►► Shocking News ಪುತ್ತೂರು: ಮನೆಮಂದಿ ಮಲಗಿದ್ದ ವೇಳೆ ಮನೆಗೆ ಸ್ಫೋಟಕ ಇಟ್ಟ ದುಷ್ಕರ್ಮಿಗಳು ► ಸ್ಫೋಟಕ ಸಿಡಿದು ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.16. ಜಿಲೆಟಿನ್ ಸ್ಫೋಟಕ ಬಳಸಿ ಮನೆಯನ್ನು ಸ್ಫೋಟಿಸಿದ ಪರಿಣಾಮ ಮನೆ ಮಂದಿ ಗಂಭೀರ ಗಾಯಗೊಂಡ ಘಟನೆ ಕಬಕ ಸಮೀಪದ ಪೋಳ್ಯದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಸೋಮವಾರ ತಡರಾತ್ರಿ ಪೋಳ್ಯ ನಿವಾಸಿ ನಾರಾಯಣ ಪ್ರಸಾದ್ ಎಂಬವರ ಮನೆಯ ಹೊರಗಡೆ ಯಾರೋ ನಡೆದಾಡುತ್ತಿರುವ ಶಬ್ದ ಕೇಳಿ ಮನೆಮಂದಿ ಎಚ್ಚರಗೊಂಡಿದ್ದು, ಲೈಟ್ ಹಾಕಿ ಬಾಗಿಲು ತೆರೆಯುವಷ್ಟರಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಸ್ಫೋಟಕಕ್ಕೆ ಬೆಂಕಿ ಕೊಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಫೋಟಕ ಸಿಡಿದಿದ್ದು, ಘಟನೆಯಲ್ಲಿ ನಾರಾಯಣ ಪ್ರಸಾದ್ […]

►► Shocking News ಪುತ್ತೂರು: ಮನೆಮಂದಿ ಮಲಗಿದ್ದ ವೇಳೆ ಮನೆಗೆ ಸ್ಫೋಟಕ ಇಟ್ಟ ದುಷ್ಕರ್ಮಿಗಳು ► ಸ್ಫೋಟಕ ಸಿಡಿದು ಇಬ್ಬರು ಗಂಭೀರ Read More »

ಕರಾವಳಿ

ಆಲಂಕಾರು: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಅ.15. ಠಾಣಾ ವ್ಯಾಪ್ತಿಯ ಶರವೂರು ಕರಂದ್ಲಾಜೆ ಎಂಬಲ್ಲಿನ ಸರಕಾರಿ ಗೇರು ತೋಟದಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಆಲಂಕಾರು ಗ್ರಾಮದ ನಗ್ರಿ ನಿವಾಸಿ ಕುಶಾಲಪ್ಪ ದೇವಾಡಿಗ ಎಂಬವರ ಪುತ್ರ ವಿನಯ ದೇವಾಡಿಗ(32) ಎಂದು ಗುರುತಿಸಲಾಗಿದೆ. ವಿಪರೀತ ಮದ್ಯ ವ್ಯಸನಿಯಾಗಿದ್ದ ವಿನಯ್ ಅವಿವಾಹಿತರಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಶರವೂರು ಸರಕಾರಿ ಗೇರು ತೋಟದಲ್ಲಿ ಗೇರು ಮರದ ಗೆಲ್ಲಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಆಲಂಕಾರು: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಮುಂದೊಂದು ದಿನ ಕುಮಾರಸ್ವಾಮಿ ಭಾರತದ ರಾಷ್ಟ್ರಪತಿ ಆಗಲಿದ್ದಾರೆ ► ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.15. ಮುಂದೊಂದು ದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೇಶದ ರಾಷ್ಟ್ರಪತಿ ಆಗಲಿದ್ದು, ಆ ಸಮಯದಲ್ಲಿ ತಾನು ಇರಲಾರೆ ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ. ಭಾನುವಾರದಂದು ಮಂಗಳೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಮಾತನಾಡಿದ ಅವರು, ದೇವೇಗೌಡರು ದೇಶದ ಪ್ರಧಾನಿಯಾಗಿದ್ದರು. ಆದರೆ ಎಲ್ಲರಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ. ಪೂರ್ವಜರ ಪುಣ್ಯವಿದ್ದಲ್ಲಿ ಮಾತ್ರ ಅದು ಸಾಧ್ಯ‌ ಇದೀಗ ದೇವೇಗೌಡರ ಸುಪುತ್ರ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಮುಂದೊಂದು ದಿನ ಕುಮಾರಸ್ವಾಮಿ ಭಾರತದ

