ನೂಜಿಬಾಳ್ತಿಲ: ಮನೆಯ ಗೋಡೆ ಕುಸಿತ ➤ ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ: ಆ.09,. ನಿರಂತರ ಮಳೆಯಿಂದಾಗಿ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯ ಸೋಮಶೇಖರ ಅವರ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದ ಘಟನೆ ಶನಿವಾರ ನಡೆದಿದೆ. ಬಾರೀ ಮಳೆ ಸುರಿಯುತ್ತಿರುವುದರಿಂದ ಮನೆಯ ಸುತ್ತಲಿನ ಗೋಡೆಗಳೆಲ್ಲ ನೆನೆದು ಕುಸಿದು ಬಿದ್ದಿದೆ. ಆದರೆ ಕುಸಿತದ ಶಬ್ದಕ್ಕೆ ಮನೆ ಮಂದಿ ಹೊರಗಡೆ ಬಂದಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೂಜಿಬಾಳ್ತಿಲ: ಮನೆಯ ಗೋಡೆ ಕುಸಿತ ➤ ಪ್ರಾಣಾಪಾಯದಿಂದ ಪಾರು Read More »

ಕರಾವಳಿ

ಕಡಬ ತಾಲೂಕಿನಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆ ನಾಯಿಗಳ ಮೇಲೆ ದಾಳಿ

(ನ್ಯೂಸ್ ಕಡಬ) newskadaba.com ಕಡಬ, ಆ.09:  ಕಡಬ ತಾಲೂಕಿನಲ್ಲಿ ಆಗಾಗ ಕಾಣಸಿಗುತ್ತಿರು ಚಿರತೆ ಕಾಡುಬಿಟ್ಟು ನಾಡಿನತ್ತ ಮುಖಮಾಡಿದಂತಿದೆ. ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ,ಗುರಿಯಡ್ಕ ಪ್ರದೇಶದಲ್ಲಿ ಹಾಗೂ ಪಾಲ್ತಾಡಿ ಗ್ರಾಮದ ಬಂಬಿಲ ಪ್ರದೇಶದಲ್ಲಿ ಶುಕ್ರವಾರ ಸ್ಥಳೀಯರಾದ ಅರುಣ್ ಗೌಡ ಬಂಬಿಲ ಅವರ ತೋಟದಲ್ಲಿ  ಪ್ರತ್ಯಕ್ಷವಾಗಿದೆ. ಇದರಿಂದ ಸ್ಥಳೀಯ ಜನರಲ್ಲಿ ಮತ್ತೆ ಆತಂಕ ಎದುರಾಗಿದೆ. ಕುಮಾರಮಂಗಲದ ರಮೇಶ್ ಆಚಾರ್ಯ ಅವರ ಸಾಕುನಾಯಿಯ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಬಳಿಕ ಬಂಬಿಲ ಜಾರಿಗೆತ್ತಡಿ ಸೋಮಪ್ಪ ಗೌಡ ಅವರ ನಾಯಿಯ

ಕಡಬ ತಾಲೂಕಿನಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆ ನಾಯಿಗಳ ಮೇಲೆ ದಾಳಿ Read More »

ಕರಾವಳಿ

ಸುದ್ದಿ ಬಿಡುಗಡೆ ಹಿರಿಯ ವರದಿಗಾರ ನಾರಾಯಣ ನಾಯ್ಕ ಹೃದಯಾಘಾತಕ್ಕೆ ಬಲಿ..!!!

(ನ್ಯೂಸ್ ಕಡಬ) newskadaba.com ಪುತ್ತೂರು: ಆ.09,.ಇಲ್ಲಿನ ಪ್ರಸಿದ್ಧ ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ನಾರಾಯಣ ನಾಯ್ಕ (48ವ.) ಅವರು  ಕ್ಕೀಡಾಗಿ ಶನಿವಾರ ರಾತ್ರಿ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಕುರಿಯ ಗ್ರಾಮದ ಅಮ್ಮುಂಜೆಯ ನಾರಾಯಣ ಅವರು ಪುತ್ತೂರು ಸುದ್ದಿ ಬಿಡುಗಡೆಯ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿದ್ದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ರಾತ್ರಿ ವೇಳೆ

ಸುದ್ದಿ ಬಿಡುಗಡೆ ಹಿರಿಯ ವರದಿಗಾರ ನಾರಾಯಣ ನಾಯ್ಕ ಹೃದಯಾಘಾತಕ್ಕೆ ಬಲಿ..!!! Read More »

