ಬಿರುಮಲೆ ಗುಡ್ಡದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಅನ್ಯಕೋಮಿನ 5 ಮಂದಿ ಪೊಲೀಸ್‌ ವಶಕ್ಕೆ

(ನ್ಯೂಸ್ ಕಡಬ) newskadaba.com.ಪುತ್ತೂರು ,ಆ.8: ಬಿರುಮಲೆ ಗುಡ್ಡೆಯಲ್ಲಿ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ಕು ಮುಸ್ಲಿ ಯುವಕರು ಮತ್ತು ಹಿಂದೂ ಯುವತಿಯನ್ನು ಪತ್ತೆ ಮಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸರಿಗೊಪ್ಪಿಸಿದ ಘಟನೆ ಶನಿವಾರ ನಡೆದಿದೆ. ಬಿರುಮಲೆ ಗುಡ್ಡದಲ್ಲಿ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ಖಚಿತ ಮಾಹಿತಿ ಪಡೆದ ಹಿಂದು ಸಂಘಟನೆಯ ಕಾರ್ಯಕರ್ತರು ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಕೇರಳ ರಾಜ್ಯ ನೋಂದಾವಣೆ ಹೊಂದಿದ ಕಾರು ಸಹಿತ ಮೂವರು ಯುವಕರು ಮತ್ತು ಓರ್ವ ಯುವತಿ ಗಾಂಜಾ […]

ಬಿರುಮಲೆ ಗುಡ್ಡದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಅನ್ಯಕೋಮಿನ 5 ಮಂದಿ ಪೊಲೀಸ್‌ ವಶಕ್ಕೆ Read More »

ಕರಾವಳಿ

ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೋನಾ ➤ ಕಡಬದಲ್ಲಿ ಇಂದು 8 ಮಂದಿಯಲ್ಲಿ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಕಡಬ, ಆ. 8, ಗ್ರಾಮೀಣ ಭಾಗದಲ್ಲಿ ಕೊರೋನಾ ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ಹೆಚ್ಚಿಸುತ್ತಿದ್ದು, ಇಂದೂ ಕೂಡಾ ಕಡಬದ ಒಂದೇ ಮನೆಯ ನಾಲ್ಕು ಮಂದಿಯಲ್ಲಿ ದೃಢಪಟ್ಟಿದೆ. ತಾಲೂಕಿನ ಕೋಡಿಂಬಾಳ ಗ್ರಾಮದ ಒಂದೇ ಮನೆಯ 75 ವರ್ಷದ ವೃದ್ಧ, 45 ವರ್ಷದ ವ್ಯಕ್ತಿ, 28 ವರ್ಷದ ಯುವತಿ ಮತ್ತು 67 ವರ್ಷದ ಮಹಿಳೆ ಹಾಗೂ ಕಾಣಿಯೂರು ಗ್ರಾಮದ ಕೈಮಜಲು ನಿವಾಸಿಗಳಾದ ಒಂದೇ ಮನೆಯ 65 ವರ್ಷದ ಮಹಿಳೆ, 23 ವರ್ಷದ ಯುವತಿ, 20 ವರ್ಷದ

ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೋನಾ ➤ ಕಡಬದಲ್ಲಿ ಇಂದು 8 ಮಂದಿಯಲ್ಲಿ ಸೋಂಕು ದೃಢ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ: ಹೊಳೆಗೆ ಬಿದ್ದ ಪಿಕಪ್ ವಾಹನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.08, ರಾಷ್ಟ್ರೀಯ ಹೆದ್ದಾರಿ 75 ರ ನೀರಕಟ್ಟೆ ಸಮೀಪ ಪಿಕಪ್ ವಾಹನವೊಂದು ಹೊಳೆ ದಾಟುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಶನಿವಾರದಂದು ನಡೆದಿದೆ. ಗೋಳಿತೊಟ್ಟು ಸಮೀಪದ ಕಾಂಚನ ಎಂಬಲ್ಲಿ ಒಳರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ಪಿಕಪ್ ವಾಹನವು ಹೆದ್ದಾರಿ ಬದಿಯಲ್ಲಿನ ಹೊಳೆ ದಾಟುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಉರುಳಿ ಬಿದ್ದಿದೆ. ಚಾಲಕನು ಕೂಡಲೇ ಪಿಕಪ್ ವಾಹನದಿಂದ ಹೊರಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಪಿಕಪ್ ವಾಹನವನ್ನು

