ನಕಲಿ ಪಿಎಚ್‌ಡಿ ತಡೆಗೆ ಕಾಲೇಜು ಶಿಕ್ಷಣ ಇಲಾಖೆ ಕಠಿಣ ಕ್ರಮ: 452 ಅತಿಥಿ ಉಪನ್ಯಾಸಕರಿಗೆ ನೋಟಿಸ್

(ನ್ಯೂಸ್‌ ಕಡಬ) newskadaba.com,   ಸೆ .15. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಕಲಿ ಪಿಎಚ್‌ಡಿ (PhD) ಪ್ರಮಾಣಪತ್ರ ಸಲ್ಲಿಕೆ ತಡೆಯಲು ಕಾಲೇಜು ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, 452 ಅತಿಥಿ ಉಪನ್ಯಾಸಕರಿಗೆ ನೋಟಿಸ್ ಜಾರಿಗೊಳಿಸಿದೆ.

2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸುವಾಗ ಪಿಎಚ್‌ಡಿ ಅರ್ಹತೆ ಇದೆ ಎಂದು ನಮೂದಿಸಿದ್ದ ಈ 452 ಉಪನ್ಯಾಸಕರು, 2026-27ನೇ ಸಾಲಿನ ಆನ್‌ಲೈನ್ ಅರ್ಜಿಯಲ್ಲಿ ಪಿಎಚ್‌ಡಿ ಅರ್ಹತೆಯನ್ನು ನಮೂದಿಸಿಲ್ಲ. ಈ ವ್ಯತ್ಯಾಸದಿಂದಾಗಿ ಇಲಾಖೆಗೆ ನಕಲಿ ದಾಖಲೆ ಸಲ್ಲಿಕೆಯ ಶಂಕೆ ವ್ಯಕ್ತವಾಗಿದೆ.

ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರು ಈ ಉಪನ್ಯಾಸಕರಿಗೆ ನೋಟಿಸ್ ತಲುಪಿಸಿ, 1 ವಾರದೊಳಗೆ ಅವರಿಂದ ಲಿಖಿತ ಸ್ಪಷ್ಟನೆ ಹಾಗೂ ಅಗತ್ಯ ದಾಖಲೆಗಳನ್ನು ಪಡೆದು ಇಲಾಖೆಯ ಆಯುಕ್ತರಿಗೆ ಸಲ್ಲಿಸಬೇಕು.ನಿಗದಿತ ಅವಧಿಯೊಳಗೆ ಸೂಕ್ತ ವಿವರಣೆ ಅಥವಾ ದಾಖಲೆಗಳನ್ನು ಸಲ್ಲಿಸದಿದ್ದರೆ, ಅಂತಹ ಅತಿಥಿ ಉಪನ್ಯಾಸಕರ ವಿರುದ್ಧ ನಿಯಮಾನುಸಾರ ಶಿಸ್ತಿನ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

Scroll to Top