ಕರಾವಳಿ

ಕೊರೊನಾಗೆ ಸೆಡ್ಡು ಹೊಡೆಯುತ್ತಿದ್ದಾರೆ ಜನ➤ ದ.ಕ ಜಿಲ್ಲೆಯಲ್ಲಿ ಒಂದೇ ದಿನ 183 ಮಂದಿ ಚೇತರಿಸಿ ಆಸ್ಪತ್ರೆಯಿಂದ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಆ.09: ಮಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅದರಿಂದ ಚೇತರಿಕೆ ಕಾಣುವವರ ಸಂಖ್ಯೆಯು ಇದೀಗ ಏರಿಕೆ ಕಾಣುತ್ತಿದೆ. ದ.ಕ ಜಿಲ್ಲೆಯಲ್ಲಿ ಶನಿವಾರ 194 ಕೋವಿಡ್ ಪಾಸಿಟಿವ್ ಪ್ರಕರಣ ಹಾಗೂ 6 ಸಾವಿನ ಪ್ರಕರಣ ವರದಿಯಾತ್ತು.ಹಾಗೆ  ಒಂದೇ ದಿನ 183 ಮಂದಿ ಕರೊನಾದಿಂದ ಚೇತರಿಸಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿರುವುದು ವರದಿಯಾಗಿದೆ. ಶನಿವಾರದಂದು ಮಂಗಳೂರಿನ 129, ಬಂಟ್ವಾಳದ 15, ಬೆಳ್ತಂಗಡಿ ಹಾಗೂ ಪುತ್ತೂರಿನ ತಲಾ 16, ಸುಳ್ಯದ 7, ಹೊರಜಿಲ್ಲೆಗಳ 11 ಮಂದಿಗೆ ಕರೊನಾ ಸೋಂಕು

ಕೊರೊನಾಗೆ ಸೆಡ್ಡು ಹೊಡೆಯುತ್ತಿದ್ದಾರೆ ಜನ➤ ದ.ಕ ಜಿಲ್ಲೆಯಲ್ಲಿ ಒಂದೇ ದಿನ 183 ಮಂದಿ ಚೇತರಿಸಿ ಆಸ್ಪತ್ರೆಯಿಂದ ಬಿಡುಗಡೆ Read More »

ಕರಾವಳಿ

ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಕಡಬ ಸೈಂಟ್ ಜೋಕಿಮ್ಸ್ ವಿದ್ಯಾರ್ಥಿಗಳು ➤ ಕಾಲೇಜು ಆಡಳಿತ ಮಂಡಳಿಯಿಂದ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಆ.09. ದ್ವಿತೀಯ ಪಿಯುಸಿ ಯಲ್ಲಿ ಸಾಧನೆಗೈದ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕರು ಸ್ಮರಣಿಕೆ‌ ನೀಡಿ ಗೌರವಿಸಿದರು. ವಾಣಿಜ್ಯ ವಿಭಾಗದಲ್ಲಿ 564 ಅಂಕ ಗಳಿಸಿದ ಶಬೀಹಾ, ಕಲಾ ವಿಭಾಗದಲ್ಲಿ 544 ಅಂಕ ಗಳಿಸಿದ ದಿಲೀಪ್ ಕುಮಾರ್, ವಿಜ್ಞಾನ ವಿಭಾಗದಲ್ಲಿ 520 ಅಂಕ ಗಳಿಸಿದ ಲೇಖನ್ ಕೆ.ಎನ್, ಲೆಕ್ಕ ಶಾಸ್ತ್ರದಲ್ಲಿ 100 ಅಂಕ ‌ಗಳಿಸಿರುವ ಅವ್ವಮತ್ ಜಂಶೀದಾ, ಆಯಿಷಾ ತನಾಝ್, ಅರ್ಥಶಾಸ್ತ್ರದಲ್ಲಿ 100 ಅಂಕ ಗಳಿಸಿರುವ ತಸ್ಮೀನಾ ಅವರನ್ನು

ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಕಡಬ ಸೈಂಟ್ ಜೋಕಿಮ್ಸ್ ವಿದ್ಯಾರ್ಥಿಗಳು ➤ ಕಾಲೇಜು ಆಡಳಿತ ಮಂಡಳಿಯಿಂದ ಅಭಿನಂದನೆ Read More »