ಉಪ್ಪಿನಂಗಡಿ: ಹೊಳೆಗೆ ಬಿದ್ದ ಪಿಕಪ್ ವಾಹನ Read More »

ಕರಾವಳಿ

ಉಪ್ಪಿನಂಗಡಿ: ಹೊಂಡಕ್ಕೆ ಬಿದ್ದ ಕಾರು ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ‌.8, ಹೆದ್ದಾರಿಯ ಅಗಲೀಕರಣದ ನೆಪದಲ್ಲಿ ರಸ್ತೆಯ ಬದಿಯಲ್ಲಿ ನಿರ್ಮಿಸಲಾದ ಆಳವಾದ ಹೊಂಡಕ್ಕೆ ಕಾರೊಂದು ಬಿದ್ದು, ಸ್ಥಳೀಯರ ಯತ್ನದಿಂದಾಗಿ ಕಾರು ಚಾಲಕನೋರ್ವ ಅಪಾಯದಿಂದ ಘಟನೆ ಘಟನೆ ನಡೆದಿದೆ. ಪೆರ್ನೆಯಿಂದ ಮಡಂತ್ಯಾರಿಗೆ ಕಾರಿನಲ್ಲಿ ಚಲಿಸುತ್ತಿದ್ದ ಅಫ್ಝಲ್ ಎಂಬವರು ರಸ್ತೆಗೆ ಅಡ್ಡಲಾಗಿ ಬಂದ ನಾಯಿಯನ್ನು ತಪ್ಪಿಸಲು ಯತ್ನಿಸಿದಾಗ ಬದಿಯಲ್ಲಿದ್ದ ನೀರು ತುಂಬಿದ ಹೊಂಡಕ್ಕೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿದ್ದ ಅವರನ್ನು ಅದೇ ದಾರಿಯಲ್ಲಿ ಬರುತ್ತಿದ್ದ ಕರ್ವೇಲು ನಿವಾಸ್ ಶರೀಫ್ ಹಾಗೂ ಸಹಚರರು ಹೊಂಡಕ್ಕೆ ಧುಮುಕಿ ಕಾರಿನ

ಉಪ್ಪಿನಂಗಡಿ: ಹೊಂಡಕ್ಕೆ ಬಿದ್ದ ಕಾರು ➤ ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ಮುಂದುವರಿದ ವರುಣನ ರುಧ್ರನರ್ತನ➤ ಚಾರ್ಮಾಡಿ ತಪ್ಪಲಿನ ಗ್ರಾಮಗಳಲ್ಲಿ ನೆರೆ ಭೀತಿ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಆ.8: ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಘಟ್ಟ ಪ್ರದೇಶ, ಚಿಕ್ಕಮಗಳೂರು ಭಾಗಳಿಂದ ಹರಿದು ಬರುತ್ತಿರುವ ನೀರಿನಿಂದಾಗಿ ಚಾರ್ಮಾಡಿಯ ತಪ್ಪಲಿನ ಗ್ರಾಮಗಳಲ್ಲಿ ನೆರೆ ಭೀತಿ ಆವರಿಸಿದೆ. ಚಾರ್ಮಾಡಿಯ ಅಂತರ, ಕೊಳಂಬೆ, ಅರಣೆಪಾದೆ, ಪರ್ಲಾಣಿ, ಹೊಸಮನೆ, ಕುಕ್ಕಾವು, ಕಕ್ಕೆನಾಜೆಯಲ್ಲಿ ಮೃತ್ಯುಂಜಯ ಹೊಳೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸೇತುವೆಗಳು ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ಬೃಹತ್ ಮರದ ದಿಮ್ಮಿಗಳು, ಕಸ ಬಂದು ಸಿಲುಕುತ್ತಿದೆ. ಇದರಿಂದಾಗಿ ಸೇತುವೆಯ ಅಂಚಿನ ಮಣ್ಣು ರಸ್ತೆ ಸಮೇತ ಕೊಚ್ಚಿಕೊಂಡು ಹೋಗಿದೆ. ಕೆಲವೆಡೆ ಸೇತುವೆ

ಕರಾವಳಿಯಲ್ಲಿ ಮುಂದುವರಿದ ವರುಣನ ರುಧ್ರನರ್ತನ➤ ಚಾರ್ಮಾಡಿ ತಪ್ಪಲಿನ ಗ್ರಾಮಗಳಲ್ಲಿ ನೆರೆ ಭೀತಿ Read More »

