ನಿವಾಸಿ ಶ್ರೀನಿವಾಸ್ ರೈ ಎಂಬವರ ಸಹೋದರ ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ಮುಂಬಯಿಯಲ್ಲಿ ಇಂಜಿನಿಯರ್ ವೃತ್ತಿಯಲ್ಲಿದ್ದ ಹರಿಪ್ರಸಾದ್ ಮಂಗಳವಾರ ಸಂಜೆ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹುಟ್ಟೂರಿಗೆ ಆಗಮಿಸುವವರಿದ್ದು, ಪನ್ವೇಲ್ ಸಮೀಪದ ಪೇನ್ ಎಂಬಲ್ಲಿ ರೈಲು ಅವಘಡದಿಂದಾಗಿ ಮಂಗಳವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳು

ಮುಂಬಯಿಯಲ್ಲಿ ರೈಲು ಅವಘಡ ► ಕಡಬದ ವ್ಯಕ್ತಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಮರ್ಧಾಳ: ಸ್ಕಿಡ್ ಆಗಿ ರಸ್ತೆಗುರುಳಿದ ಬೈಕ್ ► ಇಬ್ಬರಿಗೆ ಗಾಯ, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಅ.16. ಬೈಕೊಂಡು ಸ್ಕಿಡ್ ಆಗಿ ಬಿದ್ದ ಪರಿಣಾಮ ಓರ್ವ ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಮೀನಾಡಿ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಗಾಯಾಳುಗಳನ್ನು ಕೊಂಬಾರು ಕೆಂಜಾಳ ನಿವಾಸಿ ಲೋಕೇಶ್ ಹಾಗೂ ಸಕಲೇಶಪುರದ ಮಾರನಹಳ್ಳಿ ಹೆಗ್ಗದ್ದೆ ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಮರ್ಧಾಳದಿಂದ ಇಚಿಲಂಪಾಡಿ ಕಡೆಗೆ ತೆರಳುತ್ತಿದ್ದಾಗ ಮೀನಾಡಿ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ದಿನೇಶ್ ಗಂಭೀರ ಗಾಯಗೊಂಡಿದ್ದು,

ಮರ್ಧಾಳ: ಸ್ಕಿಡ್ ಆಗಿ ರಸ್ತೆಗುರುಳಿದ ಬೈಕ್ ► ಇಬ್ಬರಿಗೆ ಗಾಯ, ಓರ್ವ ಗಂಭೀರ Read More »

ಕರಾವಳಿ
Scroll to Top