ಕರಾವಳಿ

ವಶೀಕರಣ ತಂತ್ರ ವಿಧಾನದ ಲಾಭ ಮತ್ತು ದಿನ ಭವಿಷ್ಯ

ವಶೀಕರಣ ಪ್ರಕ್ರಿಯೆಯಲ್ಲಿ ಇಷ್ಟದೇವತೆಗಳು, ಯಕ್ಷಿಣಿ, ಅಶ್ವಿನಿ ದೇವತೆಗಳು, ಕೃಷ್ಣ, ಪ್ರದ್ಯುಮ್ನ, ಕಾಳಿ ಹೀಗೆ ನಾನಾ ರೀತಿಯಾದಂತಹ ದೇವತೆಗಳನ್ನು ಅಧಿದೇವತೆ ಗಳನ್ನಾಗಿ ಪೂಜಿಸಿ ಆಹ್ವಾನಿಸಲಾಗುತ್ತದೆ. ಈ ವಿಧಾನದಿಂದ ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಬಹುದು ಹಾಗೂ ನಿಮ್ಮ ಮನೋಕಾಮನೆಗಳು ಈಡೇರುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ,

ವಶೀಕರಣ ತಂತ್ರ ವಿಧಾನದ ಲಾಭ ಮತ್ತು ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕಡಬ: ಎಸ್ಡಿಪಿಐ ವತಿಯಿಂದ ಆಯುಷ್ಮಾನ್ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ಆ.9, ಎಸ್ಡಿಪಿಐ ವತಿಯಿಂದ ಇಲ್ಲಿನ ಹಳೇಸ್ಟೇಷನ್ ಎಂಬಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನವು ಶನಿವಾರದಂದು ನಡೆಯಿತು. ಕಾರ್ಯಕ್ರಮವನ್ನು ಕಡಬ ತಾಲೂಕು ಅಧ್ಯಕ್ಷ ರಮ್ಲ ಸನ್ ರೈಸ್ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ಜನರಿಗೂ ತಲುಪಿಸುವ ಇಂತಹ ಮಾದರಿ ಕೆಲಸವನ್ನು ನಮ್ಮ ಪಕ್ಷವು ಆರಂಭದಿಂದಲೂ ರಾಜ್ಯಾದ್ಯಂತ ಮಾಡುತ್ತಿದೆ‌. ನಮ್ಮ ಕಾರ್ಯಕರ್ತರು ಮುಂದೆಯೂ ಇಂತಹ ಜನಪರ ಸೇವೆಯನ್ನು ಮುಂದುವರಿಸಲಿದ್ದಾರೆ ಎಂದರು. ಅತಿಥಿಯಾಗಿ ಭಾಗವಹಿಸಿದ ಎಸ್ಡಿಪಿಐ ವಲಯ ಸಮಿತಿ ಸದಸ್ಯ ಹಂಝ ಮಾತನಾಡಿ,

ಕಡಬ: ಎಸ್ಡಿಪಿಐ ವತಿಯಿಂದ ಆಯುಷ್ಮಾನ್ ಅಭಿಯಾನ Read More »

ಕರಾವಳಿ, ಕರ್ನಾಟಕ

ತಲಕಾವೇರಿ ದುರಂತ ➤ ಪ್ರಧಾನ ಅರ್ಚಕರ ಅಣ್ಣ ‘ಆನಂದ ತೀರ್ಥ ಸ್ವಾಮಿ’ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಡಿಕೇರಿ, ಆ.08:  ಕಳೆದ ನಾಲ್ಕು ದಿನಗಳ ಹಿಂದೆ ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ಕಣ್ಮರೆಯಾಗಿದ್ದರು. ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಂತ ರಕ್ಷಣಾ ಸಿಬ್ಬಂದಿಗಳಿಗೆ ಇದೀಗ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಅಣ್ಣ ಆನಂದ ತೀರ್ಥ ಸ್ವಾಮಿ(86) ಅವರ ಮೃತದೇಹ ಎಂದು ಹೇಳಲಾಗುತ್ತಿರುವ ಮೃತದೇಹ ಪತ್ತೆಯಾಗಿದೆ.       ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ತಲಕಾವೇರಿಯ ಪ್ರಧಾನ ಅರ್ಚಕ ಸೇರಿದಂತೆ ಐವರು ಕಣ್ಮರೆಯಾಗಿದ್ರು. ಸಚಿವ

