ರಷ್ಯಾದಿಂದ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ 100% ಸುಂಕ ಹೇರಲು ಅಮೆರಿಕ ಸಂಸದರ ಪ್ರಸ್ತಾಪ

(ನ್ಯೂಸ್‌ ಕಡಬ) newskadaba.com,   ಸೆ .15 . ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಭಾರತ ಸೇರಿದಂತೆ ಇತರ ದೇಶಗಳ ಮೇಲೆ ಶೇ. 100 ರಷ್ಟು ಸುಂಕ ನಿರ್ಬಂಧ ಹೇರಲು ಅಮೆರಿಕದ ಸಂಸದರು ತಿದ್ದುಪಡಿ ಪ್ರಸ್ತಾಪಿಸಿದ್ದಾರೆ.

ಕಳೆದ ತಿಂಗಳು ಅಮೆರಿಕ ಸಂಸತ್‌ನಲ್ಲಿ 89-11 ಮತಗಳಿಂದ ಒಪ್ಪಿಗೆ ಪಡೆದ ‘ದಿ ಲಿಂಡ್ಸೆ ಒ ಗ್ರಾಹಮ್ ಸ್ಯಾಂಕ್ಷನಿಂಗ್ ರಷ್ಯಾ ಆಂಡ್ ಇರಾನ್ ಆಕ್ಟ್’ ಮಸೂದೆಯು ಪ್ರಸ್ತುತ ಅಮೆರಿಕದ ಪ್ರತಿನಿಧಿಗಳ ಸಭೆಯ ಮುಂದಿದೆ.ಈ ಮಸೂದೆಯು ಕಾನೂನಾಗಲು ಪ್ರತಿನಿಧಿಗಳ ಸಭೆಯ ಅಂಗೀಕಾರ ಮತ್ತು ಅಧ್ಯಕ್ಷರ ಸಹಿ ಅಗತ್ಯವಿದೆ. ನವೆಂಬರ್ 3 ರ ಮಧ್ಯಂತರ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿನಿಧಿಗಳ ಸಭೆಗೆ ಕೇವಲ 4 ದಿನಗಳ ಕಾಲಾವಕಾಶ ಮಾತ್ರ ಉಳಿದಿದೆ.

ಡೆಮಾಕ್ರಟಿಕ್ ಪಕ್ಷದ ಸಂಸದ ಸ್ಟೆನಿ ಹೋಯರ್ ಮಂಡಿಸಿದ ತಿದ್ದುಪಡಿಯಲ್ಲಿ ಭಾರತ, ಚೀನಾ, ಟರ್ಕಿ, ಅಜರ್‌ಬೈಜಾನ್, ಹಂಗೇರಿ, ಸ್ಲೋವಾಕ್ ಗಣರಾಜ್ಯ, ಯುಎಇ, ಸಿಂಗಪುರ, ಕಜಕಿಸ್ತಾನ್ ಮತ್ತು ಕಿರ್ಗಿಜ್ ಗಣರಾಜ್ಯಗಳನ್ನು 100% ಸುಂಕ ವಿಧಿಸಬಹುದಾದ ಪಟ್ಟಿಯಲ್ಲಿ ಹೆಸರಿಸಲಾಗಿದೆ.

Scroll to Top