ಮದಗಕ್ಕೆ ಉರುಳಿದ ಟಿಪ್ಪರ್ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ , ಆ.08:  ಆಯತಪ್ಪಿದ ಟಿಪ್ಪರ್‌ವೊಂದು ಪಳ್ಳಿ ನಿಂಜೂರು ಬಳಿ ರಸ್ತೆ ಪಕ್ಕದ ಮದಗಕ್ಕೆ ಉರುಳಿ ಬಿದ್ದ ಪರಿಣಾಮ ಟಿಪ್ಪರ್ ಚಾಲಕ ಸಹಿತ ಇಬ್ಬರು ಮೃತಪಟ್ಟಿದ್ದಾರೆ.

 

 

ಟಿಪ್ಪರ್ ಚಾಲಕ ಕುಕ್ಕುಂದೂರು ಗಣಿತ ನಗರ ನಿವಾಸಿ ಅರುಣ್‌ಕುಮಾರ್(40) ಹಾಗೂ 20 ಹರೆಯದ ಕ್ಲೀನರ್ ಮೃತಪಟ್ಟವರು. ಕ್ಲೀನರ್‌ನ ಬಗ್ಗೆ ಮಾಹಿತಿ ಲಭಿಸಿಲ್ಲ. ಬೈಲೂರು ಜಾರ್ಕಳದ ಸುಧಾಕರ ಎಂಬುವರಿಗೆ ಸೇರಿದ ಟಿಪ್ಪರ್‌ನಲ್ಲಿ ಮಣ್ಣು ಸಾಗಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.

 

Scroll to Top