ತಲಕಾವೇರಿ ದುರಂತ ➤ ಪ್ರಧಾನ ಅರ್ಚಕರ ಅಣ್ಣ ‘ಆನಂದ ತೀರ್ಥ ಸ್ವಾಮಿ’ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯ: ಕುಮಾರಧಾರ ಸೇತುವೆಯಲ್ಲಿ ನೀರಿನ ಹರಿವಿಗೆ ಅಡ್ಡಿಯಾದ ಕಸಕಡ್ಡಿ ➤ ಜೆಸಿಬಿ ಮೂಲಕ ತೆರವು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ.08. ಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುತಿಯುತ್ತಿರುವುದರಿಂದ ಕುಮಾರಧಾರ ನದಿಯು ತುಂಬಿ ತುಳುಕುತ್ತಿದ್ದು, ಕುಮಾರಧಾರ ಹಳೆಯ ಮುಳುಗು ಸೇತುವೆಯ ಕೆಳಭಾಗದಲ್ಲಿ ನೀರಿನ ಹರಿಯುವಿಕೆಗೆ ಅಡ್ಡವಾಗಿದ್ದ ಮರ, ಬಿದಿರುಗಳನ್ನು ಶನಿವಾರದಂದು ತೆರವುಗೊಳಿಸಲಾಯಿತು. ಕಡಬ ತಾಲೂಕು ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ಕಸ ಕಡ್ಡಿಗಳನ್ನು ತೆರವುಗೊಳಿಸಲಾಯಿತು. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯದ ಮುಳುಗು ಸೇತುವೆಗೆ ಎರಡು ವರ್ಷಗಳ ಹಿಂದೆ ಮುಕ್ತಿ ದೊರೆತಿತ್ತು. ಇದೀಗ ಹಳೆಯ ಸೇತುವೆಯ ಕೆಳಭಾಗದಲ್ಲಿ

ಸುಬ್ರಹ್ಮಣ್ಯ: ಕುಮಾರಧಾರ ಸೇತುವೆಯಲ್ಲಿ ನೀರಿನ ಹರಿವಿಗೆ ಅಡ್ಡಿಯಾದ ಕಸಕಡ್ಡಿ ➤ ಜೆಸಿಬಿ ಮೂಲಕ ತೆರವು Read More »

ಕರಾವಳಿ

ಆಲೆಟ್ಟಿ: ಮದ್ಯರಾತ್ರಿ ಮನೆ ಹಿಂಬದಿಯ ಬರೆ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ದಂಪತಿ

(ನ್ಯೂಸ್ ಕಡಬ) newskadaba.com ಆಲೆಟ್ಟಿ, ಆ.08:  ಈಗಾಗಲೇ, ಕರಾವಳಿ ಗ್ರಾಮೀಣ ಭಾಗಗಳು ಮಳೆಯ ಅಬ್ಬರಕ್ಕೆ ನಲುಗುತ್ತಿದೆ. ಅಲ್ಲಲ್ಲಿ ಗುಡ್ಡ ಕುಸಿತಗೊಳ್ಳುತ್ತಿದೆ.  ಆಲೆಟ್ಟಿ ಗ್ರಾಮದ ಗುಂಡ್ಯ ನಿವಾಸಿ ಮೊರಂಗಲ್ಲು ಶಿವರಾಮ ರೈ ಯವರ ಮನೆ ಹಿಂಬದಿ ಭಾರಿ ಪ್ರಮಾಣದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಗುಡ್ಡ ಕುಸಿತಗೊಂಡು ಅಪಾರ ಪ್ರಮಾಣದ ನಷ್ಟವಾಗಿದೆ.   ತಡರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಾಯಿ ಜೋರಾಗಿ ಬೊಗಳಿದಾಗ ಮನೆಯ ಒಳಗೆ ಮಲಗಿ ನಿದ್ರಿಸಿದ್ದ ಶಿವರಾಮ ರೈ ದಂಪತಿ ಯವರು  ಎಚ್ಚರಗೊಂಡು ಹೊರಗೆ

ಆಲೆಟ್ಟಿ: ಮದ್ಯರಾತ್ರಿ ಮನೆ ಹಿಂಬದಿಯ ಬರೆ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ದಂಪತಿ Read More »

ಕರಾವಳಿ, ಕರ್ನಾಟಕ
Scroll to Top