ಮುಂದೊಂದು ದಿನ ಕುಮಾರಸ್ವಾಮಿ ಭಾರತದ ರಾಷ್ಟ್ರಪತಿ ಆಗಲಿದ್ದಾರೆ ► ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ Read More »

ಕರಾವಳಿ

ದ್ವಿಚಕ್ರ ವಾಹನಕ್ಕೆ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದು ಪರಾರಿ ► ಪುಣಚ ಗ್ರಾಮ ಲೆಕ್ಕಾಧಿಕಾರಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.14. ದ್ವಿಚಕ್ರ ವಾಹನ ಮತ್ತು ಸ್ವಿಫ್ಟ್ ಕಾರು‌‌ ನಡುವೆ ಢಿಕ್ಕಿ ಉಂಟಾದ ಪರಿಣಾಮ ಗ್ರಾಮ ಲೆಕ್ಕಾಧಿಕಾರಿಯೋರ್ವರು ಮೃತಪಟ್ಟ ದಾರುಣ ಘಟನೆ ಭಾನುವಾರ ರಾತ್ರಿ ತಿಂಗಳಾಡಿಯಲ್ಲಿ ನಡೆದಿದೆ. ಮೃತರನ್ನು ಪುತ್ತೂರು ತಾಲೂಕು ಪುಣಚ ಗ್ರಾಮ ಲೆಕ್ಕಾಧಿಕಾರಿ ಸುದೇಶ್ ಎಂದು ಗುರುತಿಸಲಾಗಿದೆ. ಇವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದೆ.ಘಟನೆಯಲ್ಲಿ ಗಂಭೀರ ಗಾಯಗೊಂಡ ಸುದೇಶ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಕಾರು ಚಾಲಕನ

ದ್ವಿಚಕ್ರ ವಾಹನಕ್ಕೆ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದು ಪರಾರಿ ► ಪುಣಚ ಗ್ರಾಮ ಲೆಕ್ಕಾಧಿಕಾರಿ ಮೃತ್ಯು Read More »

ಕರಾವಳಿ

ಕುಂತೂರು ಸಿಡಿಲು ಬಡಿದು ಮನೆಗೆ ಹಾನಿ ►ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಅ.14. ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಗೋಡೆ ಕುಸಿದು ಮೇಲ್ಛಾವಣಿ ಹಾನಿಗೀಡಾಗಿದ್ದು, ಇಲೆಕ್ಟ್ರಾನಿಕ್ ವಸ್ತುಗಳು ಸ್ಫೋಟಗೊಂಡು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಕುಂತೂರು ಸಮೀಪದ ಪೆರಾಬೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಪೆರಾಬೆ ಗ್ರಾಮದ ತೋಟ ಮನೆ ಎಂ.ಎಂ. ಮಹಮ್ಮದ್ ಎಂಬವರಿಗೆ ಸೇರಿದ ಮನೆಗೆ ಶನಿವಾರ ರಾತ್ರಿ ಸಿಡಿಲು ಬಡಿದಿದ್ದು, ಮನೆಯಲ್ಲಿದ್ದ ಟಿವಿ, ಇನ್ವರ್ಟರ್ ಸ್ಫೋಟಗೊಂಡಿದ್ದು, ವಯರಿಂಗ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯ ಒಂದು ಪಾರ್ಶ್ವದ ಗೋಡೆಯು ಕುಸಿದಿದ್ದು, ಮೇಲ್ಛಾವಣಿ ಹಾನಿಗೀಡಾಗಿದೆ.

ಕುಂತೂರು ಸಿಡಿಲು ಬಡಿದು ಮನೆಗೆ ಹಾನಿ ►ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ರಾಷ್ಟ್ರಾದ್ಯಂತ ಸದ್ದು ಮಾಡಿದ #MeToo ಅಭಿಯಾನಕ್ಕೆ ಮೊದಲ ತಲೆದಂಡ ► ಕೇಂದ್ರ ಸಚಿವ ಎಂ.ಜೆ.ಅಕ್ಬರ್ ರಾಜೀನಾಮೆ..?