ಕರಾವಳಿ

ಮದಗಕ್ಕೆ ಉರುಳಿದ ಟಿಪ್ಪರ್ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ , ಆ.08:  ಆಯತಪ್ಪಿದ ಟಿಪ್ಪರ್‌ವೊಂದು ಪಳ್ಳಿ ನಿಂಜೂರು ಬಳಿ ರಸ್ತೆ ಪಕ್ಕದ ಮದಗಕ್ಕೆ ಉರುಳಿ ಬಿದ್ದ ಪರಿಣಾಮ ಟಿಪ್ಪರ್ ಚಾಲಕ ಸಹಿತ ಇಬ್ಬರು ಮೃತಪಟ್ಟಿದ್ದಾರೆ.     ಟಿಪ್ಪರ್ ಚಾಲಕ ಕುಕ್ಕುಂದೂರು ಗಣಿತ ನಗರ ನಿವಾಸಿ ಅರುಣ್‌ಕುಮಾರ್(40) ಹಾಗೂ 20 ಹರೆಯದ ಕ್ಲೀನರ್ ಮೃತಪಟ್ಟವರು. ಕ್ಲೀನರ್‌ನ ಬಗ್ಗೆ ಮಾಹಿತಿ ಲಭಿಸಿಲ್ಲ. ಬೈಲೂರು ಜಾರ್ಕಳದ ಸುಧಾಕರ ಎಂಬುವರಿಗೆ ಸೇರಿದ ಟಿಪ್ಪರ್‌ನಲ್ಲಿ ಮಣ್ಣು ಸಾಗಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.

ಮದಗಕ್ಕೆ ಉರುಳಿದ ಟಿಪ್ಪರ್ ➤ ಇಬ್ಬರು ಮೃತ್ಯು Read More »

ಕರಾವಳಿ

ಮಹಾಕುಸಿತಕ್ಕೆ ತುತ್ತಾಗುವ ಭೀತಿಯಲ್ಲಿ ಚಾರ್ಮಾಡಿ ಘಾಟ್

(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ, ಆ.08:  ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್ ಕಳೆದ ವರ್ಷದಂತೆ ಮಹಾಕುಸಿತಕ್ಕೆ ತುತ್ತಾಗುವ ಭೀತಿ ಎದುರಾಗಿದೆ. ಕೆಲದಿನಗಳಿಂದ ಘಾಟಿಯ ಕೆಲವೆಡೆ ಸಣ್ಣಪ್ರಮಾಣದಲ್ಲಿ ಕುಸಿತ ಆರಂಭಗೊಂಡಿದ್ದು, ಈಗ ಅಲೆಕಾನ್ ಪ್ರದೇಶದ ಹತ್ತಿರ ರಾಷ್ಟ್ರೀಯ ಹೆದ್ದಾರಿಯೇ ಬಿರುಕು ಬಿಟ್ಟಿದೆ. ಮಲಯಮಾರುತ, ನಾಲ್ಕನೇ ತಿರುವು ಹಾಗೂ ಅಣ್ಣಪ್ಪ ಬೆಟ್ಟ- ಅಲೆಕಾನ್ ನಡುವೆ ಕೆಲದಿನಗಳಿಂದ ರಸ್ತೆ ಬದಿ ಗುಡ್ಡ ಸಣ್ಣ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಶುಕ್ರವಾರ ಅಲೆಕಾನ್ ಸಮೀಪ ದರೆ ಕುಸಿದು ರಸ್ತೆಗೆ ಕಲ್ಲುಮಣ್ಣು ಮರ

ಮಹಾಕುಸಿತಕ್ಕೆ ತುತ್ತಾಗುವ ಭೀತಿಯಲ್ಲಿ ಚಾರ್ಮಾಡಿ ಘಾಟ್ Read More »

