ವಂದೇ ಮಾತರಂ ಮೊದಲ 2 ಚರಣಗಳಿಗೆ ಸೀಮಿತ: ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL

(ನ್ಯೂಸ್‌ ಕಡಬ) newskadaba.com,   ಸೆ .15 . ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ 2 ಚರಣಗಳನ್ನು ಮಾತ್ರ ಹಾಡಬೇಕು ಎಂದು ಸೆಪ್ಟೆಂಬರ್ 8ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಮಾರ್ಗದರ್ಶನಗಳ ಪ್ರಕಾರ 6 ಚರಣಗಳ ಸಂಪೂರ್ಣ ಆವೃತ್ತಿಯೇ ಅಧಿಕೃತವಾಗಿದೆ. ರಾಜ್ಯ ಸರ್ಕಾರದ ಆದೇಶವು ಕೇಂದ್ರದ ಪ್ರೋಟೋಕಾಲ್ ಹಾಗೂ ಸಂವಿಧಾನದ ವಿಧಿ 256, 257(1)ಕ್ಕೆ ವಿರುದ್ಧವಾಗಿದೆ ಎಂದು ವಾದಿಸಲಾಗಿದೆ.

ರಾಷ್ಟ್ರೀಯ ಸಂಕೇತಗಳ ವಿಷಯವು ಸಂಸತ್ತಿನ ವಿಶೇಷ ಶಾಸಕಾಂಗ ವ್ಯಾಪ್ತಿಗೆ (ವಿಧಿ 248, ಪಟ್ಟಿ-I) ಬರುತ್ತದೆ. ಸಂಸತ್ತು ಮಾಡಲಾಗದ ಕಾನೂನನ್ನು ರಾಜ್ಯ ಸರ್ಕಾರ ಕಾರ್ಯಾಂಗ ಆದೇಶದ ಮೂಲಕ ಮಾಡಲು ಬರುವುದಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.ಈ ಆದೇಶವು Prevention of Insults to National Honour (Amendment) Act, 2026 ಹಾಗೂ ಸಂವಿಧಾನದ ವಿಧಿ 19(1)(a) ಅಡಿಯಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಧಕ್ಕ ಗೊಳಿಸುತ್ತದೆ.

ಸಚಿವ ಸಂಪುಟ ಸಭೆಯಲ್ಲಿ ಕಾನೂನು ಇಲಾಖೆಯ ಸಲಹೆ ಪಡೆಯದೆ ‘ಅನೌಪಚಾರಿಕ ಚರ್ಚೆ’ ಮೂಲಕ ತೀರ್ಮಾನ ಕೈಗೊಂಡಿರುವುದು ಕರ್ನಾಟಕ ಸರ್ಕಾರಿ ವ್ಯವಹಾರಗಳ ನಿರ್ವಹಣೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪಿಐಎಲ್‌ನಲ್ಲಿ ಆರೋಪಿಸಲಾಗಿದೆ.

Scroll to Top