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಅ.14. ಲೈಂಗಿಕ ಕಿರುಕುಳದ ವಿರುದ್ಧ ರಾಷ್ಟ್ರಾದ್ಯಂತ ಆರಂಭವಾಗಿರುವ ‘ಮೀ ಟೂ’ ಅಭಿಯಾನಕ್ಕೆ ಕೇಂದ್ರ ವಿದೇಶಾಂಗ ರಾಜ್ಯ ಸಚಿವ ಎಂ.ಜೆ. ಅಕ್ಬರ್ ತಲೆದಂಡವಾಗಿದ್ದು, ಅವರು ಭಾನುವಾರದಂದು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಬಿತ್ತರಿಸಿವೆ. ಎಂ.ಜೆ. ಅಕ್ಬರ್ ತಾನು ಈ ಹಿಂದೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದರೆಂದು ಹಲವು ವರ್ಷಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ‘ಮೀ ಟೂ’ ಅಭಿಯಾನದ ಮೂಲಕ ಹಲವು

ರಾಷ್ಟ್ರಾದ್ಯಂತ ಸದ್ದು ಮಾಡಿದ #MeToo ಅಭಿಯಾನಕ್ಕೆ ಮೊದಲ ತಲೆದಂಡ ► ಕೇಂದ್ರ ಸಚಿವ ಎಂ.ಜೆ.ಅಕ್ಬರ್ ರಾಜೀನಾಮೆ..? Read More »

ರಾಷ್ಟ್ರೀಯ ನ್ಯೂಸ್

ಅಮಲು ಪದಾರ್ಥ ನೀಡಿ ನಗ-ನಗದು ದೋಚಿದ ಅಪರಿಚಿತರು ► ಕಂಗಾಲಾದ ಉಡುಪಿ ರೈಲ್ವೇ ಯಾತ್ರಿ ಸಂಘದ ಪದಾಧಿಕಾರಿ

(ನ್ಯೂಸ್ ಕಡಬ) newskadaba.com ಉಡುಪಿ, ಅ.14. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪರಿಚಿತರು ನೀಡಿದ ಅಮಲು ಭರಿಸುವ ಮಜ್ಜಿಗೆಯನ್ನು ಸೇವಿಸಿ ಉಡುಪಿ ರೈಲ್ವೆ ಯಾತ್ರಿ ಸಂಘದ ಪದಾಧಿಕಾರಿಯೋರ್ವರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳೆದುಕೊಂಡ ಘಟನೆ ಶನಿವಾರದಂದು ಬೆಳಕಿಗೆ ಬಂದಿದೆ. ಮಜ್ಜಿಗೆ ಸೇವಿಸಿ ಪ್ರಜ್ಞೆ ಕಳೆದುಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಉಡುಪಿ ಕಿನ್ನಿಮುಲ್ಕಿ ನಿವಾಸಿಯಾಗಿರುವ ರೈಲ್ವೆ ಯಾತ್ರಿ ಸಂಘದ ಕೋಶಾಧಿಕಾರಿ ರಾಮಚಂದ್ರ ಆಚಾರ್ಯ (60) ಹಾಗೂ ಅವರ ಅಕ್ಕ ಕಾರ್ಕಳ ಬೈಲೂರಿನ ಕೃಷ್ಣ ಭಟ್ ಎಂಬವರ ಪತ್ನಿ ರಾಧಮ್ಮ

ಅಮಲು ಪದಾರ್ಥ ನೀಡಿ ನಗ-ನಗದು ದೋಚಿದ ಅಪರಿಚಿತರು ► ಕಂಗಾಲಾದ ಉಡುಪಿ ರೈಲ್ವೇ ಯಾತ್ರಿ ಸಂಘದ ಪದಾಧಿಕಾರಿ Read More »

