ಬಿರುಮಲೆ ಗುಡ್ಡದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಅನ್ಯಕೋಮಿನ 5 ಮಂದಿ ಪೊಲೀಸ್‌ ವಶಕ್ಕೆ

(ನ್ಯೂಸ್ ಕಡಬ) newskadaba.com.ಪುತ್ತೂರು ,ಆ.8: ಬಿರುಮಲೆ ಗುಡ್ಡೆಯಲ್ಲಿ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ಕು ಮುಸ್ಲಿ ಯುವಕರು ಮತ್ತು ಹಿಂದೂ ಯುವತಿಯನ್ನು ಪತ್ತೆ ಮಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸರಿಗೊಪ್ಪಿಸಿದ ಘಟನೆ ಶನಿವಾರ ನಡೆದಿದೆ.


ಬಿರುಮಲೆ ಗುಡ್ಡದಲ್ಲಿ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ಖಚಿತ ಮಾಹಿತಿ ಪಡೆದ ಹಿಂದು ಸಂಘಟನೆಯ ಕಾರ್ಯಕರ್ತರು ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಕೇರಳ ರಾಜ್ಯ ನೋಂದಾವಣೆ ಹೊಂದಿದ ಕಾರು ಸಹಿತ ಮೂವರು ಯುವಕರು ಮತ್ತು ಓರ್ವ ಯುವತಿ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವುದು ಪತ್ತೆಹಚ್ಚಿ. ಕೂಡಲೇ ಪುತ್ತೂರು ನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ ಪೊಲೀಸರು ಸ್ಥಳಕ್ಕೆ ಬಂದು ಯುವತಿ ಮತ್ತು ಯುವಕರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

Scroll to Top