ಕರಾವಳಿ, ಕರ್ನಾಟಕ

ಮಂಗಳೂರು |ಮಳೆಗೆ ನಲುಗಿದ ಕರಾವಳಿ ಭಾಗ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.08:  ದ.ಕ. ಜಿಲ್ಲೆಯ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕು ಸಹಿತ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಭಾರಿ ಗಾಳಿ ಮಳೆ ಮುಂದುವರಿದಿದ್ದು, ನೆರೆ-ಪ್ರವಾಹ, ಗುಡ್ಡ ಕುಸಿತ, ಮನೆಗಳಿಗೆ ಹಾನಿ ಮೊದಲಾದವುಗಳಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.   ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸ್ನಾನಘಟ್ಟ ಐದನೇ ದಿನವೂ ಮುಳುಗಡೆಯಾಗಿದೆ. ಇಲ್ಲಿನ ಶೌಚಗೃಹ, ದೇವರ ಅವಭೃತ ಕಟ್ಟೆ ಭಾಗಶಃ ಮುಳುಗಡೆಗೊಂಡಿದೆ. ಡ್ರೆಸ್ಸಿಂಗ್ ರೂಂ, ಲಗೇಜ್ ಕೊಠಡಿ, ರಕ್ಷಕರ ಕೊಠಡಿ ಒಳಗೊಂಡ ಕಟ್ಟಡ ಜಲಾವೃತಗೊಂಡಿದೆ.

ಮಂಗಳೂರು |ಮಳೆಗೆ ನಲುಗಿದ ಕರಾವಳಿ ಭಾಗ Read More »

ಕರಾವಳಿ, ಕರ್ನಾಟಕ

ಬಂಟ್ವಾಳ : ಟ್ರಾಫಿಕ್ ಕಂಟ್ರೋಲ್ ಪೋಲೀಸ ರಿಂದ ಹೆದ್ದಾರಿ ರಸ್ತೆ ದುರಸ್ತಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.08: ಲಾಠಿ ಹಿಡಿದು ಟ್ರಾಫಿಕ್ ಕಂಟ್ರೋಲ್ ಮಾಡುವ ಪೋಲೀಸರು ಹಾರೆ, ಬುಟ್ಟಿ ಹಿಡಿದು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಯಿತು. ಇದು ಸಾಧ್ಯವಾಗಿದ್ದು ಬಿ.ಸಿ.ರೋಡಿನ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಮಾಡಿದ ಮಾದರಿ ಕಾರ್ಯದಿಂದಾಗಿ. ಭಾರೀ ಮಳೆಗೆ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳೆದ್ದು ವಾಹನ ಸವಾರರಿಗೆ ಭಾರೀ ಸಂಕಷ್ಟ ಎದುರಾಗಿತ್ತು. ಇದನ್ನೆಲ್ಲಾ ಕಂಡು ಸಂಚಾರ ನಿಯಂತ್ರಣ ಕರ್ತವ್ಯವನ್ನು ಮಾಡುವ ಪೊಲೀಸರೇ ಸ್ವತಃ ಹಾರೆ, ಬುಟ್ಟಿ ಹಿಡಿದು ಹೊಂಡಗಳನ್ನು ಮುಚ್ಚವ

ಬಂಟ್ವಾಳ : ಟ್ರಾಫಿಕ್ ಕಂಟ್ರೋಲ್ ಪೋಲೀಸ ರಿಂದ ಹೆದ್ದಾರಿ ರಸ್ತೆ ದುರಸ್ತಿ Read More »

ಕರಾವಳಿ, ಕರ್ನಾಟಕ

ಅಪರಿಚಿತ ವಾಹನ ಡಿಕ್ಕಿ ಉಳ್ಳಾಲದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com.ಉಳ್ಳಾಲ,ಆ.8: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ‌ ಸೇತುವೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮೃತಪಟ್ಟವರನ್ನು ಹರೇಕಳ ನಿವಾಸಿ ಹಮೀದ್ ಎಂಬವರ ಪುತ್ರ ಶಬೀರ್ (24) ಎಂದು ಗುರುತಿಸಲಾಗಿದೆ. ಹಮೀದ್‌ ಅವರು ತಮ್ಮ ರಾಯಲ್‌‌ ಎನ್ಫೀಲ್ಡ್‌‌ ಬೈಕ್‌‌ನಲ್ಲಿ ಮಂಗಳೂರಿನಿಂದ ಹರೇಕಳದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬರುತ್ತಿದ್ದ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಶಬೀರ್ ಸ್ಥಳದಲ್ಲೇ

ಅಪರಿಚಿತ ವಾಹನ ಡಿಕ್ಕಿ ಉಳ್ಳಾಲದ ಯುವಕ ಮೃತ್ಯು Read More »

ಕರಾವಳಿ
Scroll to Top