ರಾಷ್ಟ್ರೀಯ ನ್ಯೂಸ್

ಕಡಬ ಪಿಲತ್ತೋಡಿಯಲ್ಲಿ ವಿದ್ಯುತ್ ಪರಿವರ್ತಕ ಉದ್ಘಾಟನೆ

(ನ್ಯೂ ಸ್ ಕಡಬ) newskadaba.com ಕಡಬ,ಅ.14. ಕಡಬ ಮೆಸ್ಕಾಂ ವತಿಯಿಂದ ಕಳಾರ ಪಿಲತ್ತೋಡಿ ಎಂಬಲ್ಲಿ ಹೊಸ ಟಿ.ಸಿ.ಯೊಂದನ್ನು ಶನಿವಾರದಂದು ಅಳವಡಿಸುವ ಮೂಲಕ ಆ ಭಾಗದ ಸುಮಾರು 20 ಕುಟುಂಬಗಳ ವಿದ್ಯುತ್ ಪಂಪು ಹಾಗೂ ಕಟ್ಟಡಗಳ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲಾಯಿತು. ಈ ಭಾಗದ ರೈತರು ಹಾಗೂ ವಿದ್ಯುತ್ ಫಲಾನುಭವಿಗಳು ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನಿಭವಿಸುತ್ತಿದ್ದು, ಚಿಮಿಣಿಯಂತೆ ಉರಿಯುತ್ತಿದ್ದ ಬಲ್ಬುಗಳಿಂದ ಮಕ್ಕಳಿಗಂತೂ ಓದಲೂ ಸಾಧ್ಯವಾಗದೆ ಸಮಸ್ಯೆಯಾಗಿದ್ದರೆ, ಕೃಷಿಕರಿಗೆ ಪಂಪುಗಳು ರನ್ ಆಗದೆ ರೈತರು ಕಂಗಾಲಾಗಿದ್ದರು. ಗ್ರಾಮಸ್ಥರ ಬೇಡಿಕೆ ಹಾಗೂ

ಕಡಬ ಪಿಲತ್ತೋಡಿಯಲ್ಲಿ ವಿದ್ಯುತ್ ಪರಿವರ್ತಕ ಉದ್ಘಾಟನೆ Read More »

ಕರಾವಳಿ

ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.14. ಮುಖ್ಯಮಂತ್ರಿ ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಇಂದು ಅಪರಾಹ್ನ 3.50 ಗಂಟೆಗೆ ಮಂಗಳೂರಿಗೆ ವಿಮಾನದ ಮೂಲಕ ಆಗಮಿಸಿ ಸಂಜೆ 4.30 ಗಂಟೆಗೆ  ಕದ್ರಿ ಶಿವಬಾಗ್‍ನ ಸಿಟಿ ಕಾರ್ಪೋರೇಷನ್ ಕಟ್ಟಡದಲ್ಲಿ ಮಾನ್ಯ ವಿಧಾನ ಪರಿಷತ್ತಿನ ಸದಸ್ಯರ ಕಚೇರಿ ಉದ್ಘಾಟನೆ, ಸಂಜೆ 5 ಗಂಟೆಗೆ ಟಿ.ಎಂ.ಎ.ಪೈ. ಇಂಟರ್ ನ್ಯಾಷನಲ್ ಕನ್ವೆನ್ಸನ್ ಸೆಂಟರ್, ಎಂ.ಜಿ. ರಸ್ತೆ ಮಂಗಳೂರು ಇಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ.), ಮಂಗಳೂರು ಪ್ರೆಸ್ ಕ್ಲಬ್(ರಿ.) ಹಾಗೂ

ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರಿಗೆ Read More »

ಕರ್ನಾಟಕ

ಲಿಂಗಾನುಪಾತ ತಡೆಗೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಕಟ್ಟುನಿಟ್ಟಿನ ಕ್ರಮ ► ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು

(ನ್ಯೂಸ್ ಕಡಬ) newskadaba.com ಮಂಗಳೂರು, ಅ.13. ಲಿಂಗಾನುಪಾತವನ್ನು ಸರಿಪಡಿಸಲು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಮೂಲಕ ಮುಂದಿನ ಒಂದು ವರ್ಷದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಹೇಳಿದರು. ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ‘ಬೇಟಿ ಬಚಾವೋ ಬೇಟಿ

ಲಿಂಗಾನುಪಾತ ತಡೆಗೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಕಟ್ಟುನಿಟ್ಟಿನ ಕ್ರಮ ► ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು Read More »

ಕರ್ನಾಟಕ
Scroll to Top